Mysuru; ನನಗೆ ಗಾಯಿತ್ರಿ ನೆನಪು ಕಾಡ್ತಿದೆ, ನಾನು ಅವಳ ಬಳಿ ಹೋಗ್ತೀನಿ: ಸಾವಿನಲ್ಲಿ ಪತ್ನಿಯನ್ನ ಹಿಂಬಾಲಿಸಿದ ಪತಿ

ಆತ್ಮಹತ್ಯೆಗೂ ಮುನ್ನ ಸಹೋದರನಿಗೆ ಕರೆ ಮಾಡಿದ ಮಹೇಶ್, ಮಕ್ಕಳನ್ನು ಚೆನ್ನಾಗಿ ನೋಡಿಕೋ. ನನಗೆ ಗಾಯಿತ್ರಿ ನೆನಪು ಕಾಡ್ತಿದೆ. ನಾನು ಅವಳ ಬಳಿಯೇ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.

ಮಹೇಶ್ ಮತ್ತು ಗಾಯಿತ್ರಿ

ಮಹೇಶ್ ಮತ್ತು ಗಾಯಿತ್ರಿ

  • Share this:
ಮನೆಯಲ್ಲಿ ಸಾವು (Death) ಆದ್ರೆ ಆ ನೋವು ನಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಇಂತಹ ಸಮಯದಲ್ಲಿ ಸಂಯಮ ಕಳೆದುಕೊಳ್ಳದೇ ಮತ್ತೆ ದೈನಂದಿನ ಜೀವನಕ್ಕೆ ರೂಢಿಸಿಕೊಳ್ಳಬೇಕು. ಇಲ್ಲವಾದಲ್ಲಿ ಬದುಕು (Life) ನಶ್ವರ ಆಗುತ್ತದೆ.  ಗಂಡ-ಹೆಂಡತಿ ಅನ್ನೋ ಬಾಂಧವ್ಯ ಪದಗಳಿಂದ ವರ್ಣಿಸಲು ಸಾಧ್ಯವಾಗಲ್ಲ. ಇಬ್ಬರೂ ಹೊಂದಾಣಿಕೆಯಿಂದ ಜೀವನ ನಡೆಸುತ್ತಿದ್ರೆ ಬದುಕಿನ ಬಂಡಿ ಯಾವುದೇ ಅಡೆತಡೆಗಳು ಇಲ್ಲದೇ ಸಾಗುತ್ತಿರುತ್ತದೆ. ಪತ್ನಿ (Wife Death) ಸಾವನ್ನಪ್ಪಿದ ಬಳಿಕ ಪತಿ (Husband Suicide) ಸಹ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿ(Mysuru)ನಲ್ಲಿ ನಡೆದಿದೆ. ಇತ್ತ ತಂದೆ-ತಾಯಿಯನ್ನು ಕಳೆದುಕೊಂಡ ಪುಟ್ಟ ಮಕ್ಕಳು (Children) ಅಪ್ಪ, ಅಮ್ಮ ಎಲ್ಲಿ ಎಂದು ಕೇಳುತ್ತಿವೆ. ಕಂದಮ್ಮಗಳ ಪ್ರಶ್ನೆಗೆ ಏನು ಉತ್ತರ ನೀಡಬೇಕು ಅಂತ ತಿಳಿಯದೇ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದ ಮಹೇಶ್ ಸಾವಿನಲ್ಲಿ ಪತ್ನಿಯನ್ನು ಹಿಂಬಾಲಿಸಿದ ಪತಿ. ಕೆಲ ವರ್ಷಗಳ ಹಿಂದೆ ಮಹೇಶ್ ಮತ್ತು ಗಾಯಿತ್ರಿ ಮದುವೆ ನಡೆದಿತ್ತು. .ದಂಪತಿಗೆ ಎರಡು ಮುದ್ದಾದ ಮಕ್ಕಳು ಸಹ ಇವೆ. ತಾವಿಬ್ಬರು, ತಮಗಿಬ್ಬರು ಎಂಬಂತೆ ಸಂಸಾರ ಚೆನ್ನಾಗಿ ನಡೆಯುತ್ತಿತ್ತು.

ಎರಡು ತಿಂಗಳ ಹಿಂದೆ ಗಾಯಿತ್ರಿ ಸಾವು

ಎರಡು ತಿಂಗಳ ಹಿಂದೆ ಬಿಪಿ ಮಾತ್ರೆ ಬದಲಾಗಿ ಬೇರೆ ಔಷಧ ತೆಗೆದುಕೊಂಡ ಪರಿಣಾಮ ಗಾಯಿತ್ರಿ ಸಾವನ್ನಪ್ಪಿದ್ದರು. ಪತ್ನಿ ಸಾವಿನ ಬಳಿಕ ಮಹೇಶ್ ಸಂಪೂರ್ಣವಾಗಿ ಖಿನ್ನತೆಗೆ ಜಾರಿದ್ದರು. ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸರಿಯಾದ ಸಮಯದಲ್ಲಿ ಬಂದ ಕುಟುಂಬಸ್ಥರು ಮಹೇಶ್ ಅವರನ್ನು ಉಳಿಸಿದ್ದರು. ನಂತರ ಮಕ್ಕಳಿಗಾಗಿ ಬದುಕಬೇಕು ಎಂದು ತಿಳಿ ಹೇಳಿದ್ದರು.

ಕುಟುಂಬಸ್ಥರು ಧೈರ್ಯ ಹೇಳಿದ್ರೂ ಮಹೇಶ್ ಮಾತ್ರ ದಿನದಿಂದ ದಿನಕ್ಕೆ ಮಾನಸಿಕವಾಗಿ ಕುಗ್ಗುತ್ತಾ ಹೋಗಿದ್ದರು. ಭಾನುವಾರ ತೋಟಕ್ಕೆ ತಂದಿದ್ದ ಕ್ರಿಮಿನಾಶಕ ಸೇವಿಸಿ ಮಹೇಶ್ ಸಾವನ್ನಪ್ಪಿದ್ದಾರೆ.

ಆತ್ಮಹತ್ಯೆಗೂ ಮುನ್ನ ಸೋದರನಿಗೆ ಕರೆ

ಆತ್ಮಹತ್ಯೆಗೂ ಮುನ್ನ ಸಹೋದರನಿಗೆ ಕರೆ ಮಾಡಿದ ಮಹೇಶ್, ಮಕ್ಕಳನ್ನು ಚೆನ್ನಾಗಿ ನೋಡಿಕೋ. ನನಗೆ ಗಾಯಿತ್ರಿ ನೆನಪು ಕಾಡ್ತಿದೆ. ನಾನು ಅವಳ ಬಳಿಯೇ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  Bharathi Shetty: ‘ಎರಡು ಮಕ್ಕಳು ಇರೋರಿಗೆ ಮಾತ್ರ ಸರ್ಕಾರಿ ಸವಲತ್ತು ಕೊಡಿ’

ಮಹೇಶ್ ಕರೆ ಕಟ್ ಮಾಡುತ್ತಿದ್ದಂತೆ ಸ್ಥಳಕ್ಕೆ ಸೋದರರು ಸೇರಿದಂತೆ ಕುಟುಂಬಸ್ಥರು ದೌಡಾಯಿಸಿದ್ದಾರೆ. ಆಸ್ಪತ್ರೆಗೆ ಸೇರಿಸಲು ಕುಟುಂಬಸ್ಥರು ಪ್ರಯತ್ನಿಸುತ್ತಿರುವಾಗಲೇ ಮಹೇಶ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಅನಾಥವಾದ ಮಕ್ಕಳು

ಸೊಸೆಯ ಸಾವಿನ ನೋವು ಮರೆಯುವ ಮುನ್ನವೇ ಮಗನ ಸಾವಿನಿಂದ ಕುಟುಂಬ ಆಘಾತಕ್ಕೆ ಒಳಾಗಿದೆ. ಇತ್ತ ಪುಟ್ಟ ಎರಡೂ ಮಕ್ಕಳು ಮಾತ್ರ ಅನಾಥವಾಗಿದ್ದು, ಅಪ್ಪ-ಅಮ್ಮ ಎಲ್ಲಿ ಎಂದು ಕೇಳುತ್ತಿವೆ.

SSLC Exam ಬರೆಯುತ್ತಿದ್ದಾಗಲೇ ವಿದ್ಯಾರ್ಥಿನಿ ಸಾವು

ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯೊಬ್ಬಳು ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಮುಂದಾಗಿದ್ದಳು. ಈ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದಾಳೆ, ತಕ್ಷಣಕ್ಕೆ ಆಕೆಗೆ ಚಿಕಿತ್ಸೆ ನೀಡಲಾಯಿತಾದರೂ ಅದು ಫಲ ನೀಡದೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.

ಸಾವನ್ನಪ್ಪಿದ ವಿದ್ಯಾರ್ಥಿನಿಯನ್ನು ಟಿ ನರಸೀಪುರ ತಾಲೂಕಿನ ಅಕ್ಕೂರು ಗ್ರಾಮದ ಅನುಶ್ರಿ ಎಂದು ಗುರುತಿಸಲಾಗಿದೆ. ಈಕೆ ಮಾದಾಪುರ ಪ್ರೌಢಶಾಲೆಯಲ್ಲಿ ವ್ಯಾಸಂಗಾ ಮಾಡುತ್ತಿದ್ದಳು. ಇಂದು ತಾಲೂಕಿನ ವಿದ್ಯೋದಯ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಆಗಮಿಸಿದ್ದಳು.

ಇದನ್ನೂ ಓದಿ: Tiger Attack: ಕಾಳು ಮೆಣಸು ಕೊಯ್ಯುತ್ತಿದ್ದ ಯುವಕನ ಮೇಲೆ ಹುಲಿ ದಾಳಿ, ಸ್ಥಳದಲ್ಲೇ ಸಾವು

ವಿದ್ಯಾರ್ಥಿನಿ ಆರೋಗ್ಯವಾಗಿದ್ದು, ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ, ಪರೀಕ್ಷೆ ಬರೆಯಲು ಆರಂಭಿಸಿದ್ದಳು. ಪರೀಕ್ಷೆ ಬರೆಯುವ ವೇಳೆ ಆಕೆ ಕುಸಿದು ಬಿದ್ದಿದ್ದಾಳೆ. ಕೂಡಲೇ ಸಿಬ್ಬಂದಿಗಳು ಆಕೆಯನ್ನು ಟಿ ನರಸೀಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ.
Published by:Mahmadrafik K
First published: