ಮೈಸೂರು ದಸರಾ2019: ಸೆ.24ರಿಂದ ಅರಮನೆಯಲ್ಲಿ ರಾಜಮನೆತದಿಂದ ದಸರಾ ಕಾರ್ಯಕ್ರಮ ಆರಂಭ

ಪರಂಪರಾಗತವಾಗಿ ಬಂದ ದಸರಾ ಆಚರಣೆಯನ್ನು ಅರಮನೆ ಆವರಣದಲ್ಲಿ ರಾಜಮನೆತನ ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ದರ್ಬಾರ್​ ಪೂಜೆ, ಆಯುಧ ಪೂಜೆ ಸೇರಿದಂತೆ ಇನ್ನಿತರ ಆಚರಣೆಯನ್ನು ರಾಜವಂಶಸ್ಥರು ಮಾಡಿಕೊಂಡು ಬಂದಿದೆ. ಅದರಂತೆ ಈ ಬಾರಿ ಕೂಡ ರಾಜಮನೆತನ ಈ ಆಚರಣೆಗೆ ಸಜ್ಜಾಗಿದ್ದು, ಇದೇ ತಿಂಗಳ 24ರಿಂದ ಈ ವಿಧಿ ವಿಧಾನ ತಯಾರಿಗೆ ರಾಜಮನೆತನ ಸಿದ್ಧತೆ ನಡೆಸಿದೆ.

Seema.R | news18-kannada
Updated:September 19, 2019, 6:14 PM IST
ಮೈಸೂರು ದಸರಾ2019: ಸೆ.24ರಿಂದ ಅರಮನೆಯಲ್ಲಿ ರಾಜಮನೆತದಿಂದ ದಸರಾ ಕಾರ್ಯಕ್ರಮ ಆರಂಭ
ಖಾಸಗಿ ದರ್ಬಾರ್​ ನಡೆಯುವ ಸ್ಥಳ
  • Share this:
ಮೈಸೂರು (ಸೆ.19): ಸಾಂಸ್ಕೃತಿಕ ನಗರಿಯಲ್ಲಿ ಸರ್ಕಾರದ ವತಿಯಿಂದ ದಸರಾ ಸಂಭ್ರಮದ ತಯಾರಿ ಜೋರಾಗಿದ್ದರೆ, ಇತ್ತ ಅರಮನೆಯಲ್ಲಿ ರಾಜಮನೆತನದಿಂದಲೂ ದಸರಾ ಆಚರಣೆಗೆ ಸಿದ್ಧತೆ ನಡೆಯುತ್ತಿದೆ.

ಪರಂಪರಾಗತವಾಗಿ ಬಂದ ದಸರಾ ಆಚರಣೆಯನ್ನು ಅರಮನೆ ಆವರಣದಲ್ಲಿ ರಾಜಮನೆತನ ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ದರ್ಬಾರ್​ ಪೂಜೆ, ಆಯುಧ ಪೂಜೆ ಸೇರಿದಂತೆ ಇನ್ನಿತರ ಆಚರಣೆಯನ್ನು ರಾಜವಂಶಸ್ಥರು ಮಾಡಿಕೊಂಡು ಬಂದಿದೆ. ಅದರಂತೆ ಈ ಬಾರಿ ಕೂಡ ರಾಜಮನೆತನ ಈ ಆಚರಣೆಗೆ ಸಜ್ಜಾಗಿದ್ದು, ಇದೇ ತಿಂಗಳ 24ರಿಂದ ಈ ವಿಧಿ ವಿಧಾನ ತಯಾರಿಗೆ ರಾಜಮನೆತನ ಸಿದ್ಧತೆ ನಡೆಸಿದೆ.,

ರಾಜಮನೆತನ ಪೂಜೆ ಸಂದರ್ಭದಲ್ಲಿ ಅರಮನೆ ಪ್ರವೇಶಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಿದ್ದು, ಈ ವೇಳೆ ರಾಜಮನೆತದ ಸದಸ್ಯರು ಮಾತ್ರ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್ ಸುಬ್ರಮಣ್ಯರು ಮಾಹಿತಿ ನೀಡಿದರು.

ಇದನ್ನು ಓದಿ: ಮೈಸೂರು ದಸರಾ 2019: ಪ್ರವಾಸಿ ಸ್ಥಳಗಳ ಭೇಟಿಗೆ ವಿಶೇಷ ಪ್ಯಾಕೇಜ್​ ಘೋಷಿಸಿದ ಕೆಎಸ್​​ಆರ್​​ಟಿಸಿ

ಸೆ, 24ರಿಂದ  ಬೆ.10ರಿಂದ ಮ.1ರವರೆಗೆ ಅರಮನೆಯ ಒಳ ಹಾಗೂ ಹೊರಾವರಣಕ್ಕೆ ಪ್ರವೇಶ ನಿಷೇಧ ಮಾಡಲಾಗುವುದು. ಸೆ. 29ರಿಂದ ಖಾಸಗಿ ದರ್ಬಾರ್ ಆರಂಭವಾಗಲಿದ್ದು, ಬೆ.10 ರಿಂದ ಮ.2:30ರವರೆಗೆ ಅರಮನೆಯ ಒಳ ಹಾಗೂ ಹೊರಾವರಣಕ್ಕೆ ಪ್ರವೇಶವಿರುವುದಿಲ್ಲ.

ಅಕ್ಟೋಬರ್​ 7ರಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಅರಮನೆಯ   ಆಯುಧಗಳಿಗೆ ಪೂಜೆ ಸಲ್ಲಿಸಲಿದ್ದಾರೆ. 8ರಂದು ಜಂಬೂಸವಾರಿ ನಡೆಯಲಿದೆ. ಇದಾದ ಬಳಿಕವೂ ರಾಜಮನೆತನ ವಿಶೇಷ ಕಾರ್ಯಕ್ರಮ ಪೂಜೆಯನ್ನು ಅರಮನೆಯಲ್ಲಿ ನಡೆಸಲಿದ್ದು, ಅ. 23ರಂದು ಸಿಂಹಾಸನ ವಿಸರ್ಜನೆ ನಡೆಯಲಿದೆ ಎಂದರು.

(ವರದಿ: ಪುಟ್ಟಪ್ಪ)
First published:September 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ