Mysuru Dasara 2021: ಮನೆ-ಮನೆ ದಸರೆಯಲಿ ಮೈಸೂರಿನ ಗತಕಾಲದ ಕಥೆ; ಕಣ್ಮನ ಸೆಳೆಯುತ್ತಿದೆ ಬೊಂಬೆ ಪ್ರದರ್ಶನ

ಅರಮನೆಯಲ್ಲಿ ವಿವಿಧ ಗೊಂಬೆಗಳನ್ನು ಸಾಲಾಂಕೃತವಾಗಿ ಜೋಡಿಸಿ, ಪೂಜಿಸಿ ಪ್ರದರ್ಶಿಸುವುದು ಅಂದಿನಿಂದ ನಡೆದು ಬಂದ ಸಂಪ್ರದಾಯವಾಗಿದೆ. ಅದೇ ರೀತಿಯಲ್ಲಿ ಈ ಬಾರಿ ಸರಳ ದಸರಾ ಆಚರಣೆಯಲ್ಲೂ ಮೈಸೂರಿನ ನಗರದ ನಿವಾಸಿಗಳ ಮನೆಯಲ್ಲಿ ಗೊಂಬೆಗಳನ್ನು ಕೂರಿಸಲಾಗಿದೆ.

ಮನೆಯಲ್ಕಿ ಬೊಂಬೆ ಕೂರಿಸಿರುವ ದೃಶ್ಯ

ಮನೆಯಲ್ಕಿ ಬೊಂಬೆ ಕೂರಿಸಿರುವ ದೃಶ್ಯ

 • Share this:
  ಮೈಸೂರು(ಅ.13): ವಿಶ್ವವಿಖ್ಯಾತ ಮೈಸೂರು ದಸರಾ(Mysuru Dasara 2021)ದಲ್ಲಿ ಜಂಜೂ ಸವಾರಿ ಎಲ್ಲರ ಗಮನ ಸೆಳೆಯುತ್ತದೆ. ಹಾಗೆಯೇ ಮೈಸೂರಿನ(Mysuru) ಮನೆ ಮನೆಗಳಲ್ಲಿ ಬೊಂಬೆ ಪ್ರದರ್ಶನ(Bombe Exhibition) ಸಹ ಆಕರ್ಷಕವಾಗಿರುತ್ತದೆ. ನಗರದ ಮನೆಮನೆಗಳಲ್ಲಿ ಬೊಂಬೆಗಳನ್ನು ಕೂರಿಸುವುದು ಮಹಾರಾಜರ ಕಾಲದಿಂದ ಬೆಳೆದು ಬಂದ ಸಂಪ್ರದಾಯವಾಗಿದೆ. ನಗರದಲ್ಲಿ ಅರಮನೆ(Palace), ಕೋಟೆ(Port), ಪಾರಂಪರಿಕ ಕಟ್ಟಡಗಳು(Historical buildings), ಅಂಗಡಿ ಮಳಿಗೆಗಳು(Shops), ರಸ್ತೆಗಳು(Roads) ವಿದ್ಯುತ್ ದೀಪಗಳಿಂದ(Electricity) ಝಗಮಗಿಸುತ್ತಿದ್ದರೆ, ಮನೆಮನೆಗಳಲ್ಲಿ ಬಣ್ಣಬಣ್ಣದ ಬೊಂಬೆಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತವೆ.

  ಪ್ರತಿ ಮನೆಯಲ್ಲಿ ವಿವಿಧ ಬೊಂಬೆಗಳನ್ನು ಕೂರಿಸಿ ಮಹಿಳೆಯರು ಆರತಿ ಬೆಳಗುತ್ತಾರೆ. ಈ ಬೊಂಬೆಗಳು ಮನೆಗೂ ಮನಸ್ಸಿಗೂ ಮುದ ನೀಡುವುದಲ್ಲದೆ, ದಸರಾ ಹಬ್ಬದ ಸಂಭ್ರಮಕ್ಕೂ ತಮ್ಮ ಕಾಣಿಕೆ ನೀಡುತ್ತವೆ. ಆದ್ದರಿಂದ ದಸರಾದಲ್ಲಿ ಗೊಂಬೆಗಳ ಪ್ರದರ್ಶನಕ್ಕೆ ಹೆಚ್ಚಿನ ಮಹತ್ವವಿದೆ. ಮೈಸೂರಿನಲ್ಲಿ ಆಡಳಿತ ನಡೆಸಿದ ಮಹಾರಾಜರು ತಮ್ಮ ಆರಾಧನೆಯಲ್ಲಿ ಗೊಂಬೆಗೂ ಒಂದು ಮಹತ್ವದ ಸ್ಥಾನ ನೀಡಿ ನಾಡಹಬ್ಬ ನವರಾತ್ರಿಯಲ್ಲಿ ದಸರಾ ಮೆರವಣಿಗೆಯಂತೆಯೇ ಬೊಂಬೆಗೂ ವಿಶೇಷ ಸ್ಥಾನ ಕಲ್ಪಿಸಿದ್ದರು.

  ಅರಮನೆಯಲ್ಲಿ ವಿವಿಧ ಗೊಂಬೆಗಳನ್ನು ಸಾಲಾಂಕೃತವಾಗಿ ಜೋಡಿಸಿ, ಪೂಜಿಸಿ ಪ್ರದರ್ಶಿಸುವುದು ಅಂದಿನಿಂದ ನಡೆದು ಬಂದ ಸಂಪ್ರದಾಯವಾಗಿದೆ. ಅದೇ ರೀತಿಯಲ್ಲಿ ಈ ಬಾರಿ ಸರಳ ದಸರಾ ಆಚರಣೆಯಲ್ಲೂ ಮೈಸೂರಿನ ನಗರದ ನಿವಾಸಿಗಳ ಮನೆಯಲ್ಲಿ ಗೊಂಬೆಗಳನ್ನು ಕೂರಿಸಲಾಗಿದೆ. ಇವರ ಮನೆಯಲ್ಲಿ ಪೌರಾಣಿಕ ಕಥೆಯನ್ನು ಹೇಳುವಂತೆ ಗೊಂಬೆ ಪ್ರದೇಶದ ಮತ್ತು ಸಾಮಾಜಿಕ ಸಂದೇಶ ಸಾರುವ ಗೊಂಬೆ ಪ್ರದರ್ಶನ ಕಣ್ಮನ ಸೆಳೆಯುತ್ತದೆ.

  ಗೊಂಬೆ ಕೂರಿಸುವುದು ಒಂದು ಸಂಭ್ರಮವಾಗಿ ಕಂಡು ಬಂದರೂ ಅದರದ್ದೇ ಆದ ಧಾರ್ಮಿಕ ಚೌಕಟ್ಟು ಕೂಡ ಇದೆ. ರಾಮಾಯಣ, ಮಹಾಭಾರತ, ವಿಷ್ಣು ಪುರಾಣ, ಶ್ರೀಕೃಷ್ಣ ಲೀಲೆಗಳು, ದುರ್ಗಾ ಅವತಾರಗಳು ಹೀಗೆ ನಾನಾ ಕಥೆಗಳನ್ನು ಬಿಂಬಿಸುವ ರೀತಿಯಲ್ಲಿ ಗೊಂಬೆಯನ್ನು ಕೂರಿಸಲಾಗುವುದು. ಮರದ ಸ್ಟ್ಯಾಂಡ್‌ ಅಥವಾ ಸ್ಟೀಲ್‌ ಸ್ಟ್ಯಾಂಡ್‌ಗಳಲ್ಲಿ ಗೊಂಬೆಗಳನ್ನು ಕೂರಿಸಲಾಗುವುದು. ಗೊಂಬೆಗಳನ್ನು ಕೂರಿಸುವಾಗ ಮುಖ್ಯವಾಗಿ ರಾಜ, ರಾಣಿ ಎಂಬ ಪಟ್ಟದ ಗೊಂಬೆಗಳನ್ನ ಕೂರಿಸಿ ಅದಕ್ಕೆ ಪೂಜೆ ನೆರವೇರಿಸಲಾಗುತ್ತದೆ.

  ಈ ಬಾರಿ ವಿಶೇಷವಾಗಿ ಐ.ಪಿ.ಎಲ್ ಹಾಗೂ ಕೊರೊನಾ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಆಟವಾಡುವ ಒಳಾಂಗಣ ಕ್ರೀಡೆಗಳು  ಹಾಗೂ ಪ್ರತಿ ದಿನ ಮುಂಜಾನೆ ಯೋಗಾಸನ ಮಾಡುವ ಸೂರ್ಯನಮಸ್ಕಾರ ಗಳನ್ನು ಕೂರಿಸಿ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ವಿಶೇಷವಾಗಿ ಕೀನ್ಹಳ ಗೊಂಬೆಗಳು, ಗೋಕುಲ, ಮಾರುವೇಷ, ಮಾಯಕನ್ನಡಿ ಶಕುನಿ ಪಗಡೆಯಾಟ, ದ್ರೌಪದಿ ವಸ್ತ್ರಾಪಹರಣ,ಕೃಷ್ಣ ಸಂಧಾನ, ಕೃಷ್ಣ ಲೀಲೆ ಜಂಬೂ ಸವಾರಿ, ಒಳಾಂಗಣ ಆಟಗಳಾದ ಅಳಿಗುಳಿ ಮನೆ, ಲಿಡೋ, ಪಗಡೆ, ಚೌಕಾಬಾರ ಕೇರಂ, ಹಾವು-ಏಣಿ ಹಾಗೂ ಐ.ಪಿ.ಎಲ್ ಆಟದ ತುಣುಕುಗಳನ್ನು ಇರಿಸಲಾಗಿದೆ.

  ಈ ಬಾರಿ ದಸರಾ ಸರಳವಾಗಿ ಆಚರಿಸಲಾಗುತ್ತದೆ. ಆದರೆ ಪ್ರತಿ ವರ್ಷದಂತೆ ಈ ವರ್ಷವೂ ಸರಳವಾಗಿ ಸಾಂಪ್ರದಾಯಿಕವಾಗಿ ಗೊಂಬೆಗಳನ್ನು ಕೂರಿಸಲಾಗಿದೆ. ಹಾಗೂ ಈ ಬಾರಿ ವಿಶೇಷವಾಗಿ ಕೊರೊನಾ ಸಂದರ್ಭದಲ್ಲಿ ಜನರು ಮನೆಯಲ್ಲಿ ಆಟವಾಡಿದ ಒಳಾಂಗಣ ಆಟಗಳಾದ ಅಳಿಗುಳಿ ಮನೆ, ಲಿಡೋ, ಪಗಡೆ, ಚೌಕಾಬಾರ ಕೇರಂ, ಹಾವು-ಏಣಿ ಹಾಗೂ ಐ.ಪಿ.ಎಲ್ ಆಟದ ತುಣುಕು ಗಳನ್ನು ಇರಿಸಲಾಗಿದೆ. ಮುಖ್ಯವಾಗಿ ಪ್ರತಿ ದಿನ ಮುಂಜಾನೆ ಯೋಗಾಸನ ಮಾಡುವ ಸೂರ್ಯನಮಸ್ಕಾರ ಗಳನ್ನು ಕೂರಿಸಿ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

  ವರದಿ: ದಿವ್ಯೇಶ್ ಜಿ.ವಿ
  Published by:Latha CG
  First published: