13 ಜಿಲ್ಲೆಗಳಲ್ಲಿ ನಿಯಂತ್ರಣ ಕಂಡ ಸೋಂಕು; ಮೈಸೂರಲ್ಲಿ ಇಳಿಕೆಯಾಗದ ಪಾಸಿಟಿವಿಟಿ ದರ

ಇನ್ನು 13 ಜಿಲ್ಲೆಗಳಲ್ಲಿ ಶೇ.5ರಿಂದ 10 ಪಾಸಿಟಿವಿಟಿ ದರ ಕಂಡು ಬಂದಿದೆ. ಆದರೆ, ಮೈಸೂರು ಜಿಲ್ಲೆಯಲ್ಲಿ ಮಾತ್ರ ಶೇ.10ಕ್ಕಿಂತ ಹೆಚ್ಚು ದಾಖಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಜೂ. 19): ರಾಜ್ಯದಲ್ಲಿ ಸೋಂಕು ಇಳಿಕೆಯಾಗಿರುವ ಹಿನ್ನಲೆ ಹಂತಹಂತವಾಗಿ ಲಾಕ್​ಡೌನ್​ ಸಡಿಲಕ್ಕೆ ಮಾಡುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಈಗಾಗಲೇ 11 ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಲಾಕ್​ಡೌನ್​ ಸಡಿಲಿಕೆ ಮಾಡಲಾಗಿದ್ದು, ಪಾಸಿಟಿವಿಟಿ ದರ ಕಡಿಮೆ ಇದ್ದಲ್ಲಿ ಅನ್​ಲಾಕ್​ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಅನ್​ಲಾಕ್​ ನಡೆಸುವ ಸಂಬಂಧ ಮುಖ್ಯಮಂತ್ರಿಗಳು ತಜ್ಞರೊಂದಿಗೆ ಚರ್ಚೆ ನಡೆಸುವ ಮುನ್ನ ಮಾತನಾಡಿದ ಅವರು, ಮುಂದಿನ 14 ದಿನಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದರು

  ಇನ್ನು 13 ಜಿಲ್ಲೆಗಳಲ್ಲಿ ಶೇ.5ರಿಂದ 10 ಪಾಸಿಟಿವಿಟಿ ದರ ಕಂಡು ಬಂದಿದೆ. ಆದರೆ, ಮೈಸೂರು ಜಿಲ್ಲೆಯಲ್ಲಿ ಮಾತ್ರ ಶೇ.10ಕ್ಕಿಂತ ಹೆಚ್ಚು ದಾಖಲಾಗಿದೆ. ಈ ಪಾಸಿಟಿವಿಟಿ ಆಧರಿಸಿಯೇ ಅನ್​ಲಾಕ್​ ನಿರ್ಧಾರ ನಡೆಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳೇ ತೀರ್ಮಾನ ನಡೆಸುತ್ತಾರೆ ಎಂದು ಸ್ಪಷ್ಟಪಡಿಸಿದರು.

  ಮೂರನೇ ಅಲೆ ಸಿದ್ಧತೆ ಕುರಿತು ಚರ್ಚೆ
  ತೀವ್ರ ಸ್ವರೂಪವಾಗಿ ಕಾಡಿದ ಎರಡನೇ ಅಲೆಯಿಂದಾಗಿ ರಾಜ್ಯ ಇದೀಗ ಚೇತರಿಸಿಕೊಂಡಿದೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮೂರನೇ ಅಲೆ ತೀವ್ರ ಸ್ವರೂಪದಲ್ಲಿ ಬರಬಾರದು. ಈ ಹಿನ್ನಲೆ ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲು ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ, ಈ ಸಂಬಂಧ ಡಾ. ದೇವಿಪ್ರಸಾದ್​ ಶೆಟ್ಟಿ ವರದಿಯನ್ನು ನೀಡಿದ್ದಾರೆ. ಅದನ್ನು ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾಪಿಸಲಾಗುವುದು. ಮೂರನೇ ಅಲೆ ತಡೆಯಲು ಸಾಕಷ್ಟು ಕ್ರಮ ಕೂಡ ನಡೆಸಲಾಗಿದೆ ಎಂದರು.

  ಸೋಂಕಿನಿಂದ ಪಾರಾಗಲು ಲಸಿಕೆಯೊಂದೇ ಮಾರ್ಗ

  ರಾಜ್ಯದಲ್ಲಿ ಎಲ್ಲರಿಗೂ ಲಸಿಕೆ ವಿತರಣೆ ಕ್ರಮ ನಡೆಸಲಾಗಿದೆ. ಯಾರು ಎರಡು ಡೋಸ್​ ಲಸಿಕೆ ಪಡೆದಿದ್ದರೆ ಅವರಿಗೆ 99.9 ರಷ್ಟು ಸೋಂಕು ಬಂದಿಲ್ಲ. ಲಸಿಕೆ ಪಡೆದವರಲ್ಲೂ ಸೋಂಕು ಕಾಣಿಸಿಕೊಂಡಿದ್ದರೆ ಅವರು ಐಸಿಯುವರೆಗೂ ಹೋಗಿಲ್ಲ. ಅಲ್ಲದೇ ಎರಡು ಡೋಸ್​ ಲಸಿಕೆ ಪಡೆದವರಿಗೆ ಯಾವುದೇ ಮ್ಯೂಟೆಂಟ್​ ವೈರಸ್​ ಸಹ ಬಾದಿಸುವುದಿಲ್ಲ. ಹೀಗಾಗಿ ಜನರು ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.

  ಇದನ್ನು ಓದಿ: ಇಳಿಕೆಯಾದ ಸೋಂಕು: ತೆಲಂಗಾಣದಲ್ಲಿ ಕೋವಿಡ್​​ ಲಾಕ್​ಡೌನ್​ ಸಂಪೂರ್ಣ ತೆರವು

  ಸೋಂಕು ಇಳಿಕೆಯಾಗಿರುವ ಹಿನ್ನಲೆ ಜನರ ಜೀವನದ ದೃಷ್ಟಿಯಿಂದ ಅನ್​ಲಾಕ್​ ಮಾಡುವ ಕ್ರಮಕ್ಕೆ ಮುಂದಾಗಲಾಗುವುದು. ಅನ್​ಲಾಕ್​ ಮಾಡಿದಾಕ್ಷಿಣ ಜನರು ಅಡ್ಡಾದಿಡ್ಡಿ ತಿರುಗಾಡಬಾರದು, ಮೂರನೇ ಅಲೆಗೆ ಯಾರು ಕೂಡ ಅವಕಾಶ ಮಾಡಿಕೊಡಬಾರದು. ಸರ್ಕಾರ ಹೊರಡಿಸಿದ ಮಾರ್ಗಸೂಚಿ, ಕೋವಿಡ್​ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

  ಜೂನ್ 21 ರಂದು 7 ನೇ ಅಂತರಾಷ್ಟ್ರೀಯ ದಿನ ಆಚರಣೆ ಮಾಡುತ್ತಿದ್ದೇವೆ. ಯೋಗ ಮೂಲಕ ನಮ್ಮ ರೋಗನಿರೋಧಕ ಶಕ್ತಿ, ದೈಹಿಕ ಮಾನಸಿಕ ಆರೋಗ್ಯ ಹೆಚ್ಚಲಿದೆ. ಈ ಹಿನ್ನಲೆ ಜನರು ಕೂಡ ಯೋಗಾಭ್ಯಾಸದ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಬೇಕು.  . ಯೋಗಾಭ್ಯಾಸ ಮಾಡಿದವರಿಗೆ ಕೋವಿಡ್ ಸೋಂಕು ತಗುಲಿಲ್ಲ. ಈ ಬಾರಿ ಯೋಗ ದಿನಾಚರಣೆಯಂದು ಬಹಿರಂಗವಾಗಿ ಯೋಗ ಮಾಡಬಾರದು ಎಂದು ಇದೇ ವೇಳೆ ತಿಳಿಸಿದರು.

  ಎರಡನೇ ಹಂತದ ಅನ್​ಲಾಕ್​ ಮಾಡಲು ಸರ್ಕಾರ ಮುಂದಾಗಿದೆ. ಜೂನ್​ 21ರಿಂದ ಅನ್​ಲಾಕ್​ 2.0 ಜಾರಿಯಾಗಲಿದ್ದು, ಕೆಲವು ಕ್ಷೇತ್ರಗಳಿಗೆ ವಿನಾಯಿತಿ ನೀಡುವ ಸಂಬಂಧ ಇಂದು  ಸಂಜೆ ಕೊವೀಡ್ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಹಾಗೂ ತಜ್ಞರೊಂದಿಗೆ ಸಿಎಂ ಚರ್ಚೆ ನಡೆಸಿ ನಿರ್ಧಾರ ಪ್ರಕಟಿಸಲಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು
  Published by:Seema R
  First published: