Siddaramaiah ಮುಂದಿನ ಸಿಎಂ ಎಂದು ಕೂಗುತ್ತಿದ್ದ ಸಭಿಕರಿಗೆ ಘೋಷಣೆ ಬೇಡ ಎಂದ ವಿಪಕ್ಷ ನಾಯಕ

ಬಿಜೆಪಿ ಸರ್ಕಾರ ಕೋಮುವಾದ ಸೃಷ್ಟಿಸುವ ಕೆಲಸ ಮಾಡುತ್ತಿದೆ. ತಮ್ಮ ವೈಫಲ್ಯ ಮುಚ್ಚಿಡಲು ದ್ವೇಷದ ಭಾವನೆ ಬೆಳೆಸುತ್ತಿದೆ. ಹಿಂದುತ್ವದ ಭಾವನೆಗಳನ್ನು ಬೆಳೆಸಿ ದ್ವೇಷವನ್ನು ಬಿತ್ತುತ್ತಿದೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
    ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮೈಸೂರಿನಲ್ಲಿ ಕಾಂಗ್ರೆಸ್​ ಪ್ರತಿಭಟನೆ (Congress Protest)  ವೇಳೆ ಸಿದ್ದರಾಮಯ್ಯ (Siddaramaiah) ಮುಂದಿನ ಸಿಎಂ ಎಂಬ ಘೋಷಣೆ ಮತ್ತೆ ಕೇಳಿ ಬಂದಿದೆ. ಕಾಂಗ್ರೆಸ್​ ನಾಯಕ ಭಾಷಣ ಬಳಿಕ ಸಭೆ ಉದ್ದೇಶಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣಕ್ಕೆ ಮುಂದಾದರು. ಈ ವೇಳೆ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಕೂಗು ಜನರಿಂದ ಕೇಳಿ ಬಂದಿತು. ಈ ವೇಳೆ ಸಭಿಕರಿಗೆ ನೋ ಘೋಷಣೆ (No Slogan) ಎಂದ ಸಿದ್ದರಾಮಯ್ಯ, ಘೋಷಣೆಗಳನ್ನು ಕೂಗುವುದನ್ನು ನಿಲ್ಲಿಸುವಂತೆ ಮನವಿ ಮಾಡಿದರು. ಸಿದ್ದರಾಮಯ್ಯ ಮನವಿ ಬಳಿಕ ಕೂಗು ನಿಂತವು. ಬಳಿಕ ಅವರು ಮಾತು ಮುಂದುವರೆಸಿದರು.

    ಬಿಜೆಪಿ ವಿರುದ್ದ ವಾಗ್ದಾಳಿ

    ಭಾಷಣದ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಬಿಜೆಪಿ ಸರ್ಕಾರ ಕೋಮುವಾದ ಸೃಷ್ಟಿಸುವ ಕೆಲಸ ಮಾಡುತ್ತಿದೆ. ತಮ್ಮ ವೈಫಲ್ಯ ಮುಚ್ಚಿಡಲು ದ್ವೇಷದ ಭಾವನೆ ಬೆಳೆಸುತ್ತಿದೆ. ಹಿಂದುತ್ವದ ಭಾವನೆಗಳನ್ನು ಬೆಳೆಸಿ ದ್ವೇಷವನ್ನು ಬಿತ್ತುತ್ತಿದೆ. ಎಲ್ಲಾ ಧರ್ಮಿಯರ ಹೋರಾಟದ ಪ್ರತಿಫಲವೇ ಸ್ವಾತಂತ್ರ್ಯ. ಸ್ವಾತಂತ್ರ್ಯದ ನಂತರ ನಿಮ್ಮ ಆರ್​ಎಸ್​ಎಸ್​​ ರಚನೆಯಾಗಿದ್ದು. ಸ್ವಾತಂತ್ರ್ಯ ಹೋರಾಟಗಾರ ಕಾಂಗ್ರೆಸ್ ನವರು ಮನೆ ಮಠ ಕಳೆದುಕೊಂಡಿದ್ದಾರೆ. ರಾಷ್ಟ್ರ ಭಕ್ತಿ ದೇಶ ಭಕ್ತಿ ಕಾಂಗ್ರೆಸ್ ನವರ ಕಣ ಕಣದಲ್ಲೂ ಇದೆ. ದೇಶ ರಕ್ಷಣೆ, ಸಂವಿಧಾನದ ರಕ್ಷಣೆಗೆ ಕಾಂಗ್ರೆಸ್ ನವರು ಮುಂದಾಗಬೇಕು ಎಂದು ಕರೆ ನೀಡಿದರು

    ಎಲ್ಲಿವೆ ಒಳ್ಳೆಯ ದಿನಗಳು 
    ನಾವೆಲ್ಲ ಹಿಂದೂಗಳು ನಿಮ್ಮಿಂದ ನಾವು ದೇಶಭಕ್ತಿ ಕಲಿಯಬೇಕಾಗಿಲ್ಲ. ಇವತ್ತು ದೇಶ, ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತುಇಲ್ಲ. ಪ್ರಧಾನಿ ಆಗುವುದಕ್ಕೆ ಮುಂಚೆ ಮೋದಿ ಒಳ್ಳೆಯ ದಿನಗಳು ಬರಲಿದೆ ಎಂದಿದ್ದರು. ಆದರೆ ಇದೀಗ ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆಗಳೆಲ್ಲಾ ಏರಿಕೆ ಆಗಿದೆ. ಗೊಬ್ಬರದ ಬೆಲೆ ಏರಿಕೆ ಆಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಆದಾಯ ಹೆಚ್ಚಿಸ್ತೀವಿ ಅಂತ ಪ್ರಧಾನಿ ಸುಳ್ಳು ಹೇಳಿದರು ಎಂದು ಮೋದಿ ವಿರುದ್ಧ ಕಿಡಿಕಾರಿದರು.

    ಇದನ್ನು ಓದಿ: PM Modi ಅವರೇ ಪ್ರಧಾನಿ ಕಚೇರಿಯ ಹೆಸರನ್ನ ‘40% ಕಮಿಷನ್ ದೂರು ಕೇಂದ್ರ’ ಅಂತ ಬದಲಿಸಿ: B.K.Hariprasad ವ್ಯಂಗ್ಯ

    ಚರ್ಚೆಗೆ ಮೋದಿಗೆ ಆಹ್ವಾನಿಸಿದ ಸಿದ್ದರಾಮಯ್ಯ

    ನರೇಂದ್ರ ಮೋದಿ ಅವರು ರೈತರ ಜೇಬಿನಿಂದ 3,600ಕೋಟಿ ದೋಚಿದ್ದಾರೆ. ನರೇಂದ್ರ ಮೋದಿ ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಅಂದಿದ್ರು. ಸ್ವತಂತ್ರ ಬಂದು 75 ವರ್ಷ ಆಗುವ ವೇಳೆಯಲ್ಲಿ ದೇಶದ ಸಾಲವನ್ನ ದುಪ್ಪಟ್ಟು ಮಾಡಿದ್ದಾರೆ ಅಷ್ಟೇ. ಅಂಬಾನಿ, ಅದಾನಿ ಸಂಪತ್ತು ಮಾತ್ರ ಏರಿಕೆ ಆಗಿದೆ. ಅಂತಹವರ ಸಾಲ ಮನ್ನಾ ಮಾಡಿದ್ದಾರೆ. ಇವರು ಯಾರ ಪರ ಇದ್ದಾರೆ. ಕಾರ್ಪೊರೇಟ್ ಟ್ಯಾಕ್ಸ್ ಮನಮೋಹನ್ ಕಾಲದಲ್ಲಿ 35% ಇತ್ತು, ಈಗ 23%ಗೆ ಇಳಿಸಿದ್ದಾರೆ. ಕೇಂದ್ರಕ್ಕೆ ಇದರಿಂದ 5 ಲಕ್ಷ ಕೋಟಿ ಕಡಿಮೆ ಆಗಿದೆ. ಇದೆಲ್ಲ ಸುಳ್ಳು ಆದರೆ ಒಂದೇ ವೇದಿಕೆಗೆ ಬರಲಿ ನಾನು ಚರ್ಚೆಗೆ ಸಿದ್ದ ಎಂದು ಪ್ರಧಾನಿ ಮೋದಿಗೆ ಆಹ್ವಾನಿಸಿದರು.

    ಇದನ್ನು ಓದಿ: ಹುಬ್ಬಳ್ಳಿ ಗಲಭೆಗೆ ಕಾಂಗ್ರೆಸ್​ ರೂವಾರಿ: ಬಿಜೆಪಿ

    ನಂಬಿಕೆಗೆ ದ್ರೋಹ ಬಗೆದ ಮೋದಿ

    ಯುವಕರು ಉದ್ಯೋಗ ಕೊಡಿ ಅಂದ್ರೆ ಪಕೋಡ ಮಾರಿ, ಬೋಂಡಾ ಮಾರಿ ಅಂತಾರೆ. ವಿಶ್ವಾಸ ಇಟ್ಟು ವೋಟ್ ಹಾಕಿದ ಯುವಕರ ತಲೆ ಮೇಲೆ ಚಪ್ಪಡಿ ಎಳೆದು ಬಿಟ್ಟರು. ತಾವು ತಿನ್ನಲ್ಲ ತಿನ್ನಕ್ಕೆ ಬಿಡಲ್ಲ ಅಂತ ಹೇಳಿದ್ದರು. ಈಗ ನಿಮ್ಮ ಸಚಿವರುಗಳೇ 40% ಕಮಿಷನ್ ಕೇಳುತ್ತಿದ್ದಾರೆ ಎಂದು ನಿಮಗೆ ಪತ್ರ ಬರೆದಿದ್ದಾರೆ. ಕರ್ನಾಟಕ ಇತಿಹಾಸದಲ್ಲಿ ಈ ರೀತಿ ಪತ್ರ ಬರೆದ ನಿದರ್ಶನ ಇಲ್ಲ. ತನಿಖೆ ಮಾಡಿಸುವಂತೆ ಕೇಳಿದ್ದರೂ, ಇವತ್ತಿನ ವರೆಗೆ ತನಿಖೆ ಮಾಡಿಸಿಲ್ಲ. ಭ್ರಷ್ಟಾಚಾರಕ್ಕೆ ಕುಮ್ಮಕ್ಕು, ಶಿಫಾರಸ್ಸು ಮಾಡುವ ಪ್ರಧಾನಿ ಯಾರಾದ್ರು ಇದ್ರೆ ಅದು ನರೇಂದ್ರ ಮೋದಿ ಎಂದು ವಾಗ್ದಾಳಿ ನಡೆಸಿದರು
    Published by:Seema R
    First published: