Hindu Religion: ಹಿಂದೂ ಧರ್ಮ ರಕ್ಷಣೆಗೆ ಮೈಸೂರು ಅರಮನೆ ಸದಾ ಸಿದ್ಧ: ಯದುವೀರ್ ಒಡೆಯರ್

ಹಿಂದೂ ಧರ್ಮ ರಕ್ಷಣೆಗೆ ಮೈಸೂರು ಅರಮನೆ ಹಿಂದೆಯೂ ಸದಾ ಸಿದ್ಧವಾಗಿತ್ತು ಮತ್ತು ಈಗಲೂ ಹಿಂದೂ ಧರ್ಮ ರಕ್ಷಣೆಗೆ ನಾವು ಸದಾ ಸಿದ್ಧರಾಗಿದ್ದೇವೆ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಹೇಳಿದರು.

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

  • Share this:
ಚಾಮರಾಜನಗರ: “ಹಿಂದೂ (Hindu) ಧರ್ಮ (Religion) ರಕ್ಷಣೆಗೆ (Protection) ಮೈಸೂರು ಅರಮನೆ (Mysore Palace) ಹಿಂದೆಯೂ ಸದಾ (Always) ಸಿದ್ಧವಾಗಿತ್ತು ಮತ್ತು ಈಗಲೂ ಹಿಂದೂ ಧರ್ಮ ರಕ್ಷಣೆಗೆ ನಾವು ಸದಾ ಸಿದ್ಧರಾಗಿದ್ದೇವೆ ” ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraj Wadiyar) ಹೇಳಿದರು. ಚಾಮರಾಜನಗರದ ನಂದಿ ಭವನದಲ್ಲಿ ಆಯೋಜಿಸಲಾಗಿರುವ ಎಬಿವಿಪಿ (ABVP) 41ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, “ ನಮ್ಮ ಸಮಾಜದಲ್ಲಿನ ಬಹುತೇಕ ಸಮಸ್ಯೆಗಳಿಗೆ ಹಿಂದೂ ಧರ್ಮದಲ್ಲೇ ಪರಿಹಾರ ಮತ್ತು ಉತ್ತರವಿದೆ. ಆದ್ದರಿಂದ‌ ಧರ್ಮ ರಕ್ಷಣೆ ತುಂಬಾ ಅಗತ್ಯವಾಗಿದೆ. ಧರ್ಮ ರಕ್ಷಣೆಗೆ ಜಾತಿ-ಜಾತಿಗಳು ಒಟ್ಟುಗೂಡಬೇಕು” ಎಂದು ಹೇಳಿದರು.

“ಧರ್ಮದ ಜೊತೆ ಪರಿಸರ ರಕ್ಷಣೆಗೂ ಆದ್ಯತೆ ಕೊಡಿ”

ಮುಂದುವರಿದು ಮಾತನಾಡಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ನಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣದಿಂದಾಗಿ, ಕಡಿಮೆ ಸಂಖ್ಯೆಯಲ್ಲಿದ್ದ ಬ್ರಿಟಿಷರು ಭಾರತವನ್ನು ಆಳಲು ಸಾಧ್ಯವಾಯಿತು. ಜಯ ಚಾಮರಾಜ ಒಡೆಯರ್ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷರಾಗಿದ್ದರು. ಜೊತೆಗೆ ಬೇಸಿಗೆ ಅರಮನೆಯಲ್ಲಿ ವಿಶ್ವ ಹಿಂದೂ ಪರಿಷತ್‌ ಸಮ್ಮೇಳನವೂ ನಡೆದಿತ್ತು ಎಂದು ಸ್ಮರಿಸಿಕೊಂಡರು. ಧರ್ಮದ ಜೊತೆ ಪರಿಸರ ರಕ್ಷಣೆಗೂ ನಾವು ಆದ್ಯತೆ ಕೊಡಬೇಕು. ಇದಕ್ಕೆಲ್ಲಾ ಶಿಕ್ಷಣವೇ ಪರಿಹಾರ ಕೊಡಬೇಕು. ಶಿಕ್ಷಣದಿಂದಲೇ ಈ ಬಗ್ಗೆ ಜಾಗೃತಿ ಮಾಡಿಸಬೇಕಿದೆ ಎಂದು ಹೇಳಿದರು.

“ನವ ಶಿಕ್ಷಣ ನೀತಿಯ ಅವಕಾಶದ ಸುದುಪಯೋಗ ಮಾಡಿಕೊಳ್ಳಿ”

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಅಯ್ಯಪ್ಪನ್‌ ಮಾತನಾಡಿ, ಐಟಿ, ಬಿಟಿಯಲ್ಲಿ ಕರ್ನಾಟಕವು ಮುಂಚೂಣಿ ಪಾತ್ರದಲ್ಲಿದೆ. ನವ ಶಿಕ್ಷಣ ನೀತಿಯು ವಿಫುಲ ಅವಕಾಶಗಳನ್ನು ನೀಡುತ್ತಿದ್ದ, ಇದನ್ನು ವಿದ್ಯಾರ್ಥಿ ಸಮೂಹ ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಇವತ್ತಿನ ಸಮಸ್ಯೆಗಳು ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಅವು ಜಾಗತಿಕ ಮಟ್ಟದವರೆಗೆ ಬೆಳೆದು ನಿಲ್ಲುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ಉನ್ನತ ಆಲೋಚನೆ ಹಾಗೂ ಜಾಗತಿಕವಾಗಿ ಯೋಚಿಸಿ, ಸ್ಥಳೀಯವಾಗಿ ವರ್ತಿಸಬೇಕು. ಇದರಲ್ಲಿ ಒಳ್ಳೆಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ಮುಗಿಬಿದ್ದ 'ಕೈ' ಪಡೆ, ರಾಜೀನಾಮೆಗೆ ಪಟ್ಟು! ಸದನದಲ್ಲಿ ಕೋಲಾಹಲ

ಜಾಗತಿಕ ಮಟ್ಟದಲ್ಲಿ ಪ್ರಮುಖ ಸುದ್ದಿಯಾದ ಹಿಜಾಬ್

ಇನ್ನು ಈಗಾಗಲೇ ರಾಜ್ಯದಲ್ಲಿ ಹುಟ್ಟಿಕೊಂಡ ಹಿಜಾಬ್ ವಿಚಾರ ಈಗ ದೈತ್ಯಾಕಾರವಾಗಿ ಬೆಳೆದು ನಿಂತಿದೆ. ಕೆಲವೇ ದಿನಗಳಲ್ಲಿ ಹಿಜಾಬ್ ಧರಿಸುವ ವಿಚಾರ ಜಾಗತಿಕ ಮಟ್ಟದಲ್ಲಿ ಪ್ರಮುಖ ಸುದ್ದಿಯಾಗಿ ಮಾರ್ಪಟ್ಟಿದ್ದು, ಸಾಕಷ್ಟು ವಾದ-ವಿವಾದಕ್ಕೆ ಕಾರಣವಾಗಿದೆ. ಕಾಲೇಜಿಗೆ ಹಿಜಾಬ್ ಧರಿಸಿ ಬರಲು ಅನುಮತಿ ಕೋರಿದ್ದರ ಪರಿಣಾಮ ಸಾಕಷ್ಟು ಕಡೆಗಳಲ್ಲಿ ವಿದ್ಯಾರ್ಥಿಗಳು ಓದು, ತರಗತಿ ಬಿಟ್ಟು, ಪ್ರತಿಭಟನೆ ನಡೆಸಬೇಕಾಯಿತು. ಕಾಲೇಜುಗಳನ್ನು ಕೆಲ ದಿನ ಬಂದ್ ಮಾಡಬೇಕಾಯಿತು.

ಇದೆಲ್ಲಾ ಒಂದು ಸಮಾಜವನ್ನು ಒಡೆಯುವ ಕುತಂತ್ರ. ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳು ಉತ್ತಮ ಶಿಕ್ಷಣ ಪಡೆಯುವತ್ತ ಗಮನಹರಿಸಬೇಕು. ಅಷ್ಟೇ ಅಲ್ಲ, ಹಿಜಾಬ್ ವಿಚಾರ ರಾಜಕೀಯ ನಾಯಕರ ವಾಕ್ಸಮರಕ್ಕೂ ಕಾರಣವಾಗಿದೆ. ಭಾವೈಕ್ಯತೆ ಸಾರುವ ದೇಶದಲ್ಲಿ ಈಗ ಸಮಾನತೆ, ಭಾವೈಕ್ಯತೆ ನಾವೆಲ್ಲ ಒಂದು ಎಂಬ ಭಾವ ಕಾಣುತ್ತಿಲ್ಲ. ಇದು ಆಘಾತಕಾರಿ ಬೆಳವಣಿಗೆ ಎಂದು ಹಲವರು ಟ್ವೀಟ್ ಮಾಡಿದ್ದನ್ನು ನೋಡಿದ್ದೇವೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಿಜಾಬ್ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಕೆಲವರು ಹಿಜಾಬ್ ಬೆಂಬಲಿಸಿದರೆ, ಇನ್ನು ಕೆಲವರು ವಿರೋಧಿಸುತ್ತಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಪಿಯು-ಡಿಗ್ರಿ ಕಾಲೇಜುಗಳು ಆರಂಭ, ಎಲ್ಲೆಡೆ ಕಟ್ಟೆಚ್ಚರ-144 ಸೆಕ್ಷನ್ ಜಾರಿ

ಕಾರ್ಯಕ್ರಮದಲ್ಲಿ ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ ಛಗನ್‌ಬಾಯ್‌ ಪಟೇಲ್‌, ರಾಜ್ಯಾಧ್ಯಕ್ಷ ವೀರೇಶ್‌ ಬಾಳೆಕಾಯಿ, ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್‌ಕುಮಾರ್‌, ಪ್ರತೀಕ್‌ , ಮೈಸೂರು ವಿವಿ ಸಿಂಡಿಕೇಟ್‌ ಸದಸ್ಯ ಪ್ರದೀಪ್‌ ದೀಕ್ಷಿತ್‌, ಡಾ. ಮೋಹನ್‌ ಕುಮಾರ್‌, ಭಾಗ್ಯಶ್ರೀ ಹಾಜರಿದ್ದರು.
Published by:renukadariyannavar
First published: