ನೀಲಿ ಶಾಲು ಹಾಕುವವರೆಲ್ಲ ಥಾಟ್ಸ್ ಆನ್ ಪಾಕಿಸ್ತಾನ ಪುಸ್ತಕ ಓದಿ: MP Pratap Simha

ಹಿಜಾಬ್ ಹಿಜಾಬ್ ಅಂತಾ ಹೋಗಿ ಮಕ್ಕಳನ್ನು ಹೆರುವ ಯಂತ್ರವಾಗಬೇಡಿ.  ಹಿಜಾಬ್ ಬಿಟ್ಟು ಕಿತಾಬ್ (ಪುಸ್ತಕ) ಹಿಡಿದರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತೆ. ಹಿಜಾಬ್ ಅವರು ಬಿಟ್ಟು ಬಂದರೆ ಆ ಕ್ಷಣವೇ ಕೇಸರಿ ಶಾಲಿನ ಪ್ರಸ್ತಾವವೆ ಇರಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ಪ್ರತಾಪ್ ಸಿಂಹ

ಪ್ರತಾಪ್ ಸಿಂಹ

  • Share this:
ಹಿಜಾಬ್ (Hijab) ಕುರಿತು ಕರ್ನಾಟಕ ಹೈಕೋರ್ಟ್ (Karnataka Highcourt) ಮಧ್ಯಂತರ ಆದೇಶ ನೀಡಿದ್ರೂ ರಾಜಕೀಯ ಮುಖಂಡರ (Political Leaders) ಹೇಳಿಕೆಗಳಿಗೆ ಇನ್ನೂ ಪೂರ್ಣ ವಿರಾಮ ಬಿದ್ದಿಲ್ಲ. ಕಾಲೇಜುಗಳಲ್ಲಿ ಹಿಜಾಬ್ ವಿರೋಧಿಸಿ ಕೆಲವರು ಕೇಸರಿ ಶಾಲು (Saffron Shawl_ ಹಾಕಿದ್ದರು. ಇನ್ನು ಕೆಲ ವಿದ್ಯಾರ್ಥಿಗಳು ಹಿಜಾಬ್ ಬೆಂಬಲಿಸಿ ನೀಲಿ ಶಾಲು (Blue Shawl) ಧರಿಸಿದ್ದರು. ಇದೀಗ ಸಂಸದ ಪ್ರತಾಪ್ ಸಿಂಹ (MP Pratap Simha) ನೀಲಿ ಶಾಲು ಧರಿಸಿದವರು ಥಾಟ್ಸ್ ಆನ್ ಪಾಕಿಸ್ತಾನ (Thoughts On Pakistan) ಓದಲಿ ಎಂದು ಹೇಳಿದ್ದಾರೆ. ಡಾ. ಬಿ.ಆರ್ ಅಂಬೇಡ್ಕರ್ (Dr.B.R.Ambedkar) ಅವರಿಗೆ ಈ ದೇಶದ ಮುಸ್ಲಿಮರ (Muslim People) ಬಗ್ಗೆ ಅಂದೇ ತಿಳಿದಿತ್ತು. ನೀಲಿ ಶಾಲು ಧರಿಸುವ ಮೊದಲು ವಾಸ್ತವ ತಿಳಿದುಕೊಳ್ಳಿ. ಅಂಬೇಡ್ಕರ್ ಅವರು ಬರೆದಿರುವ ಥಾಟ್ಸ್ ಆನ್ ಪಾಕಿಸ್ತಾನ ಓದಿಕೊಳ್ಳಿ. ಆ ಪುಸ್ತಕದಲ್ಲಿ ಎಲ್ಲ ವಿಚಾರವನ್ನು ಅಂಬೇಡ್ಕರ್ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ನೀಲಿ ಶಾಲು ಧರಿಸುವ ಮುನ್ನ ಈ ಪುಸ್ತಕ ಓದಿಕೊಂಡರೆ ಒಳ್ಳೆಯದು. ವೈಯಕ್ತಿಕವಾಗಿ ರಘುಪತಿ ಭಟ್, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ ಅವರರನ್ನು ಅಭಿನಂದಿಸುತ್ತೇನೆ.  ಸಮವಸ್ತ್ರವೇ ಅಂತಿಮ ಎಂಬ ನಿಲುವಿಗೆ ಬದ್ಧರಾಗಿದ್ದಾರೆ. ಕರಾವಳಿ ಭಾಗ ಅಶಾಂತಿಯ ಕೇಂದ್ರವಾಗಿದೆ ಎಂದು ಬೇಸರ ಹೊರ ಹಾಕಿದರು.

ಪಿತೂರಿ ಬಗ್ಗೆ ರಾಷ್ಟ್ರೀಯ ತನಿಖೆಯಾಗಬೇಕು

ಕೇರಳ ಮಾದರಿಯ ಹತ್ಯೆ ಮತ್ತು ಮತಾಂಧತೆ ಕರ್ನಾಟಕಕ್ಕೂ ಹಬ್ಬಿದೆ. ಅದು ಕರಾವಳಿ ಮುಖಾಂತರ ಹಬ್ಬಿದೆ. ಈ ಬಗ್ಗೆ ಉಡುಪಿ ಹಾಗೂ ಮಂಗಳೂರು ಎಚ್ಚೆತ್ತುಕೊಳ್ಳದಿದ್ದರೆ ಇನ್ನೊಂದು ಕಾಸರಗುಡು ಹಾಗೂ ಕೇರಳ ಮಾದರಿಯಾಗಲಿದೆ.  ಈ ವ್ಯವಸ್ಥಿತ ಪಿತೂರಿ ಬಗ್ಗೆ ರಾಷ್ಟ್ರೀಯ ತನಿಖೆಯಾಗಬೇಕು ಎನ್ನುವದಕ್ಕೆ ರಘುಪತಿ ಭಟ್ ಒತ್ತಾಯಿಸಿದ್ದಾರೆ. ಅವರ ಈ ತೀರ್ಮಾನವನ್ನು ನಾನು ಸಮರ್ಥಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:  Hijab ವಿಚಾರದಲ್ಲಿ ಗೊಂದಲ ಸೃಷ್ಟಿಸುವವರ ಮೇಲೆ ಕಟ್ಟುನಿಟ್ಟಿನ ಕ್ರಮ: CM Bommai ಎಚ್ಚರಿಕೆ

ಹಿಜಾಬ್ ಗಲಾಟೆಯ ಹಿಂದೆ ಕೆಎಫ್ ಡಿ, ಪಿಎಫ್ ಐ ಇದೆ. ಶಾಂತಿ ಕದಡಬೇಡಿ ಎಂದು ಮನವಿ ಮಾಡಬೇಡಿ. ಶಾಂತಿ  ಮೇಲೆ ಕಠಿಣ ಕ್ರಮ ಕೈ ಗೊಳ್ಳಿ. ಸರಕಾರ ಕಠಿಣ ಕ್ರಮಕ್ಕೆ ಮುಂದಾಗಲೇಬೇಕು. ಕೇರಳದ ಮುಸ್ಲಿಂ ಸಂಘಟನೆಗಳಿಂದ ಪ್ರಭಾವಿತರಾಗಿರುವವರು ಶಾಂತಿಯ ಮನವಿಗೆ ಬಗ್ಗುವುದಿಲ್ಲ. ಮೊದಲು ಕೆಎಫ್ ಡಿ, ಪಿಎಫ್ ಐ ಸಂಘಟನೆ ಬಂದ್ ಮಾಡಿ ಎಂದು ಆಗ್ರಹಿಸಿದರು.

ಹಿಜಾಬ್ ಬದಲು ಕಿತಾಬ್ ಹಿಡಿಯಿರಿ

ಹಿಜಾಬ್ ಹಿಜಾಬ್ ಅಂತಾ ಹೋಗಿ ಮಕ್ಕಳನ್ನು ಹೆರುವ ಯಂತ್ರವಾಗಬೇಡಿ.  ಹಿಜಾಬ್ ಬಿಟ್ಟು ಕಿತಾಬ್ (ಪುಸ್ತಕ) ಹಿಡಿದರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತೆ. ಹಿಜಾಬ್ ಅವರು ಬಿಟ್ಟು ಬಂದರೆ ಆ ಕ್ಷಣವೇ ಕೇಸರಿ ಶಾಲಿನ ಪ್ರಸ್ತಾವವೆ ಇರಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ಸೋಮವಾರದಿಂದ 9-10ನೇ ಕ್ಲಾಸ್ ಆರಂಭ

ಸೋಮವಾರದಿಂದ 9-10 ನೇ ತರಗತಿಗಳು ಆರಂಭವಾಗುತ್ತಿದೆ.  ಸೋಮವಾರ ಸಿಎಂ ಸಭೆಯ ನಂತರ ಪಿಯುಸಿ ಹಾಗೂ ಡಿಗ್ರಿ ಕಾಲೇಜು ಓಪನ್ ಬಗ್ಗೆ ಯೋಚನೆ ಮಾಡಿ ಮುಂದಿನ ವಾರ ತೆರೆಯುತ್ತೇವೆ. ಈ ದೇಶದಲ್ಲಿ ಅನೇಕ ವಿಷಯಗಳನ್ನು ಗೊಂದಲ ಮಾಡುವಂತಹ ಪ್ರಯತ್ನವನ್ನು ಅನೇಕರು ಮಾಡುತ್ತಿದ್ದಾರೆ ಎಂದು ಹಾಸನದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಜೀವ ಉಳಿಸುವ ವ್ಯಾಕ್ಸಿನ್‌ ನನ್ನು ಗೊಂದಲ ಮಾಡಿ ಆ‌ ಸಮಾಜದವರು ತೆಗೆದುಕೊಳ್ಳಬಾರದು ಎಂದು ಗೊಂದಲ ಸೃಷ್ಟಿಸಿದರು. ಮಕ್ಕಳ ವಿಷಯದಲ್ಲಿ ಈ ತರಹದ ಮಾನಸಿಕತೆಯನ್ನು ಸೃಷ್ಟಿ ಮಾಡಲು ಪ್ರಯತ್ನಪಟ್ಟವರ ಬಗ್ಗೆ ದು:ಖವಾಗುತ್ತಿದೆ. ಎಳೆ ಮನಸ್ಸುಗಳಲ್ಲಿ ರಾಷ್ಟ್ರೀಯ ಮನೋಭಾವನೆ ಬೆಳೆಯಬೇಕಿತ್ತು. ಇದು ನನ್ನ ದೇಶ ಎಂಬ ಭಾವನೆ ಬೆಳೆಯಬೇಕಿತ್ತು. ಅಂತಹ ಎಳೆಯ ಮನಸ್ಸುಗಳಲ್ಲಿ ನಾನು ಬೇರೆ ಅವರು ಬೇರೆ ಎಂಬ ಹುಟ್ಟುಹಾಕುವ ಪ್ರಯತ್ನ ಮಾಡಿದರು ಎಂದು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ:  Hijab Row: ವಿವಾದಾತ್ಮಕ ಪೋಸ್ಟ್ ಮಾಡಿದ್ರೆ ಬೀಳುತ್ತೆ ಕೇಸ್, ಸೇರ್ತಿರಾ ಜೈಲ್, ಮಂಡ್ಯ ಪೊಲೀಸರ ವಾರ್ನಿಂಗ್

ಡಿ.28 ರವರೆಗೆ ಆ ಮಕ್ಕಳು ಶಾಲೆ ನಿಗದಿ ಮಾಡಿದ ಸಮವಸ್ತ್ರದಲ್ಲಿ ಬರುತ್ತಿದ್ದರು. ಅದರ ಬಗ್ಗೆ ಅನೇಕ ಸಾಕ್ಷಿಗಳನ್ನು ಬಿಡುಗಡೆ ಮಾಡಿದ್ದೇವೆ. ಡಿ.28 ಆದ ಮೇಲೆ ಯೂನಿಫಾರಂ‌ ಜೊತೆ ಹಿಜಾಬ್ ಹಾಕಿಕೊಂಡು ಬರುತ್ತೇವೆ ಅಂದಿದ್ದಾರಹಿಜಾಬ್ ಯೂನಿಫಾರ್ಮ್ ಅಂಗ ಅಲ್ಲ ಎಂದು ಹೇಳಿದರು.

ಅನೇಕ ದೇಶಗಳಲ್ಲಿ ಹಿಜಾಬ್, ಬುರ್ಕಾ ಬ್ಯಾನ್ ಆಗಿದೆ

ಯಾವ ಕಾರಣಕ್ಕೆ ಆ ಹೆಣ್ಣುಮಕ್ಕಳು ಈ ರೀತಿ ವರ್ತನೆ ಮಾಡಿದರು ಅರ್ಥ ಆಗುತ್ತಿಲ್ಲ. ಅದಕ್ಕಿಂತ ದುರ್ದೈವ ಎಂದರೆ ಒಂದು ಶಾಲೆಯ ಆರು ಮಕ್ಕಳ‌ ಸಮಸ್ಯೆ ಅಂತರಾಷ್ಟ್ರೀಯ ಸಮಸ್ಯೆ ಮಾಡುವಂತಹ ಪ್ರಯತ್ನ ಮಾಡಿದ್ದಾರೆ. ಅನೇಕ ದೇಶಗಳಲ್ಲಿ ಹಿಜಾಬ್, ಬುರ್ಕಾವನ್ನು ಸಂಪೂರ್ಣ ನಿಷೇಧ ಮಾಡಿದ್ದಾರೆ. ಇಟಲಿ, ಜರ್ಮನ್, ಫ್ರಾನ್ಸ್, ರಷ್ಯಾದಲ್ಲಿ ಬ್ಯಾನ್ ಆದಾಗ ಸಮಸ್ಯೆ ಆಗಲಿಲ್ಲ ಎಂದರು.

ಗೃಹ ಇಲಾಖೆಯಿಂದ ತನಿಖೆ

ಸರ್ಕಾರ ಈಗಾಗಲೇ ತನಿಖೆ ನಡೆಸುತ್ತಿದೆ, ಎಲ್ಲವೂ ಬಯಲಿಗೆ ಬರುತ್ತದೆ. ಯಾವ ವಿಷಯ ಯಾಕೆ ಬಂತು, ಇಷ್ಟು ದಿನ ಸಮವಸ್ತ್ರ ಬರುತ್ತಿದ್ದಂತಹ ಹೆಣ್ಣುಮಕ್ಕಳು ಇದ್ದಕ್ಕಿದ್ದಂತೆ ನಮಗೆ ಧರ್ಮ,‌ ಅದರ ಆಚರಣೆಯೇ ಮುಖ್ಯ ಅಂತಾ ಹೇಳಿದರು. ಯಾವ್ಯಾವ ಹೆಣ್ಣುಮಕ್ಕಳು ಯಾವ್ಯಾವ ಟ್ವಿಟ್‌ಗಳನ್ನು ರೀಟ್ವಿಟ್ ಮಾಡಿದ್ದಾರೆ ಅದೆಲ್ಲಾ ಹೊರಗೆ ಬರುತ್ತೆ.  ಗೃಹ ಇಲಾಖೆ ಅದರ ಬಗ್ಗೆ ತನಿಖೆ ಮಾಡುತ್ತಿದೆ.ಭಾರತ ಒಂದಾಗಿ ಇದನ್ನೆಲ್ಲಾ ಎದುರಿಸುತ್ತೆ

ಮೋದಿ ಅವರ ಸರ್ಕಾರ ಬಂದ ನಂತರ ಪಾಕಿಸ್ತಾನ ಎಲ್ಲಾ ಪ್ರಯತ್ನಗಳು ಏನಾಗಿದೆ ಎಲ್ಲರಿಗೂ ಗೊತ್ತಿದೆ. ಜಮ್ಮುವನ್ನು ದಾಟಿ ಒಂದೇ, ಒಂದು ಬಾಂಬ್‌ ನ್ನು ಸಿಡಿಸಲು ಅವರಿಗೆ ಆಗಿಲ್ಲ. ಅದಕ್ಕಿಂತ ಮುಂಚೆ ಬಾಂಬೆಯಲ್ಲಿ, ಟಾಟಾ ಇನ್ಸ್ಟಿಟ್ಯೂಟ್‌ನಲ್ಲಿ ಬ್ಲಾಸ್ಟ್ ಆಯ್ತು, ಇವೆಲ್ಲವನ್ನು ನೋಡಿದ್ದೇವೆ. ಮೋದಿಯವರು ಬಂದ ಮೇಲೆ ಉಗ್ರಗಾಮಿಗಳು ಕಡಿಮೆಯಾದರು.

ಪ್ರಪಂಚದಲ್ಲಿ ಭಾರತಕ್ಕೆ ಸಿಗುತ್ತಿರುವ ಬೆಲೆಯನ್ನು ತಡೆದುಕೊಳ್ಳಲಾಗದೆ ಬಿಕ್ಷುಕ ದೇಶ ಪಾಕಿಸ್ತಾನ ಏನು ಮಾಡಲು ಸಾಧ್ಯವಿದೆ. ಭಾರತ ಒಂದಾಗಿ ಇದನ್ನೆಲ್ಲಾ ಎದುರಿಸುತ್ತೆ, ಆ ಶಕ್ತಿ ಭಾರತಕ್ಕಿದೆ. ಪಾಕಿಸ್ತಾನ ಅಲ್ಲ, ಅಂತಹ ಅನೇಕ ದೇಶಗಳು ಬಂದರು ಭಾರತವನ್ನು ಏನು ಮಾಡಲು ಆಗಲ್ಲ ಎಂದು ಬಿ.ಸಿ.ನಾಗೇಶ್ ಗುಡುಗಿದರು.
Published by:Mahmadrafik K
First published: