Mysore Student Death: ಅನುಮಾನಾಸ್ಪದವಾಗಿ ವಿದ್ಯಾರ್ಥಿಯ ಸಾವು.. ಹಾಸ್ಟೆಲ್​​ನಲ್ಲಿ ನಿಜಕ್ಕೂ ಆಗಿದ್ದೇನು?

18 ವರ್ಷದ ಅಕ್ಷಯ್ ಎಂಬ ವಿದ್ಯಾರ್ಥಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ದ್ವಿತೀಯ ಪಿಯುಸಿ ಓದುತ್ತಿದ್ದ ಅಕ್ಷಯ್ ಮೃತದೇಹ ಸರಸ್ವತಿಪುರಂನ ಬಿಸಿಎಂ ಹಾಸ್ಟೆಲ್‌ನ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತ ಅಕ್ಷಯ್​​

ಮೃತ ಅಕ್ಷಯ್​​

  • Share this:
ಮೈಸೂರು : ಆತ ಚನ್ನಾಗಿ ಓದಿ ಡಾಕ್ಟರ್ (Doctor) ಆಗಬೇಕು ಎಂದು ನೂರಾರು ಕನಸು ಕಟ್ಟಿಕೊಂಡಿದ್ದ. ಅದಕ್ಕಾಗಿ ಶ್ರಮ ಪಟ್ಟು ಓದಿ SSLCಯಲ್ಲಿ  ಉತ್ತಮ ಅಂಕ ಪಡೆದು ಹುಟ್ಟೂರು ಬಿಟ್ಟು ಸಾಕಷ್ಟು ಕನಸಿನೊಂದಿಗೆ ಮೈಸೂರಿಗೆ (Mysore) ಬಂದಿದ್ದ. ತಾನಾಯ್ತು ತನ್ನ ಪಾಡಾಯ್ತು ಅಂತಿದ್ದ ಆ ಹುಡುಗ ಇದ್ದಕ್ಕಿದ್ದಂತೆ ಅನುಮಾನಸ್ಪದವಾಗಿ ಹಾಸ್ಟೆಲ್ ನಲ್ಲಿ (Hostel)  ಸಾವನ್ನಪಿದ್ದಾನೆ(Death) . ಒಂದು ಕಡೆ ಹೆತ್ತ ತಾಯಿಯ ಕಣ್ಣೀರು, ಮತ್ತೊಂದು ಕಡೆ  ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇದಕ್ಕೆ ಕಾರಣ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದ ವಿದ್ಯಾರ್ಥಿಯ ಅನುಮಾನಸ್ಪದ ಸಾವು.  18 ವರ್ಷದ ಅಕ್ಷಯ್ ಎಂಬ ವಿದ್ಯಾರ್ಥಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ದ್ವಿತೀಯ ಪಿಯುಸಿ ಓದುತ್ತಿದ್ದ ಅಕ್ಷಯ್ ಮೃತದೇಹ ಸರಸ್ವತಿಪುರಂನ ಬಿಸಿಎಂ ಹಾಸ್ಟೆಲ್‌ನ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ: Belagavi: ಕುಂದಾನಗರಿಯಲ್ಲಿ ಗಾಂಜಾ ಘಾಟು! 6 ಜನರಿಂದ ಯುವಕನ ಮೇಲೆ ತಲ್ವಾರ್ ದಾಳಿ

ಓದಿನ ಕನಸು ಹೊತ್ತು ಕಾಲೇಜು ಸೇರಿದ್ದ 

ತಾನಾಯ್ತು ತನ್ನ ಪಾಡಾಯ್ತು ಅಂತಾ ಇದ್ದ ವಿದ್ಯಾರ್ಥಿ ಅಕ್ಷಯ್ ಯಾರ ತಂಟೆಗೂ ಹೋಗುತ್ತಿರಲಿಲ್ಲ.  ಅಕ್ಷಯ್‌ನನ್ನು ಯಾರೋ ಕೊಲೆ ಮಾಡಿದ್ದಾರೆ ಅನ್ನೋದು ಅಕ್ಷಯ್ ಸಂಬಂಧಿಕರ ಆರೋಪ. ಅಂದ್ಹಾಗೆ ಅಕ್ಷಯ್ ಮೂಲತಃ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಗ್ರಾಮದವರು. ಗ್ರಾಮದ ಮಹದೇವ್ ಹಾಗೂ ಭಾಗ್ಯ ದಂಪತಿಯ ಕಿರಿಯ ಮಗ. ಗ್ರಾಮ ಪಂಚಾಯತಿ ಮಾಜಿ ಸದಸ್ಯರು ಆಗಿದ್ದ ಮಹದೇವ ಅವರಿಗೆ ಮೂವರು ಮಕ್ಕಳು, ಅದರಲ್ಲಿ ಅಕ್ಷಯ್ ಕಿರಿಯವನು. ಅಕ್ಷಯ್‌ ವೈದ್ಯನಾಗಬೇಕೆಂಬ ಕನಸು ಕಟ್ಟಿಕೊಂಡಿದ್ದ ಅದಕ್ಕಾಗಿ ಕಷ್ಟಪಟ್ಟು ಓದುತ್ತಿದ್ದ. ಮೈಸೂರಿನಲ್ಲೇ  ಓದಬೇಕು ಅಂತಾ ಪಟ್ಟು ಹಿಡಿದು ಮೈಸೂರಿಗೆ ಬಂದಿದ್ದ. ಮೈಸೂರಿನ ಲಕ್ಷ್ಮೀಪುರಂ ಸರ್ಕಾರಿ ಕಾಲೇಜಿಗೆ ಸೇರಿಕೊಂಡಿದ್ದ. ಮೈಸೂರಿಗೂ ಊರಿಗೂ ಓಡಾಡಿಕೊಂಡಿದ್ದರೆ ಓದಿಗೆ ಹಿನ್ನೆಡೆಯಾಗುತ್ತದೆ ಅನ್ನೋ‌ ಕಾರಣಕ್ಕೆ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ.

ಅಕ್ಷಯ್​​ ಸಾವಿನ ಬಗ್ಗೆ ಹಲವು ಅನುಮಾನ 

ಇನ್ನು ಸಾಯುವುದಕ್ಕೂ ಕೆಲವು ದಿನಗಳ ಮುಂಚೆಯಷ್ಟೇ ಗ್ರಾಮದಿಂದ ಹಾಸ್ಟೆಲ್ ಗೆ ಬಂದಿದ್ದ. ನಿನ್ನೆ ರಾತ್ರಿ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಕ್ಷಯ್ ಶವ ಪತ್ತೆಯಾಗಿದೆ. ಅಕ್ಷಯ್ ವಾಸ ಇದ್ದಿದ್ದೇ ಬೇರೆ ರೂಂನಲ್ಲಿ ಆತನ ಶವ ಸಿಕ್ಕಿರೋದು ಬೇರೆ ರೂಮ್‌ನಲ್ಲಿ ಅನ್ನೋದು ಅಕ್ಷಯ್ ಗ್ರಾಮಸ್ಥರ ಆರೋಪ. ಪ್ರಕರಣ ಸಂಬಂಧಿಸಿದಂತೆ ಹಾಸ್ಟೆಲ್​​​ ಸುಪರ್ಡೆಂಟ್ ಸರಿಯಾಗಿ ಯಾವುದಕ್ಕೂ ಉತ್ತರಿಸುತ್ತಿಲ್ಲ‌. ಸಂಬಂಧಪಟ್ಟ ಅಧಿಕಾರಿಗಳು ಸಹ ಸಹಕಾರ ನೀಡುತ್ತಿಲ್ಲ. ಹೀಗಾಗಿ ನಮ್ಮ ಮಗನ ಸಾವಿನ ಹಿಂದೆ ಸಾಕಷ್ಟು ಗೊಂದಲ ಇದೆ. ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ನಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಬೇಕು ಅಂದು ಒತ್ತಾಯಿಸಿದರು‌.

ಇದನ್ನೂ ಓದಿ: Shocking: 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ.. ಡೆತ್​ನೋಟ್​​ನಲ್ಲಿ ಸಹಪಾಠಿಗಳು, ಪ್ರಿನ್ಸಿಪಾಲ್ ಹೆಸರು..!

ಈ ಸಂಬಂಧ ಸರಸ್ವತಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೇ ಅಕ್ಷಯ್ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಇದೆಲ್ಲಾ ಏನೇ ಇರಲಿ ವೈದ್ಯನಾಗಬೇಕೆಂಬ ಮಹದಾಸೆಯೊಂದಿದ್ದ ಅಕ್ಷಯ್ ಬದುಕು ಈ ರೀತಿ ಅಂತ್ಯವಾಗಿದ್ದು ಮಾತ್ರ ದುರಂತ.

ಮಂಡ್ಯದಲ್ಲಿ ಮಕ್ಕಳಿಂದ ತಂದೆಯ ಕೊಲೆ..! 

ಇನ್ನು ಮಂಡ್ಯದ ಕೆರೆಮೇಗಳಕೊಪ್ಪಲು ಗ್ರಾಮದಲ್ಲಿ ಆಸ್ತಿಗಾಗಿ ಸ್ವಂತ ತಂದೆಯನ್ನೇ  ಇಬ್ಬರು ಮಕ್ಕಳು ಬರ್ಬರವಾಗಿ ಹತ್ಯೆ  ಮಾಡಿದ್ದಾರೆ. ಇಬ್ಬರು ಮಕ್ಕಳಾದ ಶಶಿಕುಮಾರ್ ಮತ್ತು ರಾಜೇಶ್ ಜಮೀನು ಮಾರಿ ಹಣ ನೀಡುವಂತೆ ತಂದೆ ಮರಿಕಾಳಯ್ಯ ಅವರನ್ನ ಒತ್ತಾಯಿಸಿದ್ದರು.  ಜಮೀನು ಮಾರಲು ಮರಿಕಾಳಯ್ಯ ಮನಸ್ಸು ಮಾಡಿದ ಬಳಿಕ ಒಂದು ಎಕರೆ ಜಮೀನು 30 ಲಕ್ಷಕ್ಕೆ ವ್ಯಾಪಾರವಾಗಿತ್ತು. ಈ ಸಂದರ್ಭ ಮಕ್ಕಳ ಬಳಿ ಮರಿಕಾಳಯ್ಯ ಒಂದು ಕಂಡಿಷನ್ ಹಾಕಿದ್ದಾರೆ. 30 ಲಕ್ಷದಲ್ಲಿ ಇಬ್ಬರು ಮಕ್ಕಳಿಗೆ ತಲಾ ಹತ್ತು ಲಕ್ಷ ರೂಪಾಯಿ ಹಾಗೂ ತಮಗೆ ಹತ್ತು ಲಕ್ಷ ರೂಪಾಯಿ ನೀಡುವಂತೆ ತಿಳಿಸಿದ್ದಾರೆ. ಇದಾದ ಬಳಿಕ ಶ್ರೀರಂಗಪಟ್ಟಣದ ಉಪ ನೊಂದಣಿ ಕಚೇರಿ ಬಳಿ ರಿಜಿಸ್ಟ್ರೇಷನ್ ಸಂದರ್ಭ ಮಕ್ಕಳು ತನ್ನ ಪಾಲಿನ ಹಣ ಕೊಡದಿದ್ದಾಗ ಮರಿಕಾಳಯ್ಯ ಅಲ್ಲಿಂದ ವಾಪಸ್ಸ್ ಊರಿಗೆ ಆಗಮಿಸಿದ್ದಾರೆ. ನಂತರ ಮಕ್ಕಳ ಬಗ್ಗೆ ತಿಳಿಸಿದಿದ್ದ ಮರಿಕಾಳಯ್ಯ, ಅರಕೆರೆ ಪೊಲೀಸ್ ಠಾಣೆಗೆ ತೆರಳಿ ಮಕ್ಕಳಿಂದ ಅಪಾಯ ಇರುವುದಾಗಿ ದೂರನ್ನ ಸಹ ನೀಡಿದ್ದರು. ಇದಾದ ಬಳಿಕ ಗ್ರಾಮಕ್ಕೆ ಬಂದ ಮಕ್ಕಳಿಬ್ಬರು ಚಾಕುವಿನಿಂದ ಮರಿಕಾಳಯ್ಯನ ಹೊಟ್ಟೆ ಭಾಗಕ್ಕೆ ಎರಡ್ಮೂರು ಬಾರಿ ಇರಿದಿದ್ದಾರೆ.
Published by:Kavya V
First published: