Siddaramaiah: ಮೈಸೂರು ಗ್ಯಾಂಗ್​​ರೇಪ್​​​ ಸ್ಥಳ ಪರಿಶೀಲನೆ ವೇಳೆ ಪೊಲೀಸರು ತಬ್ಬಿಬ್ಬು.. ಸಿದ್ದರಾಮಯ್ಯ ತರಾಟೆ!

police failed to answer to Siddaramaiah questions: ಸಿದ್ದರಾಮಯ್ಯ ಪ್ರಶ್ನೆಗೆ ಹಿರಿಯ ಅಧಿಕಾರಿಗಳ ಮುಖ ನೋಡಿದ ರವಿಶಂಕರ್. ಅವರ ಮುಖ ಏನು ನೋಡುತ್ತಿಯಾ ಹೇಳು ಎಂದು ಸಿದ್ದರಾಮಯ್ಯ ಕ್ಲಾಸ್​​ ತೆಗೆದುಕೊಂಡರು. ಅಬ್ಯೂಚುಯಲ್ ಅಫೆಂಡರ್ಸ್ ಅಂದ್ರೆ ಗೊತ್ತೇನಯ್ಯ ಎಂದು ರವಿಶಂಕರ್ ಗೆ ಸಿದ್ದರಾಮಯ್ಯ ಪ್ರಶ್ನೆ ಹಾಕಿದರು.

ಪೊಲೀಸರಿಗೆ ಸಿದ್ದರಾಮಯ್ಯ ಕ್ಲಾಸ್​

ಪೊಲೀಸರಿಗೆ ಸಿದ್ದರಾಮಯ್ಯ ಕ್ಲಾಸ್​

  • Share this:
ಮೈಸೂರು: ನಗರದಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ(Mysore Gangrape case) ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಕೇಳಿದ ಪ್ರಶ್ನೆಗಳಿಗೆ ತಡಬಡಾಗಿಸಿದ ಆಲನಹಳ್ಳಿ ಇನ್ಸಪೆಕ್ಟರ್‌ ರವಿಶಂಕರ್​​ಗೆ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು. ನೀನು ಎಷ್ಟು ತಿಂಗಳಾಯ್ತಯ್ಯ ಬಂದು, ಘಟನೆ ನಡೆದ ಸ್ಥಳ ಯಾರಿಗೆ ಸೇರುತ್ತೆ. ಇಲ್ಲಿಂದ ರಿಂಗ್ ರಸ್ತೆ ಎಷ್ಟು ದೂರು ಬರುತ್ತೆ ಹೇಳು ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಹಿರಿಯ ಅಧಿಕಾರಿಗಳ ಮುಖ ನೋಡಿದ ರವಿಶಂಕರ್. ಅವರ ಮುಖ ಏನು ನೋಡುತ್ತಿಯಾ ಹೇಳು ಎಂದು ಸಿದ್ದರಾಮಯ್ಯ ಕ್ಲಾಸ್​​ ತೆಗೆದುಕೊಂಡರು. ಅಬ್ಯೂಚುಯಲ್ ಅಫೆಂಡರ್ಸ್ ಅಂದ್ರೆ ಗೊತ್ತೇನಯ್ಯ ಎಂದು ರವಿಶಂಕರ್ ಗೆ ಸಿದ್ದರಾಮಯ್ಯ ಪ್ರಶ್ನೆ ಹಾಕಿದರು. ಉತ್ತರ ಹೇಳದಿದ್ದಾಗ ಸಿದ್ದರಾಮಯ್ಯನೇ ವಿವರಿಸಿದರು.

ಪೊಲೀಸರಿಗೆ ಸಿದ್ದರಾಮಯ್ಯ ಪಾಠ

ಅಬ್ಯೂಚುಯಲ್ ಅಫೆಂಡರ್ಸ್ ಅಂದರೆ ಪದೇ ಪದೇ ತಪ್ಪು ಮಾಡುವವರು ಅಂತ. ಗ್ಯಾಂಗ್​​​ ರೇಪ್​​  ಪ್ರಕರಣದ ಆರೋಪಿಗಳು ಮೈಸೂರಲ್ಲಿ ಈ ಹಿಂದೆ ಅಪರಾಧ ಮಾಡಿದ್ರಾ ಎಂದು ಅಂದರು. ಸಿದ್ದರಾಮಯ್ಯ ಪ್ರಶ್ನೆಗೆ ಮಧ್ಯ ಪ್ರವೇಶ ಮಾಡಿ ಉತ್ತರ ಕೊಟ್ಟ ಡಿಸಿಪಿ ಪ್ರದೀಪ್ ಗುಂಟಿ, ಆರೋಪಿಗಳಲ್ಲಿ ಒಬ್ಬ ಗಂಧದ ಕಳ್ಳ ಎಂದರು. ಕೇಸ್ ಆಗಿಲ್ವ ಎಂದ ಸಿದ್ದರಾಮಯ್ಯ ಮರುಪ್ರಶ್ನಿಸಿದ್ರು. ಇಲ್ಲ ಸರ್ ಕೇಸ್ ಆಗಿತ್ತು ಎಂದ ಡಿಸಿಪಿಗೆ ಜಾಮೀನಿನ ಮೇಲೆ ಬಂದಿದ್ರಾ ಎಂದು ಕೇಳಿದ್ರು. ನಂತರ ಪೊಲೀಸರಿಗೆ ಸಿದ್ದರಾಮಯ್ಯ ಪಾಠ ಮಾಡಿದ್ರು.

ಕೋರ್ಟ್‌ನಲ್ಲಿ ಕೇಳಿದ್ರೆ ಏನ್ ಹೇಳ್ತಿಯಯ್ಯ?

ಇಲ್ಲಿ ಹುಡುಗ-ಹುಡುಗಿ ಬರುತ್ತಾರೆ ಅಂತ ಗೊತ್ತೇನೆಯ್ಯ. ನೀನು ಎಷ್ಟು ಸಾರಿ ಇಲ್ಲಿಗೆ ಬಂದಿದ್ದಿ. ಗರುಡಾ ವಾಹನ ಇಲ್ಲಿಗೆ ಬರುತ್ತವಾ? ರವಿಶಂಕರ್ ಗೆ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಗೈದರು. ಇಲ್ಲಿಂದ ರಿಂಗ್ ರಸ್ತೆಗೆ ಎಷ್ಟು ಕಿಲೋಮೀಟರ್, ಒಂದುವರೆ ಕಿಲೋಮೀಟರಾ? ಇನ್ನು ಅದೆಲ್ಲ ಅಳತೆ ಮಾಡಿಲ್ವವೇನಯ್ಯ? ಕೋರ್ಟ್‌ನಲ್ಲಿ ಕೇಳಿದ್ರೆ ಏನ್ ಹೇಳ್ತಿಯಯ್ಯ? ಇದೆಲ್ಲ ರೆಡಿ ಮಾಡಿಕೊಳ್ಳಬೇಕಲ್ವಾ. ನೀವೆಲ್ಲ ಹೇಳಿಕೊಟ್ಟಿಲ್ವ ಎಂದು ಡಿಸಿಪಿಗೆ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

ಪೊಲೀಸ್‌ ಗಸ್ತು ತಿರುಗಲ್ವಾ?

ಪೊಲೀಸರಿಗೆ ಪ್ರಶ್ನೆಗಳ ಸುರಿಮಳೆಯನ್ನು ಮುಂದುವರಿಸಿದ ಸಿದ್ದರಾಮಯ್ಯ, ಮೈಸೂರಿಗೆ ಸ್ಯಾಂಡಲ್ ವುಡ್ ಕಳ್ಳತನ ಮಾಡಿದ್ದಾರಾ? ಜಾಮೀನಿನ ಮೇಲೆ ಬಿಡುಗಡೆ ಆದರಾ ? ತಮಿಳುನಾಡಿನಲ್ಲಿ ಯಾವುದಾದರೂ ಅಪರಾಧ ಇದೆಯಾ ? ಅಲ್ಲೂ ಒಬ್ಬ ಆರೋಪಿ ಇದ್ದಾನಾ? ಗ್ಯಾಂಬ್ಲಿಂಗ್ ಪೆಟ್ಟಿ ಕೇಸಾ ? ಈ ರಸ್ತೆಯಲ್ಲಿ ಯಾರು ತಿರುಗಾಡುವುದಿಲ್ಲವಾ ? ಪಕ್ಕದ ರಸ್ತೆ ಬಗ್ಗೆ ಕೇಳಿದ ಸಿದ್ದರಾಮಯ್ಯ. ಪೊಲೀಸ್‌ನವರು ಇಲ್ಲಿ ಗಸ್ತು ತಿರುಗುವುದು ಮಾಡಲ್ವಾ ಎಂಬ ಪ್ರಶ್ನೆಗೆ ಮಾಡುತ್ತೇವೆ ಸರ್ ಎಂದು ಪೊಲೀಸರು ಉತ್ತರಿಸಿದರು.

1 ಗಂಟೆ ಗ್ಯಾಪ್​​ನಲ್ಲಿ ಏನಾಯ್ತು? 

7 ಗಂಟೆಗೆ ಬಂದಿದ್ದಾರೆ, 8. 30 ಗಂಟೆಗೆ ಘಟನೆ ಆಗಿದೆ. 1 ಗಂಟೆ ಗ್ಯಾಪ್ ಇತ್ತು ಆಗ ಒಂದು ಸಾರಿ ಪೊಲೀಸರು ಬಂದಿಲ್ವಾ? ಪೊಲೀಸರಿಗೆ ಗೊತ್ತಾಗಲಿಲ್ಲಾವಾ? ಹುಡುಗರು ಹುಡುಗಿಯರು ಸ್ನೇಹಿತರು, ಪ್ರೇಮಿಗಳು ಬರುತ್ತಾರೆ ಅಂತಾ ಗೊತ್ತಿತ್ತಾ? ಈ ವೇಳೆ ಡಿಸಿಪಿ ಪ್ರದೀಪ್ ಗುಂಟಿ ನೋಡಿದ ಇನ್ಸಪೆಕ್ಟರ್, ಅವರನ್ನು ಏಕೆ ನೋಡ್ತೀಯಾ ಇನ್ಸಪೆಕ್ಟರ್‌ಗೆ ರೇಗಿದ ಸಿದ್ದರಾಮಯ್ಯ. ಎಷ್ಟು ದಿನ ಆಯ್ತು ನೀನು ಬಂದು. 6 ತಿಂಗಳು ಆಯ್ತು ಎಂದ ಇನ್ಸಪೆಕ್ಟರ್.ಇದು ನಿರ್ಜನ ಪ್ರದೇಶ ಅಂದ ಮೇಲೆ ಪೊಲೀಸ್ ಹಾಕಬೇಕು ತಾನೇ ? ಇಲ್ಲಿಗೆ ಎಷ್ಟು ದಿನ ಬಂದಿದ್ದೀಯಾ..? ಗರುಡಾ ಓಡಾಡುತ್ತಾ? ಗರುಡಾ ಓಡಾಡಿ ಏನು ಬಂತು ಮಾಡಿತು ? ಎಲ್ಲಾ ಮುಗಿದ ಮೇಲೆ ಗರುಡಾ ಓಡಾಡಿದರೆ ಏನು ಪ್ರಯೋಜನ ಎಂದು ಪೊಲೀಸರಿಗೆ ಸಿದ್ದರಾಮಯ್ಯ ಫುಲ್​ ತರಾಟೆಗೆ ತೆಗೆದುಕೊಂಡರು.
Published by:Kavya V
First published: