ಮೈಸೂರು: ಮೆಟ್ರಿಕ್ ನಂತರದ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸ್ಕಾಲರ್ಶಿಪ್ (Student Scholarship) ನೀಡಲಾಗುತ್ತಿದೆ. ಪರಿಶಿಷ್ಟ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಅರ್ಹ ದಾಖಲಾತಿಗಳೊಂದಿಗೆ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಿದ್ರೆ ಅರ್ಜಿ ಸಲ್ಲಿಸುವವರು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು ಯಾವುದು ಅನ್ನೋದನ್ನ ನೋಡಿ.
ವಿದ್ಯಾರ್ಥಿ ವೇತನದ ಮಾಹಿತಿ | ಮೆಟ್ರಿಕ್ ನಂತರದ ತರಗತಿಯ ವಿದ್ಯಾರ್ಥಿಗಳು |
ಈ ವಿದ್ಯಾರ್ಥಿಗಳಿಗೆ ಮಾತ್ರ | ಪರಿಶಿಷ್ಟ ವರ್ಗಕ್ಕೆ |
ಯಾರೆಲ್ಲ ಅರ್ಜಿ ಸಲ್ಲಿಸಬಹುದು? | ಪೋಷಕರ ವಾರ್ಷಿಕ ವರಮಾನ 25 ಲಕ್ಷದೊಳಗಿರಬೇಕು |
ಕೊನೆಯ ದಿನಾಂಕ | ಮೇ 15 |
ಹೆಚ್ಚಿನ ಮಾಹಿತಿಗಾಗಿ | 0821-2520910 |
ಆಧಾರ್ ಲಿಂಕ್ ಕಡ್ಡಾಯ
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕೊಡಲ್ಪಡುವ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಬ್ಯಾಂಕ್ ಖಾತೆಯನ್ನು ಆಧಾರ್ ಜೊತೆಗೆ ಜೋಡಿಸಿರಬೇಕು.
ಯಾವಾಗ ಕೊನೆ ದಿನ?
ಮೇ 15 ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ
ಹೆಚ್ಚಿನ ಮಾಹಿತಿಗಾಗಿ ಅರ್ಹ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಕಚೇರಿ ವಿಳಾಸವಾದ ಡಾ. ಬಾಬು ಜಗಜೀವನರಾಂ ಭವನ ಕಟ್ಟಡ, ಆದಿಪಂಪ ರಸ್ತೆ, ಪಡುವಾರಹಳ್ಳಿ, ಮೈಸೂರು ಇಲ್ಲಿಗೆ ಭೇಟಿ ನೀಡಬಹುದಾಗಿದೆ. ಇಲ್ಲವೇ ದೂರವಾಣಿ ಸಂಖ್ಯೆ 0821-2520910 ಸಂಪರ್ಕಿಸುವುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ