Rohini Sindhuri: ಮೈಸೂರು ಜಿಲ್ಲಾಧಿಕಾರಿ ಶರತ್​ ವರ್ಗಾವಣೆ ಖಂಡಿಸಿ ಪ್ರತಿಭಟನೆ

ತಿಂಗಳೊಳಗೆ ಎರಡು ಡಿಸಿಗಳನ್ನು ವರ್ಗಾವಣೆ ಮಾಡಿರುವ ಕ್ರಮಕ್ಕೆ ಪ್ರತಿಭಟನೆ ವ್ಯಕ್ತವಾಗಿದೆ. ನಮಗೆ ರೋಹಿಣಿ ಸಿಂಧೂರಿ ಬೇಡ. ಶರತ್​ ಬೇಕು. ಅವರನ್ನೇ ಜಿಲ್ಲಾಧಿಕಾರಿಯಾಗಿ ಮುಂದುವರೆಸಬೇಕು ಎಂಬ ಕೂಗು ಕೇಳಿಬಂದಿದೆ.

news18-kannada
Updated:September 28, 2020, 10:32 PM IST
Rohini Sindhuri: ಮೈಸೂರು ಜಿಲ್ಲಾಧಿಕಾರಿ ಶರತ್​ ವರ್ಗಾವಣೆ ಖಂಡಿಸಿ ಪ್ರತಿಭಟನೆ
ಸರ್ಕಾರದ ಆದೇಶ ಖಂಡಿಸಿ ಪ್ರತಿಭಟನೆ
  • Share this:
ಮೈಸೂರು (ಸೆ.28): ತಿಂಗಳ ಹಿಂದೆ ನಗರಕ್ಕೆ  ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದ ಶರತ್​ ಅವರನ್ನು ದಿಢೀರ್​ ವರ್ಗಾವಣೆ ಮಾಡಿರುವುದಕ್ಕೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಏಕಾಏಕಿ ಅವರನ್ನು ವರ್ಗಾವಣೆ ಮಾಡಿರುವ ಕ್ರಮ ಸರಿಯಲ್ಲ ಎಂದು ಮೈಸೂರು ನಾಗರೀಕ ವೇದಿಕೆ ಪ್ರತಿಭಟನೆ ನಡೆಸಿದೆ. ನಗರಕ್ಕೆ  ನೂತನವಾಗಿ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ಆಗಮನ ವಿರೋಧಿಸಿ ನ್ಯಾಯಾಲದ ಮುಂಭಾಗ ಘೋಷಣೆ ಕೂಗಲಾಯಿತು. ಮೈಸೂರು ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ  ರಾಜ್ಯ ಸರ್ಕಾರ ಈ ವರ್ಗಾವಣೆ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಈ ಆದೇಶ ಹಿಂಪಡೆಯದಿದ್ದರೆ ನಾಳೆ ಬೃಹತ್​ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಲಾಯಿತು. 

ರೋಹಿಣಿ ಸಿಂಧೂರಿ ಸೇರಿದಂತೆ ಆರು ಜನ ಐಎಎಸ್​ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ವೇಳೆ ಮುಜರಾಯಿ ಇಲಾಖೆ ಆಯುಕ್ತೆಯಾಗಿದ್ದ ರೋಹಿಣಿಯವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಇನ್ನು ಮೈಸೂರು ಡಿಸಿಯಾಗಿ ಕಾರ್ಯನಿರ್ವಹಿಸುತ್ತಿರುವ ಶರತ್​ಗೆ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ.

ಇದನ್ನು ಓದಿ: ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ವರ್ಗಾವಣೆ

ತಿಂಗಳೊಳಗೆ ಎರಡು ಡಿಸಿಗಳನ್ನು ವರ್ಗಾವಣೆ ಮಾಡಿರುವ ಕ್ರಮಕ್ಕೆ ಪ್ರತಿಭಟನೆ ವ್ಯಕ್ತವಾಗಿದೆ. ನಮಗೆ ರೋಹಿಣಿ ಸಿಂಧೂರಿ ಬೇಡ. ಶರತ್​ ಬೇಕು. ಅವರನ್ನೇ ಜಿಲ್ಲಾಧಿಕಾರಿಯಾಗಿ ಮುಂದುವರೆಸಬೇಕು ಎಂದು ನಗರದ ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಕ್ಷಣದಿಂದ ಕಾರ್ಯಕ್ಕೆ ಬರುವಂತೆ ಈ ವರ್ಗಾವಣೆ ಆದೇಶ ಹೊರಡಿಸಲಾಗಿದೆ. ದಸರಾ ಕಾರ್ಯ ಚಟುವಟಿಕೆಗಳು ಈಗಾಗಲೇ ಅರಮನೆ ನಗರಿಯಲ್ಲಿ ಗರಿಗೆದರಿದ್ದು, ಶರತ್​ ಈ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ.
Published by: Seema R
First published: September 28, 2020, 10:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading