ಅಮ್ಮ-ಮಗ ‘Rafale’ನಲ್ಲಿ ಸಿಕ್ಕಿಹಾಕಿಕೊಂಡಂತೆ, ಕಾಂಗ್ರೆಸ್​​ನವರು Bitcoinನಲ್ಲಿ ತಗ್ಲಾಕೊಳ್ತಾರೆ; Pratap Simha

ಓಬವ್ವನಂತ ವೀರ ವನಿತೆ ಮಹಿಳೆಯನ್ನು ಮೋಸದಿಂದ ಕೊಂದ ಹೈದರಾಲಿಯ ಮಗನ ಜಯಂತಿಯನ್ನ ನೀವು ಮಾಡಿದ್ರಿ. ಮದಕರಿ ನಾಯಕನಿಗೆ ವಿಷ ಹಾಕಿ ಕೊಂದ ಟಿಪ್ಪು ಜಯಂತಿ ಮಾಡಿದ್ದು ನಿಮ್ಮ ಸಾಧನೆ. ನಿಮ್ಮಿಂದ ಬಸವರಾಜ ಬೊಮ್ಮಾಯಿ ಅವರು ಅಭಿವೃದ್ಧಿ ಪಾಠ ಕಲಿಯಬೇಕಾಗಿಲ್ಲ.

ಸಂಸದ ಪ್ರತಾಪ್​​ ಸಿಂಹ

ಸಂಸದ ಪ್ರತಾಪ್​​ ಸಿಂಹ

  • Share this:
ಮೈಸೂರು: ಬಿಟ್ ಕಾಯಿನ್‌ ಹಗರಣ (Bitcoin Scam) ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಹಗರಣದಲ್ಲಿ ಪ್ರಭಾವಿ ರಾಜಕಾರಣಿಗಳ ಮಕ್ಕಳ ಹೆಸರು ಕೇಳಿ ಬಂದಿರುವ ವಿಚಾರವಾಗಿ ಆಡಳಿತಾರೂಢ ಬಿಜೆಪಿಯ ನಾಯಕರು (BJP Leaders) ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕ (Congress Leaders) ಮಧ್ಯೆ ಆರೋಪ-ಪ್ರತ್ಯಾರೋಪಗಳ ಕೆಸರೆರಚಾಟ ಮುಂದುವರೆದಿದೆ. ಇಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ (MP Pratap Simha) ಅವರು ಕಾಂಗ್ರೆಸ್​ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮಾಧ್ಯಮಗಳ ಮೂಲಕ ನಿರೀಕ್ಷಣಾ ಜಾಮೀನು ಹಾಕುತ್ತಿದೆ. ಈ ಪ್ರಕರಣದಲ್ಲಿ ಗಂಭೀರವಾಗಿ ತನಿಖೆ ಮಾಡಿದರೆ, ಕಾಂಗ್ರೆಸ್‌ನವರೇ ಇದರಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂದು ಆರೋಪಿಸಿದರು. ಈಗಾಗಲೇ ಮೊದಲ ಚಾರ್ಜ್ ಶೀಟ್‌ನಲ್ಲಿ ಕಾಂಗ್ರೆಸ್ ಮುಖಂಡರ ಮಕ್ಕಳ ಹೆಸರು ಉಲ್ಲೇಖ ಆಗಿದೆ. ಹೀಗಾಗಿ ಕಾಂಗ್ರೆಸ್ ನವರಿಗೆ ಭಯ ಶುರುವಾಗಿ ನಿರೀಕ್ಷಣಾ ಜಾಮೀನು ಹಾಕುತ್ತಿದ್ದಾರೆ ಎಂದು ಗುಡುಗಿದರು.

ಕಾಂಗ್ರೆಸ್​​ನ ಅಮ್ಮ-ಮಗ ಹೀಗೆ ಮಾಡಿದ್ದರು

ರಫೆಲ್​ ಹಗರಣದಲ್ಲಿ ಕಾಂಗ್ರೆಸ್​​ನ ಅಮ್ಮ-ಮಗ ಹೀಗೆ ಮಾಡಿದ್ದರು. ತಾವು ಡೀಲ್ ಮಾಡಿಕೊಂಡು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದರು. ಈಗ ಅವರ ಡೀಲ್ ಬಯಲಾಗಿದೆ ಎಂದು ಹೆಸರು ಹೇಳದೆ ಸೋನಿಯಾ ಗಾಂಧಿ- ರಾಹುಲ್​​ ಗಾಂಧಿ ವಿರುದ್ಧ ಆರೋಪಿಸಿದರು. ರಾಜ್ಯದಲ್ಲೂ ಅದೇ ತಂತ್ರವನ್ನ ಕಾಂಗ್ರೆಸ್ ಪ್ರಯೋಗಿಸುತ್ತಿದೆ. ಈ ಪ್ರಕರಣವು ಕಾಂಗ್ರೆಸ್ ಕೊರಳಿಗೆ ಸುತ್ತಿಕೊಳ್ಳುತ್ತಿದೆ, ಇದರಿಂದ ಮೊದಲೇ ಕಾಂಗ್ರೆಸ್​​ನವರು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಿಯಾಂಕ ಖರ್ಗೆಗೆ ಮೆಚ್ಯುರಿಟಿ ಇದೆಯೋ..

ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್​ ಮುಖಂಡ ಪ್ರಿಯಾಂಕ ಖರ್ಗೆ ಟ್ವೀಟ್​​ಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ವ್ಯಂಗ್ಯದ ಮೂಲಕ ತಿರುಗೇಟು ನೀಡಿದರು. ಸದಾಶಿವನಗರದಲ್ಲಿ ನಾಲ್ಕು ಭವ್ಯ ಬಂಗಲೆ, ಒಂದೇ ನಂಬರ್‌ನ ಕಾರು. ನಾನು ನಿರ್ಗತಿಕ, ಶೋಷಣೆ ಒಳಗಾದವರು ಎಂದು ಹೇಳಿಕೊಳ್ಳುವವರಿಗೆ ಇರುವ ಆಸ್ತಿ ಪಟ್ಟಿ ಇದು. ಅಂತವರ ಮಾತಿಗೆ ಹೆಚ್ಚಿನ ಮನ್ನಣೆ ನೀಡುವ ಅಗತ್ಯ ಇಲ್ಲ. ಪ್ರಿಯಾಂಕ ಖರ್ಗೆ ಅವರಿಗೆ ಮೆಚ್ಯುರಿಟಿ ಇದೆಯೋ ಇಲ್ಲವೋ ಎಂಬುದನ್ನು ನೀವೆ ತೀರ್ಮಾನ ಮಾಡಿಕೊಳ್ಳಿ, ನಾನು ಹೇಳುವುದಿಲ್ಲ ಎಂದರು.

ಸಿದ್ದರಾಮಯ್ಯ ಮಹಾನ್ ಆರ್ಥಿಕ ತಜ್ಞರಾ?

ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧವೂ ವಾಗ್ಬಾಣ ಬಿಟ್ಟ ಪ್ರತಾಪ್​​ ಸಿಂಹ, ಸಿದ್ದರಾಮಯ್ಯನವರು ಮಹಾನ್ ಆರ್ಥಿಕ ತಜ್ಞರಾ ಎಂದು ಪ್ರಶ್ನಿಸಿದರು. ಬಿಟ್ ಕಾಯಿನ್ ಎಂದರೇನು, ಅದು ಹೇಗೆ ವ್ಯವಹಾರ ಆಗುತ್ತೆ. ಅದನ್ನ ನಮ್ಮಂತವರಿಗೆ ವಿವರಿಸಲಿ, ಆ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಮಗಿದೆ. ನನಗೆ ಆ ಬಗ್ಗೆ ಮಾಹಿತಿ ಇಲ್ಲ, ಹಾಗಾಗಿ ಕೇಳುತ್ತಿದ್ದೇನೆ ಎಂದು ತಿರುಗೇಟು ನೀಡಿದರು. ಸಿಎಂ ಬೊಮ್ಮಾಯಿ ಅವರ ಯಶಸ್ವಿ ಆಡಳಿತ ಸಹಿಸದೆ ಹೀಗೆ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ವಿಷ ಹಾಕಿ ಕೊಂದ ಟಿಪ್ಪು ಜಯಂತಿ ನಿಮ್ಮ ಸಾಧನೆ

ಸಿಎಂ ಬೊಮ್ಮಾಯಿ ಅವರು ಒನಕೆ ಓಬ್ಬವ ಜಯಂತಿ ಮಾಡುತ್ತಿರುವುದನ್ನು ಉಲ್ಲೇಖಿಸಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು. ಸಿದ್ದರಾಮಯ್ಯಮವರೇ ನೀವು ಮಾಡಿದ್ದೇನು? ಓಬವ್ವನಂತ ವೀರ ವನಿತೆ ಮಹಿಳೆಯನ್ನು ಮೋಸದಿಂದ ಕೊಂದ ಹೈದರಾಲಿಯ ಮಗನ ಜಯಂತಿಯನ್ನ ನೀವು ಮಾಡಿದ್ರಿ. ಮೈಸೂರು ಮಹಾರಾಜರಿಗೆ ಮೋಸ ಮಾಡಿದ ಟಿಪ್ಪುವಿನ ಜಯಂತಿ ನೀವು ಮಾಡಿದಿರಿ. ಮದಕರಿ ನಾಯಕನಿಗೆ ವಿಷ ಹಾಕಿ ಕೊಂದ ಟಿಪ್ಪು ಜಯಂತಿ ಮಾಡಿದ್ದು ನಿಮ್ಮ ಸಾಧನೆ. ನಿಮ್ಮಿಂದ ಬಸವರಾಜ ಬೊಮ್ಮಾಯಿ ಅವರು ಅಭಿವೃದ್ಧಿ ಪಾಠ ಕಲಿಯಬೇಕಾಗಿಲ್ಲ‌ ಎಂದು ಮಾತಿನಲ್ಲೇ ಚಾಟಿ ಬೀಸಿದರು.

ಇದನ್ನೂ ಓದಿ: BJP Tweet: ಆತ್ಮವಂಚಕ ಸಿದ್ದರಾಮಯ್ಯ ಅವರ ಮಾತು ನಂಬಿಕೆಗೆ ಯೋಗ್ಯವೇ?: ಬಿಜೆಪಿ ಸಾಲು ಸಾಲು ಟ್ವೀಟ್

ಸೋಲಿಸಿದವರನ್ನೇ ಹೊಗಳುವ ಪರಿಸ್ಥಿತಿ ಬಂದಿದೆ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಮ್ಮನ್ನೆ ಸೋಲಿಸಿದವರನ್ನು‌ ನೀವೇ ಮನಸಾರೆ ಹಾಡಿ ಹೊಗಳುವ ಪರಿಸ್ಥಿತಿ ಬಂದಿದೆ. ಬೊಮ್ಮಾಯಿ ಅವರು ನೂರು ದಿನಗಳಲ್ಲಿ ಜನರ‌ ಮನೆ ಮನ ತಲುಪಿದ್ದಾರೆ. ಉಪ ಚುನಾವಣೆಯಲ್ಲಿನ ಒಂದು ಸೋಲಿಗೆ ಬೇರೆ ಬೇರೆ ಕಾರಣ ಇರುತ್ತವೆ. ಅದು ರಾಜಕೀಯದ ಏಟು, ಒಳ ಏಟು, ತಂತ್ರ ಎಲ್ಲವು ಇರುತ್ತೆ. ನಂಜನಗೂಡು-ಗುಂಡ್ಲುಪೇಟೆಯಲ್ಲಿ ಗೆದ್ದ ಕಾಂಗ್ರೆಸ್. ಮುಂದಿನ ಚುನಾವಣೆಯಲ್ಲಿ ಏನಾಯ್ತು ನೀವು ಏನಾದ್ರಿ? ಬೊಮ್ಮಾಯಿ ಅವರೇ 2023ಕ್ಕು ಮುಖ್ಯಮಂತ್ರಿ ಆಗೋದು ಖಚಿತವಾಗಿದೆ ನಿಮಗೆ. ಹಾಗಾಗಿ ಬೊಮ್ಮಾಯಿ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದೀರಿ. ಮೊದಲು ಈ ರೀತಿ ತಂತ್ರಗಾರಿಕೆಯನ್ನ ಮಾಡೋದು ಮೊದಲು ಬಿಡಿ ಎಂದರು.
Published by:Kavya V
First published: