• Home
  • »
  • News
  • »
  • state
  • »
  • ಶಕ್ತಿಧಾಮದ ಹೆಣ್ಮಕ್ಕಳಿಗಾಗಿಯೇ ಅಪ್ಪು ಸಿನಿಮಾದಲ್ಲಿ ಹಾಡುತ್ತಿದ್ದುದು, ಏನಿದು ಶಕ್ತಿಧಾಮ? ಡಾ. ರಾಜ್ ಫ್ಯಾಮಿಲಿಗೂ ಇದಕ್ಕೂ ಏನು ಸಂಬಂಧ?

ಶಕ್ತಿಧಾಮದ ಹೆಣ್ಮಕ್ಕಳಿಗಾಗಿಯೇ ಅಪ್ಪು ಸಿನಿಮಾದಲ್ಲಿ ಹಾಡುತ್ತಿದ್ದುದು, ಏನಿದು ಶಕ್ತಿಧಾಮ? ಡಾ. ರಾಜ್ ಫ್ಯಾಮಿಲಿಗೂ ಇದಕ್ಕೂ ಏನು ಸಂಬಂಧ?

ನಟ ಪುನೀತ್​ ರಾಜ್​ಕುಮಾರ್​

ನಟ ಪುನೀತ್​ ರಾಜ್​ಕುಮಾರ್​

ಮೈಸೂರಿಗೆ  ಪುನೀತ್ ರಾಜ್ ಕುಮಾರ್ ಬಂದಾಗಲೆಲ್ಲಾ ಶಕ್ತಿಧಾಮಕ್ಕೆ ಬಂದು ಹೋಗುತ್ತಿದ್ದರು. 2020ರ ನವೆಂಬರ್ ನಲ್ಲಿ ಇಲ್ಲಿಗೆ ಬಂದು ಹೋಗಿದ್ರಂತೆ. ಪಾರ್ವತಮ್ಮ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಮಕ್ಕಳಿಗೆ ಸಿಹಿ ಹಂಚುತ್ತಿದ್ದರಂತೆ ಪುನೀತ್.

  • Share this:

ಮೈಸೂರು(ಅ.30): ಕನ್ನಡ ಚಿತ್ರರಂಗದ ಮೇರು ಪ್ರತಿಭೆ ಪುನೀತ್ ರಾಜ್‍ಕುಮಾರ್(Puneeth Rajkumar) ಇಹಲೋಕ ತ್ಯಜಿಸಿದ್ದಾರೆ. ಆದ್ರೇ ರಾಜ್ ಕುಟುಂಬ(Dr. Raj Family)ದ ಮಹತ್ತರ ಕಾರ್ಯಗಳಲ್ಲಿ ಒಂದಾದ ಶೋಷಿತ ಮಹಿಳೆಯರಿಗಾಗಿ ನಿರ್ಮಿಸಲಾದ ಶಕ್ತಿಧಾಮ(Shaktidhama)ದಲ್ಲಿ ಇಂದು ನೀರವ ಮೌನ ಆವರಿಸಿದೆ. ಮೈಸೂರಿನ ಶಕ್ತಿಧಾಮದ ನಿರ್ಮಾಣದ ಹಿಂದೆ ಒಂದು ರೋಚಕ ಕಥೆಯೇ ಇದೆ. 1998ರಲ್ಲಿ ಮೈಸೂರಿನ ಪೊಲೀಸ್ ಕಮೀಷನರ್(Mysore Police Commissioner Kempaiah) ಆಗಿದ್ದ ಕೆಂಪಯ್ಯ ಪ್ರಯತ್ನ ಹಾಗೂ ಡಾ.ರಾಜಕುಮಾರ್ ಅವರ ಮುಂದಾಳತ್ವ ಪ್ರಯತ್ನದಿಂದ ನಿರ್ಮಾಣಗೊಂಡ ಸಂಸ್ಥೆಯೇ ಶಕ್ತಿಧಾಮ. 


ಶಕ್ತಿಧಾಮ ನಿರ್ಮಾಣವಾಗಿದ್ದು ಯಾಕೆ?


ಶಕ್ತಿಧಾಮ ಮೈಸೂರು ನಂಜನಗೂಡು ರಸ್ತೆಯಲ್ಲಿರುವ ಮಹಿಳೆಯರ ಪುನರ್ವಸತಿ ಕೇಂದ್ರ ಆರಂಭವಾಗಿದ್ದು 2001ರಲ್ಲಿ. 1998ರ ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಪೊಲೀಸರಿಗೆ ಸುಮಾರು (800ಕ್ಕೂ ಹೆಚ್ಚು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯರು ಪೊಲೀಸರಿಗೆ ಸಿಕ್ಕಿ ಬೀಳುತ್ತಾರಂತೆ). ಶೋಷಿತ ಮಹಿಳೆಯರು ಸಿಕ್ಕುತ್ತಾರೆ. ಈ ವೇಳೆ ಅಷ್ಟು ದೊಡ್ಡ ಪ್ರಮಾಣದ  ಮಹಿಳೆಯರಿಗೆ ಪುನರ್ವಸತಿ ಕಲ್ಪಿಸುವುದು ಹೇಗೆ ಅಂತ ಸಮಸ್ಯೆ ತಲೆದೋರಿದಾಗ ಅಂದಿನ ಪೊಲೀಸ್ ಕಮಿಷನರ್ ಕೆಂಪಯ್ಯ ಅವರು ಈ ಸಮಸ್ಯೆಯ ಬಗ್ಗೆ ಡಾ.ರಾಜ್‌ ಕುಮಾರ್ ಬಳಿ ಪ್ರಸ್ತಾಪ ಮಾಡುತ್ತಾರೆ. ಆಗ ಪಾರ್ವತಮ್ಮ ರಾಜ್‌ ಕುಮಾರ್ ಒಂದು ರೂಪುರೇಷೆ ಸಿದ್ಧಪಡಿಸುತ್ತಾರೆ.


ಇದನ್ನೂ ಓದಿ:Puneeth Rajkumar: ಅಪ್ಪು ಬರ್ತಡೇ 17ನೇ ತಾರೀಖಿಗೆ, ಈ ದಿನಾಂಕದ ಬಗ್ಗೆ ಆ ಜನರಿಗೆ ಎಲ್ಲಿಲ್ಲದ ಭಯ! 17ಕ್ಕೂ ಸಾವಿಗೂ ನಂಟು ಇದ್ಯಾ?


ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು


ಬೃಹತ್ ಪ್ರಮಾಣದಲ್ಲಿ ದೇಣಿಗೆ ಸಂಗ್ರಹಿಸಿ ಮೈಸೂರಿನಲ್ಲಿ ಶಕ್ತಿಧಾಮ ನಿರ್ಮಾಣ ಮುಂದಾಗುತ್ತಾರೆ. ಇದೇ ವೇಳೆಯಲ್ಲಿ ಶಕ್ತಿಧಾಮ ನಿರ್ಮಾಣ ಮಾಡಲು ಸ್ಥಳದ ಅವಶ್ಯಕತೆ ಉಂಟಾಗಿದೆ. ಆಗ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಒಂದೂವರೆ ಎಕರೆ ಭೂಮಿ ನೀಡಿದ್ದರಂತೆ. ನಂತರ ರಾಜ್‌ ಕುಮಾರ್ ಅವರು ಸಂಗೀತ ರಸಸಂಜೆ ನಡೆಸಿ 45 ಲಕ್ಷ ರೂಪಾಯಿಯನ್ನು ಸಂಗ್ರಹಣೆ ಮಾಡಿ ಅಲ್ಲಿ ಬಂದ ಹಣವನ್ನು ಶಕ್ತಿಧಾಮಕ್ಕೆ ನೀಡಿದ್ದರಂತೆ. ನಂತರ ಶಕ್ತಿಧಾಮವನ್ನ ಪಾರ್ವತಮ್ಮ ರಾಜ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಮೊದಲಿಗೆ ಶೋಷಿತ ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದ ಶಕ್ತಿಧಾಮ ನಂತರ ಹೆಣ್ಣುಮಕ್ಕಳ ಶಿಕ್ಷಣ ಬಗ್ಗೆ ಗಮನಹರಿಸಿದ್ದರು.


ರಾಜ್​ ಕುಟುಂಬಕ್ಕೂ ಶಕ್ತಿಧಾಮಕ್ಕೂ ಅವಿನಾಭಾವ ಸಂಬಂಧ


ಬಳಿಕ ಶಿಕ್ಷಣದಿಂದ ವಂಚಿತರಾದ ಬಡ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಟ್ಟುಕೊಂಡು ಬರಲಾಗುತ್ತಿದೆ. ಅಂದಿನಿಂದಲೂ ಇಡೀ ರಾಜ್ ಕುಟುಂಬ ಶಕ್ತಿಧಾಮದ ಬಗ್ಗೆ ಅವಿನಾಭಾವ ಸಂಬಂಧ ಇಟ್ಟುಕೊಂಡು ಬಂದಿದ್ದಾರೆ. ಪಾರ್ವತಮ್ಮ ನಿಧನದ ನಂತರ ಗೀತಾ ಶಿವರಾಜ್ ಕುಮಾರ್ ಶಕ್ತಿಧಾಮದ ಜವಾಬ್ದಾರಿ ಹೊತ್ತಿದ್ರು. ಶಕ್ತಿಧಾಮಕ್ಕೆ ಪುನೀತ್ ರಾಜ್ ಕುಮಾರ್ ಕೂಡ ಹಲವು ಬಾರಿ ಭೇಟಿ‌ ಕೊಟ್ಟಿದ್ದಾರೆ.‌  ಬಂದು ಕೆಲ ಸಮಯ ಮಕ್ಕಳ ಜೊತೆ ಕಾಲ ಕಳೆದುಕೊಂಡು ಹೋಗುತ್ತಿದ್ದರು.


ಇದನ್ನೂ ಓದಿ:Puneeth Rajkumar : `ಜೇಮ್ಸ್​’ ಚಿತ್ರ ರಿಲೀಸ್​ ಆಗೇ ಆಗುತ್ತೆ: ಅಪ್ಪು ಫ್ಯಾನ್ಸ್​ಗೆ ನಿರ್ದೇಶಕ ಚೇತನ್​ ಭರವಸೆ


ಪಾರ್ವತಮ್ಮನ ಹುಟ್ಟುಹಬ್ಬಕ್ಕೆ ಮಕ್ಕಳಿಗೆ ಸಿಹಿ ಹಂಚುತ್ತಿದ್ದ ಪುನೀತ್


ಮೈಸೂರಿಗೆ  ಪುನೀತ್ ರಾಜ್ ಕುಮಾರ್ ಬಂದಾಗಲೆಲ್ಲಾ ಶಕ್ತಿಧಾಮಕ್ಕೆ ಬಂದು ಹೋಗುತ್ತಿದ್ದರು. 2020ರ ನವೆಂಬರ್ ನಲ್ಲಿ ಇಲ್ಲಿಗೆ ಬಂದು ಹೋಗಿದ್ರಂತೆ. ಪಾರ್ವತಮ್ಮ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಮಕ್ಕಳಿಗೆ ಸಿಹಿ ಹಂಚುತ್ತಿದ್ದರಂತೆ ಪುನೀತ್. ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಬೇಕಾದ ಸಾಮಾಗ್ರಿಗಳನ್ನು ಪುನೀತ್ ಕೊಡಿಸುತ್ತಿದ್ದರಂತೆ. ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ಮೈಸೂರಿನ ಶಕ್ತಿಧಾಮದ ಹಿತ ಕಾಯುವ ಕಾರ್ಯವನ್ನ ರಾಜ್ ಕುಟುಂಬ ಮಾಡುತ್ತಾ ಬಂದಿದೆ.

Published by:Latha CG
First published: