ಭೂಸ್ವಾಧೀನ ಮಾಡಿಕೊಂಡು ಹಣ ನೀಡದ ಮೈಸೂರು ಪಾಲಿಕೆ ಕಚೇರಿ ಜಪ್ತಿ

5 ನೇ ಬಾರಿ ಕೋರ್ಟ್​​ ಆದೇಶದ ಮೇರೆಗೆ ಹಿರಿಯ ವಕೀಲ ಮೂರ್ತಿ ನೇತೃತ್ವದಲ್ಲಿ ಆಯುಕ್ತರ ಕಚೇರಿ ಹಾಗೂ ಆಪ್ತ ಸಹಾಯಕರ ಕಚೇರಿಯ ಎಲ್ಲಾ ವಸ್ತುಗಳನ್ನು ಜಪ್ತಿ ಮಾಡಲಾಯಿತು. ಈ ವೇಳೆ ಪಾಲಿಕೆ ಸಿಬ್ಬಂದಿಗಳು ಕಕ್ಕಾಬಿಕ್ಕಿಯಾಗಿದ್ದರು.

Latha CG | news18
Updated:February 11, 2019, 4:33 PM IST
ಭೂಸ್ವಾಧೀನ ಮಾಡಿಕೊಂಡು ಹಣ ನೀಡದ ಮೈಸೂರು ಪಾಲಿಕೆ ಕಚೇರಿ ಜಪ್ತಿ
ಮೈಸೂರು ಮಹಾನಗರ ಪಾಲಿಕೆ
Latha CG | news18
Updated: February 11, 2019, 4:33 PM IST
-ಪುಟ್ಟಪ್ಪ

ಮೈಸೂರು,(ಫೆ.11): ರೈತರಿಂದ ಭೂಮಿಯನ್ನು ಸ್ವಾಧೀನಕ್ಕೆ ಪಡೆದು 22 ವರ್ಷಗಳಾಗಿದ್ದರೂ ಹಣ ನೀಡದ ಮೈಸೂರು ಪಾಲಿಕೆ ಆಯುಕ್ತರ ಕಚೇರಿಯನ್ನು ಕೋರ್ಟ್​ ಆದೇಶದ ಮೇರೆಗೆ ಇಂದು ಜಪ್ತಿ ಮಾಡಲಾಗಿದೆ.

ಎಸ್​ಟಿಪಿ ಯೋಜನೆಗಾಗಿ ಪಾಲಿಕೆಯು ಮೈಸೂರಿನ ರೈತರಿಂದ  14.20 ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆದಿತ್ತು. ಮಹದೇವಪುರದಲ್ಲಿ ಮಹದೇವಸ್ವಾಮಿ ಎಂಬ ರೈತನಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ 66 ಲಕ್ಷ ರೂ.ಗಳನ್ನು ಪಾಲಿಕೆ  ನೀಡಬೇಕಿತ್ತು. ಗೊರೂರು ಗ್ರಾಮದ ಶಂಕರ್‌‌ ಬಳಿಯೂ ಸಹ ಪಾಲಿಕೆ ಭೂಸ್ವಾಧೀನ ಮಾಡಿಕೊಂಡಿತ್ತು.  ಆದರೆ ಪಾಲಿಕೆಯು ಭೂಮಿಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು 22  ವರ್ಷಗಳಾಗಿದ್ದರೂ ರೈತರಿಗೆ ಹಣ ನೀಡಿಲ್ಲ.

ಮಂಡ್ಯ ರಾಜಕಾರಣಕ್ಕೆ ಬಿಎಸ್​ವೈ ಪುತ್ರ ವಿಜಯೇಂದ್ರ ಪ್ರವೇಶ; ಬದಲಾಗುತ್ತಾ ಬಿಜೆಪಿ ಲಕ್?

ಈ ಬಗ್ಗೆ ನ್ಯಾಯಾಲಯದಿಂದ ನಾಲ್ಕೈದು ಬಾರಿ ಆದೇಶ ನೀಡಲಾಗಿತ್ತು. ಆದರೆ ಪಾಲಿಕೆ ಆಯುಕ್ತರು ಕೋರ್ಟ್​ ನೋಟಿಸ್​ಗೂ ಕ್ಯಾರೆ ಎಂದಿರಲಿಲ್ಲ. 5 ನೇ ಬಾರಿ ಕೋರ್ಟ್​​ ಆದೇಶದ ಮೇರೆಗೆ ಹಿರಿಯ ವಕೀಲ ಮೂರ್ತಿ ನೇತೃತ್ವದಲ್ಲಿ ಆಯುಕ್ತರ ಕಚೇರಿ ಹಾಗೂ ಆಪ್ತ ಸಹಾಯಕರ ಕಚೇರಿಯ ಎಲ್ಲಾ ವಸ್ತುಗಳನ್ನು ಜಪ್ತಿ ಮಾಡಲಾಯಿತು. ಈ ವೇಳೆ ಪಾಲಿಕೆ ಸಿಬ್ಬಂದಿಗಳು ಕಕ್ಕಾಬಿಕ್ಕಿಯಾಗಿದ್ದರು.

ಮಹಾನಗರ ಪಾಲಿಕೆಯು ರೈತರಿಗೆ ಸುಮಾರು 8 ಕೋಟಿ ಹಣ ಸಂದಾಯ ಮಾಡಬೇಕಿದೆ.  ಭೂಮಿ ಕಸಿದುಕೊಂಡು ಹಣ ನೀಡದ ಪಾಲಿಕೆ ಆಯುಕ್ತರ ವಿರುದ್ಧ ರೈತರಾದ ಮಹದೇವಸ್ವಾಮಿ ಹಾಗೂ ಶಂಕರ್​ ಆಕ್ರೋಶ ವ್ಯಕ್ತಪಡಿಸಿದ್ಧಾರೆ.
Loading...

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...