Mysore Woman Death Mystery: ಗಂಡನನ್ನು ಬಿಟ್ಟು ನಾಳೆ ತವರಿಗೆ ಬರ್ತೀನಿ ಎಂದಾಕೆ ನಿಗೂಢವಾಗಿ ಸತ್ತಿದ್ದೇಕೆ?

mysore university gold medalist death: ನಾಗಪ್ರಸಾದ್  ವರದಕ್ಷಿಣೆ ಕಿರುಕುಳವಷ್ಟೆ ಅಲ್ಲದೆ ಹೆಂಡತಿ ಮೇಲೆ ಅನುಮಾನವನ್ನು ಪಡುತ್ತಿದ್ದನಂತೆ. ಈ ಬಗ್ಗೆ ಹಿಂದೆ ಎರಡ್ಮೂರು ಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತಂತೆ.‌ ಜೊತೆಗೆ ಡಿವೋರ್ಸ್ ಪಡೆಯಲು ಮುಂದಾದಾಗ ಫ್ಯಾಮಿಲಿ ಕೋರ್ಟ್ ನಲ್ಲಿ ರಾಜೀ ಮಾಡಿದ್ದರು.

ಮೃತ ಆಶಾ, ಆರೋಪಿ ನಾಗಪ್ರಸಾದ್

ಮೃತ ಆಶಾ, ಆರೋಪಿ ನಾಗಪ್ರಸಾದ್

  • Share this:
    ಮೈಸೂರು: ಆಕೆ ಪ್ರೀತಿಸಿ ಆ ಮಹಾಶಯನನ್ನ ಕೈಹಿಡಿದಿದ್ದಳು. ಆತನನ್ನ ಮದುವೆಯಾದ್ರೆ ಬದುಕು ಸುಂದರವಾಗಿರುತ್ತೆ ಅಂತ ಕನಸು ಕಂಡಿದ್ದಳು. ಆತ ಮಾತ್ರ ಅನುಮಾನದ‌ ಪಿಶಾಚಿ, ಜೊತೆಗೆ ವರದಕ್ಷಿಣೆ ಪೀಡಕ. ನಾಳೆ ಗಂಡನ ಮನೆ ಬಿಟ್ಟು ಬುರುತ್ತೇನೆ ಅಂತ ಮನೆಗೆ ಹೇಳಿದವಳು, ಅನುಮಾನಾಸ್ಪದವಾಗಿ ಸಾವನಪ್ಪಿದ್ದಾಳೆ. ಮೈಸೂರು ವಿವಿಯ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದು ಖುಷಿಯಾಗಿ ಪೋಟೊ ಪೋಸ್  ಕೊಟ್ಟಿದ್ದ ಆಶಾ ಹೆಣವಾಗಿದ್ದಾರೆ. ಮದುವೆಯಾಗಿ ಎಂಟು ವರ್ಷ ಕಳೆದಿದೆ. ಆದ್ರೆ ಓದಬೇಕು, ಓದಿ ಸಾಧಿಸಬೇಕು ಎಂಬ ಛಲದಿಂದ ಎಂಟೆಕ್ ಉನ್ನತ ವ್ಯಾಸಂಗ ಮಾಡಿ ಮೈಸೂರು ವಿವಿಯಲ್ಲಿ ಎರಡು ಚಿನ್ನದ ಪದಕವನ್ನ ಗಳಿಸಿದ್ರು.ಆದರೆ ಜೀವನದಲ್ಲಿ ಗಂಡನ ಕಿರುಕುಳದಿಂದ ಫೇಲ್ ಆಗಿದ್ದಾರೆ.

    ಹಣ ಬೇಕು, ಸೈಟ್​ ಬೇಕು ಅಂತ ಟಾರ್ಚರ್​

    ಆಶಾ ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಡೇನಹಳ್ಳಿ ನಿವಾಸಿ. ಕಳೆದ ಎಂಟು ವರ್ಷದ ಹಿಂದೆ ಮಳವಳ್ಳಿ ನಾಗಾಪ್ರಸಾದ್ ಎಂಬಾತನನ್ನು ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದಳು. ಗಂಡ ಸ್ವಂತ ಮೆಡಿಕಲ್ ಡಿಸ್ಟ್ರೀಬ್ಯೂಷನ್ ಏಜೆನ್ಸಿ ಮಾಡಿಕೊಂಡು ಕೈತುಂಬಾ ಸಂಪಾದನೆ ಮಾಡಿಕೊಂಡಿದ್ದ. ಒಂದು ಗಂಡು ಮಗು ಸಹ ಇತ್ತು. ಇಷ್ಟೆ ಸುಂದರ ಜೀವನ ನಡೆಯುತ್ತಿದೆ ಅಂದಾಗಲೆ ಪತಿಯ ಹಣ ದಾಹ ಪತ್ನಿಗೆ ಗೊತ್ತಾಗಿದೆ.‌ ವೃತ್ತಿಯಲ್ಲಿ ಅಥಿತಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪತ್ನಿಯ ಸಂಪಾದನೆಯ ಮೇಲು ಗಂಡನ ದೃಷ್ಟಿ ಬಿದ್ದಿದೆ. ಇದರ ಜೊತಗೆ ಮನೆಯಿಂದ ಹಣ ತೆಗೆದುಕೊಂಡು ಬಾ, ಸೈಟ್ ಬರೆಸಿಕೊಡು ಅಂತ ಇನ್ನಿಲ್ಲದ ಟಾರ್ಚರ್ ಕೊಡೋಕೆ ಶುರು ಮಾಡಿದ್ದಾನಂತೆ.



    ಗಂಡನನ್ನು ಬಿಡುತ್ತೇನೆ ಎಂದವಳು ಪ್ರಾಣ ಬಿಟ್ಟಿದ್ದೇಕೆ? 

    ಇದರಿಂದ ಬೇಸತ್ತು ಗಂಡನನ್ನ ಬಿಟ್ಟು ಬಂದು ಬಿಡುತ್ತೇನೆ ಅಂತ ಆಶಾ‌ ಕುಟುಂಬಸ್ಥರಿಗೆ ಹೇಳಿದ್ದಳಂತೆ. ಅಷ್ಟೆ ಅಲ್ಲದೆ ನಿನ್ನೆ ಪೋನ್ ಮಾಡಿ ಗಂಡನ ಮನೆ ಬಿಟ್ಟು ಬರುತ್ತೇನೆ, ಪಿಜಿ ನೋಡಿದ್ದೇನೆ ಅಂತ ಹೇಳಿದ್ದಳಂತೆ. ಆದ್ರೆ ಸಂಜೆ‌ ಗಂಡ ಪೋನ್ ಮಾಡಿ ಆಶಾ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಪೋನ್ ಮಾಡಿದ್ದಾನೆ. ಇದ್ರಿಂದ ಕುಟುಂಬಸ್ಥರು ಗೋಲ್ಡ್ ಮೆಡಲ್ ಪಡೆದವಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ವೀಕ್ ಮೈಡೆಡ್ ಅಲ್ಲ ಅಂತ ಗಂಡನ‌ ವಿರುದ್ಧ ಕೊಲೆ‌ ಆರೋಪ ಮಾಡುತ್ತಿದ್ದಾರೆ.

    ಇದನ್ನೂ ಓದಿ: Mother Kills her Children: ಅತ್ತೆ ಜೊತೆ ಭಯಂಕರ ಜಗಳ; ತನ್ನಿಬ್ಬರು ಗಂಡು ಮಕ್ಕಳಿಗೆ ಬೆಂಕಿಯಿಟ್ಟ ಸೊಸೆ!

    ಪತ್ನಿ ಪೀಡಕ ಪತಿ ವಿರುದ್ಧ ಪ್ರಕರಣ ದಾಖಲು 

    ಇನ್ನು ನಾಗಪ್ರಸಾದ್  ವರದಕ್ಷಿಣೆ ಕಿರುಕುಳವಷ್ಟೆ ಅಲ್ಲದೆ ಹೆಂಡತಿ ಮೇಲೆ ಅನುಮಾನವನ್ನು ಪಡುತ್ತಿದ್ದನಂತೆ. ಈ ಬಗ್ಗೆ ಹಿಂದೆ ಎರಡ್ಮೂರು ಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತಂತೆ.‌ ಜೊತೆಗೆ ಡಿವೋರ್ಸ್ ಪಡೆಯಲು ಮುಂದಾದಾದ ಫ್ಯಾಮಿಲಿ ಕೋರ್ಟ್ ನಲ್ಲಿ ರಾಜೀ ಮಾಡಿದ್ದರಂತೆ. ಆದ್ರೆ ಇದೀಗ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಗಂಡ ಹೇಳುತ್ತಾನೆ. ಆದ್ರೆ ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಅನ್ನೋದು ಆಶಾ ಕುಟುಂಬಸ್ಥರ ಮಾತಾಗಿದೆ. ಸದ್ಯ ಮೈಸೂರಿನ ವಿದ್ಯಾರಣ್ಯಪುರಂ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗಾ ನಾಗಾಪ್ರಸಾದ್ ಪೊಲೀಸರ ಅತಿಥಿಯಾಗಿದ್ದಾನೆ. ಅದೇನೆ ಇರಲಿ ಇಂತಹ ಪತ್ನಿ ಪೀಡಕರಿಗೆ ತಕ್ಕ ಶಿಕ್ಷೆಯಾಗಬೇಕಿದೆ. 

    (ವರದಿ: ದಿವ್ಯೇಶ್​.ಜಿ.ವಿ) 
    Published by:Kavya V
    First published: