Mysuru :ಆಸ್ತಿಗಾಗಿ ಮಾನವೀಯತೆ ಮರತೆ ಸಂಬಂಧಿಕರು : ಆಸ್ತಿಗಾಗಿ ಶವದ ಹೆಬ್ಬೆಟ್ಟು ಒತ್ತಿಸಿಕೊಂಡ ದುರುಳರು

Thumb Impression Incident : ಜಯಮ್ಮ ಶವ ಸಂಸ್ಕಾರಕ್ಕೆ ಬಂದ ಅವರ ಅಣ್ಣನ ಮಗ ಸುರೇಶ್ ಎಂಬಾತ, ಸುಮಾರು ಏಳರಿಂದ ಎಂಟು ಕಾಗದ ಪತ್ರಗಳಿಗೆ ಜಯಮ್ಮ ಅವರ ಶವದ ಹೆಬ್ಬೆರಳಿನ ಮುದ್ರೆಯನ್ನೊತ್ತಿಸಿಕೊಂಡಿದ್ದಾರೆ..

ಆಸ್ತಿ

ಆಸ್ತಿ

  • Share this:
    ಹುಟ್ಟಿದಾಗ ಇದ್ದ ಸ್ನೇಹ ಸಂಬಂಧ (Friendship)ಮಧುರ ಭಾವನೆಗಳು, ಬೆಳೆಯುತ್ತಾ ಬೆಳೆಯುತ್ತಾ ಕೇವಲ ಲಾಭದಲ್ಲಿ(Profit) ಯೋಚನೆ (Thinking)ಮಾಡುವಂತೆ ಬದಲಾಗುತ್ತದೆ.. ನಾನು ನಮ್ಮವರು ಎಂಬ ಭಾವನೆ ಹೋಗಿ ನಾನು ನನ್ನದು ಎಂಬ ದುರಾಸೆ(Greed) ಮೂಡುತ್ತದೆ. ಸಂಬಂಧಗಳು(Relationships) ಬೆಲೆ ಕಳೆದುಕೊಂಡು ಆಸ್ತಿ ಎಂಬ ಭೂತ ಎಲ್ಲರನ್ನು ಬೆನ್ನತ್ತುತ್ತದೆ. ಹೀಗಾಗಿ ಅನೇಕ ಕೊಲೆ ಸುಲಿಗೆಗಳು ರಕ್ತ ಸಂಬಂಧ ಎಂಬುದನ್ನು ಮರೆತು ಪ್ರಸ್ತುತ ಸಮಾಜದಲ್ಲಿ ಪ್ರತಿನಿತ್ಯ ನಡೆಯುತ್ತಲೇ ಇವೆ.. ಹುಟ್ಟಿದವರು ಎಂಬುದನ್ನ ಕಾಣದೇ ಮನವಿಯತೆ ಹಾಗೂ ಪ್ರೀತಿ ಎಂಬುದನ್ನು ಮರೆತು ಅಮಾನುಷವಾಗಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಭಯಾನಕ ಘಟನೆಗಳು ಕಣ್ಮುಂದೆ ಇವೆ..ಅದೇ ರೀತಿ ಈಗ ಪರರ ವಸ್ತು ಪಾಷಾಣ ಎಂಬ ಅರಿವಿದ್ದರೂ ಆಸ್ತಿ ಆಸೆಗಾಗಿ, ಶವದ ಕೈಯಿಂದ ಹೆಬ್ಬೆಟ್ಟು ಒತ್ತಿಸಿಕೊಂಡಿರುವ ಅಮಾನವೀಯ ಘಟನೆಯೊಂದು ನಡೆದಿದೆ..

    ಆಸ್ತಿಗಾಗಿ ಶವದ ಕೈಯಿಂದ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿಗಳು

    ಸಾಂಸ್ಕೃತಿಕ ನಗರಿ ಮೈಸೂರಿನ ಶ್ರೀರಾಂಪುರದಲ್ಲಿ ಜಯಮ್ಮ ಎಂಬ ವೃದ್ದೆ ಇತ್ತೀಚಿಗೆ ವಯೋಸಹಜ ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದರು.. ಜಯಮ್ಮ ಅವರ ಶವ ಸಂಸ್ಕಾರ ಮುಗಿಯುವ ಮೊದಲೇ, ಸಂಬಂಧಿಗಳು ಆಸ್ತಿಯ ಆಸೆಗಾಗಿ, ಜಯಮ್ಮ ಶವದ ಹೆಬ್ಬೆರಳಿನ ಮುದ್ರೆಯನ್ನು ಖಾಲಿ ಕಾಗದ ಪತ್ರಗಳಿಗೆ ಒತ್ತಿಸಿಕೊಂಡಿರುವ ಅಮಾನುಷ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದ್ದು, ಸಂಬಂಧಿಕರ ಆಸ್ತಿ ಆಸೆಯ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ..

    ಇದನ್ನೂ ಓದಿ :ಶತಮಾನದ ಸಂಭ್ರಮದಲ್ಲಿ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್

    ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ ಜಯಮ್ಮ..

    ಕಳೆದ ನವೆಂಬರ್ 17ರಂದು ಅನಾರೋಗ್ಯದಿಂದ ವೃದ್ಧರಾದ ಜಯಮ್ಮ ಅವರಿಗೆ ಮಕ್ಕಳಿರಲಿಲ್ಲ.. ಹಳ ಇಂದೇಯೆ ಜಯಮ್ಮ ಅವರ ಪತಿ ಮೃತಪಟ್ಟಿದ್ದರು.. ಆಗಿ ಇವರಿಗೆ ಇದ್ದ 14 ಎಕರೆ ಜಮೀನು, ಹಾಗೂ ಸ್ವಲ್ಪ ಆಸ್ತಿಪಾಸ್ತಿಯನ್ನು ಅವರ ಸಂಬಂಧಿಕರು ನೋಡಿಕೊಳ್ಳುತ್ತಿದ್ದರು. ಮಕ್ಕಳು ಹಾಗೂ ಕುಟುಂಬದವರು ಇಲ್ಲದ ಕಾರಣ ಒಂಟಿಯಾಗಿ ವಾಸಮಾಡುತ್ತಿದ್ದ ಜಯಮ್ಮ ಹಾಸಿಗೆ ಹಿಡಿದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಜಯಮ್ಮ ಶವ ಸಂಸ್ಕಾರಕ್ಕೆ ಬಂದ ಅವರ ಅಣ್ಣನ ಮಗ ಸುರೇಶ್ ಎಂಬಾತ, ಸುಮಾರು ಏಳರಿಂದ ಎಂಟು ಕಾಗದ ಪತ್ರಗಳಿಗೆ ಜಯಮ್ಮ ಅವರ ಶವದ ಹೆಬ್ಬೆರಳಿನ ಮುದ್ರೆಯನ್ನೊತ್ತಿಸಿಕೊಂಡಿದ್ದಾರೆ.. ವೇಳೆ ಶವಸಂಸ್ಕಾರಕ್ಕೆ ಬಂದಿದ್ದ ಸಂಬಂಧಿಗಳು ಆಕ್ಷೇಪ ವ್ಯಕ್ತಪಡಿಸಿದ್ರು ಅವರ ಮಾತುಗಳನ್ನು ಕೇಳದೆ ಸುರೇಶ್ ಈ ಕೃತ್ಯ ಎಸಗಿದ್ದಾನೆ. ಹೀಗಾಗಿ ಸಂಸ್ಕಾರಕ್ಕೆ ಬಂದಿದ್ದ ಸಂಬಂಧಿಗಳು ವಿಡಿಯೋ ಮಾಡಿಕೊಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..

    ಸುರೇಶ್ ವಿರುದ್ಧ ಪ್ರಕರಣ ದಾಖಲು..

    ಇನ್ನು ವಿಡಿಯೋ ವೈರಲ್ ಆದ ಬಳಿಕ ಹಾಗೂ ಸಂಬಂಧಿಗಳು ದೂರು ನೀಡಿದ ಬಳಿಕ ಜಯಮ್ಮ ಶವದಿಂದ ಹೆಬ್ಬೆಟ್ಟಿನ ಗುರುತು ಪಡೆದುಕೊಂಡ ಅಕ್ಕನ ಮಗ ಸುರೇಶ್ ಎಂಬಾತನ ವಿರುದ್ಧ ಇಲ್ಲಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಐ‍‍ಪಿಸಿ ಸೆಕ್ಷನ್ 420, 467, 511 ಅನ್ವಯ ಭಾನುವಾರ ಪ್ರಕರಣ ದಾಖಲಾಗಿದೆ. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸುರೇಶ್ ತಲೆಮರೆಸಿಕೊಂಡಿದ್ದಾನೆ..

    ಇದನ್ನೂ ಓದಿ :Indore ನಗರಕ್ಕೆ ದೇಶದ ಅತ್ಯಂತ Cleanest City ಎಂಬ ಬಿರುದು; ಈ ವರ್ಷ ಮೈಸೂರು ಎಷ್ಟನೇ ಸ್ಥಾನದಲ್ಲಿದೆ?

    ಇನ್ನು ಮೃತ ಜಯಮ್ಮ ಅವರಿಗೆ ಪಿತ್ರಾರ್ಜಿತ ಆಸ್ತಿ ಇತ್ತು.ಆಸ್ತಿಯ ಮೇಲೆ ಜಯಮ್ಮ ಅಣ್ಣನ ಮಗ ಹಾಗೂ ಆತನ ಅಕ್ಕತಂಗಿಯರು ಕಣ್ಣು ಹಾಕಿದರು.. ಇದನ್ನ ಪಡೆದುಕೊಳ್ಳಲು ಇವರ ಮಧ್ಯೆ ಸ್ಪರ್ಧೆ ಇದ್ದಿದ್ದರಿಂದ,ಸುರೇಶ್ ಈ ರೀತಿಯ ಕೃತ್ಯ ಎಸಗಿದ್ದಾನೆ. ಅಲ್ಲದೆ ಆಸ್ತಿ ವಿವಾದವನ್ನು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬೇಕೇ ವಿನಹಾ ಶವದ ಹೆಬ್ಬೆಟ್ಟು ಹಾಕಿಕೊಳ್ಳುವುದು ಕಾನೂನು ಪ್ರಕಾರ ತಪ್ಪು, ಮಾತ್ರವಲ್ಲ ತೀರಾ ಅಮಾನವೀಯ. ಘಟನೆ ನಡೆದು ಸಾಕಷ್ಟು ದಿನಗಳಾದರೂ ನನ್ನನ್ನು ಈ ಸನ್ನಿವೇಶ ಕಾಡುತ್ತಿತ್ತು’ ಎಂದು ಸಂಬಂಧಿಕರೊಬ್ಬರು ತಿಳಿಸಿದರು.
    Published by:ranjumbkgowda1 ranjumbkgowda1
    First published: