ಆಕ್ಸಿಜನ್​ ನೀಡಿದಕ್ಕೆ ಪ್ರಧಾನಿಗೆ ಧನ್ಯವಾದ; ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್​ ಸಿಂಹ ವಿರುದ್ಧ ಟೀಕಾಪ್ರಹಾರ

ಆಕ್ಸಿಜನ್​ ವಿಚಾರದಲ್ಲಿ ಈ ರೀತಿ ಸುಳ್ಳು ಪ್ರಚಾರ ನಡೆಸಬಾರದು. ಇಂದು ರಾಜ್ಯಕ್ಕೆ ಆಕ್ಸಿಜನ್​ ತಲುಪಿರುವುದು ಹೈ ಕೋರ್ಟ್​ ಮತ್ತು ಸುಪ್ರೀಂ ಕೋರ್ಟ್​ ಆದೇಶದಿಂದ. ಕೇಂದ್ರದಿಂದ ಅಲ್ಲ. ಈ ವಿಚಾರದಲ್ಲಿ ರಾಜಕೀಯ ಬೇಡ ಎಂದು ತಿರುಗೇಟು ನೀಡಿದ್ದಾರೆ

ಸಂಸದ ಪ್ರತಾಪ್​​ ಸಿಂಹ.

ಸಂಸದ ಪ್ರತಾಪ್​​ ಸಿಂಹ.

 • Share this:
  ಮೈಸೂರು (ಮೇ. 12): ಆಕ್ಸಿಜನ್​ ಕೊರತೆ ಎದುರಿಸುತ್ತಿದ್ದ ರಾಜ್ಯಕ್ಕೆ ನಿನ್ನೆ 120 ಟನ್​ ತೂಕದ ಆರು ಕಂಟೇನರ್​ ಆಕ್ಸಿಜನ್​ ಟ್ಯಾಂಕರ್​ ಬಂದಿಳಿದಿದೆ. ಜೆಮ್​ಶೆಡ್​ಪುರದಿಂದ ವಿಶೇಷ ರೈಲಿನ ಮೂಲಕ ಈ ಆಕ್ಸಿಜನ್​ಅನ್ನು ನೀಡಲಾಗಿತ್ತು. ಬೆಂಗಳೂರಿಗೆ ಬಂದಿಳಿದ ಈ ಆಕ್ಸಿಜನ್​ ಅನ್ನು ಹಂತಹಂತವಾಗಿ ನಗರದ ವಿವಿಧ ಆಸ್ಪತ್ರೆಗಳಿಗೆ ತಲುಪಿಸುವ ಕಾರ್ಯ ನಡೆದಿದೆ. ಇದರಲ್ಲಿ 20 ಮೆಟ್ರಿಕ್​ ಟನ್​ ಅಷ್ಟು ಆಕ್ಸಿಜನ್​ ಟ್ಯಾಂಕ್​ ಅನ್ನು ಮೈಸೂರಿಗೆ ಇಂದು ತಲುಪಿಸಲಾಗಿದೆ. ಮೈಸೂರಿಗೆ ಆಕ್ಸಿಜನ್​ ಟ್ಯಾಂಕ್​ ಬಂದ ಸುದ್ದಿಯನ್ನು ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್​ ಸಿಂಹ ಹಂಚಿಕೊಂಡಿದ್ದಾರೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಆಕ್ಸಿಜನ್​ ತಲುಪಿದ ವಿಷಯ ಹಂಚಿಕೊಂಡ ಅವರು ಈ ಸಂಬಂಧ ಪ್ರಧಾನ ಮಂತ್ರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಈ ವಿಷಯವನ್ನು ಗಮನಿಸಿದ ನಾಡಿನ ಸಾರ್ವಜನಿಕರು ಪ್ರತಾಪ್​ ಸಿಂಹ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೇ, ರಾಜ್ಯಕ್ಕೆ ಆಕ್ಸಿಜನ್​ ತಲುಪಿದ್ದು, ಹೈ ಕೋರ್ಟ್​ ನಿರ್ದೇಶನದ ಮೇರೆಗೆ ಹೊರತು ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

  ಮೈಸೂರಿಗೆ 20 MT Oxygen Tank ಕಳುಹಿಸಿದ ಪ್ರಧಾನಿ ಮೋದೀಜಿಗೆ ಪ್ರಣಾಮಗಳು. Thank u beloved PM @narendramodi ji for sending 20 MT Oxygen Tank to Mysore.

  Posted by Pratap Simha on Wednesday, 12 May 2021


  ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 24 ಜನ ಮೃತಪಟ್ಟ ಬಳಿಕ ರಾಜ್ಯದಲ್ಲಿನ ಆಕ್ಸಿಜನ್​ ಕೊರತೆಯನ್ನು ಗಮನಿಸಿದ ರಾಜ್ಯ ಹೈ ಕೋರ್ಟ್​ ಆಕ್ಸಿಜನ್​ ಹಂಚಿಕೆ 965 ಮೆ. ಟನ್ ನಿಂದ 1200 ಮೆ. ಟನ್ ಗೆ ಪೂರೈಸುವಂತೆ ಕೇಂದ್ರಕ್ಕೆ ಸೂಚಿಸಿತ್ತು. ರಾಜ್ಯ ಹೈ ಕೋರ್ಟ್​ನ ಈ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೊರೆ ಹೋದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಹೆಚ್ಚುವರಿ ಆಮ್ಲಜನಕ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್‌ ನೀಡಿರುವ ನಿರ್ದೇಶನಗಳಲ್ಲಿ ಯಾವುದೇ ತಪ್ಪಿಲ್ಲ. ರಾಜ್ಯದಲ್ಲಿ ಆಮ್ಲಜನಕದ ಬೇಡಿಕೆ ಮತ್ತು ಪೂರೈಕೆಯನ್ನು ಪರಿಶೀಲಿಸುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಪ್ರಾತಿನಿಧ್ಯದ ದೃಷ್ಟಿಯಿಂದ, ಆಮ್ಲಜನಕದ ಬೇಡಿಕೆಯನ್ನು ಪೂರೈಸಬೇಕಾಗುತ್ತದೆ ಎಂದು ಆದೇಶಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗುವಂತೆ ಮಾಡಿತು.  ಪರಿಣಾಮವಾಗಿ ರಾಜ್ಯಕ್ಕೆ ಇಂದು ಆಕ್ಸಿಜನ್​ ಪೂರೈಕೆ ಮಾಡಲು ಸರ್ಕಾರ ಮುಂದಾಗಿದೆ. ಆದರೆ, ಈ ವಿಷಯವನ್ನು ಮರೆಮಾಚಿ ಸಂಸದರು ಪ್ರಧಾನಿ ಮೋದಿಯವರಿಂದ ರಾಜ್ಯಕ್ಕೆ ಆಕ್ಸಿಜನ್​ ದೊರೆತಿದೆ ಎಂದು ಬಿಂಬಿಸುತ್ತಿದ್ದಾರೆ. ಸಂಸದರ ಈ ನಡೆ ಖಂಡನಾರ್ಹ ಎಂಬ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ. ಪ್ರತಾಪ್​ ಸಿಂಹ ಅವರ ಈ ಪೋಸ್ಟ್​ ವಿರುದ್ಧ ಅನೇಕರು ಕಿಡಿಕಾರಿದ್ದು, ಸಂಸದರ ಈ ನಡೆ ಸಲ್ಲದು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. ಆಕ್ಸಿಜನ್​ ವಿಚಾರದಲ್ಲಿ ಈ ರೀತಿ ಸುಳ್ಳು ಪ್ರಚಾರ ನಡೆಸಬಾರದು. ರಾಜ್ಯದಲ್ಲಿನ ಬೆಳವಣಿಗೆ ಜನರಿಗೆ ಎಲ್ಲಾ ಗೊತ್ತಿದೆ. ಇಂದು ರಾಜ್ಯಕ್ಕೆ ಆಕ್ಸಿಜನ್​ ತಲುಪಿರುವುದು ಹೈ ಕೋರ್ಟ್​ ಮತ್ತು ಸುಪ್ರೀಂ ಕೋರ್ಟ್​ ಆದೇಶದಿಂದ. ಕೇಂದ್ರದಿಂದ ಅಲ್ಲ. ಈ ವಿಚಾರದಲ್ಲಿ ರಾಜಕೀಯ ಬೇಡ ಎಂದು ತಿರುಗೇಟು ನೀಡಿದ್ದಾರೆ

  ಇದನ್ನು ಓದಿ: ಎಲ್ಲರಿಗೂ ಕೊಡಲು ನಮ್ಮ ಬಳಿ ವ್ಯಾಕ್ಸಿನ್ ಇಲ್ಲ; ಅಸಹಾಯಕತೆ ವ್ಯಕ್ತಪಡಿಸಿದ ಸರ್ಕಾರದ ಮುಖ್ಯಕಾರ್ಯದರ್ಶಿ!

  ಕೊರೋನಾ ಸೋಂಕಿಗೆ ತುತ್ತಾಗಿರುವ ಸಂಸದರು.

  ಸಂಸದ ಪ್ರತಾಪ್​ ಸಿಂಹಗೆ ಕೊರೋನಾ ಸೋಂಕು ದೃಢವಾಗಿದೆ. ಮಂಗಳವಾರ ಅವರಿಗೆ ಲಕ್ಷಣ ರಹಿತ ಸೋಂಕು ಕಾಣಿಸಿಕೊಂಡಿದ್ದು, ಹೋಮ್​ ಐಸೋಲೇಷನ್​ಗೆ ಒಳಗಾಗುತ್ತಿರುವುದಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಅಲ್ಲದೇ, ತಮ್ಮ ಸಂಪರ್ಕಕ್ಕೆ ಬಂದವರು ಕೂಡ ಈ ಬಗ್ಗೆ ಮುನ್ನೆಚ್ಚರಿಕೆವಹಿಸುವಂತೆ ಮನವಿ ಮಾಡಿದ್ದರು.
  Published by:Seema R
  First published: