Omicron ಆತಂಕ.. ಮೈಸೂರಿಗೆ ಹೊಂದಿಕೊಂಡಿರುವ ಕೇರಳ ಗಡಿಯಲ್ಲಿ ಹೈ ಅಲರ್ಟ್: ಯಾವೆಲ್ಲಾ ನಿಯಮ ಪಾಲಿಸಬೇಕು?

ರೂಪಾಂತರಿ ವೈರಸ್ ಆತಂಕ ಹಿನ್ನೆಲೆಯಲ್ಲಿ ಗಡಿಯಲ್ಲಿ ಮತ್ತಷ್ಟು ಬಿಗಿಗೊಳಿಸಲಾಗಿದೆ. ರಾಜ್ಯ ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಕೇರಳದಿಂದ ರಾಜ್ಯಕ್ಕೆ ಪ್ರವೇಶ ಮಾಡುವ ಪ್ರತಿಯೊಬ್ಬ ವಾಹನ ಸವಾರರ ಕೋವಿಡ್ ಟೆಸ್ಟ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ.‌

ಕೇರಳ ಗಡಿಯಲ್ಲಿ ಹೈ ಅಲರ್ಟ್​

ಕೇರಳ ಗಡಿಯಲ್ಲಿ ಹೈ ಅಲರ್ಟ್​

  • Share this:
ಮೈಸೂರು: ನೆರೆಯ ಕೇರಳದಲ್ಲಿ (Kerala ) ಕೊರೊನಾ‌ ಪ್ರಕರಣಗಳು (Corona Cases) ಇನ್ನು ಕಡಿಮೆಯಾಗಿಲ್ಲ. ಈ‌ ನಡುವೆ ಹೊಸ ರೂಪಾಂತರ ತಳಿ ಮತ್ತೊಂದು ಆತಂಕ ತಂದಿದೆ. ಇದ್ರಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕೇರಳ ಗಡಿಯಲ್ಲಿ (Kerala Border) ಹೈ ಅಲರ್ಟ್ ಮಾಡಿದೆ. ಸದ್ಯ ಗಡಿಯಲ್ಲಿ ತಪಾಸಣೆ ಹೇಗಿದೆ ಅಂತ ನ್ಯೂಸ್ ೧೮ ಕನ್ನಡ ರಿಯಾಲಿಟಿ ಚೆಕ್ ಮಾಡಿದೆ. ಇದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಕೊರೊನಾ ಇನ್ನೇನು ಮುಕ್ತಾಯವಾಗ್ತಿದೆ. ಇನ್ಮೇಲೆ ಕೊರೊನಾ ವೈರಸ್ ಕಾಟ ಇರಲ್ಲ ಅಂತ ಅಂದುಕೊಳ್ಳುವ ವೇಳೆಗೆ ಆಫ್ರಿಕಾದಲ್ಲಿ ಕಾಣಿಕೊಂಡ ಕೊರೊನಾ ರೂಪಾಂತರ ತಳಿ ದೊಡ್ಡ ಆತಂಕವನ್ನೆ ಸೃಷ್ಟಿ ಮಾಡಿದೆ. ಇದ್ರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಈಗಾಗಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ‌.

ಕೋವಿಡ್ ಟೆಸ್ಟ್ ನೆಗೆಟಿವ್ ವರದಿ ಕಡ್ಡಾಯ

ಸದ್ಯ ರಾಜ್ಯ ಕೇರಳ ಹಾಗೂ ಮಹಾರಾಷ್ಟ್ರದ ಗಡಿಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.‌ ಇದ್ರಿಂದ ಇಂದು ನ್ಯೂಸ್ ೧೮ ಕನ್ನಡ ವಾಹಿನಿ ಸಹ ಕೇರಳ ಗಡಿಯಲ್ಲಿ ಇಂದು ರಿಯಾಲಿಟಿ ಚೆಕ್ ನಡೆಸಿತು. ಇಂದು ಕರ್ನಾಟಕ ಕೇರಳ ಗಡಿಯಲ್ಲೊಂದಾದ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ ನಲ್ಲಿ ರಿಯಾಲಿಟಿ ಚೆಕ್ ಮಾಡಲಾಯಿತು. ಈಗಾಗಲೇ ಕೇರಳದಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗಿಲ್ಲ.‌ ಈ ನಡುವೆ ರೂಪಾಂತರಿ ವೈರಸ್ ಆತಂಕ ಹಿನ್ನೆಲೆಯಲ್ಲಿ ಗಡಿಯಲ್ಲಿ ಮತ್ತಷ್ಟು ಬಿಗಿಗೊಳಿಸಲಾಗಿದೆ. ರಾಜ್ಯ ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಕೇರಳದಿಂದ ರಾಜ್ಯಕ್ಕೆ ಪ್ರವೇಶ ಮಾಡುವ ಪ್ರತಿಯೊಬ್ಬ ವಾಹನ ಸವಾರರ ಕೋವಿಡ್ ಟೆಸ್ಟ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ.‌

ಚೆಕ್ ಪೋಸ್ಟ್ ನಲ್ಲಿ ಹೈ ಅಲರ್ಟ್​​

72 ಗಂಟೆಯೊಳಗೆ ಕೋವಿಡ್ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿ ತೋರಿಸಿದರೆ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಇನ್ನು ಗೂಡ್ಸ್ ವಾಹನ‌ ಸವಾರರಿಗೆ 15 ದಿನದ ವರಗೆ ಅವಕಾಶ ನೀಡಲಾಗಿದೆ. ಇನ್ನು ರೂಪಾಂತರಿ ತಳಿ ಬಗ್ಗೆ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಧಿಕಾರಿ ಡಾ.ಪ್ರಸಾದ್ ಇಂದು ಗಡಿಯ ಚೆಕ್ ಪೋಸ್ಟ್ ಗೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ರು.‌ ಈಗಾಗಲೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದ್ದು ಮುಂಜಾಗ್ರತಾವಾಗಿ ಈಗ ಮತ್ತಷ್ಟು ಬಿಗಿಗೊಳಿಸುವಂತೆ ಸ್ಥಳಿಯ ಸಿಬ್ಬಂದಿಗೆ ಸೂಚನೆ ನೀಡಿದ್ರು. ಆದ್ರೆ ಸದ್ಯ ಈ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ ಅಂತ ತಿಳಿಸಿದ್ರು.

ಇದನ್ನೂ ಓದಿ: ರೂಪಾಂತರಿ Omicron ಇರುವ ದೇಶಗಳ ಪ್ರಜೆಗಳ ಪ್ರವೇಶ ನಿರ್ಬಂಧಕ್ಕೆ ಕೇಂದ್ರಕ್ಕೆ ಮನವಿ: CM Basavaraja Bommai

ಒಂದು ಕಡೆ ರೂಪಂತರಿ ವೈರಸ್ ಸಮಸ್ಯೆ ಒಂದು ಕಡೆಯಾದ್ರೆ ಕೇರಳ ರಾಜ್ಯದಲ್ಲಿ ಇರುವ ನೀಫಾ ವೈರಸ್ ಹಾಗೂ ನ್ಯೂರೋ ವೈರಸ್ ಕಾಡ ಇದೆ. ಈಗಾಗಿ ಕೇರಳ ಗಡಿಯಲ್ಲಿ ತಪಾಸಣೆ ತೀರ್ವಗೊಳಿಸಲಾಗಿತ್ತು. ಈಗ ಮೂರನೇ ಅಲೆಯ ವೈರಸ್ ಕಾಟ ಶುರುವಾಗಿದೆ. ಒಟ್ಟಾರೆ, ಇನ್ನೇನು ಕೊರೊನಾ ಮುಗಿತು ಅನ್ನುವ ಹೊತ್ತಿನಲ್ಲಿ ರೂಪಾಂತರ ವೈರಸ್ ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ. ಜನರು ಈಗಾಗಲೆ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಇದರ ಪರಿಣಾಮ ಎದುರಿಸಬೇಕಾಗುತ್ತೆ. ಈಗಾಗಿ ರಾಜ್ಯ ಸರ್ಕಾರ ರೂಪಾಂತರಿ ವೈರಸ್ ತಡೆಯುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ
ದಕ್ಷಿಣ ಆಫ್ರಿಕಾ, ಬೋಟ್ಸಾವಾನ್, ಇಸ್ರೇಲ್, ಹಾಂಗ್ ಕಾಂಗ್ ಮೊದಲಾದ ದೇಶಗಳಲ್ಲಿ ಕಳೆದೊಂದು ವಾರದಿಂದ ಕೋವಿಡ್ ಹೊಸ ರೂಪಾಂತರಿ ವೈರಾಣು ಕಾಣಿಸಿಕೊಂಡಿದೆ. ಆದರೆ ರಾಜ್ಯದಲ್ಲಿ ಎಲ್ಲೂ ಇದು ಕಂಡು ಬಂದಿಲ್ಲ. ಇದೇ ವಿಷಯವಾಗಿ ನಿನ್ನೆ ಆರೋಗ್ಯ ಇಲಾಖೆ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮ ವಹಿಸಲು ಮಾರ್ಗಸೂಚಿ ರೂಪಿಸಿ ಬಿಡುಗಡೆ ಮಾಡಲಾಗಿದೆ. ಹೊಸ ವೈರಾಣು ಕಂಡುಬಂದಿರುವ ದೇಶಗಳಿಂದ ರಾಜ್ಯದ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಕೋವಿಡ್ ವರದಿ ತಂದಿದ್ದರೂ ಕೂಡ, ಅವರಿಗೆ ಆರ್ ಟಿಪಿಸಿಆರ್ ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ. ಅವರಿಗೆ ನೆಗೆಟಿವ್ ಬಂದರೆ ಮನೆಯಲ್ಲೇ ಒಂದು ವಾರ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುವುದು. ಈ ಸಮಯದಲ್ಲಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗುವುದು. ಏಳು ದಿನಗಳ ಬಳಿಕ ಮತ್ತೆ ಪರೀಕ್ಷೆ ಮಾಡಲಾಗುವುದು. ಅವರಿಗೆ ರೋಗದ ಲಕ್ಷಣ ಕಂಡುಬಂದರೆ ಆಸ್ಪತ್ರೆಗೆ ದಾಖಲಿಸಲಾಗುವುದು.
Published by:Kavya V
First published: