ನಾನೂ ಕೂಡ ದಲಿತನೇ..ರಾಜ್ಯದಲ್ಲಿ ದಲಿತ ಸಿಎಂ ಬರಲಿ.. BJP ದಲಿತ ಅಸ್ತ್ರಕ್ಕೆ Siddaramaiah ತಿರುಗೇಟು

ದಲಿತರು ಎಂದರೆ ಬರೀ ಪರಿಶಿಷ್ಟಜಾತಿ ಅವರು ಮಾತ್ರವಲ್ಲ, ನಾನು ಕೂಡ ದಲಿತನೇ. ಅವಕಾಶ ವಂಚಿತರೆಲ್ಲಾ ದಲಿತರು. ಯಾರೇ ಮುಖ್ಯಮಂತ್ರಿ ಆದರೂ ನಾನು ಖುಷಿ ಪಡುತ್ತೇನೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ (Chamundeshwari Constituency) ಚುನಾವಣೆಯಲ್ಲಿ ಎದುರಾಳಿಯಾಗಿ ಸ್ಪರ್ಧಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹಾಗೂ ಜಿಟಿ ದೇವೇಗೌಡ (G. T. Devegowda) ಇಂದು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾದರು. ಹಿನಕಲ್ ಗ್ರಾಮದಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಭಯ ನಾಯಕರು ಭಾಗಿಯಾದರು. ಗ್ರಾಮದ ಮುಂಭಾಗದಲ್ಲೇ ರೋಡ್ ಶೋ ಮುಖಾಂತರ ಕಾರ್ಯಕ್ರಮಕ್ಕೆ ಆಗಮಿಸಿದ ಸಿದ್ದರಾಮಯ್ಯಗೆ ಪುಷ್ಪಾರ್ಚನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಅಬ್ಬರ ಭಾಷಣ ಮಾಡಿದ ಸಿದ್ದರಾಮಯ್ಯ, ದಲಿತರು ಎಂದರೆ ಬರೀ ಪರಿಶಿಷ್ಟ ಜಾತಿ ಅವರು ಮಾತ್ರವಲ್ಲ, ನಾನು ಕೂಡ ದಲಿತನೇ. ಅವಕಾಶ ವಂಚಿತರೆಲ್ಲಾ ದಲಿತರು. ಯಾರೇ ಮುಖ್ಯಮಂತ್ರಿ ಆದರೂ ನಾನು ಖುಷಿ ಪಡುತ್ತೇನೆ. ಹೈಕಮಾಂಡ್ ದಲಿತ ಸಮುದಾಯದವರು ಸಿಎಂ ಆಗಲಿ ಎಂದು ಹೇಳಿದರೆ ಹೆಚ್ಚು ಖುಷಿ ಪಡುವ ವ್ಯಕ್ತಿ ನಾನೇ ಎನ್ನುವ ಮೂಲಕ ಇತ್ತೀಚೆಗೆ ಬಿಜೆಪಿ ಹೂಡಿರುವ ದಲಿತ ವಿರೋಧಿ ಬಾಣಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಆಂಜನೇಯ ಇನ್ನೂ ಹೆಚ್ಚು ಕೆಲಸ ಮಾಡಬೇಕಿತ್ತು

ಕಾಂಗ್ರೆಸ್ ನಲ್ಲಿ ಸಿಎಂ ಆಯ್ಕೆಗೆ ಶಾಸಕರ ಅಭಿಪ್ರಾಯ, ಹೈಕಮಾಂಡ್ ತೀರ್ಮಾನ‌ ಮುಖ್ಯ. ಎಲ್ಲರಿಗೂ ಸಿಎಂ ಆಗುವ ಅವಕಾಶ ಸಿಗಬೇಕು. ಹೈಕಮಾಂಡ್ ದಲಿತ ಸಿಎಂ ತೀರ್ಮಾನ ಮಾಡಿದರೆ ನಾನೇ ಮೊದಲು ಸ್ವಾಗತಿಸುತ್ತೇನೆ, ನಾನೇ ಹೆಚ್ಚು ಸಂತೋಷ ಪಡುತ್ತೇನೆ. ನಾನು ಅಧಿಕಾರದಲ್ಲಿ ಇದ್ದಾಗ ಸಂವಿಧಾನದ ಆಶಯಕ್ಕೆ ಪೂರಕವಾಗಿ ಕೆಲಸ ಮಾಡಿದ್ದೇನೆ. ನನ್ನ ಆತ್ಮಸಾಕ್ಷಿ ಬಹಳ ಕ್ಲೀಯರ್ ಇದೆ. ಈ ವಿಚಾರದಲ್ಲಿ ಯಾರೇ ಚರ್ಚೆಗೆ ಬರಲಿ ನಾನು ಚರ್ಚೆಗೆ ಸಿದ್ಧ ಎಂದರು. ನನ್ನ ಸಂಪುಟದ ಲ್ಲಿ ಆಂಜನೇಯನನ್ನು ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿ ಮಾಡಿದ್ದೆ. ಆಂಜನೇಯ ಇನ್ನೂ ಹೆಚ್ಚು ಕೆಲಸ ಮಾಡಬೇಕಿತ್ತು. ಕೆಲಸ ಮಾಡಲಿಲ್ಲ ಎಂದರು.

ನನಗೆ ಬಸವಣ್ಣ, ಅಂಬೇಡ್ಕರ್ ತತ್ವ ಮುಖ್ಯ

ನಾನು ಬಸವಣ್ಣ, ಅಂಬೇಡ್ಕರ್ ಅವರ ಅನುಯಾಯಿ. ಅಧಿಕಾರಕ್ಕಾಗಿ ಸಿದ್ಧಾಂತಗಳ ವಿಚಾರದಲ್ಲಿ  ರಾಜೀ ಮಾಡಿಕೊಳ್ಳಲ್ಲ. ಅಧಿಕಾರ ಇರುತ್ತೆ ಹೋಗುತ್ತೆ. ಸೋಲುತ್ತೇನೆ ಗೆಲುತ್ತೇನೆ ಅದು ಬೇರೆ ಪ್ರಶ್ನೆ. ನನಗೆ ಬಸವಣ್ಣ, ಅಂಬೇಡ್ಕರ್ ತತ್ವ ಮುಖ್ಯ ಎಂದು ಪ್ರತಿಪಾದಿಸಿದರು. ಶೂದ್ರರಿಗೆ ವಿದ್ಯೆ ಕಲಿಯುವ ಅವಕಾಶ ಇರಲಿಲ್ಲ, ಅಂಬೇಡ್ಕರ್ ಈ ಅವಕಾಶ ಕಲ್ಪಿಸಿದರು. ಇನ್ನೂ ಕೆಳ ಸಮುದಾಯದವರಿಗೆ ಪರಿಪೂರ್ಣವಾಗಿ ಶಿಕ್ಷಣ ದೊರೆತಿಲ್ಲ. ಬದ್ಥತೆ ಇರುವವರ ಕೈಯಲ್ಲಿ ಸಂವಿಧಾನ ಇರಬೇಕು. ಬದ್ಧತೆ ಇಲ್ಲದಿದ್ದರೆ ಸಂವಿಧಾನದ ಆಶಯ ಈಡೇರಲ್ಲ.ತಳ ಸಮುದಾಯದ ಜನ ಜಾಗೃತರಾಗಬೇಕು, ಜಾಗೃತರಾಗದಿದ್ದರೆ ಬದಲಾವಣೆ ಅಸಾಧ್ಯ ಎಂದರು.

ಒಂದು ಗಂಟೆಯಲ್ಲೇ ಸಾಲ ಮನ್ನಾ ಮಾಡಿದೆ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಣವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಪ್ರತ್ಯೇಕ ಕಾನೂನು ಜಾರಿಗೆ ತಂದಿದ್ದು ನಾನು‌. ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬೆಳಗಾವಿ ಅಧಿವೇಶನದಲ್ಲಿ ಈ ಕಾನೂನು ಜಾರಿಗೊಳಿಸಲಾಯಿತು. ಇಡೀ ದೇಶದಲ್ಲಿ ಎಲ್ಲೂ ಈ ರೀತಿಯ ಕಾನೂನು ಇಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಡುವ ಹಣ ಪ್ರಸಕ್ತ ಸಾಲಿನಲ್ಲಿ ಬಳಕೆಯಾಗದಿದ್ದರೇ ಮುಂದಿನ ಸಾಲಿನಲ್ಲಿ ಬಳಕೆ ಮಾಡಬೇಕು. ಹಣ ಬಳಕೆ ಮಾಡುವ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕಾನೂನು ಜಾರಿಗೆ ತಂದಿದ್ದು ನನ್ನ ಅವಧಿಯಲ್ಲಿ. ನಾನು ಅಧಿಕಾರಕ್ಕೆ ಬಂದ ಒಂದು ಗಂಟೆಯಲ್ಲೇ ಸಾಲ ಮನ್ನಾ ಮಾಡಿದೆ.

ಇದನ್ನು ಓದಿ: BJP ಈಗ ಕಲಬೆರಕೆ ಪಕ್ಷ.. ಡಿಕೆಶಿಗೆ DNA ಟೆಸ್ಟ್ ಮಾಡಿಸಬೇಕು.. Pramod Muthalik ಮಾತಿನ ಅರ್ಥವೇನು?

ನಾನೇನು ನಮ್ಮಪ್ಪನ್ನ ಮನೆಯಿಂದ ಕೊಟ್ಟಿದ್ನಾ?

ಬಡವರಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡುವ ಯೋಜನೆ ಜಾರಿಗೊಳಿಸಿದೆ. ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆ ಜಾರಿಗೊಳಿಸಿದೆ. 1 ಕೋಟಿ 20 ಲಕ್ಷ ಕುಟುಂಬ, 4 ಕೋಟಿ ಜನರಿಗೆ ಉಚಿತವಾಗಿ 7 ಕೆಜಿ ಅಕ್ಕಿ ಕೊಟ್ಟಿದ್ದೀನಿ, ಈಗ ಕೊಡ್ತಿದ್ದಾರಾ ಎಂದು ಪ್ರಶ್ನಿಸಿದರು. ನಾನೇನು ನಮ್ಮಪ್ಪನ್ನ ಮನೆಯಿಂದ ಕೊಟ್ಟಿದ್ನಾ? ಎಲ್ಲರಿಗು ಸವಲತ್ತು ಕೊಡುವ ಕೆಲಸ ಮಾಡಿದೆ. ಮಕ್ಕಳಿಗೆ ಹಾಲು, ಫ್ರೀ ಶೂ, ಊಟ ಇದನ್ನ ಮೊದಲ ಬಾರಿಗೆ ಯೋಜನೆ ಮಾಡಿದೆ. ಇನ್ನು ಆರ್ಥಿಕವಾಗಿ ಸಬಲರಾಗಲು, 50 ಲಕ್ಷದ ವರೆಗು ಕಾಂಟ್ರಾಕ್ಟರ್‌ಗೆ ಕಾನೂನಿನ ಮೂಲಕ ತಂದೆ. ಇದಕ್ಕೆ ಮೀಸಲಾತಿ ಮೂಲಕ ಇಡೀ ದೇಶದಲ್ಲಿ ನಾವು ತಂದ್ವಿ ಎಂದರು.
Published by:Kavya V
First published: