ಮತ್ತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ಹೊರ ಹಾಕಿದ ಪ್ರತಾಪ್​ ಸಿಂಹ

ಜಿಲ್ಲೆಯಲ್ಲಿ ಕೊರೋನಾ ಪರೀಕ್ಷೆ ಕಡಿಮೆ ಮಾಡಿದ ಹಿನ್ನೆಲೆ ಕೊರೊನಾ ಸೋಂಕು‌ ಹರಡಲು ಕಾರಣ ಆಯ್ತು. ಇದನ್ನ‌ ಮುಕ್ತವಾಗಿ ನಾನು‌ ಒಪ್ಪಿಕೊಳ್ಳುತ್ತೆನೆ. ನಾವು ಟೆಸ್ಟ್ ಕಡಿಮೆ ಮಾಡಬಾರದಿತ್ತು

ಸಂಸದ ಪ್ರತಾಪ್​​ ಸಿಂಹ.

ಸಂಸದ ಪ್ರತಾಪ್​​ ಸಿಂಹ.

 • Share this:
  ಮೈಸೂರು (ಮೇ. 27):  ಜಿಲ್ಲೆಯಲ್ಲಿ ಕೋವಿಡ್​ ನಿಯಂತ್ರಣ ಮಾಡುವಲ್ಲಿ ಆಡಳಿತ ಯಂತ್ರ ದಾರಿ ತಪ್ಪಿದ ಮೇಲೆ ಜನಪ್ರತಿನಿಧಿಗಳಿಗೆ ಈ ಜವಬ್ದಾರಿ ನೀಡಲಾಗಿದೆ. ಇದನ್ನ ರಾಜ್ಯಮಟ್ಟದಲ್ಲು ಮಾಡಿದ್ದರು. ಉಸ್ತುವಾರಿ ಸಚಿವರು ಜಿಲ್ಲಾಮಟ್ಟದಲ್ಲೂ ಮಾಡಿ‌ ನಮ್ಮನ್ನ ನೇಮಕ‌ ಮಾಡಿದ್ದರು. ನಾನು ಹೆಮ್ಮೆಯಿಂದ ಹೇಳುತ್ತೇನೆ. ನಾವು ಜವಾಬ್ದಾರಿ ವಹಿಸಿಕೊಂಡ ಮೇಲೆ ಎಲ್ಲವು ನಿಯಂತ್ರಣಕ್ಕೆ ಬಂದಿದೆ ಎಂದು ಸಂಸದ ಪ್ರತಾಪ್​ ಸಿಂಹ ತಿಳಿಸಿದರು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಇಂದು ಕೂಡ ಅಸಮಾಧಾನ ಹೊರಹಾಕಿ ಮಾತನಾಡಿದ ಸಂಸದರು, ಕೆಲಸ ಮಾಡಿದರೆ ಜನ ನೆನಪಿಸಿಕೊಳ್ಳುತ್ತಾರೆ. ಇಲ್ಲವಾದ್ರೆ ಥೂ ಚಿ ಅಂತಾರೆ. ನಮ್ಮಲ್ಲಿ ಶಿಖಾ, ಅಭಿರಾಮ್, ರಂದೀಪ್‌‌ರಂತಹ ಮೆಲ್ಪಂಕ್ತಿ ಅಧಿಕಾರಿಗಳು ಇಲ್ಲಿ ಕೆಲಸ ಮಾಡಿದ್ದಾರೆ. ಶಿಖಾ ಅವರ ಜೊತೆ ದಸರಾ ಮಾಡಿದ್ದೇವೆ. ರಂದೀಪ್ ಅವರ ಜೊತೆ ಯೋಗ ಡೇ ಮಾಡಿದ್ದೇವು. ಅಭಿರಾಮ್ ಜೊತೆ ಕೊರೋನಾ ನಿಯಂತ್ರಣ ಮಾಡಿದ್ದೇವು. ಈಗಲೂ ಯಾರೇ ಅಧಿಕಾರಿ ಇದ್ದರೂ ಅವರ ಜೊತೆ ಕೆಲಸ ಮಾಡುತ್ತೀವಿ. ಅವರು ಬಂದರೂ ಸರಿ ಬಾರದೆ ಇದ್ದರೂ ಸರಿ ನಾವು ಕೆಲಸ ಮಾಡುತ್ತೇವೆ ಎಂದರು.

  ಪರೀಕ್ಷೆ ಕಡಿಮೆಯಾದ ಪರಿಣಾಮ ಸೋಂಕು ಹೆಚ್ಚಳ

  ಜಿಲ್ಲೆಯಲ್ಲಿ ಕೊರೋನಾ ಪರೀಕ್ಷೆ ಕಡಿಮೆ ಮಾಡಿದ ಹಿನ್ನೆಲೆ ಕೊರೊನಾ ಸೋಂಕು‌ ಹರಡಲು ಕಾರಣ ಆಯ್ತು. ಇದನ್ನ‌ ಮುಕ್ತವಾಗಿ ನಾನು‌ ಒಪ್ಪಿಕೊಳ್ಳುತ್ತೆನೆ. ನಾವು ಟೆಸ್ಟ್ ಕಡಿಮೆ ಮಾಡಬಾರದಿತ್ತು. ಇದು ಸೋಂಕು ಹೆಚ್ಚಾಗಲು ಕಾರಣ ಆಯಿತು. ನಮ್ಮ ಹಾಗೂ ಜನರ ನಿರ್ಲಕ್ಷ್ಯದಿಂದ ಇದು ನಡೆದಿದೆ. ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ಹರಡಿಬಿಟ್ಟಿದೆ. ಇದಕ್ಕೆ ಕೋವಿಡ್‌ ಮಿತ್ರ ಮೂಲಕ ಪರಿಹಾರ ಹುಡುಕಿದ್ದೇವೆ. ವಾಕ್ಸಿನೆಷನ್ ಬಗ್ಗೆ ಕೂಡ ಜನರಲ್ಲಿ‌ ಗೊಂದಲ ಇತ್ತು. ಇದೇಲ್ಲದರ ಪರಿಣಾಮ ಹಿಂದಿನ ಲಾಕ್‌ಡೌನ್‌ನಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ನಾವು ಪಂಚಸೂತ್ರ ಯೋಜನೆ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂದರು

  ವಿಶ್ವನಾಥ್​ಗೆ ತಿರುಗೇಟು

  ಟಾಸ್ಕ್​ ಫೋರ್ಸ್​ ಸಮಿತಿ ರಚನೆ ಕುರಿತು ಎಚ್​ ವಿಶ್ವನಾಥ್​ ಟೀಕೆಗೆ ಉತ್ತರಿಸಿದ ಅವರು, ಇದು ಜನಪ್ರತಿನಿಧಿಗಳಿಗೆ ಟಿಎ ಡಿಎ, ಕಾರು ಕೊಡುವಂತಹ ಹುದ್ದೆಯಲ್ಲ. ಇದು ಕೊರೋನಾ ನಿಯಂತ್ರಿಸುವ ಸಲುವಾಗಿ ನಾವೇ ಸೇವೆ ಸಲ್ಲಿಸಲು ಮಾಡಿಕೊಂಡಿರುವ ಟಾಸ್ಕ್. ಆಡಳಿತದಲ್ಲಿ ವೈಫಲ್ಯ ಕಂಡಾಗ ನಾವು ತೆಗೆದುಕೊಂಡಿರುವ ನಿರ್ಧಾರ. ಜನ ಪ್ರತಿನಿಧಿಗಳು ಜನರಿಗಾಗಿ ದುಡಿಯುವ ಕೆಲಸ ಮಾಡಬೇಕಿದೆ. ಇದಕ್ಕೆ ಸಂಘಸಂಸ್ಥೆಗಳ ಸಹಕಾರ ಇದೆ. ಇದು ನಮ್ಮ ಜವಾಬ್ದಾರಿ ಅಷ್ಟೇ.

  ಇದನ್ನು ಓದಿ: ನಾಗಾಲ್ಯಾಂಡ್​ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ವಿಡಿಯೋ ವೈರಲ್​; ಏನಿದು ಘಟನೆ?

  ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಆ ಕಾರಣಕ್ಕೆ ನಾವೇ ಜವಾಬ್ದಾರಿ ತೆಗೆದುಕೊಂಡಿದ್ದೇವೆ. ಕೊರೋನಾಗೆ ಕಡಿವಾಣ ಹಾಕಲು, ಜಿಲ್ಲಾಡಳಿತಕ್ಕೆ ಸಹಕರಿಸುತ್ತಿದ್ದೇವೆ. ಈ ಬಗ್ಗೆ ಆರೋಪ ಮಾಡುವುದು ಬಿಟ್ಟು ಸಹಕಾರ ನೀಡಿ.ನಮ್ಮ ಜನರ ಉಳಿವಿಗಾಗಿ ನಾವೇ ಸೇವೆ ಸಲ್ಲಿಸಲು ಮುಂದಾಗಿದ್ದೇವೆ ಎಂದರು.

  ಬಿಎಸ್​ ವೈ ಸಮರ್ಥ ನಾಯಕ

  ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ಬರುವುದಕ್ಕೆ ನಮ್ಮ ಕಾರ್ಯಕರ್ತರು ಚಿತ್ರನ್ನ ಮೊಸರನ್ನ ತಿಂದು ಬಾವುಟ ಕಟ್ಟಿದ್ದಾರೆ. ತಮ್ಮ ಮನೆಯಿಂದ ದುಡ್ಡು ಹಾಕಿ ಪ್ರಚಾರ ಮಾಡಿದ್ದಾರೆ. ಅವರ ಶ್ರಮದಿಂದ 106 ಜನ ಬಿಜಪಿ‌ ಶಾಸಕರು ಆಯ್ಕೆಯಾದರು. ಅವರು ಗೆದ್ದಿದ್ದಕ್ಕೇನೆ ಉಳಿದವರು ಬಂದು ಸೇರಿಕೊಂಡಿದ್ದು. 106 ಜನರೇ ಇಲ್ಲದಿದ್ದಿದರೆ ಸರ್ಕಾರ ಎಲ್ಲಾಗುತ್ತಿತ್ತು. ನಾವು ಕೆಲಸ ಮಾಡುತ್ತಿದ್ದೇವೆ‌, ಹೊರಗಿನಿಂದ ಬಂದವರು ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನು‌ ನಿಭಾಯಿಸುತ್ತಿರುವ ಬಿಎಸ್‌ವೈ ಒಬ್ಬ ಸಮರ್ಥ ನಾಯಕರು.ಕೋವಿಡ್ ಸಂದರ್ಭದಲ್ಲು ಇಷ್ಟು ಶ್ರಮದಿಂದ ಕೆಲಸ ಮಾಡುವ ನಾಯಕನನ್ನು ನಾನು ನೋಡೆ ಇಲ್ಲ. ನಾಯಕತ್ವ ಬದಲಾವಣೆ ಬಗ್ಗೆ ನನಗೇನು ಗೊತ್ತಿಲ್ಲ ಆ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
  Published by:Seema R
  First published: