• Home
 • »
 • News
 • »
 • state
 • »
 • Mysuru Gang Rape Case: ಮುಂದಿನ ತನಿಖೆ ಹೇಗೆ ನಡೆಯಲಿದೆ ಇಲ್ಲಿದೆ ಮಾಹಿತಿ...

Mysuru Gang Rape Case: ಮುಂದಿನ ತನಿಖೆ ಹೇಗೆ ನಡೆಯಲಿದೆ ಇಲ್ಲಿದೆ ಮಾಹಿತಿ...

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಆರೋಪಿಗಳ ಹಿನ್ನಲೆ‌ಯ ಬಗ್ಗೆ ಈಗ ಅಸ್ಪಷ್ಟ ಮಾಹಿತಿ ಇರುವ ಕಾರಣ, ಅವರ ಪೂರ್ವಾಪರ, ಕೆಲಸ ಹಾಗೂ ಅಪರಾಧ ಪ್ರಕರಣಗಳಲ್ಲಿ ಈ ಹಿಂದೆ ಭಾಗಿಯಾಗಿದ್ದರೆ ಹಾಗೂ ಪ್ರಸ್ತುತ ಅಪರಾಧ ಪ್ರಕರಣದಲ್ಲಿನ ಭಾಗಿತ್ವದ ಬಗ್ಗೆ ಪೂರಕ ಸಾಕ್ಷ್ಯಾಧಾರಗಳನ್ನ ಕಲೆಹಾಕಲಾಗುತ್ತದೆ. ಜೊತೆಗೆ ಹೆಚ್ಚಿನ ವಿಚಾರಣೆ ಅಗತ್ಯ ಇರುವ ಹಿನ್ನಲೆ Police custodyಗೆ ತೆಗೆದುಕೊಳ್ಳಲಿದ್ದಾರೆ.

ಮುಂದೆ ಓದಿ ...
 • Share this:

  ಮೈಸೂರಿನಲ್ಲಿ ಯುವತಿ ಮೇಲೆ ನಡೆದಿರುವ  ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ  ಈಗಾಗಲೇ ಪೊಲೀಸರು ಐದು ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


  ’’ ಇಡೀ ರಾಜ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದ ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿಗೆ ಕಳಂಕ ತಂದಿದ್ದ ಈ  ಪ್ರಕರಣವನ್ನು ಭೇದಿಸಲು ಏಳು ತಂಡಗಳನ್ನು ರಚಿಸಲಾಗಿತ್ತು. ಸಂತ್ರಸ್ಥೆಯಿಂದ ಯಾವುದೇ ರೀತಿಯ ಪೂರಕ ಮಾಹಿತಿ ಸಿಗದ ಕಾರಣ, ಈ ಪ್ರಕರಣದ ಆರೋಪಿಗಳನ್ನು ಹಿಡಿಯುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಈ ದುರ್ಘಟನೆ ನಡೆಯುವ ವೇಳೆ ಜೊತೆಯಲ್ಲಿ ಇದ್ದ ಸ್ನೇಹಿತನಿಂದ ಸಿಕ್ಕ ಅಲ್ಪ ಮಾಹಿತಿಯನ್ನು ಪಡೆದ ಪೊಲೀಸರು ಸಾಕಷ್ಟು ಚುರುಕುತನದಿಂದ ಕೆಲಸ ಮಅಡಿ ಆರೋಪಿಗಳನ್ನು ಬಲೆಗೆ ಬೀಳಿಸಿದ್ದರು.


  ಮುಂದಿನ ತನಿಖಾ ಹಂತದ ಆಯಾಮ ಹೇಗೆ ನಡೆಯಲಿದೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.


  ಮೊದಲು ಎಲ್ಲಾ ಐದು  ಆರೋಪಿಗಳಿಗೆ ಮೆಡಿಕಲ್ ಟೆಸ್ಟ್ ಮಾಡಿಸಿ, ಡಿಎನ್ ಎ ಸ್ಯಾಂಪಲ್ ಪಡೆಯಬೇಕಿದೆ.  ಪೊಲೀಸರಿಗೆ ಈಗಾಗಲೇ ದುರ್ಘಟನೆ ನಡೆದ ಘಟನಾ ಸ್ಥಳದ ಬಗ್ಗೆ ಮಾಹಿತಿ ತಿಳಿದಿರುವ ಹಿನ್ನಲೆ ಮಹಜರು ಪ್ರಕ್ರಿಯೆ ನಡೆಸುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗಿದೆ.


  ಆರೋಪಿಗಳ ಮೆಡಿಕಲ್​ ಟೆಸ್ಟ್​ ಮುಗಿದ ನಂತರ ಬಂಧಿತ ಐವರು ಆರೋಪಿಗಳ ಪ್ರತಿಯೊಬ್ಬರ ಹೇಳಿಕೆ ದಾಖಲಿಕೊಂಡು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.


  ಆರೋಪಿಗಳ ಹಿನ್ನಲೆ‌ಯ ಬಗ್ಗೆ ಈಗ ಅಸ್ಪಷ್ಟ ಮಾಹಿತಿ ಇರುವ ಕಾರಣ, ಅವರ ಪೂರ್ವಾಪರ, ಕೆಲಸ ಹಾಗೂ ಅಪರಾಧ ಪ್ರಕರಣಗಳಲ್ಲಿ ಈ ಹಿಂದೆ ಭಾಗಿಯಾಗಿದ್ದರೆ ಹಾಗೂ ಪ್ರಸ್ತುತ ಅಪರಾಧ ಪ್ರಕರಣದಲ್ಲಿನ ಭಾಗಿತ್ವದ ಬಗ್ಗೆ ಪೂರಕ ಸಾಕ್ಷ್ಯಾಧಾರಗಳನ್ನ ಕಲೆಹಾಕಲಾಗುತ್ತದೆ. ಜೊತೆಗೆ ಹೆಚ್ಚಿನ ವಿಚಾರಣೆ ಅಗತ್ಯ ಇರುವ ಹಿನ್ನಲೆ Police custodyಗೆ ತೆಗೆದುಕೊಳ್ಳಲಿದ್ದಾರೆ.


  ಪ್ರಕರಣದಲ್ಲಿ ಆರೋಪಿತರಿಗೆ ಶಿಕ್ಷೆ ಆಗಬೇಕೆಂದರೆ ಸಂತ್ರಸ್ಥ ಯುವತಿಯ ಹೇಳಿಕೆ ಅತ್ಯಗತ್ಯ. ಆರೋಪಿತರನ್ನ ಗುರುತು ಹಿಡಿಯುವ, ಕೂದಲು, ಯೂರಿನ್ ಸೇರಿದಂತೆ ಸಂತ್ರಸ್ಥ ಯುವತಿಯಿಂದಲೂ ಡಿಎನ್​ಎ ಸ್ಯಾಂಪಲ್ ಪಡೆಯಲಾಗುತ್ತದೆ. ಯುವತಿ ದೇಹದಲ್ಲಿ ಏನಾದರೂ ಗಾಯದ ಗುರುತುಗಳಿದ್ದರೂ ಸಹ ಮೆಡಿಕಲ್ ಟೆಸ್ಟ್ ನಲ್ಲಿ ಈ ಬಗ್ಗೆ ರಿಪೋರ್ಟ್ ಮಾಡಬೇಕಿದೆ.


  ಆದರೆ ಈ ಪ್ರಕರಣ ಸಾಕಷ್ಟು ಕಗ್ಗಂಟಾಗಿ ಉಳಿದಿದೆ. ಏಕೆಂದರೆ ಯುವತಿಯೂ ಸಹ ಇದರ ಬಗ್ಗೆ ಮಾತನಾಡಲು ತಯಾರಿಲ್ಲ ಎಂದು ಪೊಲೀಸ್​ ಮೂಲಗಳು ಹೇಳುತ್ತಿವೆ.  ಸದ್ಯ ಪ್ರಕರಣದ ಸಹವಾಸವೇ ಬೇಡವೆಂದು ಯುವತಿಯ ಪೋಷಕರು ಪಟ್ಟು ಹಿಡಿದಿದ್ದು, ತಮ್ಮ ಪಾಡಿಗೆ ಬಿಡಲು ಕೇಳಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ಸಂತ್ರಸ್ತ ಯುವತಿಯು ಸಹ ಹೇಳಿಕೆ ಕೊಡಲು ನಿರಾಕರಿಸುತ್ತಿರುವ ಹಿನ್ನೆಲೆ, ಈ ಪ್ರಕರಣವನ್ನು ಹೇಗೆ ಸಮಾಪ್ತಿಗೊಳಿಸಿವುದು ಎಂಬುದು ಮೈಸೂರು ಪೊಲೀಸರಿಗೆ ತಲೆ ನೋವಾಗಿ ಕುಳಿತಿದೆ.


  ಈ ಘಟನೆ ನಡೆಯುವ ವೇಳೆ ಸಂತ್ರಸ್ಥ ಯುವತಿಯ ಜೊತೆಗೆ ಇದ್ದ ಸ್ನೇಹಿತನಿಂದಲೂ ಸಹ ಅಸ್ಪಷ್ಟ ಮಾಹಿತಿ ದೊರೆತಿದ್ದು, ಹೀಗಾಗಿ ಪ್ರಕರಣದಲ್ಲಿ ಆರೋಪಿತರಿಗೆ ಶಿಕ್ಷೆ ಕೊಡಿಸುವುದೇ ಪೊಲೀಸರಿಗೆ ಸವಾಲಾಗಿ ಕುಳಿತಿದೆ. ಅಲ್ಲದೇ ಆರೋಪಿಗಳು ಸುಲಭವಾಗಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಹುದು ಎಂಬುದು ಪೊಲೀಸರ ಮಾತು.


  ಇದನ್ನೂ ಓದಿ: Mysuru Gang Rape Case| ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಿ; ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರತಿಭಟನೆ


  ಮುಂದಿನ ವಾರ ಸಂತ್ರಸ್ಥ ಯುವತಿಯ ಹೇಳಿಕೆ ಪಡೆಯಲು ಒಂದು ತಂಡ ಮನೆಗೆ ಹೋಗಲು ಸಿದ್ದತೆ ನಡೆಸುತ್ತಿದೆ ಎಂದು ಪೊಲೀಸ್​ ಮೂಲಗಳು ಹೇಳಿವೆ.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: