ಮೈಸೂರು JDS ಅಭ್ಯರ್ಥಿ ಸಿ.ಎನ್.ಮಂಜೇಗೌಡ ಕಿಡ್ನಿ ಮಾರಾಟಗಾರ: ಸಚಿವ ST Somashekhar

ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ (CN Manjegoowda) ಕಿಡ್ನಿ ಮಾರಾಟಗಾರ. ಕಿಡ್ನಿ‌ ಮಾರಾಟದಲ್ಲಿ ಈತ ನಂಬರ್ ಒನ್ ಎಂದು ಆರೋಪಿಸಿದರು. ಒಂದೇ ಸೈಟನ್ನು ನಾಲ್ಕು ಜನರಿಗೆ ಮಾರಾಟ ಮಾಡಿದ ಮೋಸಗಾರ ಎಂದರು.

ಸಚಿವ ಎಸ್. ಟಿ.ಸೋಮಶೇಖರ್

ಸಚಿವ ಎಸ್. ಟಿ.ಸೋಮಶೇಖರ್

  • Share this:
ಮೈಸೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪರಿಷತ್ ಚುನಾವಣೆ (MLC Election) ರಾಜಕೀಯ ಆರೋಪ-ಪ್ರತ್ಯಾರೋಪಳಿಗೆ ವೇದಿಕೆಯಾಗುತ್ತಿದೆ. ಮೈಸೂರಿನ (Mysuru) ರಮಾಗೋವಿಂದ ರಂಗಮಂದಿರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ (Election Campaign)  ಮಾತನಾಡಿದ ಸಚಿವ ಎಸ್.ಟಿ,ಸೋಮಶೇಖರ್ (Minister ST Somashekhar).  ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ (CN Manjegoowda) ಕಿಡ್ನಿ ಮಾರಾಟಗಾರ. ಕಿಡ್ನಿ‌ ಮಾರಾಟದಲ್ಲಿ ಈತ ನಂಬರ್ ಒನ್ ಎಂದು ಆರೋಪಿಸಿದರು. ಒಂದೇ ಸೈಟನ್ನು ನಾಲ್ಕು ಜನರಿಗೆ ಮಾರಾಟ ಮಾಡಿದ ಮೋಸಗಾರ . ಜೆಡಿಎಸ್ (JDS) ಅಭ್ಯರ್ಥಿಯನ್ನು ಗೆಲ್ಲಿಸಿದರೆ ಮೈಸೂರು - ಚಾಮರಾಜನಗರ ಜನರಿಗೆ ಮಾಡಿದ ಅವಮಾನ ಎಂದು ಹೇಳಿ ಮತಯಾಚನೆ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೂ ಗಂಭೀರ ಆರೋಪ

ಬೆಂಗಳೂರಿನ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಒಬ್ಬರು 1700 ಕೋಟಿ ಒಡೆಯ ಎಂದು ತೋರಿಸಿಕೊಂಡಿದ್ದಾನೆ. ಹಿಗಾಗಿ ಅವನ ಹಿನ್ನೆಲೆಯನ್ನ ಡಿಸಿಪಿ ಗೆ ಕರೆ ಮಾಡಿ ತರಿಸಿಕೊಂಡು ನೋಡಿದಾಗ ಅವನ ಮೇಲೆ ಬರೋಬ್ಬರಿ 40 ಕೇಸ್ ದಾಖಲಾಗಿದೆ.

ಅಲ್ಲದೆ ಆತ ತನ್ನ ಮಗಳ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದ ಅಂತ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಿರುವಾಗಿ ಕಾಂಗ್ರೆಸ್ ಆತನನ್ನ ತನ್ನ ಅಭ್ಯರ್ಥಿ ಎಂದು ಚುನಾವಣೆಯಲ್ಲಿ ನಿಲ್ಲಿಸಿದೆ ಅಂತ ಸಚಿವ ಎಸ್ ಟಿ ಸೋಮಶೇಖರ್ ಆರೋಪಿಸಿದ್ದಾರೆ.

ಇದನ್ನೂ ಓದಿ:  ನಾನು ಯಾವತ್ತೂ ಹಲ್ಕಟ್ ರಾಜಕಾರಣ ಮಾಡುವುದಿಲ್ಲ: ಸಚಿವ ST Somashekhar

ಮೂರು ತಿಂಗಳು ಗಡಿಪಾರು ಆಗಿದ್ರಾ ಕಾಂಗ್ರೆಸ್ ಅಭ್ಯರ್ಥಿ?

ಹೀಗೆ 40ಕ್ಕೂ ಹೆಚ್ಚು ಪ್ರಕರಣಗಳು, ಮಗಳ ಮೇಲಿನ ಅತ್ಯಾಚಾರದ ಪ್ರಕರಣಗಳನ್ನ ನೋಡಿ ಕಾಂಗ್ರೆಸ್ ಪಕ್ಷ ಆತನಿಗೆ ಟಿಕೆಟ್ ಕೊಟ್ಟಿರಬೇಕು. ಈಗಾಗಲೇ ಆತನ ಎಲ್ಲಾ ದಾಖಲೆಗಳನ್ನ ನಾವು ತರಿಸಿಕೊಂಡಿದ್ದೇವೆ. ಆತ 1700 ಕೋಟಿಯನ್ನ ಅಫಿಶಿಯಲ್ ಆಗಿ ಡಿಕ್ಲೇರ್ ಮಾಡಿಕೊಂಡಿದ್ದಾನೆ. ಆದ್ರೆ ಆತನ ಬಳಿ ಅದಕ್ಕೆ ಎರಡು ಪಟ್ಟು ಹಣ ಹೆಚ್ಚಿಗೆ ಇದೆ ಎಂಬುದು ಗೊತ್ತಾಗಿದೆ.

ಅಲ್ಲದೆ ಆತ 5 ಕೋಟಿಯಿಂದ 60 ಕೋಟಿ ವರೆಗೂ ವಂಚನೆ ಮಾಡಿದ್ದಾನೆ. ಮೂರು ತಿಂಗಳು ಅವನನ್ನ ಗಡಿ ಪಾರು ಮಾಡಿ, ಆತನನ್ನ ಜೈಲಿನಲ್ಲಿ ಇಟ್ಟಿದ್ದೋ ಎಂದು ಡಿಸಿಪಿ ಹೇಳಿದ್ದಾರೆ ಅಂತ ಸಚಿವ ಸೋಮಶೇಖರ್ ಆರೋಪಿಸಿದ್ದಾರೆ.

ನಮ್ಮ ಬಳಿ ದಾಖಲೆ ಇದೆ ಎಂದ STS

ನಾನು ಮಾಡ್ತಿರೋ ಆರೋಪ ನಿಜವಾದದ್ದು, ಸುಳ್ಳು ಹೇಳ್ತಿಲ್ಲ. ಈ ಬಗ್ಗೆ ಈಗಾಗಲೇ ನಮ್ಮ ಪಕ್ಷದಲ್ಲಿ ಚೆರ್ಚಿಸಲಾಗಿದೆ. ಡಿಸೆಂಬರ್ 2 ಅಥವಾ 3 ರಂದು ಎಲ್ಲಾ ಶಾಸಕರು ಹಾಗೂ ಸಚಿವರು ಅಷ್ಟು ದಾಖಲೆಗಳನ್ನ ಬಿಡುಗಡೆ ಮಾಡುತ್ತೇವೆ ಎಂದರು. ಇಂತವರನ್ನ ಕಾಂಗ್ರೆಸ್ ಕರೆತಂದು ಟಿಕೆಟ್ ನೀಡಿದೆ ಇದು ನನಗೆ ಗಾಬರಿಯಾಗಿದೆ ಅಂತ ಸೋಮಶೇಖರ್ ತಿಳಿಸಿದ್ದಾರೆ.

ಇದನ್ನೂ ಓದಿ:  Belagavi: ಆ ‘ಕೊಳೆ’ ನಮ್ಮಿಂದ ದೂರ ಹೋಯ್ತು: ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ಪರೋಕ್ಷ ವಾಗ್ದಾಳಿ

ಡಿಸೆಂಬರ್ 10 ಮತದಾನ, ಡಿ.14ಕ್ಕೆ ಫಲಿತಾಂಶ

2022ರ ಜನವರಿ 5ರಂದು 25 ಪರಿಷತ್​ ಸದಸ್ಯರ (MLC’s)ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ ‌10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ (Election Commission) ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ (Election) ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ (vote counting) ನಡೆದು, ಫಲಿತಾಂಶ ಹೊರ ಬೀಳಲಿದೆ.

ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು ಮತ್ತು ಮೈಸೂರು ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರಗಳಿಂದ ಎಲೆಕ್ಷನ್ ನಡೆಯಲಿದೆ.
Published by:Mahmadrafik K
First published: