• Home
  • »
  • News
  • »
  • state
  • »
  • ಚಾಮುಂಡಿ ಬೆಟ್ಟಕ್ಕೆ ನಿಮ್ಮ ಯೋಜನೆ ಬೇಡ; ಪ್ರಧಾನಿ ಮೋದಿಗೆ ಸಾಹಿತಿ SL Bhyrappa ಪತ್ರ..ಕಾರಣವೇನು?

ಚಾಮುಂಡಿ ಬೆಟ್ಟಕ್ಕೆ ನಿಮ್ಮ ಯೋಜನೆ ಬೇಡ; ಪ್ರಧಾನಿ ಮೋದಿಗೆ ಸಾಹಿತಿ SL Bhyrappa ಪತ್ರ..ಕಾರಣವೇನು?

SL ಬೈರಪ್ಪ, ಪ್ರಧಾನಿ ಮೋದಿ

SL ಬೈರಪ್ಪ, ಪ್ರಧಾನಿ ಮೋದಿ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪ್ರಸಾದ್ ಯೋಜನೆ ಕೈಬಿಡುವಂತೆ ಮನವಿ‌ ಮಾಡಿದ್ದಾರೆ. ಈ ಯೋಜನೆಯ ನೀಲಿ ನಕ್ಷೆಯು ತಯಾರಾಗಿದ್ದು, ಈ ಯೋಜನೆ ರೂಪುಗೊಂಡರೆ ಇಡೀ ಚಾಮುಂಡಿ ಬೆಟ್ಟವೇ ಕಾಂಕ್ರೀಟ್ ಮಯವಾಗುತ್ತದೆ.

  • Share this:

ಮೈಸೂರು: ಸರ್ಕಾರಗಳ ಯೋಜನೆಗಳು (Government Projects) ತಮ್ಮ‌ ಕ್ಷೇತ್ರಕ್ಕೆ ಬರಲಿ.‌ ತಮ್ಮ ಊರಿಗೂ ಆ ಯೋಜನೆಗಳು ಸಿಗಲಿ ಅಂತ ಎಲ್ಲರು ಆಶಿಸುತ್ತಾರೆ. ಆದ್ರೆ ಇದೀಗ ಮೈಸೂರಿನಲ್ಲಿ ಕೇಂದ್ರದ ಆ ಯೋಜನೆಗೆ ವಿರೋಧ ವ್ಯಕ್ತವಾಗಿದೆ. ಆ ಯೋಜನೆಯನ್ನ ಕೈಗೆತ್ತಿಕೊಳ್ಳಬೇಡಿ ಅಂತ ಪ್ರಧಾನಿಗೆ (PM Modi) ಹಿರಿಯ ಸಾಹಿತಿ ಎಸ್.ಎಲ್‌.ಬೈರಪ್ಪ(Novelist SL Bhyrappa) ಪತ್ರ (Letter) ಬರೆದಿದ್ದಾರೆ. ಅಷ್ಟಕ್ಕೂ ಆ ಯೋಜ‌ನೆ ಯಾವುದು, ಆ ಯೋಜನೆ ಇರುವ ವಿರೋಧ ಏನು ಅಂತ ನೋಡೋದಾದರೆ. ರಾಜ್ಯದಲ್ಲಿ ಸುರಿಯುತ್ತಿರುವ ಬಾರಿ ಮಳೆ ಮೈಸೂರಿನಲ್ಲೂ ಹಲವು ಅವಾಂತರ ಸೃಷ್ಟಿ ಮಾಡಿದೆ. ಭಾರೀ ಮಳೆಗೆ ವಿಶ್ವ ಪ್ರಸಿದ್ದ ಪ್ರವಾಸಿ ತಾಣ ಮೈಸೂರಿನ ಚಾಮುಂಡಿ ಬೆಟ್ಟದ ನಂದಿ ರಸ್ತೆಯಲ್ಲಿ ಕೂಡ ಭೂ ಕುಸಿತ ಸಂಭವಿಸಿದೆ.  ಸದ್ಯ ಚಾಮುಂಡಿ ಬೆಟ್ಟಕ್ಕೆ ದೊಡ್ಡ ಆತಂಕ ಎದುರಾಗಿದೆ.‌ಈ‌ ಕಾರಣದಿಂದಲೇ ಸದ್ಯ ಚಾಮುಂಡಿ ಬೆಟ್ಟ ಉಳಿಸಿ ಅಂತ ದೊಡ್ಡ ಅಭಿಯಾನವೇ ಪ್ರಾರಂಭವಾಗಿದೆ. 


ಚಾಮುಂಡಿ ಬೆಟ್ಟವೇ ಕಾಂಕ್ರೀಟ್ ಮಯವಾಗುತ್ತದೆ:  ವಿಚಾರ ಪ್ರಧಾನಿ ಮೋದಿವರೆಗು ತಲುಪಿಸುವ ಕೆಲಸವಾಗಿದೆ. ಅದರಲ್ಲು ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪ, ಕುದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪ್ರಸಾದ್ ಯೋಜನೆ ಕೈಬಿಡುವಂತೆ ಮನವಿ‌ ಮಾಡಿದ್ದಾರೆ. ಈ ಯೋಜನೆಯ ನೀಲಿ ನಕ್ಷೆಯು ತಯಾರಾಗಿದ್ದು ಸದ್ಯ ಈ ಯೋಜನೆ ರೂಪುಗೊಂಡರೆ ಇಡೀ ಚಾಮುಂಡಿ ಬೆಟ್ಟವೇ ಕಾಂಕ್ರೀಟ್ ಮಯವಾಗುತ್ತದೆ. ಈ‌ ಮೂಲಕ ಇಡೀ ಚಾಮುಂಡಿ ಬೆಟ್ಟದ ಸೌಂದರ್ಯ ಹೆಚ್ಚಾಗುತ್ತೆ. ಮತ್ತೆ ಪ್ರವಾಸಿಗರನ್ನುವ ಅತಿ ಹೆಚ್ಚು ಸೆಳೆಯುವ ಉದ್ದೇಶ ಇದಾಗಿದೆ.‌ ಆದ್ರೆ ಈ ರೀತಿ ಮತ್ತಷ್ಟು ಅಭಿವೃದ್ಧಿ ಗೊಳಿಸಿದ್ರೆ ಚಾಮುಂಡಿ ಬೆಟ್ಟಕ್ಕೆ ಧಕ್ಕೆ ಯಾಗುತ್ತೆ. ಚಾಮುಂಡಿ ಬೆಟ್ಟದ ಮೂಲ ಸ್ವರೂಪವೇ ಬದಲಾಗುತ್ತೆ‌. ಕಾರಣದಿಂದಾಗಿ ಈ ಯೋಜನೆ ಕೈ ಬಿಡಬೇಕು ಅಂತ ಪ್ರತ್ರ ಬರೆದಿದ್ದಾರೆ.


ವಿದ್ಯುತ್ ಚಾಲಿತ ಬಸ್​ಗೆ  ಆಗ್ರಹ:  ಅಷ್ಟೆ ಅಲ್ಲದೆ ಈಗಾಗಲೇ ಸಾವಿರಾರು ವಾಹನ ನಿಲ್ಲಿಸುವ ಮಲ್ಟಿ ಲೆವರಲ್ ಪಾರ್ಕಿಂಗ್ ಕೂಡ ನಿರ್ಮಾಣವಾಗಿದೆ. ಇದ್ರಿಂದ ಈಗಾಗಲೆ ಬೆಟ್ಟಕ್ಕೆ ತೊಡಕಾಗಿದೆ. ಜೊತೆಗೆ ಚಾಮುಂಡಿ ಬೆಟ್ಟದ ಜನಸಂಖ್ಯೆ ಕೂಡ 4 ಸಾವಿರದಷ್ಟಿದೆ. ಇಲ್ಲಿರುವ ನಿವಾಸಿಗಳು ನಗರದಲ್ಲಿ ಜಾಗ ಕಲ್ಪಿಸಿ ಸ್ಥಳಾಂತರ ಮಾಡಬೇಕು ಅಂತ ಪತ್ರದಲ್ಲಿ ಒತ್ತಾಯಿಸಿದ್ದಾರೆ.‌ ಜೊತೆಗೆ ಖಾಸಗಿ ವಾಹನಗಳಿಗು ಹಾಗೂ ವಿಐಪಿ ವಾಹನಗಳಿಗು ನಿರ್ಬಂಧ ಮಾಡಿ. ವಿದ್ಯುತ್ ಚಾಲಿತ ಬಸ್ ಗಳನ್ನು ಬೆಟ್ಟಕ್ಕೆ ಹೋಗಲು ಅನುವು ಮಾಡಿಕೊಡಬೇಕು ಅಂತ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.


ಇದನ್ನೂ ಓದಿ: ವಿರೋಧದ ನಡುವೆಯೇ Hubli Flyoverಗೆ ಹಸಿರು ನಿಶಾನೆ: ಮೇಲ್ಸೇತುವೆಯಿಂದ ಆಗುವ ತೊಂದರೆ ಏನು?


ಸದ್ಯ ನಗರದ ನಿವಾಸಿಗಳು ಕೂಡ ಬೆಟ್ಟ ಉಳಿಸಿ ಅಭಿಯಾನವನ್ನ ಮಾಡುತ್ತಿದ್ದು, ಇದಕ್ಕಾಗಿ ಯುವಕರು ಕೂಡ ಸಹಿ ಸಂಗ್ರಹ ಮಾಡುತ್ತಿದ್ದಾರೆ. ಒಟ್ಟಾರೆ, ಸದ್ಯ ಅಭಿವೃದ್ಧಿ ಯೋಜನೆಗಳಿಂದಲೇ ಚಾಮುಂಡಿ ಬೆಟ್ಟಕ್ಕೆ ದಕ್ಕೆಯಾಗುತ್ತಿದೆ ಅನ್ನೊದು ತಜ್ಞರ ಅಭಿಪ್ರಾಯವೂ ಸಹ ಆಗಿದೆ. ಮುಂದೆ ಸರ್ಕಾರ ಬೆಟ್ಟ ಉಳಿಸಲು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.


ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ  ಚಾಮುಂಡಿ ಬೆಟ್ಟದಲ್ಲಿ ಮತ್ತೊಂದು ಕಡೆ ಗುಡ್ಡ ಕುಸಿತ ಸಂಭವಿಸಿದೆ. ರಸ್ತೆ ನವೀಕರಣಗೊಂಡು ಕೆಲವೇ ದಿನಗಳಲ್ಲಿ ನಂದಿ ವಿಗ್ರಹ ಸಂಪರ್ಕ ಮಾಡುವ ರಸ್ತೆಯಲ್ಲಿ ಕುಸಿತ ಕಂಡಿದೆ. 20 ಅಡಿ ಇದ್ದದ್ದು 200 ಮೀಟರ್ ವರೆಗೆ ವ್ಯಾಪಿಸಿದೆ.  ಗುಡ್ಡ ಕುಸಿತದ ಜೊತೆಗೆ ರಸ್ತೆಗೆ ಉರುಳಿದ ಮರಗಳು ದೊಡ್ಡ ಅಪಾಯಕ್ಕೆ ಎಡೆ ಮಾಡಿಕೊಡುತ್ತಿವೆ.

Published by:Kavya V
First published: