ಮಂಡಿನೋವಿದ್ದ ‘ಆ’ ಪ್ರಧಾನಿಯನ್ನೇ ಕೆಳಗಿಳಿಸಲಿಲ್ಲ, ಇನ್ನು ಬೊಮ್ಮಾಯಿರನ್ನು ಇಳಿಸ್ತಿವಾ: MP Pratap Simha

ಬಸವರಾಜ ಬೊಮ್ಮಾಯಿ ಅವರಿಗೆ ಮಂಡಿ ನೋವು  ಅಂತಾ ಸಿಎಂ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವಿಲ್ಲ. ಮಂಡಿ ನೋವಿಗೆ ಚಿಕಿತ್ಸೆ ಕೊಡಿಸುತ್ತೇವೆ, ಸಿಎಂ ಬದಲಾಯಿಸುವುದಿಲ್ಲ ಎಂದ ಸಂಸದ ಪ್ರತಾಪ್​ ಸಿಂಹ.

ಸಂಸದ ಪ್ರತಾಪ್​​ ಸಿಂಹ

ಸಂಸದ ಪ್ರತಾಪ್​​ ಸಿಂಹ

  • Share this:
    ಮೈಸೂರು:- ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿರು ಸಿಎಂ ಬದಲಾವಣೆ (CM Change) ವಿಚಾರದ ಬಗ್ಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (MP Pratap Simha) ಪ್ರತಿಕ್ರಿಯೆ ನೀಡಿ, ವಿಧಾನಸಭೆಯ ಕಟ್ಟಡದಲ್ಲಿ ವಾಸ್ತು ದೋಷವಿದೆ. ಸಿಎಂ ಬಿಟ್ಟು ಉಳಿದ 223 ಜನರಿಗೂ ಸಿಎಂ ಆಗಬೇಕೆಂಬ ಆಸೆ ಇರುತ್ತದೆ. ಇದೇ ಕಾರಣಕ್ಕೆ ಇಂತಹ ಮಾತುಗಳು ಕೇಳಿ ಬರುತ್ತವೆ. ಬಸವರಾಜ ಬೊಮ್ಮಾಯಿ (cm bommai ) ಅವರಿಗೆ ಮಂಡಿ ನೋವು  ( knee pain problem) ಅಂತಾ ಸಿಎಂ ಬದಲಾಯಿಸಲು ಸಾಧ್ಯವಿಲ್ಲ. ಮಂಡಿ ನೋವಿಗೆ ಚಿಕಿತ್ಸೆ ಕೊಡಿಸುತ್ತೇವೆ, ಸಿಎಂ ಬದಲಾಯಿಸುವುದಿಲ್ಲ. ಮಾಜಿ ಪ್ರಧಾನಿ ವಾಜಪೇಯಿ ಉದಾಹರಣೆ ನೀಡಿದರು. ವಾಜಪೇಯಿ ಅವರಿಗೆ ಎರಡೂ ಮಂಡಿ‌ ನೋವಿತ್ತು. ಪ್ರಧಾನಿಯನ್ನೇ ಬದಲಾಯಿಸದ ನಾವು ಸಿಎಂ ಬದಲಾಯಿಸುತ್ತೇವಾ? ಇದೆಲ್ಲಾ ಕೇವಲ ಊಹಾಪೋಹ ಅಷ್ಟೇ ಎಂದರು.

    ಮತಾಂತರದ ವಿರುದ್ಧ ಅಬ್ಬರಿಸಿದ ಸಿಂಹ 

    ಮತಾಂತರ ಕಾಯ್ದೆ ಜಾರಿಗೆ ವಿರೋಧ ವಿಚಾರದ ಬಗ್ಗೆ ಮಾತ್ನಾಡಿದ ಅವರು, ಬಿಷಪ್‌ಗಳ ಫಾದರ್‌ ಸೇರಿ ಕಾಯ್ದೆ ವಿರೋಧಿಸುತ್ತಿರುವವರ ವಿರುದ್ದ ಪ್ರತಾಪ ಸಿಂಹ ವಾಗ್ದಾಳಿ ನಡೆಸಿದರು. ಜನರನ್ನು ಮಂಗ್ಯಾ ಮಾಡಿ ಮತಾಂತರ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ. ಚಿಕಿತ್ಸೆ ಕೊಡಿಸಿ ರೋಗ ವಾಸಿ ಮಾಡಿಸುತ್ತಾರೆ. ನಂತರ ಏಸುವಿನ ಪ್ರಾರ್ಥನೆ ಮಾಡಿಸುತ್ತಾರೆ. ಏಸುವಿನಿಂದ ಗುಣ ಆಯ್ತು ಅಂತಾ ಮೋಸದಿಂದ ಮತಾಂತರ ಮಾಡ್ತಾರೆ.  ಎಲ್ಲಾ ಆರೋಗ್ಯ ಕೇಂದ್ರಗಳನ್ನು ಬಂದ್ ಮಾಡಿ. ಬರೀ ಏಸುವಿನ ದೇವಾಲಯ ಕಟ್ಟಿಸಿ ಎಂದು ಸವಾಲ್ ಹಾಕಿದರು. ಈಗಾಗಲೇ ಯೂರೋಪಿಯನ್ ದೇಶಗಳಲ್ಲಿ ಕ್ರೈಸ್ತ ಧರ್ಮ ನೆಲ ಕಚ್ಚುತ್ತಿದೆ. ಅಲ್ಲಿ ಚರ್ಚ್‌ಗಳಿಗೆ ಯಾರು ಹೋಗುತ್ತಿಲ್ಲ. ಚರ್ಚ್ ಗಳು ಅಲ್ಲಿ ಮಾರಾಟಕ್ಕಿವೆ. ಅದಕ್ಕಾಗಿ ಇಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನವೇ ಮತಾಂತರ ಎಂದು ವಾಗ್ದಾಳಿ ನಡೆಸಿದರು.

    ಇದನ್ನೂ ಓದಿ: BJP ಕಾರ್ಯಕಾರಿಣಿಗೆ ತೆರೆ: ಹಾಲಿ-ಮಾಜಿ CMಗಳಾದ ಬೊಮ್ಮಾಯಿ-ಶೆಟ್ಟರ್ ಮಧ್ಯೆ ಎಲ್ಲವೂ ಸರಿ ಇಲ್ವಾ?

    ಧರ್ಮವನ್ನು ಮಾರುಕಟ್ಟೆ ವಸ್ತು ಮಾಡಬೇಡಿ

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಯ್ದೆ ವಾಪಸ್ಸು ವಿಚಾರಕ್ಕೂ ಕಾರವಾಗಿಯೇ ಪ್ರತಿಕ್ರಿಯೆ ನೀಡಿದ ಅವರು. ಇಂತಹ ಮನಸ್ಥಿತಿಯಿಂದಲೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಮಾದರಿ ಸರ್ಕಾರ. ಇದು ಜನರಿಗೆ ಗೊತ್ತಿದೆ. ಆದ್ದರಿಂದ ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. 2023 ರಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. ಕಿತ್ತು ಒಗೆಯುವ ಕಿತ್ತು ಹಾಕುವ ಅವಕಾಶ ಜನ ನಿಮಗೆ ಕೊಡುವುದಿಲ್ಲ. ಅವರ ನಾಯಕರು ಪ್ರತಿ ಬಾರಿ ಹೊಸ ಹೊಸ ಕ್ಷೇತ್ರ ಹುಡುಕುವು ಪರಿಸ್ಥಿತಿ ಬಂದಿದೆ. ಕ್ರಿಶ್ಚಿಯನಿಟಿ ಏನು ಮಾರುಕಟ್ಟೆಯ ವಸ್ತುನಾ ? ನೀವು ಟ್ರೈ ಮಾರಿ ನಾವು ಮೇರಿ ಅನ್ನೋಕೆ ? ಇದೇನು ಸೋಪಾ ಮಾರಾಟನಾ ?ನಿಮ್ಮ ಧರ್ಮವನ್ನು ಮಾರುಕಟ್ಟೆ ವಸ್ತು ಮಾಡಬೇಡಿ. ಮೋಸದಿಂದ ಮತಾಂತರ‌ ಮಾಡಬೇಡಿ. ಎಂದು ಪ್ರಶ್ನೆ ಮಾಡಿದರು.

    ಸಿದ್ದರಾಮಯ್ಯ ಬರೀ ಹಿಟ್ ಅಂಡ್ ರನ್ ಮಾಡ್ತಾರೆ

    ಮೇಕೆದಾಟು ಪಾದಯಾತ್ರೆ ವಿಚಾರ. ಸಿದ್ದರಾಮಯ್ಯ ವಿರುದ್ದ ಸಂಸದ ಪ್ರತಾಪಸಿಂಹ ವಾಗ್ದಾಳಿ. ಸಿದ್ದರಾಮಯ್ಯ ಬರೀ ಹಿಟ್ ಅಂಡ್ ರನ್ ಮಾಡ್ತಾರೆ. ಒಂದು ವಿಚಾರ ತೆಗೆದುಕೊಳ್ಳುತ್ತಾರೆ. ಅರ್ಧಕ್ಕೆ ಬಿಡುತ್ತಾರೆಮತ್ತೆ ಅಲ್ಲಿಂದ ಓಡಿ ಹೋಗುತ್ತಾರೆ. ಮತಾಂತರ ನಿಷೇಧ ಕಾಯ್ದೆಗೆ ಅವರೇ ಸಹಿ ಹಾಕಿದ್ದರು. ಇಲ್ಲ ಅಂತಾ ಹೇಳಿ ಅಲ್ಲೂ ಸಿಕ್ಕಿಕೊಂಡರು. ನಂತರ ಕಣ್ಣು ತಪ್ಪಿನಿಂದ ಅದು ಇದು ಅಂತಾ ಹೇಳಿದರು.ಸಿದ್ದರಾಮಯ್ಯ ಯಾವುದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ಮಹಾರಾಷ್ಟ್ರಕ್ಕೆ ಹೆದರಿಕೊಳ್ಳುವ ಕಾಂಗ್ರೆಸ್‌ನಿಂದ ನಮಗೆ ಪಾಠ ಕಲಿಯುವ ಅವಶ್ಯಕತೆ ಇಲ್ಲ.

    ಇದನ್ನೂ ಓದಿ: HDKಗೆ ಇನ್ನು ವಯಸ್ಸಿದೆ, ಆದರೆ ನನ್ನ ಗಡ್ಡ ಬೆಳ್ಳಗಾಗೋಗಿದೆ: ವ್ಯಂಗ್ಯವಾಗೇ ತಿರುಗೇಟು ಕೊಟ್ಟ DK Shivakumar

    ದೇಶ ವಿರೋಧಿ ಚಟುವಟಿಕೆ ಹಿಂದೆ ಕಾಂಗ್ರೆಸ್ ಇದೆ 

    ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಜಾ ಒತ್ತಾಯ ವಿಚಾರ. ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪರ ಸಂಸದ ಪ್ರತಾಪ್ ಸಿಂಹ ಬ್ಯಾಟಿಂಗ್. ರಂಗಾಯಣದಲ್ಲಿ ಬಹು ಕಾಲದಿಂದಲೂ ಎಡಚರ ಹಾವಳಿ ಆಗಿತ್ತು.ಇದು ಎಡಪಂಥೀಯರ ಸ್ವತ್ತು ಅನ್ನುವ ರೀತಿಯ ಆಗಿತ್ತು. ಮಾರ್ಕ್ಸ್ ವಾದ, ಟೆರಿಸ್ಟ್ ಮನಸ್ಥಿತಿಯನ್ನು ಬಿಡಿ. ಈ ರೀತಿಯ ಅಪಪ್ರಚಾರ ಮಾಡಬೇಡಿ. ನಿಮಗೆ ಅವಕಾಶ ಸಿಕ್ಕುತ್ತಿಲ್ಲ. ಅಂದರೆ ಅವಕಾಶ ಕೊಡಿಸುತ್ತೇವೆ. ರಂಗಾಯಣದಲ್ಲಿ ಎಡಪಂಥ ಬಲಫಂಥ ಮಧ್ಯಪಂಥ ಎಲ್ಲದಕ್ಕೂ ಅವಕಾಶ ಸಿಗಬೇಕು. ಟೆರರಿಸ್ಟ್‌ಗಳಿಗೆ ಬೆಂಬಲ ಕೊಟ್ಟವರು ಇವರಿಗೆ ಕೊಡದೆ ಇರುತ್ತಾರಾ? ಎಲ್ಲಾ ದೇಶ ವಿರೋಧಿ ಚಟುವಟಿಕೆ ಹಿಂದೆ ಕಾಂಗ್ರೆಸ್ ಇರುತ್ತದೆ. ಅಡ್ಡಂಡ ಕಾರ್ಯಪ್ಪ ಬಂದ ಮೇಲೆ ರಂಗಾಯಣ ಕ್ರಿಯಾ ಶೀಲವಾಗಿದೆ ಎಂದರು.
    Published by:Kavya V
    First published: