ಮೈಸೂರು ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ ಲೆಕ್ಕಾಚಾರ ತಲೆಕೆಳಗು; ಜೆಡಿಎಸ್​ಗೆ ಒಲಿದ ಮೇಯರ್ ಪಟ್ಟ

ಜೆಡಿಎಸ್​ ಮೇಯರ್​ ಅಭ್ಯರ್ಥಿ ರುಕ್ಮಿಣಿ ಮಾದೇಗೌಡಗೆ ಕಾಂಗ್ರೆಸ್ ಸದಸ್ಯರು ಸಹಕಾರ ನೀಡಿದ್ದರು. ಹೀಗಾಗಿ ಜೆಡಿಎಸ್​ಗೆ ಮೇಯರ್ ಪಟ್ಟ ಒಲಿದಿದೆ. ಕೊನೆ ಕ್ಷಣದಲ್ಲಿ ಕೈ ಸದಸ್ಯರು‌ ಮೇಯರ್ ಚುನಾವಣೆಗೆ ಟ್ವಿಸ್ಟ್ ನೀಡಿದರು. ಹೀಗಾಗಿ ಬಿಜೆಪಿಯ ಎಲ್ಲಾ ಲೆಕ್ಕಾಚಾರ ತಲೆಕೆಳಗಾಯಿತು.  ಬಿಜೆಪಿ ಮೊದಲ ಬಾರಿ ಮೇಯರ್ ಪಟ್ಟ ಅಲಂಕರಿಸೋ‌ ಆಸೆ ಭಗ್ನವಾಗಿದೆ.

ಜೆಡಿಎಸ್

ಜೆಡಿಎಸ್

 • Share this:
  ಮೈಸೂರು(ಫೆ.24): ಭಾರೀ ಕುತೂಹಲ ಮೂಡಿಸಿದದ್ ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಇಂದು ನಡೆದಿದೆ. ಪಾಲಿಕೆ ಕೌನ್ಸಿಲ್ ಹಾಲ್​ನಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಈ ಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿ  ಪರಿಣಮಿಸಿದ್ದು, ಗೆಲ್ಲುವ ಪಣ ತೊಟ್ಟಿದ್ದವು. ಹೀಗಾಗಿ ಮೂರು ಪಕ್ಷಗಳೂ ಸಹ ಸ್ವತಂತ್ರವಾಗಿ ಕಣಕ್ಕಿಳಿದಿದ್ದವು. ಆದರೆ ಕೊನೆಯದಾಗಿ ಬಿಜೆಪಿ ಕನಸು ಭಗ್ನವಾಗಿದ್ದು, ಜೆಡಿಎಸ್​ ಪಕ್ಷ ಮೇಯರ್ ಪಟ್ಟ ಅಲಂಕರಿಸಿದೆ.

  ಬಹುಮತ ಇಲ್ಲದ ಕಾರಣ ಕಾಂಗ್ರೆಸ್​ ಹಾಗೂ ಬಿಜೆಪಿಗೆ ಜೆಡಿಎಸ್​ ದೋಸ್ತಿಯೇ ಅನಿವಾರ್ಯ ಎನ್ನಲಾಗಿತ್ತು. ಹೀಗಾಗಿ ಜೆಡಿಎಸ್​ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗಲಿದೆ ಎಂದು ತಿಳಿಯಲಾಗಿತ್ತು. ಆದರೆ ಕೊನೆಯವರೆಗೂ ಮೈತ್ರಿ ಬಗ್ಗೆ ಬಿಟ್ಟು ಕೊಡದ ಜೆಡಿಎಸ್​, ಕೊನೆಗೇ ತಾನೇ ಗೆದ್ದು ಬೀಗಿದೆ.

  ಚುನಾವಣಾ ಅಧಿಕಾರಿ ಜಿಸಿ.ಪ್ರಕಾಶ್, ಆಯುಕ್ತೆ ಶಿಲ್ಪಾನಾಗ್ ನೇತೃತ್ವದಲ್ಲಿ ಚುನಾವಣಾ ನಡೆಯಿತು. ಸಂಸದ ಪ್ರತಾಪ್ ಸಿಂಹ, ಶಾಸಕರಾದ ರಾಮ್‌ದಾಸ್, ಎಲ್.ನಾಗೇಂದ್ರ,  ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಕೆಟಿ.ಶ್ರೀಕಂಠೇಗೌಡ ಚುನಾವಣೆಯಲ್ಲಿ ಭಾಗಿಯಾಗಿದ್ದರು.

  ವೈರಲ್ ವಿಡಿಯೋ: ದಾಳಿ ಮಾಡಿದ ಚಿರತೆಯನ್ನು ಬರಿಗೈಯಲ್ಲಿ ಕೊಂದು ಹೆಂಡತಿ-ಮಗನ ಪ್ರಾಣ ಉಳಿಸಿದ..!

  ಮೈಸೂರು ಮಹಾನಗರಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಗೆ  ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಮೇಯರ್, ಉಪಮೇಯರ್ ಸ್ಥಾನಗಳಿಗೆ ಪ್ರತ್ಯೇಕ ನಾಮಪತ್ರ ಸಲ್ಲಿಸಿದ್ದವು.  ಬಿಜೆಪಿಯಿಂದ ಮೇಯರ್ ಸ್ಥಾ‌ನಕ್ಕೆ ಸುನಂದಾ ಪಾಲನೇತ್ರ, ಉಪ ಮೇಯರ್ ಸ್ಥಾನಕ್ಕೆ ಸಾತ್ವಿಕ್ ಸಂದೇಶ ಸ್ವಾಮಿ ನಾಮಪತ್ರ ಸಲ್ಲಿಕೆ ಮಾಡಿದ್ದರೆ,  ಕಾಂಗ್ರೆಸ್​ನಿಂದ ಮೇಯರ್ ಸ್ಥಾನಕ್ಕೆ ಶಾಂತಕುಮಾರಿ, ಉಪಮೇಯರ್ ಸ್ಥಾನಕ್ಕೆ ಅನ್ವರ್ ಬೇಗ್‌ ನಾಮಪತ್ರ ಸಲ್ಲಿಸಿದ್ದರು.

  ಇನ್ನು,  ಜೆಡಿಎಸ್​ ನಿಂದ ಮೇಯರ್ ಸ್ಥಾ‌ನಕ್ಕೆ ರುಕ್ಮಿಣಿ ಮಾದೇಗೌಡ ನಾಮಪತ್ರ ಸಲ್ಲಿಸಿದ್ದರು. ಆದರೆ ಜೆಡಿಎಸ್​ ಉಪಮೇಯರ್ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿರಲಿಲ್ಲ. ಕಮಲ, ಕೈ, ಹಾಗೂ ತೆನೆ ಅಭ್ಯರ್ಥಿಗಳು ಪ್ರತ್ಯೇಕವಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದವು. ಮೈಸೂರು ಮೊದಲ ಪ್ರಜೆಗಾಗಿ ಮೂರು ಪಕ್ಷಗಳ ಕಾದಾಟ ಶುರುವಾಗಿತ್ತು.

  ಜೆಡಿಎಸ್​ ಮೇಯರ್​ ಅಭ್ಯರ್ಥಿ ರುಕ್ಮಿಣಿ ಮಾದೇಗೌಡಗೆ ಕಾಂಗ್ರೆಸ್ ಸದಸ್ಯರು ಸಹಕಾರ ನೀಡಿದ್ದರು. ಹೀಗಾಗಿ ಜೆಡಿಎಸ್​ಗೆ ಮೇಯರ್ ಪಟ್ಟ ಒಲಿದಿದೆ. ಕೊನೆ ಕ್ಷಣದಲ್ಲಿ ಕೈ ಸದಸ್ಯರು‌ ಮೇಯರ್ ಚುನಾವಣೆಗೆ ಟ್ವಿಸ್ಟ್ ನೀಡಿದರು. ಹೀಗಾಗಿ ಬಿಜೆಪಿಯ ಎಲ್ಲಾ ಲೆಕ್ಕಾಚಾರ ತಲೆಕೆಳಗಾಯಿತು.  ಬಿಜೆಪಿ ಮೊದಲ ಬಾರಿ ಮೇಯರ್ ಪಟ್ಟ ಅಲಂಕರಿಸೋ‌ ಆಸೆ ಭಗ್ನವಾಗಿದೆ.
  Published by:Latha CG
  First published: