• Home
  • »
  • News
  • »
  • state
  • »
  • Mysuru Double Murder​: ಅಪ್ಪನ ಅಕ್ರಮ ಸಂಬಂಧ ಸಹಿಸದ ಮಗನಿಂದ ತಂದೆ ಜೊತೆ ತಂದೆ ಪ್ರೇಯಸಿ ಕೊಲೆ

Mysuru Double Murder​: ಅಪ್ಪನ ಅಕ್ರಮ ಸಂಬಂಧ ಸಹಿಸದ ಮಗನಿಂದ ತಂದೆ ಜೊತೆ ತಂದೆ ಪ್ರೇಯಸಿ ಕೊಲೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Mysuru double murder case: ಮೈಸೂರು ನಗರದ ಹೊರ ವಲಯದಲ್ಲಿರುವ ಶ್ರೀರಾಂಪುರದಲ್ಲಿ ಘಟನೆ ನಡೆದಿದ್ದು, ಪ್ರೇಯಸಿ ಮನೆ ಎದುರೇ ತಂದೆ ಕುತ್ತಿಗೆಗೆ ಮಚ್ಚು ಬೀಸಿದವನು ಬಿಡಿಸಲು ಬಂದ ಆತನ ಪ್ರೇಯಸಿಗೂ ಹಳ್ಳ ತೋಡಿದ್ದಾನೆ

  • Share this:

ಮೈಸೂರು: ಆತ ದೊಡ್ಡ ವ್ಯಾಪಾರಿ, ಟ್ರಾವೆಲ್ ಉದ್ಯಮದ ಜೊತೆಗೆ ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ. ಹೆಂಡತಿ, ಇಬ್ಬರು ಮಕ್ಕಳ ಜೊತೆಗೆ ಖರ್ಚು ನೀಗಿ ಮಿಕ್ಕುವಷ್ಟು ಹಣ ಹೊಂದಿದ್ದ ಆತನದ್ದು ಸುಖೀ ಸಂಸಾರ. ಇಷ್ಟಾಗಿಯೂ ಮತ್ತೊಂದು ಸಂಸಾರ (Extramarital Affair) ಹೆಗಲನ್ನು ಆತ ಹೊತ್ತು ಸಾಗಿದ್ದೇ ಮಗನಲ್ಲಿ ಕೆಂಡದಂತ ಕೋಪ ತರಿಸಿತ್ತು. ಅದರೆ ಕೋಪದಲ್ಲಿ ಮಚ್ಚು ಹಿಡಿದು ಹೊರಟವನು ತಂದೆಯ ಜೊತೆಗೆ ಆತನ ಪ್ರೇಯಸಿಯನ್ನೂ ಕೊಚ್ಚಿ ಕೊಲೆ ಮಾಡಿದ್ದಾನೆ. ಹೌದು, ಬೆಳ್ಳಂಬೆಳಿಗ್ಗೆ ಸಾಂಸ್ಕೃತಿಕ ನಗರಿ ಮೈಸೂರು (Cultural Capital Mysuru double murder) ಜನ ಡಬಲ್ ಮರ್ಡರ್ ಸುದ್ದಿ ಕೇಳಿ ಬೆಚ್ಚಿ ಬಿದ್ದಿದ್ದು. ತಂದೆ ನಡವಳಿಕೆಯಿಂದ ಬೇಸತ್ತ ಮಗ ಮಚ್ಚಿನಿಂದ ಕೊಚ್ಚಿ ಇಬ್ಬರನ್ನೂ ಕೊಲೆ ಮಾಡಿದ್ದಾನೆ.


ಮೈಸೂರು ನಗರದ ಹೊರ ವಲಯದಲ್ಲಿರುವ ಶ್ರೀರಾಂಪುರದಲ್ಲಿ ಘಟನೆ ನಡೆದಿದ್ದು, ಪ್ರೇಯಸಿ ಮನೆ ಎದುರೇ ತಂದೆ ಕುತ್ತಿಗೆಗೆ ಮಚ್ಚು ಬೀಸಿದವನು ಬಿಡಿಸಲು ಬಂದ ಆತನ ಪ್ರೇಯಸಿಗೂ ಹಳ್ಳ ತೋಡಿದ್ದಾನೆ. ತಾಯಿಯನ್ನು ಕಾಪಾಡಲು ಬಂದ ಮಗನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುಮಾರು 56 ವರ್ಷ ಪ್ರಾಯಾದ ವ್ಯಕ್ತಿಯ ಹೆಸರು ಶಿವಪ್ರಕಾಶ್ ಅಲಿಯಾಸ್ ಸೀಮೆಎಣ್ಣೆ ಪ್ರಕಾಶ್.


ಮೈಸೂರಿನ ಕನ್ನೇಗೌಡನಕೊಪ್ಪಲು ನಿವಾಸಿ. ಟ್ರಾವಲ್ಸ್ ಉದ್ಯಮಿಯಾದ ಪ್ರಕಾಶ್‌ನನ್ನು ಆತನ ಮಗ ಸಾಗರ್ ಕೊಲೆ ಮಾಡಿದ್ದಾನೆ. ಕೊಲೆಗೆ ತಂದೆಯ ಅನೈತಿಕ ಸಂಬಂಧ ಕಾರಣ ಎನ್ನಲಾಗುತ್ತಿದ್ದರೂ, ದುಶ್ಚಟಗಳಿಗೆ ಬಲಿಯಾಗಿದ್ದ ಮಗ ಹಣಕ್ಕಾಗಿ ಪೀಡಿಸಿ ತಂದೆಯನ್ನು ಕೊಂದಿದ್ದಾನೆ ಎನ್ನಲಾಗುತ್ತಿದೆ. ಗುರುವಾರ ರಾತ್ರಿ 9.30ರ ಸಮಯದಲ್ಲಿ ಕೊಲೆ ನಡೆದಿದ್ದು, ತಂದೆ ಮತ್ತೊಬ್ಬ ಮಹಿಳೆಯ ಮನೆಯಲ್ಲಿ ಉಳಿದುಕೊಂಡಿದ್ದ ಸಂದರ್ಭದಲ್ಲಿ ಕೊಲೆ ಮಾಡಲಾಗಿದೆ.ಶಿವಪ್ರಕಾಶ್‌ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಅದರಲ್ಲಿ ಒಬ್ಬಳು ಮಗಳು ಹಾಗೂ ಮತ್ತೊಬ್ಬ ಮಗ ಸಾಗರ್.


ಸಾಕಷ್ಟು ಹಣವಂತನಾಗಿದ್ದ ಶಿವಪ್ರಕಾಶ್ ಕಳೆದ 20 ವರ್ಷಗಳಿಂದ ಲತಾ ಮತ್ತೊಬ್ಬ ಮಹಿಳೆ ಜೊತೆ ಸಂಬಂಧ ಬೆಳೆಸಿದ್ದ. ಲತಾ ಮೂಲತಃ ಹೆಚ್‌ಡಿ.ಕೋಟೆ ತಾಲೂಕು (HD Kote Taluk) ಹೊಸಳ್ಳಿ ಗ್ರಾಮದವಳು. ಲತಾ ಗಂಡ ನಾಗರಾಜು ಈಗ ಕೊಲೆ ಆಗಿರುವ ಶಿವಪ್ರಕಾಶ್ ಬಳಿ ಕಾರು ಚಾಲಕನಾಗಿದ್ದ. ಆಗಿಂದಲೂ ಶಿವಪ್ರಕಾಶ್ ನಾಗರಾಜು ಮನೆಗೆ ಬಂದು ಹೋಗುವ ಪರಿಪಾಠ ಬೆಳೆಸಿಕೊಂಡಿದ್ದಾನೆ. 20 ವರ್ಷಗಳ ಹಿಂದೆಯೇ ಲತಾ ಗಂಡ ನಾಗರಾಜು ಅನಾರೋಗ್ಯದಿಂದ ಸಾವನ್ನಪ್ಪಿದ್ದ.


ನಾಗರಾಜು ಸಾವನ್ನಪ್ಪಿದ ನಂತ ಲತಾ ಹಾಗೂ ಶಿವಪ್ರಕಾಶ್ ಒಟ್ಟಿಗೆ ದಿನ ಕಳೆಯಲು ಆರಂಭಿಸಿದ್ದಾರೆ. ಈಗಾಗಿ ಹೆಚ್‌ಡಿ.ಕೋಟೆಯ ಹೊಸಳ್ಳಿಯಲ್ಲಿ ಲತಾ ಕುಟುಂಬವನ್ನು ಮೈಸೂರಿಗೆ ತಂದು ಇರಿಸಿದ್ದ ಶಿವಪ್ರಕಾಶ್. ಅಷ್ಟು ವರ್ಷಗಳಿಂದ ಲತಾ ಹಾಗೂ ಆಕೆಯ ಮಕ್ಕಳನ್ನು ಪೋಷಣೆ ಮಾಡಿಕೊಂಡು ಬಂದಿದ್ದ ಪ್ರಕಾಶ್ ಆಕೆಗಾಗಿ ಶ್ರೀನಗರದಲ್ಲಿ 30×40 ಮನೆ ಕಟ್ಟಿಸಿಕೊಟ್ಟಿದ್ದಾನೆ. ಅಷ್ಟು ಮಾತ್ರವಲ್ಲ ಆಕೆಯ ಇಬ್ಬರು ಹೆಣ್ಣು ಮಕ್ಕಳಿಗೂ ತಾನೇ ನಿಂತು ಮದುವೆ ಮಾಡಿದ್ದ.


ತನ್ನ ತಂದೆ ಬೇರೊಂದು ಕುಟುಂಬಕ್ಕೆ ಇಷ್ಟೆಲ್ಲ ಖರ್ಚು ಮಾಡುತ್ತಿರುವುದು ಶಿವಪ್ರಕಾಶ್ ನ ಕುಟುಂಬಸ್ಥರಿಗೆ ಕೋಪ ತರಿಸಿತ್ತು. ಆತನ ಮಗ ಸಾಗರ್ ಇದೇ ವಿಚಾರವಾಗಿ ಪದೇ ಪದೇ ಜಗಳ ತೆಗೆದಿದ್ದ. ಈ ವಿಚಾರ ಸಾಕಷ್ಟು ಬಾರಿ ಪೋಲಿಸ್ ಠಾಣೆ ಮೆಟ್ಟಿಲು ಕೂಡ ಹತ್ತಿತ್ತು. ಅಷ್ಟು ಮಾತ್ರವಲ್ಲ ಶಾಸಕರ ಸಮ್ಮುಖದಲ್ಲಿ ತಂದೆ ಮಗನ ಜಗಳ ಶಮನ ಮಾಡುವ ಕೆಲಸಗಳೂ ನಡೆದಿದ್ದವು. ಆದರೆ ಇದ್ಯಾವುದೂ ಪಲ ಕೊಡದಿದ್ದಾಗ ರೊಚ್ಚಿಗೆದ್ದ ಮಗ ತಂದೆ ಹಾಗೂ ಆತನ ಪ್ರೇಯಸಿಯನ್ನು ಕೊಲೆ ಮಾಡಿದ್ದಾರೆ (Son killed father in fit of rage in Mysore).


ಕಳೆದ 20 ವರ್ಷಗಳಿಂದಲೂ ಶಿವಪ್ರಕಾಶ್ ಎರಡೂ ಮನೆಗಳಲ್ಲಿ ವಾಸ ಮಾಡಿಕೊಂಡು ಬಂದಿದ್ದಾನೆ. ಬೆಳಿಗ್ಗೆಯಿಂದ ಸಂಜೆ ವರೆಗೆ ಪ್ರೇಯಸಿ ಲತಾ ಮನೆಯಲ್ಲಿ ಕಾಲ ಕಳೆದರೆ, ರಾತ್ತಿ ಮಲಗುವ ವೇಳೆಗೆ ತನ್ನ ಮನೆಗೆ ಬಂದು ಮಲಗುತ್ತಿದ್ದ. ಗುರುವಾರ ಕೂಡ ಎಂದಿನಂತೆ ಪ್ರಕಾಶ್ ಲತಾ ಮನೆಗೆ ಬಂದಿದ್ದ. ರಾತ್ರಿ 9 ಗಂಟೆಗೆ ಊಟ ಮುಗಿಸಿಕೊಂಡು ಇನ್ನೇ‌ನು ಹೊರಡಬೇಕು ಎನ್ನುವಷ್ಟರಲ್ಲಿ ಆತನ ಮಗ ಸಾಗರ್ ಎಂಟ್ರಿಯಾಗಿದೆ. ಲತಾ ಮನೆಯೊಳಗಿದ್ದ ತಂದೆಯನ್ನು ಹೊರಗೆ ಕರೆಸಿದ ಮಗ ಅಲ್ಲೇ ಗಲಾಟೆ ಶುರು ಮಾಡಿದ್ದ.


ಇದನ್ನೂ ಓದಿ: ಪ್ರೇಯಸಿ ಮೇಲೆ ಪ್ರಿಯಕರನಿಂದ​ ಅತ್ಯಾಚಾರ​, 4 ವರ್ಷದ ಮಗುವಿನ ಮೇಲೆ ರೇಪ್​; ಎರಡು ಕೃತ್ಯದಿಂದ ಬೆಚ್ಚಿಬಿದ್ದ ನಗರಿ


ಹೊರಗೆ ತಂದೆ ಮಕ್ಕಳ ಜಗಳ ಬಿಡಿಸಲು ಲತಾ ಹಾಗೂ ಆಕೆಯ ಮಗ ನಾಗಾರ್ಜುನ ಬಂದಿದ್ದರು. ಆತ ಸಾಗರ್ ತಾನು ತಂದಿದ್ದ ಮಚ್ಚಿನಿಂದ ತಂದೆಯ ಕತ್ತಿಗೆ ಹೊಡೆದು ಕೊಂದಿದ್ದಾನೆ. ಈ ವೇಳೆ ಗಲಾಟೆ ಬಿಡಿಸಲು ಬಂದ ಪ್ರೇಯಸಿ ಲತಾ ತಲೆಗೂ ಮಚ್ಚಿನಿಂದ ಹೊಡೆದಿದ್ದು, ತೀರ್ವ ರಕ್ತಸ್ರಾವದಿಂದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಜಗಳ ಬಿಡಿಸಲು ಬಂದಿದ್ದ ಲತಾ ಮಗ ನಾಗಾರ್ಜುನ  ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ತಂದೆ ಮೇಲೆ ಮಗ ಸಿಟ್ಟಾಗಲು ಹಣಕಾಸಿನ ವಿಚಾರವೂ ಕಾರಣ ಎನ್ನಲಾಗಿದೆ.


ಇದನ್ನೂ ಓದಿ: Crime: ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯ: ಒಪ್ಪದ ಹೆಂಡತಿ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪತಿ


ಶಿವಪ್ರಕಾಶ್ ಮಗ ಸಾಗರ್ ಜೂಜಾಟದ ಚಟಕ್ಕೆ ಬಲಿಯಾಗಿದ್ದ ಎನ್ನಲಾಗಿದೆ. ಐಪಿಲ್ ದಂದೆಯಲ್ಲಿ ಸುಮಾರು‌ 70 ಲಕ್ಷ ಹಣ ಸಾಲ ಮಾಡಿಕೊಂಡಿದ್ದನಂತೆ. ಆದರೆ ತಂದೆ ಶಿವಪ್ರಕಾಶ್ ಮಗನ ಈ ಸಾಲವನ್ನೂ ಇತ್ತೀಚೆಗೆ ತೀರಿಸಿದ್ದ. ಸಾಲ ತೀರಿಸಿದ ನಂತರವೂ ಮಗ ಹಣಕ್ಕಾಗಿ ಪದೇ ಪದೇ ತಂದೆಯನ್ನು ಪೀಡಿಸುತ್ತಿದ್ದನಂತೆ. ಈ ವಿಚಾರ ಮುನ್ನೆಲೆಗೆ ಬಂದಾಗಲೆಲ್ಲ ನನಗೆ ಸೇರಬೇಕಾದ ಹಣವನ್ನೆಲೆ ನೀನು ಬೇರೆಯವರಿಗೆ ಸುರಿಯುತ್ತಿದ್ದೀಯೆ ಎಂದು ದೊಡ್ಡ ಗಲಾಟೆ ಮಾಡುತ್ತಿದ್ದನಂತೆ.


ಇದನ್ನೂ ಓದಿ: ಅಶ್ಲೀಲ ಚಿತ್ರ ನೋಡಲು ನಿರಾಕರಿಸಿದ್ದಕ್ಕೆ ಮೂವರು ಅಪ್ರಾಪ್ತರಿಂದ 6 ವರ್ಷದ ಬಾಲಕಿಯ ಕೊಲೆ


ರಾತ್ರಿಯೂ ಇದೇ ಗಲಾಟೆ ವಿಕೋಪಕ್ಕೆ ತಿರುಗಿ ತಂದೆ ಹಾಗೂ ಆತನ ಪ್ರೇಯಸಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.ಇಡೀ ಘಟನೆಗೆ ಕಾರಣನಾದ ಮಗ ಈಗ ತಲೆ ಮರೆಸಿಕೊಂಡಿದ್ದಾನೆ. ಆದರೆ ತಂದೆ ನಡವಳಿಯಿಂದ ಕೋಪಗೊಂಡ ಮಗ ಇಷ್ಟು ದೊಡ್ಡ ಅನಾಹುತ ಮಾಡಿದ್ದು ಮಾತ್ರ ವಿಪರ್ಯ್ಯಾಸವೇ ಸರಿ.

Published by:Sharath Sharma Kalagaru
First published: