ಮೈಸೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Power Star Puneeth Rajkumar) ಅವರ ಹುಟ್ಟುಹಬ್ಬ ಮತ್ತು ಜೇಮ್ಸ್ (James Movie) ಸಂಭ್ರಮಾಚರಣೆಯಲ್ಲಿ ಕುಸಿದು ಬಿದ್ದಿದ್ದ ಅಪ್ಪು ಅಭಿಮಾನಿ (Puneeth Rajkumar Fan) ಸಾವನ್ನಪ್ಪಿದ ದುರಂತ ಘಟನೆ ಮೈಸೂರಿನ (Mysuru) ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ನಡೆದಿದೆ. ಹೆಡಿಯಾಲ ಗ್ರಾಮದ ಆಕಾಶ್ 22 ವರ್ಷದ ಯುವಕ ಸಾವನ್ನಪ್ಪಿದ ದುರ್ದೈವಿ. ನಿನ್ನೆ (ಮಾರ್ಚ್ 17) ಅದ್ದೂರಿ ಮತ್ತು ಸಡಗರ ಸಂಭ್ರಮದಿಂದ ಜೇಮ್ಸ್ ಮತ್ತು ಅಪ್ಪು ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿತ್ತು. ಹೆಡಿಯಾಲ ಗ್ರಾಮದ ಬಸ್ ನಿಲ್ದಾಣದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು. ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ ಆಕಾಶ್ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ.
ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಮತ್ತು ಜೇಮ್ಸ್ ಸಂಭ್ರಮಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ ಆಕಾಶ್ ಕುಸಿದು ಬಿದ್ದಿದ್ದರು. ನಂತರ ಆಕಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕಾಶ್ ಸಾವನ್ನಪ್ಪಿದ್ದಾರೆ.
ಹುಬ್ಬಳ್ಳಿಯಲ್ಲೂ ಅಭಿಮಾನಿ ಭಾವುಕ
ಪುನೀತ್ ರಾಜಕುಮಾರ್ (Puneeth Rajkumar) ಅಭಿನಯದ ಕೊನೆಯ ಚಿತ್ರ ಜೇಮ್ಸ್ ದೇಶಾದ್ಯಂತ ಭರ್ಜರಿ ಎಂಟ್ರಿ ಕೊಟ್ಟಿದೆ. ಪುನೀರ್ ಹುಟ್ಟು ಹಬ್ಬ, ಜೇಮ್ಸ್ ಚಿತ್ರ ಬಿಡುಗಡೆ ಅಪ್ಪು ಅಭಿಮಾನಿಗಳಲ್ಲಿ (Appu Fans) ಸಂಭ್ರಮ ದುಪ್ಪಟ್ಟುಗೊಳ್ಳುವಂತೆ ಮಾಡಿತು. ಆದರೆ ಅಪ್ಪು ಅಗಲಿಕೆ ಅವರ ಅಭಿಮಾನಿಗಳನ್ನು ಪದೇ ಪದೇ ಕಾಡಿತು.
ಹುಬ್ಬಳ್ಳಿಯಲ್ಲಿ (Hubballi) ಅಭಿಮಾನಿಯೋರ್ವ ಜೇಮ್ಸ್ ನಲ್ಲಿ ಪುನೀತ್ ಎಂಟ್ರೀ ಕೊಟ್ಟ ಕೂಡಲೇ, ಭಾವುಕನಾಗಿ ಗೋಡೆಗೆ ಗುದ್ದಿ, ಕಣ್ಣೀರು ಹಾಕಿ ಚಿತ್ರ ನೋಡಲಾಗದೆ ಹೊರ ಬಂದಿದ್ದಾನೆ. ಜೇಮ್ಸ್ ಚಿತ್ರ ಪ್ರದರ್ಶನದ ವೇಳೆ ಅಪ್ಪು ನೆನೆಸಿಕೊಂಡು ಅಭಿಮಾನಿ ಕಣ್ಣೀರು ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಅಪ್ಪು ಅಭಿಮಾನಿ ರಾಘು ಗದ್ಗದಿತರಾಗಿದ್ದಾರೆ.
ಕಣ್ಣೀರು ಹಾಕಿದ ಅಭಿಮಾನಿಗಳು ಜೈ ರಾಜವಂಶ ಅಭಿಮಾನಿ ಸಂಘದ ಅಧ್ಯಕ್ಷ ರಾಘು ಹುಬ್ಬಳ್ಳಿಯ ಅಪ್ಸರಾ ಟಾಕೀಸ್ ನಲ್ಲಿ ಜೇಮ್ಸ್ ಚಿತ್ರ ನೋಡಲು ಹೋಗಿದ್ದರು. ಜೇಮ್ಸ್ ಚಿತ್ರದಲ್ಲಿ ಅಪ್ಪು ಎಂಟ್ರಿ ಕೊಟ್ಟ ಕೂಡಲೇ ರಾಘು ಭಾವುಕರಾಗಿದ್ದಾರೆ. ಕಣ್ಣೀರು ಹಾಕಿ ಕುಸಿದು ಕುಳಿತಿದ್ದಾರೆ. ನಂತರ ಸಾವರಿಸಿಕೊಂಡು ಚಿತ್ರಮಂದಿರದಿಂದ ಹೊರ ನಡೆದು ಬಂದಿದ್ದಾರೆ.
ಶಿವರಾಜ್ಕುಮಾರ್ ಭಾವುಕ, ಕಣ್ಣೀರು ಅಭಿಮಾನಿಗಳು ಬೆಳಗ್ಗಿನಿಂದಲೂ ಜೇಮ್ಸ್ ಚಿತ್ರದ ಶೂಗಳನ್ನ ನೋಡ್ತಾ ನೆಚ್ಚಿನ ನಾಯಕನಿಗೆ ಜೈಕಾರ ಹಾಕಿದ್ದರು. ಬಹಳಷ್ಟು ಅಭಿಮಾನಿಗಳು ಚಿತ್ರ ನೋಡ್ತಿದ್ದಂತೆ ಪುನೀತ್ ರಾಜ್ಕುಮಾರ್ ಅವರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇನ್ನು 2 ದಿನಗಳಿಂದ ಮೈಸೂರಿನ ಶಕ್ತಿಧಾಮದಲ್ಲಿ ಕಾಲಕಳೆಯುತ್ತಿರೋ ಶಿವರಾಜ್ ಕುಮಾರ್, ಇವತ್ತು ಮೈಸೂರು ಚಿತ್ರಮಂದಿರದಲ್ಲೇ ಜೇಮ್ಸ್ ಚಿತ್ರ ನೋಡಿ ಕಣ್ಣೀರಿಟ್ಟಿದ್ದಾರೆ.
ಮೈಸೂರಿನಲ್ಲಿ ಜೇಮ್ಸ್ ಚಿತ್ರ ವೀಕ್ಷಣೆ ಮಾಡಿದ ಶಿವರಾಜ್ಕುಮಾರ್ ಬಳಿಕ ಸುದ್ದಿಗೋಷ್ಟಿ ನಡೆಸಿದ್ರು. ಸುದ್ದಿಗೋಷ್ಠಿ ಆರಂಭದಲ್ಲೇ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಅಪ್ಪು ಇಲ್ಲದ ಈ ದಿನ ಅವನ ಚಿತ್ರದ ಬಗ್ಗೆ ಮಾತಾಡೋಕೆ ನನ್ನ ಕೈಯಲ್ಲಿ ಆಗ್ತಿಲ್ಲ. ಬಹಳ ಬೇಜಾರ್ ಆಗ್ತಿದೆ. ಒಬ್ಬ ಅಭಿಮಾನಿಯಾಗಿ ನಾನು ಚಿತ್ರ ನೋಡಿದ್ದೇನೆ. ಪ್ರತಿ ಚಿತ್ರ ಬಿಡುಗಡೆಯಾದಾಗ್ಲು ಅಪ್ಪು ಕಾಲ್ ಮಾಡಿ ಹೇಳ್ತಿದ್ರು. ಇವತ್ತು ಅವನಿಲ್ಲದೆ ಅವನ ಚಿತ್ರ ನೋಡೋಕೆ ನನ್ನ ಕೈಯಲ್ಲಿ ಆಗ್ತಿಲ್ಲ ಎಂದ್ರು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ