Mysuru: ಚಿನ್ನ ಕದಿಯಲು ಬಂದ ಕಳ್ಳರಿಂದ ಫೈರಿಂಗ್​; ತಡೆಯಲು ಹೋದ ಯುವಕ ಗುಂಡಿಗೆ ಬಲಿ

ಚಿನ್ನಾಭರಣ ದೋಚಲು ಬಂದಿದ್ದ ಕಳ್ಳರು ಸಾಕಷ್ಟು ತಯಾರಿ ನಡೆಸಿಯೇ ಬಂದಿದ್ದಾರೆ ಎನ್ನುವುದು CC TV ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಕಳ್ಳತನ ನಡೆಸಿ ಹೋಗುವ ವೇಳೆ Blue ಶರ್ಟ್ ಕಳಚಿ ರಸ್ತೆಬದಿಯ ಕಾಂಪೌಡ್ ಕಡೆಗೆ ಎಸೆದ ದರೋಡೆಕೋರ ಬೇರೆ ಕಡೆಗೆ ದೌಡಾಯಿಸಿದ್ದಾನೆ. ದರೋಡೆಕೋರನ ಈ ಚಾಣಕ್ಷತನ ಹತ್ತಿರದಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  Mysuru : ಅರೆಮನೆಗಳ ನಗರಿ ಮೈಸೂರು ಸೋಮವಾರ ಮಧ್ಯಾಹ್ನ ಅಕ್ಷರಶಃ ಬೆಚ್ಚಿ ಬಿದ್ದಿದೆ, ಹಾಡಹಗಲೇ ಚಿನ್ನಾಭರಣದ ಅಂಗಡಿಗೆ ನುಗ್ಗಿದ ಕಳ್ಳರು, ಆಭರಣಗಳನ್ನು ಕದಿಯಲು ಯತ್ನಿಸಿದ್ದಾರೆ ಹಾಗೂ ಇದರಕ್ಕೆ ಪ್ರತಿರೋಧ ಒಡ್ಡಿದ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿದ್ದಾರೆ. 2019 ರಲ್ಲಿ ನಡೆದಿದ್ದ ಶೂಟೌಟ್​ (shootout) ಪ್ರಕರಣದ ನಂತರ ನಡೆದ ಈ ಘಟನೆಯಿಂದ ಮೈಸೂರಿಗರು ಬೆಚ್ಚಿ ಬಿದ್ದಿದ್ದಾರೆ. 

  ನಾಲ್ಕು ಜನರ ತಂಡ ಮೈಸೂರಿನ ವಿದ್ಯಾರಣ್ಯಪುರಂ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಚಿನ್ನಾಭರಣ ಅಂಗಡಿಗೆ ಅಭರಣ ಕದಿಯಲು ಆಗಮಿಸಿದೆ,  ಕಳ್ಳತನಕ್ಕೆ ಬಂದಿರುವ ಬಗ್ಗೆ ಸುಳಿವು ಗೊತ್ತಾದ ಕೂಡಲೇ  ಅಂಗಡಿಯಲ್ಲಿದ್ದ ಮಾಲೀಕ ಧರ್ಮೇಂದ್ರ ಪ್ರತಿರೋಧ ಒಡ್ಡಿದ್ದಾರೆ, ಆಗ ಅವರನ್ನು ತಳಿಸಿ ಕೊಡಿ ಹಾಕಿದ ಕಳ್ಳರು,  ಚಿನ್ನದಂಗಡಿಯಲ್ಲಿದ್ದ ಚಿನ್ನಾಭರಣಗಳನ್ನ ದೋಚಿದ್ದಾರೆ. ದರೋಡೆಕೋರರ ಹೊಡೆತಕ್ಕೆ ಅಂಗಡಿ ಮಾಲೀಕ ಕುಸಿದು ಬಿದ್ದಿದ್ದಾನೆ, ನಂತರ ಹೊರಗೆ ಬಂದ ದರೋಡೆಕೋರರಿಗೆ ಸ್ಥಳೀಯ ಯುವಕನೊಬ್ಬ ಎದುರಾಗಿದ್ದಾನೆ, ಅವನ ಮೇಲೂ ಖದೀಮರು ಫೈರ್​ ಮಾಡಿದ್ದಾರೆ. ಆ ಯುವಕನಿಗೆ ಗುಂಡುತಾಗಿ, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

  ಘಟನೆ ನಡೆದ ನಂತರ ಸ್ಥಳಕ್ಕೆ ದೌಡಾಯಿಸಿರುವ ಪೊಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಶ್ವಾನದಳ ಕರೆಸಿ ದರೋಡೆಕೋರರ ಸುಳಿವು ಪತ್ತೆ ಹಚ್ಚುವ ಕೆಲಸದಲ್ಲಿ ನಿರತರಾಗಿದ್ದಾರೆ.  ಮಾಧ್ಯಮಗಳ ಎದುರು ಮಾತನಾಡಿದ ಕಮಿಷನರ್ ಚಂದ್ರ ಗುಪ್ತಾ, ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದ್ದು, ಆದಷ್ಟು ಬೇಗ ದರೋಡೆಕೋರರನ್ನ ಬಂಧಿಸಲಾಗುವುದು.
  ತನಿಖೆಯ ಅಂಶಗಳನ್ನ ಈ ಸಂದರ್ಭದಲ್ಲಿ ಹೇಳಲು ಸಾಧ್ಯವಿಲ್ಲ. ಈ ಘಟನೆಯ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.  ಹಲ್ಲೆಯಿಂದ  ಚಿನ್ನಾಭರಣ ಅಂಗಡಿ ಮಾಲೀಕ ಧರ್ಮೇಂದ್ರನಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಎಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಸಿಪಿ ಗೀತಾ ಪ್ರಸನ್ನ ಹಾಗೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  ಚಿನ್ನಾಭರಣ ದೋಚುವ ವೇಳೆ ಬ್ಲೂ ಶರ್ಟ್- ಎಸ್ಕೇಪ್ ಆಗುವ ವೇಳೆ ವೈಟ್ ಶರ್ಟ್

  ಚಿನ್ನಾಭರಣ ದೋಚಲು ಬಂದಿದ್ದ ಕಳ್ಳರು ಸಾಕಷ್ಟು ತಯಾರಿ ನಡೆಸಿಯೇ ಬಂದಿದ್ದಾರೆ ಎನ್ನುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಕಳ್ಳತನ ನಡೆಸಿ ಹೋಗುವ ವೇಳೆ ಬ್ಲೂ ಶರ್ಟ್ ಕಳಚಿ ರಸ್ತೆಬದಿಯ ಕಾಂಪೌಡ್ ಕಡೆಗೆ ಎಸೆದ ದರೋಡೆಕೋರ ಬೇರೆ ಕಡೆಗೆ ದೌಡಾಯಿಸಿದ್ದಾನೆ. ದರೋಡೆಕೋರನ ಈ ಚಾಣಕ್ಷತನ ಹತ್ತಿರದಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

  ಇದನ್ನೂ ಓದಿ: Afghanistan: ಅಫ್ಘಾನ್ ನಿರಾಶ್ರಿತರಿಂದ ದೆಹಲಿ UNHCR ಕಚೇರಿ ಎದುರು ಪ್ರತಿಭಟನೆ

  2019ರಲ್ಲಿ ಸುಖವಿಂದರ್​ ಎನ್ನುವ ವ್ಯಕ್ತಿಯನ್ನು ಪೊಲೀಸರು ಶೂಟೌಟ್​ ಮಾಡಿ ಹೊಡೆದು ಹಾಕಿದ್ದರು.  ಹಳೆ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಡುವ ಭರವಸೆ ನೀಡಿದ್ದ ಈತ, ವ್ಯಕ್ತಿ ಬಳಿ 10 ಲಕ್ಷ ಹಣ ಪಡೆದು ವಂಚಿಸಿದ್ದ. ಜೊತೆಗೆ 500 ಕೋಟಿ ಹಳೆ ನೋಟುಗಳ ಬದಲಾವಣೆ ಭರವಸೆ ನೀಡಿ ಮುಂಬೈ ಮೂಲದ ಮೂವರು ಮೈಸೂರಿಗೆ ಬಂದಿಳಿದಿದ್ದರು. ಈ ಮಾಹಿತಿ ಗೊತ್ತಾಗಿ ಪೊಲೀಸರು ಬಂಧಿಸಲು ಹೋದಾಗ ಶೂಟೌಟ್​ ಪ್ರಕರಣ ನಡೆದಇತ್ತು. ಆದರೆ ಈಗ ನಡೆದಿರುವ ಘಟನೆ ಬೇರೆಯದೇ ಆದ ಕಾರಣ ಮೈಸೂರಿಗರ ಆತಂಕಕ್ಕೆ ಇದು ಕಾರಣವಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: