Mysore Crime: ಜಡ್ಜ್ ಆಗಬೇಕು ಎಂದು ಕನಸು ಕಂಡವಳು ಸೇರಿದ್ದು ಮಸಣಕ್ಕೆ

ಜಡ್ಜ್​ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಈಕೆ ತನ್ನ ಅಣ್ಣನನ್ನು ಮೊಬೈಲ್​ ಆಸೆಗೆ ಮೂವರು  ಕೊಲೆ ಮಾಡಿದಾಗ ಆ ಕೇಸ್​ ಅನ್ನು ತಾನೇ ವಾದಿಸಿ, ಆರೋಪಿಗಳಿಗೆ ಶಿಕ್ಷಿ ಕೊಡಿಸಿದ್ದಳು ಕೂಡ.

ಪ್ರದೀಪ್​ - ಚಂದ್ರಕಲಾ

ಪ್ರದೀಪ್​ - ಚಂದ್ರಕಲಾ

  • Share this:
ಮೈಸೂರು (ಮಾ. 12):  ಲಾ ಓದಿ ವಕೀಲೆ ಆಗಿದ್ದ ಆಕೆಗಿದ್ದ ಕನಸು ಎಂದರೆ ನ್ಯಾಯಾಧೀಶೆಯಾಗಿ (Judge) ಜನರಿಗೆ ನ್ಯಾಯ ಒದಗಿಸಬೇಕು ಎಂದು. ಆದರೆ, ಆಕೆಗೆ ಬದುಕಿನಲ್ಲಿ ಅನ್ಯಾಯವಾಗಿ ಹೋಗಿದೆ. ವಕೀಲೆಯಾಗಿ (Lawyer) ಸಾವಿರ ಕನಸು ಕಂಡಿದ್ದ ಆಕೆ ಇದೀಗ ವರದಕ್ಷಿಣೆ (Dowry) ಭೂತಕ್ಕೆ ಬಲಿಯಾಗಿ ಮಸಣ ಸೇರುವಂತೆ ಆಗಿದೆ. ಮೈಸೂರು ನ್ಯಾಯಾಲಯದಲ್ಲಿ (Mysore Court) ವಕೀಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಕಲಾ ಸಾವನ್ನಪ್ಪಿದವರರು. ಜಡ್ಜ್​ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಈಕೆ ತನ್ನ ಅಣ್ಣನನ್ನು ಮೊಬೈಲ್​ ಆಸೆಗೆ ಮೂವರು  ಕೊಲೆ ಮಾಡಿದಾಗ ಆ ಕೇಸ್​ ಅನ್ನು ತಾನೇ ವಾದಿಸಿ, ಆರೋಪಿಗಳಿಗೆ ಶಿಕ್ಷಿ ಕೊಡಿಸಿದ್ದಳು ಕೂಡ. ಆದರೆ, ಇದೀಗ ಅವರ ಸಾವಿಗೆ ನ್ಯಾಯ ಕೊಡಿಸುವವರು ಯಾರು ಎಂಬ ಪ್ರಶ್ನೆ ಮೂಡಿದೆ.

ಏನಿದು ಘಟನೆ

ಸಾಂಸ್ಕೃತಿಕ ನಗರಿ ಜಿಲ್ಲೆಯಲ್ಲಿ ವಕೀಲೆಯಾಗಿ ಕೆಲಸ ಮಾಡುತ್ತಿದ್ದ ಚಂದ್ರಕಲಾ, ಪ್ರದೀಪ್​ ಎಂಬ ವ್ಯಕ್ತಿಯನ್ನು ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈಗಾಗಲೇ ಮದುವೆಯಾಗಿ ಒಂದೇ ತಿಂಗಳಿಗೆ ಹೆಂಡತಿ ತೊರೆದಿದ್ದ ಪ್ರದೀಪ್​ ಮ್ಯಾಟ್ರಿಮೋನಿ ಮೂಲಕ ಪ್ರದೀಪನಿಗೆ ಪರಿಚಯವಾಗಿದ್ದಳು. ಕಡೆಗೆ ಆತನನ್ನೇ ಮದುವೆ ಆಗಲಿ ನಿರ್ಧರಿಸಿದ್ದಳು. ಮನೆಯವರು ಕಡೆಗೆ ಈ ಮದುವೆ ಒಪ್ಪಿದ್ದರು. ಇವರ ಇಬ್ಬರ ದಾಂಪತ್ಯದ ಕುರುಹಾಗಿ ಒಂದು ವರ್ಷದ ಮಗು ಕೂಡ ಇದೆ..

ಚೈನ್ನೈನಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರದೀಪ್​ ಕೋವಿಡ್​ ಬಳಿಕ ಕೆಲಸ ತೊರೆದು ಬಂದು ಮೈಸೂರಿನಲ್ಲಿ ಹೆಂಡತಿ ಜೊತೆಗೆ ವಾಸವಾಗಿದ್ದ  ಕೆಲಸ ಇಲ್ಲದೇ ಆದಾಯ ಕಾಣದ ಪ್ರದೀಪ್​ ತಂದೆ ಆಸ್ತಿಯಲ್ಲಿ ಪಾಲು ಕೇಳುವಂತೆ ಚಂದ್ರಕಲಾಗೆ ಪೀಡಿಸುತ್ತಿದ ಎನ್ನುವ ಆರೋಪ ಕೂಡ ಇದೆ. ಅಷ್ಟೇ ಅಲ್ಲದೇ ಹೆಂಡತಿಗೆ ಸದಾ ಪೀಡಿಸುತ್ತಿದ್ದ ಪ್ರದೀಪ್ ಆಕೆಯನನ್ನು ಓ ಮೊದಲು ಕೂಡ ಕೊಲೆ ಮಾಡಲು ಯತ್ನಿಸಿದ್ದ ಎಂಬ ಆರೋಪ ಕೂಡ ಇದೆ.

ಇದನ್ನು ಓದಿ: ಮಲಗಿದ್ದ ಪತ್ನಿಯನ್ನ ಕೊಂದು, ನೇಣಿಗೆ ಶರಣಾದ ಗಂಡ

ಹೆಂಡತಿ ಬಗ್ಗೆ ಅನುಮಾನವೇ ಕಾರಣವಾಯ್ತಾ ಸಾವಿಗೆ

ಸದಾ ಹೆಂಡತಿ ವಿಷಯದಲ್ಲಿ ಅನುಮಾನ ವ್ಯಕ್ತಪಡಿಸುತ್ತಿದ್ದ. ಜೊತೆಗೆ ವರದಕ್ಷಿಣೆ ತೆಗೆದುಕೊಂಡು ಹಿಂಸಿಸುತ್ತಿದ್ದ ಎಂದು ಚಂದ್ರಕಲಾ ತನ್ನ ತವರಿನಲ್ಲಿ ತಿಳಿಸಿದ್ದಾಳೆ. ಈ ನಡುವೆ ಚಂದ್ರಕಲಾ ಪೋಷಕರು ನಿನ್ನೆ ಮಗಳನ್ನು ನೋಡಿ ಹೋಗಲು ಗದಗದಿಂದ ನಿನ್ನೆ ತಡರಾತ್ರಿ ಮೈಸೂರಿಗೆ ಬಂದಿದ್ದರು. ಬೆಳಗ್ಗೆ ಇನ್ನೇನು ಮಗಳನ್ನು ನೋಡಲು ಹೋಗೋಣ ಎಂದು ಕೊಂಡವರಿಗೆ ಮಗಳು ಆತ್ಮಹತ್ಯೆ ಮಾಡಿಕೊಂಡಿದದ್ದಾಳೆ ಎಂದು ಪ್ರದೀಪ ಸುದ್ದಿ ತಿಳಿಸಿದ್ದಾರೆ. ತಕ್ಷಣವೇ ಬೆಳಗಿನ ಜಾವ 4ಕ್ಕೆ ಮಗಳ ಮೆಗೆ ದೌಡಾಯಿಸಿ ಖಾಸಗಿ ಆಸ್ಪತ್ರೆಗೆ ಆಕೆಯನ್ನು ಸಾಗಿಸಿದ್ದಾರೆ. ಆದರೆ, ಅಷ್ಟರಲ್ಲಾಗಲಿ ಆಕೆ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನು ಓದಿ: ಯಾವುದೇ ಮೈತ್ರಿ ಇಲ್ಲ; ಪಕ್ಷ ಉಳಿಸಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ; HD Devegowda

ಮಗಳ ಸಾವಿಗೆ ಪ್ರದೀಪನ ಅನುಮಾನ ಹಾಗೂ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಸದ್ಯ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದು,  ತನಿಖೆಗೆ ಮುಂದಾಗಿದ್ದಾರೆ.

ಗದಗದಲ್ಲಿ ಹೆಂಡತಿ ಕೊಂದ ಆತ್ಮಹತ್ಯೆ ಮಾಡಿಕೊಂಡ ಗಂಡ

ಮಲಗಿದ್ದ ಪತ್ನಿಗೆ ರಾಡ್ ನಿಂದ ಹೊಡೆದು, ಪತಿ ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ಧಾರವಾಡ ಹೊರವಲಯದ ಗಣೇಶ ನಗರ ದಲ್ಲಿ ನಡೆದಿದೆ. ಚಟ್ಟು ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ. ಮನಿಶಾ ಕೊಲೆಯಾದ ಪತ್ನಿ. ಮೃತ ಚಟ್ಟು ಗೋವಾದಲ್ಲಿ ಪೈಪ್ ಲೈನ್ ಕೆಲಸ ಮಾಡಿಕೊಂಡಿದ್ದನು. ಕಳೆದ ಕೆಲ ದಿನಗಳ ಹಿಂದೆ ಧಾರವಾಡಕ್ಕೆ ಬಂದಿದ್ದನು. ಪತ್ನಿ ಮನಿಶಾ ತವರು ಮನೆ ಸಹ ಅದೇ ಬಡವಾಣೆಯಲ್ಲಿದೆ. ತವರಿನಲ್ಲಿದ್ದ ಮನಿಶಾ ರಾತ್ರಿ ಪತಿಗೆ ಊಟ ತೆಗೆದುಕೊಂಡು ಬಂದಿದ್ದಾಳೆ. ಈ ವೇಳೆ ಇಬ್ಬರ ನಡುವೆ ಗಲಾಟೆ ಆಗಿದೆ. ರಾತ್ರಿ ತವರಿಗೆ ಹೋಗದ ಮನಿಶಾ ಗಂಡನ ಮನೆಯಲ್ಲಿಯೇ ಮಲಗಿದ್ದಳು.
Published by:Seema R
First published: