Mysuru Dasara 2021: ವಿಶ್ವವಿಖ್ಯಾತ ಜಂಬೂ ಸವಾರಿಗೆ ‘ಗಜಪಯಣ‘ ಆರಂಭ; ಅಭಿಮನ್ಯು ನೇತೃತ್ವದ 8 ಆನೆಗಳ ತಂಡ ನಾಡಿಗೆ

Gajapayana starts: ಇಂದು ಬೆಳಗ್ಗೆ 9.30ರ ಶುಭ ಮುಹೂರ್ತದಲ್ಲಿ ಗಜಪಡೆಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಮಾವುತ, ಕಾವಾಡಿಗಳ ಕುಟುಂಬದೊಂದಿಗೆ ಇಂದು ಆನೆಗಳು ಮೈಸೂರಿಗೆ ಆಗಮಿಸಲಿವೆ.

ಗಜಪಯಣ

ಗಜಪಯಣ

  • Share this:
    ಮೈಸೂರು(ಸೆ.13):  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2021ರ ಮೊದಲನೇ ಹಂತದ ಕಾರ್ಯಕ್ರಮ ಜಂಬೂ ಸವಾರಿ ಗಜಪಯಣ. ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ಗಜಪಡೆಯನ್ನು ನಾಡಿಗೆ ಸ್ವಾಗತಿಸಲಾಯಿತು. ನಾಗರಹೊಳೆಯ ವೀರನಹೊಸಹಳ್ಳಿಯಿಂದ  ಅಭಿಮನ್ಯು ನೇತೃತ್ವದ 8 ಆನೆಗಳ ತಂಡವನ್ನು ಸಾಂಸ್ಕೃತಿಗೆ ನಗರಿ ಮೈಸೂರಿಗೆ ಸ್ವಾಗತ ಮಾಡಲಾಯಿತು. ಗಣ್ಯರು ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಬೇವು-ಬೆಲ್ಲ ತಿನ್ನಿಸಿ ಶುಭ ಕೋರಿದರು. ಸಂಸದ ಪ್ರತಾಪ್ ಸಿಂಹ, ಶಾಸಕ ಎಚ್.ಪಿ ಮಂಜುನಾಥ್ , ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಎಸ್ ಪಿ ಆರ್.ಚೇತನ್ ಮೇಯರ್ ಸುನಂದಾ ಪಾಲನೇತ್ರ, ಡಿಸಿಎಫ್ ಕರಿಕಾಳನ್, ವಿವಿಧ ನಿಗಮ ಮಂಡಲಿಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಇದೇ ವೇಳೆ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್, ಇಂದು  ಪುರೋಹಿತರು ಸಮಯ ನಿಗದಿ ಮಾಡಿದಂತೆ ಗಜಪಡೆ ಪೂಜೆ ಹಮ್ಮಿಕೊಂಡಿದ್ದೆವು. ಸಂಸದರು, ಶಾಸಕರು ಕೂಡ ಗಜಪಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ದಸರಾದ ಮೊದಲ ಹಂತದ ಕಾರ್ಯಕ್ರಮ ನೇರವೇರಿದೆ.. ಸೆ.16 ರಂದು ಅರಮನೆ ಕಾರ್ಯಕ್ರಮವಿರುತ್ತದೆ ಎಂದು ಹೇಳಿದರು.

    ಗಜಪಯಣ ಕಾರ್ಯಕ್ರಮಕ್ಕೆ ಸಚಿವ ಎಸ್​.ಟಿ.ಸೋಮಶೇಖರ್ ಚಾಲನೆ ನೀಡಿದರು.  ವೀರನಹೊಸಹಳ್ಳಿಯಲ್ಲಿ ಗಜಪಡೆಗೆ ಪೂಜೆ ಸಲ್ಲಿಸಿದ ಬಳಿಕ, ‌ಸಂಸದ ಪ್ರತಾಪ್ ಸಿಂಹ ಮಾತನಾಡಿ, ಅ. 7 ರಂದು ಸಂಪ್ರದಾಯ ದಸರಾ ನಡೆಯಲಿದೆ. ಪೂರ್ವಭಾವಿಯಾಗಿ ಇಂದು ದಸರಾ ಮೆರುಗು ಹೆಚ್ಚಿಸುವ ಗಜಪಡೆಗೆ ಪೂಜೆ ಸಲ್ಲಿಸಲಾಗಿದೆ. ಸೆ 16 ರಂದು ಪೂಜೆ ಸಲ್ಲಿಸಿ ಅರಮನೆಗೆ ಬರಮಾಡಿಕೊಳ್ಳಲಾಗುತ್ತದೆ. ಪ್ರತಿ ವರ್ಷ 5 ಆನೆಗಳು ಬರುತ್ತಿದ್ದವು, ಆದ್ರೆ ಈ ಬಾರಿ 8 ಆನೆ ಬಂದಿವೆ ಎಂದರು.

    ಇದನ್ನೂ ಓದಿ:Morning Digest: ಕರ್ನಾಟಕದಲ್ಲಿ ಮುಂದುವರೆದ ಮಳೆ, ಇಂದಿನಿಂದ ವಿಧಾನಮಂಡಲ ಅಧಿವೇಶನ; ಬೆಳಗಿನ ಟಾಪ್ ನ್ಯೂಸ್​ಗಳು

    ಮುಂದುವರೆದ ಅವರು, ಜಿಲ್ಲಾಡಳಿತ ದಸರಾ ವೆಚ್ಚವನ್ನು ರಾಜ್ಯ ಸರ್ಕಾರಕ್ಕೆ ವಹಿಸಲು ನಿರ್ಧರಿಸಿದೆ ಇಂದು ಪೂಜೆ ಸಲ್ಲಿಸುವ ಮೂಲಕ ದಸರಾ ನಿರ್ವಿಘ್ನವಾಗಿ ನಡೆಯುವಂತೆ ಚಾಮುಂಡಿ ತಾಯಿಯ ಬಳಿ ಪ್ರಾರ್ಥಿಸಲಾಗಿದೆ.  ಕೋವಿಡ್ ಇರುವ ಹಿನ್ನಲೆ ಸಂಪ್ರದಾಯಿಕ ಆಚರಣೆಗೆ ನಿರ್ಧರಿಸಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಮುಂಜಾಗ್ರತೆ ವಹಿಸಿದ್ದೇವೆ. ದಸರಾ ಉದ್ಘಾಟಕರು ಯಾರೆಂದು ಸಿಎಂ ಅವರೇ ನಿರ್ಧರಿಸುತ್ತಾರೆ. ಇದು ಅವರ ಪರಮೋಚ್ಛ ಅಧಿಕಾರವಾಗಿದೆ ಎಂದು ಹೇಳಿದರು.

    ನಾಗರಹೊಳೆ ವ್ಯಾಪ್ತಿಯ ಹುಣಸೂರಿನ ವೀರನಹೊಸಹಳ್ಳಿ ಅರಣ್ಯ ಪ್ರದೇಶದಲ್ಲಿ  ಆನೆಗಳ ಸ್ವಾಗತಕ್ಕೆ ಅರಣ್ಯಾಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ವಿವಿಧ ಶಿಬಿರಗಳಿಂದ ಆನೆಗಳು ವೀರನಹೊಸಹಳ್ಳಿಗೆ ಆಗಮಿಸಿದ್ದವು. ಇಂದು ಬೆಳಗ್ಗೆ 9.30ರ ಶುಭ ಮುಹೂರ್ತದಲ್ಲಿ ಗಜಪಡೆಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಮಾವುತ, ಕಾವಾಡಿಗಳ ಕುಟುಂಬದೊಂದಿಗೆ ಇಂದು ಆನೆಗಳು ಮೈಸೂರಿಗೆ ಆಗಮಿಸಲಿವೆ.

    ಈ ಬಾರಿಯೂ ಅಭಿಮನ್ಯು ಆನೆಯೇ ಅಂಬಾರಿ ಹೊರಲಿದೆ. ಮೈಸೂರಿನ ಅರಣ್ಯ ಭವನದ ಆವರಣದಲ್ಲಿ ಅಭಿಮನ್ಯು ಮತ್ತು ತಂಡ ಬೀಡು ಬಿಡಲಿವೆ. ಮೂರ್ನಾಲ್ಕು ದಿನ ನಗರ ವಾತಾವರಣಕ್ಕೆ ಹೊಂದಿಕೊಮಡ ಬಳಿಕ ಸಾಂಪ್ರದಾಯಿಕ ಪೂಜೆಯೊಂದಿಗೆ ಆನೆಗಳು ಅರಮನೆಗೆ ಎಂಟ್ರಿ ಕೊಡಲಿವೆ.



    ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಈ ಬಾರಿ 5 ಗಂಡಾನೆ, 3 ಹೆಣ್ಣಾನೆ ಸೇರಿ ಒಟ್ಟು 8 ಆನೆಗಳನ್ನು ಆಯ್ಕೆ ಮಾಡಲಾಗಿದೆ. ಅಂಬಾರಿ ಹೊರಲಿರುವ 56 ವರ್ಷದ ಅಭಿಮನ್ಯು ನೇತೃತ್ವದಲ್ಲಿ 58 ವರ್ಷದ ವಿಕ್ರಮ, 43 ವರ್ಷದ ಧನಂಜಯ, 44 ವರ್ಷದ ಕಾವೇರಿ, 48 ವರ್ಷದ ಚೈತ್ರ, 20 ವರ್ಷದ ಲಕ್ಷ್ಮಿ ಹಾಗೂ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವಕ್ಕೆ ಆಗಮಿಸುತ್ತಿರುವ 34 ವರ್ಷದ ಅಶ್ವತ್ಥಾಮ ಆನೆಗಳು ಮೈಸೂರಿಗೆ ಆಗಮಿಸಲಿವೆ.

    ಇದನ್ನೂ ಓದಿ:JEE Advanced 2021 Registrations: ಜೆಇಇ ಅಡ್ವಾನ್ಸ್​ ಪರೀಕ್ಷೆಗೆ ಹೀಗೆ ರಿಜಿಸ್ಟ್ರೇಶನ್ ಮಾಡಿ..!

    2021ನೇ ಸಾಲಿನ ಮೈಸೂರು ದಸರಾ ಅಕ್ಟೋಬರ್ 7ರಿಂದ 15ರ ತನಕ ನಡೆಯಲಿದೆ. ಇಂದು ಗಜಪಯಣ ಆರಂಭವಾಗುವ ಮೂಲಕ ದಸರಾಗೆ ಚಾಲನೆ ನೀಡಲಾಗಿದೆ. ಸೆಪ್ಟೆಂಬರ್ 16 ರಂದು ಆನೆಗಳಿಗೆ ಅರಮನೆ ಬಳಿ ಸ್ವಾಗತ ಕೋರಲಾಗುತ್ತದೆ. ಅಕ್ಟೋಬರ್ 16 ರಂದು ಗಜಪಡೆ ಬೀಳ್ಕೊಡುಗೆ ನಡೆಯಲಿದೆ.
    Published by:Latha CG
    First published: