Pratap Simha: ರಾಜಕಾರಣ ಯಾರಪ್ಪನ ಆಸ್ತಿಯಲ್ಲ; ಸಂಸದ ಪ್ರತಾಪ್​ ಸಿಂಹ

ಬಿಜೆಪಿ ಇಂತಹ ಪ್ರಯೋಗಗಳನ್ನು ಮಾಡುತ್ತದೆ. ಸಾಮಾನ್ಯರಿಗೆ ಅವಕಾಶ ನೀಡುವುದರಿಂದಲೇ ನಾನು ಎರಡು ಬಾರಿ ಸಂಸದನಾದೆ. ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ಬಿಜೆಪಿ ಅವಕಾಶ ನೀಡುತ್ತದೆ

ಸಂಸದ ಪ್ರತಾಪ್​​ ಸಿಂಹ

ಸಂಸದ ಪ್ರತಾಪ್​​ ಸಿಂಹ

 • Share this:
  ರಾಜಕೀಯಕ್ಕೆ ಹೊಸ ಮುಖಗಳ ಪರಿಚಯ ಆಗಬೇಕು ಎಂಬ ಬಿ.ಎಲ್.ಸಂತೋಷ್ ಹೇಳಿಕೆಗೆ ನನ್ನ ಸಹಮತ ಇದೆ. ರಾಜಕಾರಣ ಯಾರಪ್ಪನ ಆಸ್ತಿಯಲ್ಲ. ಇದೇ ಕಾರಣಕ್ಕೆ ಬಿಜೆಪಿ (BJP)  ಯಾವಾಗಲೂ ಈ ರೀತಿಯ ಪ್ರಯೋಗ ಮಾಡುತ್ತದೆ. ಇದರಿಂದ ರಾಜಕೀಯ ಹಿನ್ನೆಲೆಯಿಲ್ಲದ ನಾನು ಸಂಸದನಾದೆ. ಮಿಲಿಟರಿ ಜನರಲ್ ಆಗಿದ್ದಂತಹ ವಿ.ಕೆ.ಸಿಂಗ್, ಸತ್ಯಪಾಲ ಸಿಂಗ್, ಆರ್.ಕೆ.ಸಿಂಗ್​​ನಂತಹವರು ರಾಜಕಾರಣಕ್ಕೆ ಬಂದಿದ್ದಾರೆ. ಕೆಲಸ ಮಾಡುವವರು ರಾಜಕಾರಣದಲ್ಲಿ ಇರುತ್ತಾರೆ. ಸರಿಯಾಗಿ ಕೆಲಸ ಮಾಡದಿದ್ರೆ ಮನೆಗೆ ಹೋಗುತ್ತಾರೆ ಎಂದು ಸಂಸದ ಪ್ರತಾಪ್​ ಸಿಂಹ (Pratap Simha) ತಿಳಿಸಿದ್ದಾರೆ.

  ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಇಂತಹ ಪ್ರಯೋಗಗಳನ್ನು ಮಾಡುತ್ತದೆ. ಸಾಮಾನ್ಯರಿಗೆ ಅವಕಾಶ ನೀಡುವುದರಿಂದಲೇ ನಾನು ಎರಡು ಬಾರಿ ಸಂಸದನಾದೆ. ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ಬಿಜೆಪಿ ಅವಕಾಶ ನೀಡುತ್ತದೆ ಎಂದರು

  ಭೂತದ ಬಾಯಲ್ಲಿ ಭಗವದ್ಗೀತೆ
  ಇನ್ನು ಇದೇ ವೇಳೆ ಅಮಿತ್ ಶಾ 40 ರಷ್ಟು ಕಮಿಷನ್​ಗೆ ಅಧಿಕೃತ ಮುದ್ರೆ ಹಾಗಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯ ಹೇಳಿಕೆಯನ್ನ ಗಮಸಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದತೆ ಇದೆ. ತಿನ್ನೋದು ಬದನೆಕಾಯಿ, ಹೇಳೋದು ವೇದಾಂತ ಅಂತ ಅವರು ಮಾತನಾಡುತ್ತಾರೆ. ನಿಮ್ಮ ನಾಯಕರು 30 ವರ್ಷಗಳ ಹಿಂದೆ ಏನ್ ಹಾಗಿದ್ರು, ಈಗ ಹೇಗಿದ್ದಾರೆ. ಅವರು ಸಂಪಾದನೆ ಹೇಗೆ ಮಾಡಿದ್ರು ಅನ್ನೋದನ್ನ ಮೊದಲು ತಿಳಿಯಿರಿ. ಬಡತನ ಸಮಾಜವಾದ ಅಂತ ಮಾತನಾಡುತ್ತಿರಾ ನಿಮ್ಮ ಬಳಿ ಒಂದೂವರೆ ಕೋಟಿಯ ಊಬ್ಲೋ ವಾಚ್ ಎಲ್ಲಿಂದ ಬಂತು. ನಿಮ್ಮಿಂದ ಯಾರಿಗೂ ಉಪಯೋಗ ಆಗದೇ ಸುಮ್ಮನೆ ಊಬ್ಲೋ ವಾಚ್ ತಂದು ಕೊಡ್ತಾರಾ ಎಂದು ಪ್ರಶ್ನಿಸಿದರು.

  ಇದನ್ನು ಓದಿ: ರಾಜ್ಯದ ಕಡು ಭ್ರಷ್ಟ ರಾಜಕಾರಣಿ ಅಶ್ವತ್ಥ್​ ನಾರಾಯಣ್​; ಡಿಕೆ ಶಿವಕುಮಾರ್​

  ದ್ವೇಷದ ರಾಜಕಾರಣ

  ಪಿಎಸ್​ಐ ಪ್ರಕರಣದಲ್ಲಿ ವೈಯಕ್ತಿಕವಾಗಿ ಅಶ್ವತ್ಥನಾರಾಯಣ ಟಾರ್ಗೆಟ್ ಮಾಡುತ್ತಿದ್ದಾರೆ. ಇದು ದ್ವೇಷದ ರಾಜಕಾರಣ. ಅವನ್ಯಾರೋ ನಾಲ್ಕನೇ ರ್ಯಾಂಕ್​ ಪಡೆದಿದ್ದಾನೆ. ಆತನಿಗೂ ಅಶ್ವತ್ಥ್​ ನಾರಾಯಣ್ ಸಹೋದರಿಗೂ ಸಂಪರ್ಕ ಇದೆ ಎಂಬ ವಿಚಾರ ಇಟ್ಟುಕೊಂಡು ಎಳೆದು ತರಲಾಗಿದೆ.ಈ ಆರೋಪದ ಹಿಂದೆ ವಯಕ್ತಿಕ ದ್ವೇಷ ಇದೆ ಅಂತ ಗೊತ್ತಾಗುತ್ತಿದೆ. ಹಿಂದೆ ಬಿಟ್ ಕಾಯಿನ್ ವಿಚಾರದಲ್ಲಿ ಯಾವುದೇ ಸಾಕ್ಷಿ ಇಲ್ಲದೆ ಆರೋಪ ಮಾಡಲಾಗಿತ್ತು. ಈಗಲೂ ದಾಖಲೆ ಇಲ್ಲದೇ ಆರೋಪ ಮಾಡುತ್ತಿದ್ದಾರೆ. ಸದ್ಯ ಪ್ರಕರಣ ತನಿಖೆ ಆಗುತ್ತಿದ್ದುಮ ತನಿಖೆ ಬಳಿಕ ನಿಜಾಂಶ ಹೊರಬರಲಿದೆ ಎಂದರು.

  ಇದನ್ನು ಓದಿ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಗಳಿಗೆ ಕೊಲೆ ಬೆದರಿಕೆ

  ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವುದು ದ್ವೇಷದ ರಾಜಕಾರಣ ಹೊರತು ಬೇರೇನೂ ಅಲ್ಲ. ಅಶ್ವತ್ಥ್​ ನಾರಾಯಣ ಉನ್ನತ ಶಿಕ್ಷಣ ಸಚಿವರಾಗಿ 23 ಸಾವಿರ ಕೋಟಿ ಯೋಜನೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಬಗ್ಗೆ ಒಂದು ಒಳ್ಳೆ ಮಾತಾಡಲು ಕಾಂಗ್ರೆಸ್, ಜೆಡಿಎಸ್ ಅಥವಾ ಇನ್ಯಾರಿಗೂ ಅಗುತ್ತಿಲ್ಲ . ಅದಕ್ಕೆ ಈಗ ಈ ವಿಷಯದಲ್ಲಿ ಸುಳ್ಳು ಹರಡುತ್ತಿದ್ದಾರೆ ಎಂದು ಕಿಡಿಕಾರಿದರು.

  ಮೈಸೂರಿನ ಅಭಿವೃದ್ಧಿಗೆ ಮತ್ತೊಂದು ಮೈಲಿಗಲ್ಲು

  ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ವೀಕ್ ಇದೆ ಎಂಬ ಮಾತು ಇತ್ತು. ಆದರೆ, ಈಗ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಹಳೆ ಮೈಸೂರು ಭಾಗಕ್ಕೆ ಆದ್ಯತೆ ಕೊಡಲಾಗಿದೆ. ಏರ್ಪೋರ್ಟ್ ರನ್ ವೇ ವಿಸ್ತರಣೆ, ಕೆ.ಆರ್.ಆಸ್ಪತ್ರೆಗೆ ಅನುದಾನ ನೀಡಿದರು. ಇದೀಗ ಸೆಮಿಕಂಡಕ್ಟರ್ ಫ್ಲಾಂಟ್ ಮೈಸೂರಿಗೆ ಬರುತ್ತಿದೆ. ಪ್ರಧಾನಿ ಮೋದಿ 75 ಸಾವಿರ ಕೋಟಿಯ ಯೋಜನೆ ನೀಡಿದ್ದಾರೆ. ಇದರಲ್ಲಿ22, 900ಕೋಟಿ ಯೂನಿಟ್ ಮೈಸೂರಿಗೆ ಬರುತ್ತಿದೆ. ಅದರ ಒಟ್ಟಾರೆ ವಹಿವಾಟು 3 ಲಕ್ಷ ಕೋಟಿ ಆಗಬಹುದು. ಇದು ಮೈಸೂರಿನ ಅಭಿವೃದ್ಧಿಯ ಮತ್ತೊಂದು ಮೈಲಿಗಲ್ಲು ಎಂದರು
  Published by:Seema R
  First published: