Mysore Dasara: ಅರಮನೆಯತ್ತ ಗಜಪಡೆ, ದಸರಾ ಸಂಭ್ರಮ ಶುರು

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಅರಣ್ಯ ವ್ಯಾಪ್ತಿಯ ದೊಡ್ಡಹೆಜ್ಜೂರು ಗ್ರಾಮದಿಂದ ಗಜಪಯಣ ಆರಂಭವಾಗಿದೆ. 14 ಆನೆಗಳ ಪೈಕಿ 9 ಆನೆಗಳು ನಾಡಿಗೆ ಬರುತ್ತಿದೆ.

ದಸರಾ ಗಜಪಯಣ ಶುರು

ದಸರಾ ಗಜಪಯಣ ಶುರು

  • Share this:
ಮೈಸೂರು(ಆ.07): ವಿಶ್ವವಿಖ್ಯಾತ ದಸರಾ ಹಬ್ಬವನ್ನು ಕಣ್ತುಂಬಿಕೊಳ್ಳೋದೇ ಪುಣ್ಯ ಮತ್ತು ಸಂಭ್ರಮದ ಕ್ಷಣ. ಈಗಾಗಲೇ ವಿಶ್ವವಿಖ್ಯಾತ (World Famous) ಮೈಸೂರು ದಸರಾ (Mysore Dasara) ಮಹೋತ್ಸವಕ್ಕೆ ಸಿದ್ಧತೆ ಆರಂಭವಾಗಿದೆ. ಸರ್ಕಾರ ಕೂಡ ಈ ಬಾರಿ ಅದ್ಧೂರಿ ದಸರಾ ಅಂತಾ ಘೋಷಿಸಿದೆ. ದಸರಾದ ಪ್ರಮುಖ ಆಕರ್ಷಣೆಯೇ ಜಂಬೂಸವಾರಿ. ಮೆರವಣಿಗೆಯಲ್ಲಿ ಸಾಗುವ ಗಜಪಡೆ (Elephant) ನಾಡಿನತ್ತ ಹೊರಟಿತು ಅಂದರೆ ದಸರಾ ಸಂಭ್ರಮ ಅಧಿಕೃತವಾಗಿ ಶುರುವಾಯ್ತು ಅಂತಾನೇ ಅರ್ಥ. ಹಾಗಾಗಿ ನಾಡಹಬ್ಬದ ಮೊದಲ ಅಧಿಕೃತ ಕಾರ್ಯಕ್ರಮ ಗಜಪಯಣ ಆರಂಭವಾಗಿದೆ. ಈಗಾಗಲೇ ಕ್ಯಾಪ್ಟನ್ (Captain) ಅಭಿಮನ್ಯು (Abhimanyu) ಮತ್ತು ಟೀಂನ ಉಳಿದ ಆನೆಗಳು ನಾಡಿನತ್ತ ಪಯಣ ಆರಂಭಿಸಿದೆ. ಮೊದಲ ತಂಡದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸುತ್ತಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಅರಣ್ಯ ವ್ಯಾಪ್ತಿಯ ದೊಡ್ಡಹೆಜ್ಜೂರು ಗ್ರಾಮದಿಂದ ಗಜಪಯಣ ಆರಂಭವಾಗಿದೆ. 14 ಆನೆಗಳ ಪೈಕಿ ಇಂದು 9 ಆನೆಗಳು ನಾಡಿಗೆ ಬರುತ್ತಿದೆ.

ಅಭಿಮನ್ಯು ನೇತೃತ್ವದಲ್ಲಿ ಎಂಟ್ರಿ

ಅಂಬಾರಿ ಹೊರುವ 57 ವರ್ಷದ ಅಭಿಮನ್ಯು ನೇತೃತ್ವದಲ್ಲಿ ಒಟ್ಟು 9 ಆನೆಗಳು ನಾಡಿನತ್ತ ಆಗಮಿಸ್ತಿದೆ. ಅಭಿಮನ್ಯು, ಮಹೇಂದ್ರ, ಅರ್ಜುನ, ಭೀಮ, ಧನಂಜಯ, ಕಾವೇರಿ, ಗೋಪಾಲಸ್ವಾಮಿ, ಚೈತ್ರಾ, ಲಕ್ಷ್ಮೀ ಆನೆಗಳಿಗೆ ಪೂಜೆ ಮಾಡಿ ಬೀಳ್ಕೊಡಲಾಯಿತು. ಪುರೋಹಿತರಾದ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ಗಣಪತಿ ಪೂಜೆ ಮಾಡಲಾಯ್ತು.

Mysore Dasara preparation elephant team entry to palace
ಸಾಂದರ್ಭಿಕ ಚಿತ್ರ


ಆನೆಗಳಿಗೆ ಹೋಳಿಗೆ, ಚಕ್ಕುಲಿ, ಮೋದಕ

ನಾಡಿನತ್ತ ಪ್ರಯಾಣ ಬೆಳೆಸಿದ ಆನೆಗಳಿಗೆ ಪೂಜೆ ಮಾಡಿ ಸಿಹಿ ತಿನ್ನಿಸಲಾಯ್ತು. ಆನೆಗಳಿಗೆ ಮೋದಕ, ಕರ್ಜಿಕಾಯಿ, ಹೋಳಿಗೆ, ಚಕ್ಕುಲಿ, ಕಬ್ಬು, ಬೆಲ್ಲವನ್ನು ನೀಡಲಾಯ್ತು. ಅರಣ್ಯ ಸಚಿವ ಉಮೇಶ್ ಕತ್ತಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪೂಜೆ ಮಾಡಿದ್ರು. ಬಳಿಕ ಜಿಲ್ಲಾಡಳಿತದಿಂದ ಗಜಪಡೆಗೆ ಪುಷ್ಪಾರ್ಚನೆ ಮಾಡಲಾಯ್ತು.

ಇದನ್ನೂ ಓದಿ: ಈ ಬಾರಿಯೂ ಇಲ್ಲ ಅದ್ಧೂರಿ ಗಣೇಶೋತ್ಸವ; 1 ವಾರ್ಡ್​ಗೆ ಒಂದೇ ಗಣಪತಿ ಮೂರ್ತಿ!?

ಲಾರಿಯಲ್ಲಿ ಬರ್ತಿದೆ ದಸರಾ ಗಜ ಟೀಂ

ವೀರನಹೊಸಹಳ್ಳಿಯಿಂದ ಹೊರಟ 9 ಆನೆಗಳು ಲಾರಿಯಲ್ಲಿ ಆಗಮಿಸ್ತಿದೆ. 9 ಅನೆಗಳನ್ನು ಮೊದಲು ಮೈಸೂರಿನ ಅರಣ್ಯ ಭವನಕ್ಕೆ ಕರೆತರಲಾಗುತ್ತದೆ. ಅರಣ್ಯ ಭವನದಲ್ಲಿ 3 ದಿನಗಳ ತಾತ್ಕಾಲಿಕ ವಾಸ್ತವ್ಯ ಹೂಡಲಿದೆ. ಇನ್ನೊಂದು ಟೀಂನಲ್ಲಿ 5 ಆನೆಗಳು ಬರಲಿದೆ. ಬಳಿಕ ಎಲ್ಲಾ 14 ಆನೆಗಳಿಗೆ ಆಗಸ್ಟ್ 10 ರಂದು ಅರಣ್ಯ ಭವನದಲ್ಲಿ ಪೂಜೆ ಸಲ್ಲಿಸಿ ಅರಮನೆಗೆ ಕರೆತರಲಾಗುತ್ತದೆ.

ಇದನ್ನೂ ಓದಿ: ಸಂಪರ್ಕವಿಲ್ಲದ ಕುಗ್ರಾಮಕ್ಕೆ ಒಂದೇ ದಿನದಲ್ಲಿ ಸೇತುವೆ ನಿರ್ಮಿಸಿದ ಸೇವಾ ಭಾರತಿ ಸಮಿತಿ

ಅರಮನೆಯಲ್ಲಿ ಗಜಪಡೆಗೆ ಪೂಜೆ

ಅರಣ್ಯ ಭವನದಿದ ಆಗಸ್ಟ್​ 10ರಂದು ಹೊರಡುವ ಎಲ್ಲಾ 14 ಆನೆಗಳನ್ನು ಪೂಜೆ ಮಾಡಿ ಅರಮನೆಗೆ ಬರಮಾಡಿಕೊಳ್ಳಲಾಗುತ್ತದೆ. ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದಲ್ಲಿ ಶುಭ ಲಗ್ನದಲ್ಲಿ ಪೂಜೆ ಸಲ್ಲಿಸಿ ಅರಮನೆ ಪ್ರವೇಶ ಮಾಡಿಕೊಳ್ಳಲಾಗುತ್ತದೆ.

ಅಭಿಮನ್ಯು ಟೀಂನಲ್ಲಿ 4 ಹೆಣ್ಣಾನೆ

2022ರ ದಸರಾ ಮಹೋತ್ಸವದಲ್ಲಿ ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ಇದರಲ್ಲಿ ಅಭಿಮನ್ಯು ಜೊತೆಗೆ 4 ಹೆಣ್ಣಾನೆಗಳು ಹಾಗೂ ಇತರೇ ಹಿರಿಯ, ಕಿರಿಯ ಆನೆಗಳು ಹೆಜ್ಜೆಹಾಕಲಿದೆ.

ಗಜಪಡೆಯ ವಿಶೇಷತೆ

57 ವರ್ಷದ ಅಭಿಮನ್ಯು ಹಿರಿಯ ಆನೆಯಾಗಿದ್ದು, ಈಗಾಗಲೇ ಅಂಬಾರಿ ಹೊತ್ತು ಅನುಭವ ಇದೆ. ಮಾವುತನ ಮಾತು ಕೇಳುವ ಆನೆ ಅಂತಾನೇ ಅಭಿಮನ್ಯು ಹೆಸರು ಪಡೆದಿದ್ದಾನೆ. ರಾಮಪುರ ಆನೆ ಶಿಬಿರದ ಪಾರ್ಥಸಾರಥಿಯೇ (18) ಚಿಕ್ಕ ವಯಸ್ಸಿನ ಆನೆ.

ದುಬಾರೆ ಆನೆ ಶಿಬಿರದ ಶ್ರೀರಾಮ ಹಾಗೂ ಮತ್ತಿಗೋಡು ಆನೆ ಶಿಬಿರದ ಮಹೇಂದ್ರ (39) ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿವೆ.

ವಿಶ್ವವಿಖ್ಯಾತ ನಾಡಹಬ್ಬಕ್ಕೆ ದೇಶ-ವಿದೇಶದ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ವ್ಯಾಪಕ ಪ್ರಚಾರ ನಡೆಸಲು ಬ್ರ್ಯಾಂಡ್‌ ಮೈಸೂರು ಯೋಜನೆ ರೂಪಿಸಲಾಗ್ತಿದೆ.
Published by:Thara Kemmara
First published: