ಮೈಸೂರು (ಮೇ. 31 ): ರಾಜ್ಯವನ್ನು ಕಾಡುತ್ತಿರುವ ಕೊರೋನಾ ಸೋಂಕಿನಿಂದ ಒಂದು ಕಡೆ ಜನ ಸಂಕಷ್ಟಕ್ಕೆ ಒಳಗಾಗಿದ್ದರೆ, ಮತ್ತೊಂದು ಕಡೆ ಸೋಂಕು ನಿಯಂತ್ರಣಕ್ಕೆ ಹಾಕಿರುವ ಲಾಕ್ಡೌನ್ ನಿಂದಾಗಿ ಸಾಮಾನ್ಯ ಜನರು ಒದ್ದಾಡುವಂತೆ ಆಗಿದೆ. ಇನ್ನೊಬ್ಬ ತಂದೆ ಕೂಡ ಲಾಕ್ಡೌನ್ನಿಂದಾಗಿ ಮಗನಿಗೆ ಮಾತ್ರೆ ತರಲು ಒದ್ದಾಡಿರುವ ಘಟನೆ ನಡೆದಿದೆ, ರಾಜ್ಯದೆಲ್ಲೆಡೆ ವಿಧಿಸಿರುವ ಲಾಕ್ಡೌನ್ನಿಂದ ಮಗನಿಗೆ ಔಷಧಿ ತರಲು ಪರಿಪಾಡಲು ಪಟ್ಟ ತಂದೆಯೊಬ್ಬರು ಬರೋಬ್ಬರು 280 ಕಿ.ಮೀ ಸೈಕಲ್ ತುಳಿದು ಮಾತ್ರೆ ತಂದಿರುವ ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದೆ. ತಮ್ಮ ವಿಶೇಷ ಚೇತನ ಮಗನ ಚಿಕಿತ್ಸೆಗಾಗಿ ಅವರು ಮೈಸೂರಿನ ಟಿ ನರಸೀಪುರದಿಂದ ಬೆಂಗಳೂರಿಗೆ ಚಿಕಿತ್ಸೆಗಾಗಿ ಸೈಕಲ್ನಲ್ಲಿಯೇ ಬಂದಿದ್ದಾರೆ. ಸುಮಾರು 280 ಕಿ.ಮೀಗಳ ಅಂತರವನ್ನು ಸೈಕಲ್ನಲ್ಲಿ ಕ್ರಮಿಸಿದ್ದಾರೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಗಾಣಿಗನಕೊಪ್ಪಲು ಗ್ರಾಮದ ಆನಂದ್ ಮನಗ ಚಿಕಿತ್ಸೆಗಾಗಿ ಸತತ ಮೂರು ದಿನಗಳ ಕಾಲ ಸೈಕಲ್ ತುಳಿದಿದ್ದಾರೆ.
ಗಾರೆ ಕೆಲಸ ನಿರ್ವಹಿಸುತ್ತಿರುವ ಆನಂದ್ ಅವರ ಮಗ ಮಾನಸಿಕ ವಿಶೇಷ ಚೇತನನಾಗಿದ್ದಾರೆ. ಆತನಿಗೆ ಕಳೆದ 10 ವರ್ಷಗಳಿಂದ ಮಾತ್ರೆಗಳನ್ನು ನೀಡಲಾಗುತ್ತಿದೆ. ಅಲ್ಲದೇ, ಬೆಂಗಳೂರಿನ ನಿಮಾನ್ಸ್ನಲ್ಲಿ ಮಗನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಲಾಕ್ಡೌನ್ ಸಂದರ್ಭದಲ್ಲಿ ಮಗನ ಚಿಕಿತ್ಸೆಗೆ ಬೇಕಾದ ಮಾತ್ರೆಗಳು ಮುಗಿದಿದೆ, ಇದನ್ನು ನೀಡಲೇ ಬೇಕಾದ ಅನಿವಾರ್ಯತೆ ಕೂಡ ಎದುರಾಗಿತ್ತು. ಈ ಮಾತ್ರೆ ಸಂಬಂಧ ಸಾಕಷ್ಟು ಹುಡುಕಾಟ ನಡೆಸಿದರೂ ಮಾತ್ರೆಗಳು ಬೇರೆ ಎಲ್ಲೂ ಸಿಗದ ಹಿನ್ನಲೆ ಅವರು ಬೆಂಗಳೂರಿನ ನಿಮಾನ್ಸ್ಗೆ ಬರಬೇಕಾಗಿದೆ. ಒಂದು ವೇಳೆ ಒಮ್ಮೆ ಈ ಮಾತ್ರೆಗಳನ್ನು ನೀಡುವುದನ್ನು ಒಮ್ಮೆ ತಪ್ಪಿಸಿದರೂ ಅಥವಾ ವಿಳಂಬ ಮಾಡಿದರೂ ಇದರಿಂದ ತೊಂದರೆಯಾಗಲಿದೆ. ಅಲ್ಲದೇ, ಮತ್ತೆ, ಮಗ ಗುಣಮುಖ ಆಗಲು 18 ವರ್ಷಗಳ ಕಾಲ ಈ ಮಾತ್ರೆಯನ್ನು ಮಗನಿಗೆ ನೀಡಬೇಕಾಗುತ್ತದೆ. ಈ ಹಿನ್ನಲೆ ಇವರು ಈ ಸಾಹಸಕ್ಕೆ ಮುಂದಾಗಿದ್ದಾರೆ.
ಮಗನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದ ಆನಂದ್ ಲಾಕ್ಡೌನ್ನ ಆರ್ಥಿಕ ಸಂಕಷ್ಟದ ನಡುವೆಯೂ ಮಗನ ಚಿಕಿತ್ಸೆಗೆ ಬೆಂಗಳೂರಿಗೆ ಹೊರಡಲು ಸಿದ್ಧವಾಗಿದ್ದರು. ಇದಕ್ಕಾಗಿ ಆಟೋ, ವ್ಯಾನ್ ಸೇರಿದಂತೆ ಇತರೆ ವಾಹನಗಳನ್ನು ಬಾಡಿಗೆಗೆ ಕೇಳಿ ನೋಡಿದ್ದಾರೆ. ಆದರೆ, ಯಾವುದೇ, ವಾಹನಗಳು ಬಾಡಿಗೆಗೆ ಸಿಕಿಲ್ಲ. ಅಲ್ಲದೇ, ತಮ್ಮ ಪರಿಚಯಸ್ಥರಲ್ಲಿ ಕೂಡ ಬೈಕ್ ನೀಡುವಂತೆ ಸಹಾಯ ಕೋರಿದರು. ಲಾಕ್ಡೌನ್ ಭೀತಿ ಬೈಕ್ ಸೀಜ್ ಆದರೆ, ಎಂದು ಅವರ ಸ್ನೇಹಿತರು ಹಿಂದೆ ಮುಂದೆ ನೋಡಿದ್ದಾರೆ.
ಇದನ್ನು ಓದಿ: ಲಾಕ್ಡೌನ್ ಎಫೆಕ್ಟ್; ವಾಹನ ಸಿಗದೆ ತಳ್ಳುವ ಗಾಡಿಯಲ್ಲಿ ಐದು ಕಿ.ಮೀ ನಡೆದು ಪತಿಯನ್ನು ಆಸ್ಪತ್ರೆಗೆ ಕರೆತಂದ ಮಹಿಳೆ
ಕಡೆಗೆ ಏನು ಮಾಡುವುದ ಎಂದು ದಿಕ್ಕ ತೋಚದೆ ಅವರು ಮಗನಿಗಾಗಿ ತಮ್ಮ ಗ್ರಾಮದಿಂದ ಬೆಂಗಳೂರಿಗೆ ಸೈಕಲ್ನಲ್ಲಿಯೇ ಬಂದು ಔಷಧಿ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಕಳೆದ ಭಾನುವಾರ ಗ್ರಾಮದಿಂದ ತೆರಳಿ ಕನಕಪುರದಲ್ಲಿ ತಂಗಿದ್ದರು. ಅಲ್ಲಿಂದ ನಂತರ ಅಲ್ಲಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹೋಗಿ ಮಾತ್ರೆ ಪಡೆದಿದ್ದಾರೆ. ಆನಂದ್ ನಿತ್ಯ 70 ಕಿಲೋಮೀಟರ್ ಸೈಕಲ್ ತುಳಿದಿದ್ದಾಗಿ ಆನಂದ್ ತಿಳಿಸಿದ್ದಾರೆ.
ಗದಗದಲ್ಲೂ ಕೂಡ ಮಹಿಳೆಯೊಬ್ಬರು ಲಾಕ್ಡೌನ್ ಸಂಕಷ್ಟದಿಂದ ವಾಹನಗಳು ಸಿಗದೇ ಗಂಡನ ಚಿಕಿತ್ಸೆಗೆ ತಳ್ಳುವ ಗಾಡಿ ಮೂಲಕ ಆತನನ್ನು ಆಸ್ಪತ್ರೆಗೆ ಕರೆತಂದ ಘಟನೆ ಕಳೆದ ಮೂರು ದಿನಗಳ ಹಿಂದೆ ನಡೆದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ