The Kashmir Files: ಸತ್ಯ ಸ್ವೀಕರಿಸೋ ಎದೆಗಾರಿಕೆ ಕಾಂಗ್ರೆಸ್​ಗೆ ಇಲ್ಲ, ಕುಮಾರಸ್ವಾಮಿಗೂ ಟಾಂಗ್ ಕೊಟ್ರು ‘ಸಿಂಹ’

ಕಾಶ್ಮೀರ್​ ಫೈಲ್ಸ್‌ ಚಿತ್ರದಲ್ಲಿರೋ ಒಂದೊಂದು ದೃಶ್ಯವು ಸತ್ಯ. ಕಾಂಗ್ರೆಸ್​ ನವರು ಮಾಡಿದ ಕರ್ಮವನ್ನು ಅವರೇ ಹೇಗೆ ನೋಡಲು ಸಾಧ್ಯ ಎಂದು ಕಾಂಗ್ರೆಸ್​ ನಾಯಕರ ಬಗ್ಗೆ ಪ್ರತಾಪ್​ ಸಿಂಹ ವ್ಯಂಗ್ಯವಾಡಿದ್ದಾರೆ

ಸಂಸದ ಪ್ರತಾಪ್​ ಸಿಂಹ

ಸಂಸದ ಪ್ರತಾಪ್​ ಸಿಂಹ

  • Share this:
ಮೈಸೂರು:  ದಿ ಕಾಶ್ಮೀರ್​ ಫೈಲ್ಸ್ (The Kashmir Files) ಚಿತ್ರ ವೀಕ್ಷಣೆ ವಿಚಾರ ಭಾರೀ ಸದ್ದು ಮಾಡ್ತಿದೆ. ಕಾಶ್ಮೀರ್​ ಫೈಲ್​ ಚಿತ್ರ ನೋಡಲ್ಲ ಅಂತ ಕಾಂಗ್ರೆಸ್​ ನಾಯಕರು (Congress Leaders) ಒಬ್ಬರಾದ ಮೇಲೆ ಒಬ್ಬರು ಹೇಳಿಕೆ ನೀಡ್ತಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು (BJP Leaders) ಸಹ ತಿರುಗೇಟು ನೀಡ್ತಿದ್ದಾರೆ. ಮೈಸೂರಿನಲ್ಲಿ ಮಾತಾಡಿದ ಪ್ರತಾಪ್​ ಸಿಂಹ (Prathap Simha) ತಾವೇ ಮಾಡಿದ ಅಪರಾಧವನ್ನು ಕಾಂಗ್ರೆಸ್ ನವರು ಸ್ಕ್ರೀನ್ ನಲ್ಲಿ ಹೇಗೆ ನೋಡಲು ಸಾಧ್ಯ ಎಂದರು. ಸತ್ಯ ಸ್ವೀಕರಿಸೋದಕ್ಕೆ ಎದೆಗಾರಿಕೆ ಬೇಕು. ಅವರೇ ಮಾಡಿದ ಅಪರಾಧವನ್ನು ಅವರೇ ನೋಡಲು ಹೇಗೆ ಸಾಧ್ಯ. ಆದರೆ ಜನರು ನೋಡುತ್ತಿದ್ದಾರೆ ಅವರಿಗೆ ಸತ್ಯದ ಅರಿವಾಗಿದೆ ಅಷ್ಟು ಸಾಕು ಅಂತ ಕಾಂಗ್ರೆಸ್​ ನಾಯಕ ವಿರುದ್ಧ ಸಂಸದ ಪ್ರತಾಪ್​ ಸಿಂಹ ವಾಗ್ದಾಳಿ ನಡೆಸಿದ್ರು.

ಕಾಶ್ಮೀರ್​ ಫೈಲ್ಸ್​ನಲ್ಲಿರೋದು ಎಲ್ಲಾ ಸತ್ಯವೆ

ಕಾಶ್ಮೀರ್​ ಫೈಲ್ಸ್‌ ಚಿತ್ರದಲ್ಲಿರೋ ಒಂದೊಂದು ದೃಶ್ಯವು ಸತ್ಯ. ಕಾಂಗ್ರೆಸ್​ ನವರು ಮಾಡಿದ ಕರ್ಮವನ್ನು ಅವರೇ ಹೇಗೆ ನೋಡಲು ಸಾಧ್ಯ ಎಂದು ಕಾಂಗ್ರೆಸ್​ ನಾಯಕರ ಬಗ್ಗೆ ಪ್ರತಾಪ್​ ಸಿಂಹ ವ್ಯಂಗ್ಯವಾಡಿದ್ದಾರೆ. ಜೈ ಭೀಮ್​ ಚಿತ್ರಕ್ಕೆ ತೆರಿಗೆ ವಿನಾಯತಿ ಕೊಟ್ಟಿಲ್ಲ, ದಿ ಕಾಶ್ಮೀರ್​ ಫೈಲ್ಸ್​ ಚಿತ್ರಕ್ಕೆ ಯಾಕೆ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರತಾಪ್​ ಸಿಂಹ,  ಜೈ ಭೀಮ್ ಬಿಡುಗಡೆಯಾಗಿದ್ದು ಓಟಿಟಿಯಲ್ಲಿ., ಓಟಿಟಿಯಲ್ಲಿ ತೆರಿಗೆ ವಿನಾಯತಿ ಕೊಡಲು ಹೇಗೆ ಸಾಧ್ಯ.  ಕಾಂಗ್ರೆಸ್ ನಾಯಕರು ಈ ರೀತಿ ಪೆದ್ದ ಪೆದ್ದ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ ಎಂದು ಕಾಂಗ್ರೆಸ್​ ನಾಯಕರಿಗೆ ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ತಿರುಗೇಟು ನೀಡಿದ್ದಾರೆ.

‘ಭಗವದ್ಗೀತೆಯಲ್ಲಿ ನೀತಿ ಪಾಠವಿದೆ’

ಇದೇ ವೇಳೆ ಶಾಲೆಯಲ್ಲಿ ಮಕ್ಕಳಿಗೆ ಭಗವದ್ಗೀತೆ ಹೇಳಿಕೊಡೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಅವರು, ಭಗವದ್ಗೀತೆಯಲ್ಲಿ ನೀತಿ ಪಾಠವಿದೆ. ಸತ್ಯ, ನ್ಯಾಯ, ಧರ್ಮ ಮಾರ್ಗದಲ್ಲಿ ನಡೆಯುವಂತೆ ತಿಳಿ ಹೇಳುವ ಗ್ರಂಥವಾಗಿದೆ. ಇವರ ಪ್ರಕಾರ ಅಲ್ಲಾ ಹಾಗೂ ಯೇಸು ಮಾತ್ರ ದೇವರು. ಉಳಿದ ದೇವರ ಮೆಸೇಂಜರ್ ಇಲ್ಲ ಅನ್ನಿಸುತ್ತೆ ಎಂದು ಹೇಳದರು. ಅಮೇರಿಕಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಭಗವದ್ಗೀತೆ ಮುಟ್ಟಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ. ಆದರೆ ಭಗವದ್ಗೀತೆಯ ಮಹತ್ವ ಇಲ್ಲಿನ ಜನರಿಗೆ ಗೊತ್ತಿಲ್ಲ ಎಂದು ಪ್ರತಾಪ್ ಸಿಂಹ ಕಾಂಗ್ರೆಸ್ ನವರಿಗೆ ಕುಟುಕಿದರು.

ಇದನ್ನೂ ಓದಿ: Tumkur: ಪಾವಗಡ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ ಕೊಡಿ- ಕುಮಾರಸ್ವಾಮಿ ಆಗ್ರಹ

ಭಗವದ್ಗೀತೆಯ ಮಹತ್ವ ಇಲ್ಲಿನ ಜನರಿಗೆ ಗೊತ್ತಿಲ್ಲ

ಧರ್ಮ ಅನ್ನುವುದಕ್ಕೆ  ರಿಲೀಜಿಯನ್ ಅನ್ನುವ ಸಂಕುಚಿತ ಅರ್ಥ ಕಲ್ಪಿಸುವುದು ಬೇಡ. ಕುರುಕ್ಷೇತ್ರ ಧರ್ಮ- ಅಧರ್ಮಗಳ ನಡುವಿನ ಯುದ್ಧ. ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ಜೀವನ ಕ್ರಮ ಹೇಗಿಬೇಕು ಅಂತ ಭೋದಿಸಿದ್ದಾನೆ.  ಆದ್ದರಿಂದ ಅಮೆರಿಕಾ ಸೇರಿದಂತೆ ಎಲ್ಲ ದೇಶಗಳ ಅಧ್ಯಕ್ಷರು ಮುಟ್ಟಿ ಪ್ರಮಾಣ ವಚನ ಸ್ವೀಕಾರ ಮಾಡಲು ಭಗವದ್ಗೀತೆ ಮಾತ್ರ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

‘ಪಠ್ಯಕ್ರಮ ಬದಲಾವಣೆಗೆ ಮಾಡ್ಬೇಕು’

ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಮೊಘಲ್ ಸಾಮ್ರಾಜ್ಯ, ದೆಹಲಿ ಸುಲ್ತಾನರ ಕ್ರೌರ್ಯದ ಕತೆಗಳನ್ನೇ ಭೋದಿಸಲಾಗಿದೆ. ಚೋಳ, ಚೇರರು, ಅಸ್ಸಾಂ ದೊರೆಗಳ ಸಾವಿರಾರು ವರ್ಷಗಳ ಇತಿಹಾಸ ಮರೆಮಾಚಲಾಗಿದೆ.  ಇದೆಲ್ಲವನ್ನೂ ಓದಿದರೆ ನಮ್ಮ ಬಗ್ಗೆ ಅಭಿಮಾನವೇ ಮೂಡೋದಿಲ್ಲ. ಈಗಲಾದರೂ ಪಠ್ಯಕ್ರಮ ಬದಲಾವಣೆಗೆ ಮುಂದಾಗಿರೋದು ಸ್ವಾಗತಾರ್ಹ. ಶಿಕ್ಷಣ ಸಚಿವರು, ಸಿಎಂ ಪ್ರಸ್ತಾಪ ಮಾಡಿದ್ದಾರೆ.  ತಜ್ಞರ ಸಮಿತಿ ರಚಿಸಿ ಭಗವದ್ಗೀತೆ ಸೇರ್ಪಡೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರತಾಪ್ ಸಿಂಹ ಹೇಳಿದರು.

ಇದನ್ನೂ ಓದಿ: Bhagavad Gita: ಭಗವದ್ಗೀತೆ ಓದಿದವರು ಭಯೋತ್ಪಾದಕರು ಆಗಿಲ್ಲ: CT Ravi

ಕುಮಾರಸ್ವಾಮಿಗೂ ಟಾಂಗ್​ ಕೊಟ್ಟ ಸಂಸದರು

ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ನಾನು ಕುಮಾರಸ್ವಾಮಿ ಅವರ ಮಾತನ್ನು ಸಂಪೂರ್ಣ ಒಪ್ಪುತ್ತೇನೆ. ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ ತಲೆಯನ್ನು ತುಂಬಿಸುತ್ತದೆ. ಸತ್ಯದ ದಾರಿಯಲ್ಲಿ ಸಾಗುವುದನ್ನು ಕಲಿಸುತ್ತದೆ. ಕುಟುಂಬ ರಾಜಕಾರಣ ಮಾಡಬಾರದು. ನನಗೆ ಎಲ್ಲಾ ಅಧಿಕಾರ ಬೇಕು ಅನ್ನೋ ಮನಸ್ಥಿತಿಯನ್ನು ಬದಲಾಯಿಸುತ್ತದೆ. ಈ ಕಾರಣಕ್ಕೆ ಮಕ್ಕಳಿಗೆ ಭಗವದ್ಗೀತೆ ಅವಶ್ಯಕತೆ ಇದೆ ಎಂದು ಟಾಂಗ್​ ಪ್ರತಾಪ್​ ಸಿಂಹ ಟಾಂಗ್​ ಕೊಟ್ರು.
Published by:Pavana HS
First published: