• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Robot: ಸಾಂಸ್ಕೃತಿಕ ನಗರಿಗೆ ಕಾಲಿಟ್ಟ ರೋಬೋ ಸೇವೆ, ಮೈಸೂರಿನಲ್ಲಿ ಹೋಟೆಲ್ ಕೆಲಸಕ್ಕೆ ರೋಬೋಟ್ ಬಳಕೆ

Robot: ಸಾಂಸ್ಕೃತಿಕ ನಗರಿಗೆ ಕಾಲಿಟ್ಟ ರೋಬೋ ಸೇವೆ, ಮೈಸೂರಿನಲ್ಲಿ ಹೋಟೆಲ್ ಕೆಲಸಕ್ಕೆ ರೋಬೋಟ್ ಬಳಕೆ

ರೋಬೋ

ರೋಬೋ

Mysore Siddhartha Hotel: ಇದು ಬ್ಯಾಟರಿ ಚಾಲಿತ ರೋಬೋಟ್ ಆಗಿದ್ದು, 4 ಗಂಟೆಗಳ ಕಾಲ ಒಮ್ಮೆ ಚಾರ್ಜ್ ಮಾಡಿದರೆ 8 ಗಂಟೆ ತನಕ ಕಾರ್ಯನಿರ್ವಹಿಸುತ್ತದೆ. ಜೊತೆಗೆ ರೋಬೋ 10 ಕೆ.ಜಿ ಯಷ್ಟು ಭಾರವನ್ನು ಹೊತ್ತು, ನಿಗದಿಸಿದ ಸ್ಥಳಕ್ಕೆ ತಲುಪಿಸಲಿದೆ

  • Share this:

    ಮನೆ (Home) ಹೋಟೆಲ್ (Hotel) ಸ್ಕೂಲ್ (School) ಆಸ್ಪತ್ರೆ (Hospital) ಮುಂತಾದೆಡೆ ಈಗಾಗಲೇ ಅಲ್ಲಿ ರೋಬೋಗಳ (Robot) ಹಾವಳಿ.. ಮನುಷ್ಯರನ್ನು(Human) ಮೀರಿಸುವಂತೆ ಎಲ್ಲಾ ಕಡೆ ಕೆಲಸ ಮಾಡುತ್ತಿರುವ ರೋಬೋಟ್ ಗಳಿಗೆ ಭಾವನೆ ಎಂಬುದು ಇಲ್ಲ.. ಕೇವಲ ತಂತ್ರಜ್ಞಾನದ (Technology) ಆಧಾರದ ಮೇಲೆ ಮನುಷ್ಯನ ಸೂಚನೆಯನ್ನ ಪಾಲಿಸಿಕೊಂಡು ಕೆಲಸ ಮಾಡುವ ರೋಬೋಟ್ಗಳು ಯಂತ್ರಮಾನವರು ಎಂದೇ ಪ್ರಸಿದ್ಧರು. ಅದರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ (Western Country) ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿ ರೋಬೋಟ್ಗಳು ಮನುಷ್ಯರಂತೆಯೇ ಕೆಲಸ ಮಾಡುತ್ತಲೇ ಇರುತ್ತವೆ.. ಭಾರತದ (India) ಮಟ್ಟಿಗೆ ಬಂದರೆ ರೋಬೋಗಳ ಸಂಖ್ಯೆ ಬಹುತೇಕ ವಿರಳ..


    ಕೆಲವೊಂದು ಮುಂದುವರೆದ ನಗರಗಳಲ್ಲಿ ಬೆರಳೆಣಿಕೆಯಷ್ಟು ಹೋಟೆಲ್ ಆಸ್ಪತ್ರೆ ಹಾಗೂ ಮಾಲ್ಗಳಲ್ಲಿ ರೋಬೋಗಳನ್ನು ಬಳಕೆ ಮಾಡಲಾಗುತ್ತಿದೆ.. ನಮ್ಮ ಕರ್ನಾಟಕದ ಮಟ್ಟಿಗೆ ಬಂದರೆ ಹೋಟೆಲ್ನಲ್ಲಿ ರೋಬೋಟ್ ಬಳಕೆ ಮಾಡುವುದರ ಬಗ್ಗೆ ಅಷ್ಟಾಗಿ ಮಾಹಿತಿ ಇರಲಿಲ್ಲ.. ಆದ್ರೆ ಈಗ ಬಂದಿರುವ ವಿಷಯ ಅಂದ್ರೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೈಸೂರಿನ ಸಂಸ್ಕೃತಿ ಅನಾವರಣ ಮಾಡುವ ಉಡುಗೆ-ತೊಡುಗೆ ತೊಟ್ಟ ರೋಬೋಟ್ ಒಂದು ಗ್ರಾಹಕರಿಗೆ ರುಚಿ ರುಚಿಯಾದ ತಿನಿಸುಗಳನ್ನು ಸರ್ವ್ ಮಾಡುತ್ತಿದೆ.


    ಸಿದ್ಧಾರ್ಥ ಹೋಟೆಲ್‌ನಲ್ಲಿ ರೋಬೊ ಸೇವೆ


    ಮುಂಬೈ, ಹೈದರಾಬಾದ್‌, ದೆಹಲಿ ಸೇರಿದಂತೆ ಹಲವು ನಗರಗಳ ಐಷಾರಾಮಿ ಹೋಟೆಲ್‌ಗಳಲ್ಲಿ ರೋಬೋಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಸಣ್ಣಪುಟ್ಟ ಹೋಟೆಲ್‌ಗಳಲ್ಲಿ ರೋಬೋಗಳ ಕಾರ್ಯನಿರ್ವಹಣೆ ಕಡಿಮೆ. ಆದ್ರೆ, ಮೈಸೂರಿನ ಸಿದ್ಧಾರ್ಥ ಹೋಟೆಲ್‌ನ ಮಾಲೀಕರು, ಗ್ರಾಹಕರನ್ನು ಸೆಳೆಯುವ ಸಲುವಾಗಿ ರೋಬೋ ತರಿಸಿದ್ದು, ಅದಕ್ಕೆ ಕರ್ನಾಟಕದ ಮಹಿಳೆಯರು ಧರಿಸುವಂತಹ ಸೀರೆ ಧರಿಸಿ ಸೇವೆ ಒದಗಿಸುತ್ತಿದ್ದಾರೆ.


    ಇದನ್ನೂ ಓದಿ: Zooನಲ್ಲಿನ ಅಳಿಲು ಕೋತಿಯನ್ನೇ ಕಿಡ್ನಾಪ್​ ಮಾಡಿದ ನೌಕರರು; ಕಾರಣ ಇದು!


    ಸುಂದರಿ ಹೆಸರಿನ ರೋಬೋ


    ಜಯಚಾಮರಾಜೇಂದ್ರ ವೃತ್ತದ (ಹಾರ್ಡಿಂಜ್‌ ವೃತ್ತ) ಬಳಿ ಇರುವ ಸಿದ್ದಾರ್ಥ ಹೋಟೆಲ್‌ನಲ್ಲಿ ಈ ಹೊಸ ತಂತ್ರಜ್ಞಾನವನ್ನು ಮೊಟ್ಟ ಮೊದಲ ಬಾರಿಗೆ ಅಳವಡಿಸಿಕೊಳ್ಳಲಾಗಿದೆ. ಹೊಸದಿಲ್ಲಿ ಮೂಲದ ಕಾಂಪೋಂಟ್‌ ಸಿಸ್ಟಂ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ಅಭಿವೃದ್ಧಿಪಡಿಸಿರುವ ರೋಬೋವನ್ನು ಹೋಟೆಲ್‌ನಲ್ಲಿ ಸೇವೆಗೆ ಸಜ್ಜುಗೊಳಿಸಿರುವ ಆಡಳಿತ ಮಂಡಳಿ ಅದಕ್ಕೆ ಸುಂದರಿ ಎನ್ನುವ ಹೆಸರನ್ನಿಟ್ಟಿದೆ.


    ಜೊತೆಗೆ ಕೆಂಪು ರೇಶ್ಮೆ ಸೀರೆ, ಬಿಂದಿಗೆ, ಮುತ್ತಿನ ಹಾರವನ್ನು ಕೊರಳಿಗೆ ಹಾಕಿ ಗ್ರಾಹಕರ ಗಮನ ಸೆಳೆಯುವ ರೀತಿಯಲ್ಲಿ ರೋಬೋ ಅಲಂಕಾರ ಮಾಡಲಾಗಿದೆ.. ಇನ್ನು ಟೇಬಲ್‍ನಲ್ಲಿ ಗ್ರಾಹಕರು ಕುಳಿತಾಕ್ಷಣ ನೀರಿನ ಲೋಟಗಳೊಂದಿಗೆ ರೋಬೋ ಆಗಮಿಸುತ್ತದೆ. ಮೆನು ಬಗ್ಗೆ ಕೇಳಿದರೆ ಅಂದು ರೆಸ್ಟೋರೆಂಟ್‍ನ ವಿಶೇಷ ತಿಂಡಿ ಸೇರಿದಂತೆ ಲಭ್ಯವಿರುವ ಎಲ್ಲಾ ತಿಂಡಿ ತಿನಿಸಿನ ಹೆಸರು ಹೇಳುತ್ತದೆ.


    ರೋಬೋ ವಿಶೇಷತೆ..


    ಇನ್ನು ಇದು ಬ್ಯಾಟರಿ ಚಾಲಿತ ರೋಬೋಟ್ ಆಗಿದ್ದು, 4 ಗಂಟೆಗಳ ಕಾಲ ಒಮ್ಮೆ ಚಾರ್ಜ್ ಮಾಡಿದರೆ 8 ಗಂಟೆ ತನಕ ಕಾರ್ಯನಿರ್ವಹಿಸುತ್ತದೆ. ಜೊತೆಗೆ ರೋಬೋ 10 ಕೆ.ಜಿ ಯಷ್ಟು ಭಾರವನ್ನು ಹೊತ್ತು, ನಿಗದಿಸಿದ ಸ್ಥಳಕ್ಕೆ ತಲುಪಿಸಲಿದೆ. ಮಾನವನ ಆದೇಶದ ಮೇರೆಗೆ ಕೆಲಸ ಮಾಡುತ್ತದೆ. ಜೊತೆಗೆ ರೋಬೋ ಸಂಚಾರಕ್ಕಾಗಿ ಕಿಚನ್​ನಿಂದ ಪ್ರತಿ ಟೇಬಲ್​ಗಳ ಬಳಿಗೆ ಆಯಸ್ಕಾಂತದ ಪಟ್ಟಿಯನ್ನು (ಮ್ಯಾಗ್ನೆಟಿಕ್ ಸ್ಟ್ರೈಪ್) ಅಳವಡಿಸಲಾಗಿದ್ದು, ಕಮಾಂಡ್ ನೀಡಿದ ಸ್ಥಳಕ್ಕೆ ತೆರಳಿ ಸೇವೆಯನ್ನು ಒದಗಿಸುತ್ತದೆ.


    ಇದನ್ನೂ ಓದಿ: ಮಧುರ ಕಂಠದ ಮ್ಯೂಸಿಕ್ ಮಾಂತ್ರಿಕ ಇನ್ನಿಲ್ಲ, ಗಾನ 'ಲಹಿರಿ' ಇನ್ನು ನೆನಪಷ್ಟೇ


    ನಿರ್ದಿಷ್ಟ ಟೇಬಲ್‍ಗೆ ತಿಂಡಿ ತಿನಿಸನ್ನು ಸರ್ವ್ ಮಾಡುವುದರ ಜೊತೆಗೆ ಈ ರೋಬೋ ಮತ್ತಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಹೋಟೆಲ್‍ನಲ್ಲಿರುವ ಕೊಠಡಿಗಳ ಸಂಖ್ಯೆ, ರೆಸ್ಟೋರೆಂಟ್‍ನಲ್ಲಿ ಲಭ್ಯವಿರುವ ತಿಂಡಿ ಊಟದ ಮೆನು ಸೇರಿದಂತೆ ಇನ್ನಿತರ ಸೌಲಭ್ಯಗಳು.


    ಸುತ್ತಮುತ್ತಲಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳು, ಇಲ್ಲಿಂದ ಎಷ್ಟು ದೂರವಾಗುತ್ತದೆ. ಮೈಸೂರಿನ ಸಂಕ್ಷಿಪ್ತ ಇತಿಹಾಸ, ಪ್ರವಾಸಿ ತಾಣಗಳು, ಬಸ್, ರೈಲು ನಿಲ್ದಾಣಕ್ಕಿರುವ ಅಂತರ ಹೀಗೆ ಎಲ್ಲಾ ರೀತಿಯ ಮಾಹಿತಿಯನ್ನೂ ಈ ರೋಬೋದಲ್ಲಿ ದಾಖಲಿಸಬಹುದು. ಅಷ್ಟೇ ಅಲ್ಲದೆ ಹೋಟೆಲ್ ಬಗ್ಗೆ, ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಕೇಳಿದರೂ ಸಂಪೂರ್ಣ ವಿವರ ನೀಡುತ್ತದೆ

    Published by:ranjumbkgowda1 ranjumbkgowda1
    First published: