Mysore University: ಬಡತನದಲ್ಲಿ ಅರಳಿದ ‘ಚಿನ್ನದ‘ ಪ್ರತಿಭೆ, ಗಾರೆ ಕೆಲಸ ಮಾಡಿಕೊಂಡು ಓದಿದ ವಿದ್ಯಾರ್ಥಿಗೆ 14 ಗೋಲ್ಡ್ ಮೆಡಲ್

ಡಾ.ಬಿ.ಆರ್ ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ವಿದ್ಯಾರ್ಥಿ ಮಹದೇವಸ್ವಾಮಿ. ಕನ್ನಡದ 4 ಸೆಮಿಸ್ಟರ್​ಗಳಲ್ಲಿ 22  ಪತ್ರಿಕೆಗಳ ಒಟ್ಟು 2200 ಅಂಕಗಳಿಗೆ 1963 ಅಂಕಗಳಿಸಿದ್ದಾರೆ.

ಮೈಸೂರು ವಿಶ್ವವಿದ್ಯಾಲಯ

ಮೈಸೂರು ವಿಶ್ವವಿದ್ಯಾಲಯ

  • Share this:
ಮೈಸೂರು: ವಿದ್ಯೆ ಯಾರ ಆಸ್ತಿಯಲ್ಲ ಕಷ್ಟಪಟ್ಟು ಓದಿದವರಿಗೆ ಸರಸ್ವತಿ ಒಲಿಯುತ್ತಾಳೆ ಅನ್ನೋ ಮಾತು ಸತ್ಯವಾಗಿದೆ. ಗಾರೆ ಕೆಲಸ ಮಾಡಿಕೊಂಡು ಓದುತ್ತಿದ್ದ ವಿದ್ಯಾರ್ಥಿ (Student)14 ಚಿನ್ನದ ಪದಕ (Gold Medal) ಪಡೆದು ಚಿನ್ನದ ಹುಡುಗ ಎಂದು ಕರೆಸಿಕೊಳ್ತಿದ್ದಾರೆ. ಗಾರೆ ಕೆಲಸ ಮಾಡಿಕೊಂಡು ಓದುತ್ತಿದ್ದ ಪಿ. ಮಹದೇವಸ್ವಾಮಿ (Mahadevaswamy) ಎಂಬವರಿಗೆ 14 ಚಿನ್ನದ ಪದಕ ಲಭಿಸಿದೆ. ಮೈಸೂರು ವಿಶ್ವವಿದ್ಯಾಲಯದ (Mysore University) ಘಟಿಕೋತ್ಸವದಲ್ಲಿ ವಿದ್ಯಾರ್ಥಿಗೆ 14 ಚಿನ್ನದ ಪದಕ ಲಭ್ಯವಾಗಿದೆ. ಜೊತೆಗೆ 3 ನಗದು ಬಹುಮಾನವನ್ನು ವಿದ್ಯಾರ್ಥಿ ಪಡೆದುಕೊಂಡಿದ್ದಾರೆ. ಪುಟ್ಟ ಬಸವಯ್ಯ, ನಾಗಮ್ಮ ದಂಪತಿ ಪುತ್ರ ಮಹದೇವ, ಚಾಮರಾಜನಗರ (Chamarajanagara) ಜಿಲ್ಲೆಯ ನಾಗವಳ್ಳಿಯ ವಿದ್ಯಾರ್ಥಿ ಎಂಎ ಕನ್ನಡದಲ್ಲಿ (Kannada) ಎಲ್ಲರು ಮೆಚ್ಚುವ ಸಾಧನೆ ಮಾಡಿದ್ದಾರೆ.

ಮಹದೇವಸ್ವಾಮಿಗೆ 14 ಚಿನ್ನದ ಪದಕ

ಬಡತನದಲ್ಲೇ ಹುಟ್ಟಿ ಬೆಳೆದು ಸಾಧನೆ ಮಾಡಿದೋ ಮಹದೇವಸ್ವಾಮಿ ಅವರ ಕುಟುಂಬ ಬೆನ್ನೆಲುಬಾಗಿ ನಿಂತಿದ. 20 ವರ್ಷದ ಹಿಂದೆ ಮಹದೇವಸ್ವಾಮಿ ತಂದೆ ಪುಟ್ಟ ಬಸವಯ್ಯ ನಿಧನ ಹೊಂದಿದ್ದರು. ಅಮ್ಮ ಕೂಲಿ ಕೆಲಸ ಮಾಡಿ ಮಗನಿಗೆ ಶಿಕ್ಷಣ ಕೊಡಿಸಿದ್ದಾರೆ. ಅಮ್ಮ, ಅಕ್ಕ, ಅಣ್ಣನ ಸಹಕಾರದಿಂದ ವಿದ್ಯಾಭ್ಯಾಸ ಮಾಡಿರುವ ಅವರು ಗಾರೆ ಕೆಲಸ, ಬಣ್ಣ ಬಳಿಯುವ ಕೆಲಸ ಮಾಡ್ತಿದ್ರು ಜೊತೆಗೆ ರಜಾ ದಿನಗಳಲ್ಲಿ  ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದರು.

ಬಡತನದಲ್ಲಿ ಅರಳಿದ ‘ಚಿನ್ನದ' ಪ್ರತಿಭೆ

ಓದಿನ ಜೊತೆಗೆ ಗಾರೆ ಕೆಲಸ ಮಾಡ್ತಿದ್ದ ಮಹದೇವಸ್ವಾಮಿ, ಹೆಚ್ಚಾಗಿ ರಾತ್ರಿ ಹಾಗೂ ಬೆಳಗಿನ ಜಾವ ಓದುತ್ತಿದ್ದರಂತೆ. ಡಾ.ಬಿ.ಆರ್ ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ವಿದ್ಯಾರ್ಥಿ ಮಹದೇವಸ್ವಾಮಿ. ಕನ್ನಡದ 4 ಸೆಮಿಸ್ಟರ್​ಗಳಲ್ಲಿ 22  ಪತ್ರಿಕೆಗಳ ಒಟ್ಟು 2200 ಅಂಕಗಳಿಗೆ 1963 ಅಂಕಗಳಿಸಿದ್ದಾರೆ.

ಮಹದೇವಸ್ವಾಮಿ ಸಾಧನೆ ಅಂಬೇಡ್ಕರ್​ ಸ್ಪೂರ್ತಿ

ಬಡತನದಲ್ಲಿ ಅರಳಿದ ಚಿನ್ನದಂತಾ ಪ್ರತಿಭೆ ಮಹದೇವಸ್ವಾಮಿಗೆ ಮಾ.22 ರಂದು ವಿವಿ ಘಟಿಕೋತ್ಸವದಲ್ಲಿ 14 ಚಿನ್ನದ ಪದಕ ಕೊಟ್ಟು ಗೌರವಿಸಲಾಗಿದೆ. ಕನ್ನಡ ಸಾಹಿತ್ಯದಲ್ಲಿ ಪಿಎಚ್‌ಡಿ ಮಾಡಬೇಕು, ಐಎಎಸ್ ಹಾಗೂ ಕೆಎ‌ಎಸ್ ಮಾಡಬೇಕೆಂಬ ಕನಸು ಇರುವುದಾಗಿ ತಿಳಿಸಿದ್ದಾರೆ. ಡಾ.ಬಿ.ಆರ್ ಅಂಬೇಡ್ಕರ್ ಸ್ಪೂರ್ತಿಯಿಂದ ವಿದ್ಯಾಭ್ಯಾಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Mysuru: ಪ್ರೀತಿಸಿ ಮದುವೆಯಾದ್ರು, ಹುಟ್ಟುವ ಮಗುವಿನ ಜಾತಿಗಾಗಿ ಜಗಳ; ಕೊನೆಗೆ ಗರ್ಭಿಣಿ ಮಡದಿಯನ್ನ ಉಸಿರುಗಟ್ಟಿಸಿ ಕೊಂದ

10 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ

ಮೈಸೂರು ವಿವಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ತಂದೆ ತಾಯಿ ಇಲ್ಲದ ವಿದ್ಯಾರ್ಥಿನಿ ಒಬ್ಬರು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿನಿ ತೇಜಸ್ವಿನಿ ಎಂಬುವರಿಗೆ 9 ಚಿನ್ನದ ಪದಕ 10 ನಗದು ಬಹುಮಾನ ಲಭಿಸಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನ ಗ್ರಾಮ ಸತ್ತೆಗಾಲದ ವಿದ್ಯಾರ್ಥಿನಿ ಈ ಸಾಧನೆ ಮಾಡಿದ್ದಾರೆ. ಮಹಾರಾಣಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ತಂದೆ ವೆಂಕಟೇಶ ಹಾಗೂ ತಾಯಿ ನಾಗಮ್ಮ ವಿದ್ಯಾರ್ಥಿನಿ ಚಿಕ್ಕ ವಯಸ್ಸಿನಿನಲ್ಲಿ ಇರುವಾಗಲೇ ಸಾವನ್ನಪ್ಪಿದ್ದರು. ಆದರೂ ಇದರಿಂದ ಧೃತಿಗೆಡದ ವಿದ್ಯಾರ್ಥಿನಿ ಈ ಸಾಧನೆ ಮಾಡಿದ್ದಾರೆ.

19 ಚಿನ್ನದ ಪದಕ ಪಡೆದ ಭಾವನಾ

ಮೈಸೂರು ವಿವಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಒಬ್ಬರಿಗೆ 19 ಚಿನ್ನದ ಪದಕ 2 ನಗದು ಬಹುಮಾನ ಲಭಿಸಿದೆ. ಕೆಮಿಸ್ಟ್ರಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಭಾವನ ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ಮಹದೇವ ಭಾಗ್ಯ ದಂಪತಿ ಪುತ್ರಿ ಮೈಸೂರಿನ ರಾಜರಾಜೇಶ್ವರಿ ನಗರದ ನಿವಾಸಿ ಆಗಿದ್ದಾರೆ.

ಇದನ್ನೂ ಓದಿ: Mekedatu Project: ಕ್ಯಾತೆ ತೆಗೆಯಲು ತಮಿಳುನಾಡಿನಿಂದ ಕಾನೂನು ಬಾಹಿರ ನಿರ್ಣಯ: ಸಿದ್ದರಾಮಯ್ಯ

ಪಾರ್ವತಮ್ಮ, ಪುನೀತ್​ ಹೆಸರಲ್ಲಿ ಪದಕ

ಮುಂದಿನ ವರ್ಷದಿಂದ ಪಾರ್ವತಮ್ಮ ರಾಜ್‌ಕುಮಾರ್, ಪುನೀತ್ ಹೆಸರಲ್ಲಿ ಬಂಗಾರದ ಪದಕ ಪ್ರದಾನ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಮೈಸೂರಿನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಘೋಷಣೆ ಮಾಡಿದ್ದಾರೆ. ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ವಿಭಾಗಕ್ಕೆ ಪಾರ್ವತಮ್ಮ ಪದಕ, ಲಲಿತ ಕಲೆ ವಿಭಾಗಕ್ಕೆ ಪುನೀತ್ ಹೆಸರಿನಲ್ಲಿ ಪದಕ ಪ್ರದಾನ ಮಾಡಲಾಗುವುದು. ಮುಂದಿನ ವರ್ಷದಿಂದ ಪದಕ ಪ್ರದಾನ ಮಾಡಲಾಗುವುದು ಎಂದು ಅಶ್ವಿನಿ ಪುನೀತ್ ರಾಜ್​ಕುಮಾರ್ ತಿಳಿಸಿದ್ದಾರೆ.
Published by:Pavana HS
First published: