ಸಿಎಂ ಬೊಮ್ಮಾಯಿ ಕೆಲಸ ಮಾಡುವ ಬಸವಣ್ಣ: ವಿಪಕ್ಷಗಳ ಹೇಳಿಕೆಗೆ MP Pratap Simha ತಿರುಗೇಟು

ಬಿಜೆಪಿಗೆ ವಿವಾದಗಳನ್ನು ಎಬ್ಬಿಸಿ ಹಿಂದುಗಳ ದೃಢೀಕರಣ ಮಾಡುವ ಅವಶ್ಯಕತೆ ಇಲ್ಲ. ಹಿಂದೂ, ಮುಸ್ಲಿಂ ಮತ ವಿಭಜನೆ, ಮತ ಕ್ರೂಢೀಕರಣ ಎಲ್ಲಾ ಶುರುವಾಗಿದ್ದು, ವಿಪಕ್ಷಗಳಿಂದ ಹೊರತು ಬಿಜೆಪಿಯಿಂದಲ್ಲ ಎಂದು ಆರೋಪ ಮಾಡಿದರು.

ಸಂಸದ ಪ್ರತಾಪ್​ ಸಿಂಹ

ಸಂಸದ ಪ್ರತಾಪ್​ ಸಿಂಹ

  • Share this:
ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಮೌನ ಬಸವಣ್ಣ ಎಂಬ ಪ್ರತಿಪಕ್ಷಗಳ ಟೀಕೆಗೆ ಸಂಸದ ಪ್ರತಾಪ್ ಸಿಂಹ (MP Pratap Simha) ತಿರುಗೇಟು ನೀಡಿದ್ದಾರೆ. ಸಿಎಂ ಬೊಮ್ಮಾಯಿ ಅವರು ಮಾತನಾಡುವ ಬಸವಣ್ಣ ಅಲ್ಲ.ಅವರು ದುಡಿಯುವ ಬಸವಣ್ಣ. ದುಡಿಮೆಯಿಂದ ರಾಜ್ಯದ ಅಭಿವೃದ್ಧಿ(Karnataka Development)ಗೆ ಶ್ರಮಿಸುತ್ತಿರುವ ಬಸವಣ್ಣ. ಅವರ ದುಡಿಮೆ ಫಲವಾಗಿ ಮೈಸೂರಿನ ಏರ್ಪೋರ್ಟ್ ವಿಸ್ತರಣೆಗೆ ಅನುದಾನ (Fund Release) ಕೊಟ್ಟಿದ್ದಾರೆ.  ಕೆಆರ್ ಆಸ್ಪತ್ರೆ ಗೆ ಅನುದಾನ ಕೊಟ್ಟಿದ್ದಾರೆ, ಶಕ್ತಿಧಾಮಕ್ಕೆ ಅನುದಾನ ಕೊಟ್ಟಿದ್ದಾರೆ. ಇಂತಹ ದುಡಿಮೆಯ ಬಸವಣ್ಣನ ಬಗ್ಗೆ ಪ್ರತಿನಿತ್ಯ ಕರ್ಕಸ ಧ್ವನಿಯಲ್ಲಿ ಕಾಕಾ ಎನ್ನುವವರಿಗೆ ಅರ್ಥವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೊಡಿಹಳ್ಳಿ ಸ್ವಾಮಿಜೀ, ಕುಮಾರಸ್ವಾಮಿ, ಸಿದ್ದರಾಮಯ್ಯ ಇಂತವರ ಹೇಳಿಕೆಗಳಲ್ಲಿ ನಿಖರತೆ, ಸ್ಪಷ್ಟತೆ ಯಾವುದು ಇರುವುದಿಲ್ಲ. ಈ ಮೂವರ ಹೇಳಿಕೆಗಳನ್ನು ಯಾರು ಗಂಭೀರವಾಗಿ ಪರಿಗಣಿಸುವುದಿಲ್ಲ. ರಾಜ್ಯದ ಎಲ್ಲಾ ವಿಚಾರಗಳಲ್ಲೂ ಈ ಮೂವರ ಹೇಳಿಕೆಗಳು ಅಸ್ಪಷ್ಟವಾಗಿಯೇ ಇರುತ್ತವೆ ಎಂದು ಕಿಡಿಕಾರಿದರು.

ಆ ಸಮುದಾಯಕ್ಕೆ ಬುದ್ಧಿ ಹೇಳಲಿಲ್ಲ ಯಾಕೆ?

ಹಿಜಾಬ್ ವಿಚಾರ ಬಂದಾಗ ಪ್ರತಿಪಕ್ಷಗಳು ಯಾಕೆ ಆ ಸಮುದಾಯಕ್ಕೆ ಬುದ್ಧಿ ಹೇಳಲಿಲ್ಲ.  ಸಮವಸ್ತ್ರ ಎಲ್ಲರಿಗೂ ಕಡ್ಡಾಯ.ಅದನ್ನು ಪಾಲಿಸಿ ಎಂದು ಪ್ರತಿಪಕ್ಷಗಳು ಹೇಳಿದ್ದರೆ ರಾಜ್ಯದಲ್ಲಿ ವಿವಾದಗಳೇ ಸೃಷ್ಟಿ ಆಗುತ್ತಿರಲಿಲ್ಲ ಎಂದರು.

ಇದನ್ನೂ ಓದಿ: ಮುಸ್ಕಾನ್​ನನ್ನು ಹೊಗಳಿದ ಅಲ್ ಖೈದಾ: ಎಲ್ಲಾ BJP ಅವ್ರೇ ಹುಟ್ಟು ಹಾಕೋದು ಎಂದ್ರು ಸಿದ್ದರಾಮಯ್ಯ

ಆವತ್ತು ಅವರಿಗೆ ಇಲ್ಲದ ಕಾನೂನಿನ ಕಥೆ ಹೇಳಿಕೊಟ್ಟು ಗೊಂದಲ ಸೃಷ್ಟಿಗೆ ಕಾರಣದವ್ರು ಇವ್ರು. ಇವತ್ತು ಸರ್ವ ಜನಾಂಗದ ಸಾಮರಸ್ಯದ ಸಭೆ ಮಾಡ್ತಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿಯವರಿಗೆ ಈ ವಿಚಾರಗಳಲ್ಲಿ ಸ್ಪಷ್ಟತೆ ಇಲ್ಲ.

ಎಲ್ಲವೂ ಶುರುವಾಗಿದ್ದು ವಿರೋಧ ಪಕ್ಷಗಳಿಂದ!

ಬಿಜೆಪಿಗೆ ವಿವಾದಗಳನ್ನು ಎಬ್ಬಿಸಿ ಹಿಂದುಗಳ ದೃಢೀಕರಣ ಮಾಡುವ ಅವಶ್ಯಕತೆ ಇಲ್ಲ. ಹಿಂದೂ, ಮುಸ್ಲಿಂ ಮತ ವಿಭಜನೆ, ಮತ ಕ್ರೂಢೀಕರಣ ಎಲ್ಲಾ ಶುರುವಾಗಿದ್ದು, ವಿಪಕ್ಷಗಳಿಂದ ಹೊರತು ಬಿಜೆಪಿಯಿಂದಲ್ಲ ಎಂದು ಆರೋಪ ಮಾಡಿದರು.

ಸರ್ಕಾರದ ವಿರುದ್ಧ HDK ಕಿಡಿ

ಸರ್ವಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಟ್ಟರು. ಬೆಂಕಿ ಹಚ್ಚಿದ್ದು ಬಿಜೆಪಿ, ಹಚ್ಚಲು ಕೊಟ್ಟದ್ದು ಕಾಂಗ್ರೆಸ್. ಮತ ಬ್ಯಾಂಕ್ ಭೀತಿಯಲ್ಲಿ ಕಾಂಗ್ರೆಸ್​ಗೆ ಗೊಂದಲದಲ್ಲಿದೆ. ಅಶಾಂತಿ ಉಂಟು ಮಾಡುವವರ ವಿರುದ್ಧ ಧ್ವನಿ ಎತ್ತಿದ್ದೇನೆ. ಧರ್ಮ ವಿಭಜನೆ ಮಾಡಿ ಮಜಾ ತಗೊಳ್ಳುತ್ತಿದ್ದಾರೆ. ಉರಿಯುವ ಮನೆಯಲ್ಲಿ ಗಳ ಇರಿಯೋ ಕಾಯಕ ಮಾಡುತ್ತಿದ್ದಾರೆ ಎಂದು . ಸರ್ಕಾರದ ಜಾಣ ಮೌನದ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೆಂಡಾಮಂಡಲರಾದರು.

ಹಿಂದೂ ಧರ್ಮದಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡಿಲ್ಲ. ಅವರಿಗೆ ಬೇಕಾದಾಗ ಒಟ್ಟಿಗೆ ತೆಗೆದುಕೊಳ್ಳುತ್ತಾರೆ. ದೇಶದಲ್ಲಿ ಇನ್ನು ಸ್ವಲ್ಪ ದಿನಕ್ಕೆ ಡಿಸೇಲ್​ ಶತಕ ಬಾರಿಸತ್ತದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಜನರನ್ನ ನಿರ್ಗತಿಕರನ್ನ ಮಾಡ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪಾಲು ಇದೆ. ಗ್ಯಾಸ್ ಸಿಲಿಂಡರ್ ಅಲಂಕಾರ ಮಾಡಿಕೊಂಡು ಹೋಗ್ತಿರಾ. ದೇಶದ ಪರಿಸ್ಥಿತಿ ಗೆ ಕಾಂಗ್ರೆಸ್ ಕಾರಣ ಎಂದು ಇದೇ ವೇಳೆ ಎರಡು ಪಕ್ಷದ ವಿರುದ್ಧ ಹರಿಹಾಯ್ದರು.

 ಆರಗ ಜ್ಞಾನೇಂದ್ರ, ಸಿ.ಟಿ ರವಿ ವಿರುದ್ಧ ಕಾಂಗ್ರೆಸ್ ದೂರು

ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹಾಗೂ ಸಿ.ಟಿ ರವಿ (C.T Ravi)  ವಿರುದ್ಧ ದೂರು ದಾಖಲಾಗಿದೆ. ಮಲ್ಲೇಶ್ವರಂ ಪೊಲೀಸ್ ಠಾಣೆಗೆ (Police Station) ಕಾಂಗ್ರೆಸ್ ನಿಯೋಗ ದೂರು (Complaint) ದಾಖಲಾಗಿದೆ. ಉದ್ದೇಶಪೂರ್ವಕವಾಗಿ ಚಂದ್ರು ಎಂಬುವ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ವಿವಾದಾತ್ಮಕ (Controversial) ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್​ ನವರು ದೂರುತ್ತಿದ್ದಾರೆ.

ಇದನ್ನೂ ಓದಿ:  BJP Tweet: 'ಕುಮಾರಸ್ವಾಮಿ ಅವರಲ್ಲಿ ಕಣ್ಣೀರು, ಸುಳ್ಳಿಗೆ ಬರವಿಲ್ಲ, ರಬ್ಬರ್ ಸ್ಟ್ಯಾಂಪ್ ಸೃಷ್ಟಿಯಲ್ಲಿ ನೀವು ಎತ್ತಿದ ಕೈ'

ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ಠಾಣೆಗೆ ದೂರು ನೀಡಿದ್ದಾರೆ. ಉದ್ದೇಶಪೂರ್ವಕವಾಗಿ ಕೋಮು ಸೌಹಾರ್ದತೆ ಕದಡುವ ಹೇಳಿಕೆಗಳನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ  ವಿರುದ್ಧ ಪ್ರಕರಣ ದಾಖಲಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸಚಿವ ಸಿ.ಟಿ ರವಿ ಬಂಧಿಸಬೇಕೆಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.
Published by:Mahmadrafik K
First published: