ಮೈಸೂರು (ಏ.4): ರಾಜ್ಯದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಬಿಟ್ಟರೆ ವೇಗವಾಗಿ ಬೆಳೆಯುತ್ತಿರುವ ನಗರ ಅಂದ್ರೆ ಅದು ಸಾಂಸ್ಕ್ರತಿಕ ನಗರಿ ಮೈಸೂರು, (Mysore) ಒಂದು ಕೈಗಾರಿಕೆಗಳು ಮೈಸೂರಿನತ್ತ ಮುಖಮಾಡುತ್ತಿವೆ. ಮತ್ತೊಂದೆಡೆ ಬಹುರಾಷ್ಟ್ರೀಯ ಕಂಪನಿಗಳು (Multinational Companies) ಮೈಸೂರಿನ ಗಮನ ಹರಿಸಿವೆ. ಇತ್ತ ಮೈಸೂರು ಹಾಗೂ ಬೆಂಗಳೂರು ನಡುವೆ ಈಗಾಗಲೇ 10 ಪಥದ ರಸ್ತೆ ನಿರ್ಮಾಣವಾಗುತ್ತಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಬುಲೆಟ್ ರೈಲು (Bullet Train) ಯೋಜನೆ ಕೂಡ ಸಾಕಾರಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ 10 ವರ್ಷಗಳ ಮೈಸೂರು ನಗರದ ಬೆಳವಣಿಗೆಯನ್ನು ಗಮನದಲ್ಟಿಟ್ಟುಕೊಂಡು ಮೆಟ್ರೋ (Metro) ಅಥವಾ ಮೆಟ್ರೋ ಲೈಟ್ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ.
ಮೆಟ್ರೋ ರೈಲು ಯೋಜನೆಗೆ ಸಿದ್ಧತೆ
ಅಭಿವೃದ್ಧಿ ಪತದ ಕಡೆ ಮುಖ ಮಾಡಿರುವ ಮೈಸೂರಿನ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ. ಹೌದು ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ಮೆಟ್ರೋ ರೈಲು ಯೋಜನೆ ನಿರ್ಮಿಸಲು ಸಿದ್ದತೆ ನಡೆಯುತ್ತಿದೆ. ಇದನ್ನು ಅನುಷ್ಠಾನಗೊಳಿಸಲು ಕಾರ್ಯ ಸಾಧ್ಯತಾ ವರದಿ ತಯಾರಿಸಲು ಪ್ರಸಕ್ತ ಸಾಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬಜೆಟ್ ನಲ್ಲಿ ಒಂದು ಕೋಟಿ ರೂಪಾಯಿ ಮೀಸಲಿಟ್ಟಿದೆ. ಇಂದು ನಡೆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಜೆಟ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ. ನೈಪುಣ್ಯತೆ ಹೊಂದಿರುವ ಸಂಸ್ಥೆಯಿಂದ ಮೆಟ್ರೋ ಯೋಜನೆಯ ಕಾರ್ಯಸಾಧ್ಯತಾ ವರದಿ ತಯಾರಿಸಲು ತೀರ್ಮಾನಿಸಲಾಗಿದೆ. ಈ ಮೂಲಕ ಮೈಸೂರಿಗೂ ಮೆಟ್ರೋ ರೈಲು ನಗರ ಸಂಚಾರ ಮಾಡಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಬಜೆಟ್ ನಲ್ಲಿ 1 ಕೋಟಿ ಮೀಸಲಿಡಲಾಗಿದೆ
ಮೆಟ್ರೋ ರೈಲು ಯೋಜನೆಗಾಗಿಯೇ ಬಜೆಟ್ ನಲ್ಲಿ ಒಂದು ಕೋಟಿ ಮೀಸಲಿಡಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ. ಇನ್ನ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರ ಮೂಲಭೂತ ಸೌಕರ್ಯಗಳೊಟ್ಟಿಗೆ, ಹಲವು ಬಡಾವಣೆಗಳನ್ನ, ಏರಿಯಾಗಳನ್ನ ಮತ್ತಷ್ಟು ಅಭಿವೃದ್ಧಿ ಪಡಿಸಲು ಮುಡಾ ಮುಂದಾಗಿದೆ. ಮೈಸೂರಿನ ವಿಜಯನಗರ ಹಾಗೂ ದಟ್ಟಗಳ್ಳಿಯಲ್ಲಿ ಎರಡು ಕೊಠಡಿಯ 952 ಗುಂಪು ಮನೆ ನಿರ್ಮಿಸಲಾಗುತ್ತಿದ್ದು, ಇದಕ್ಕೆ 29.80 ಕೋಟಿ ವೆಚ್ಚವಾಗಲಿದೆ. ಇದರಿಂದ 55 ಕೋಟಿ ರೂಪಾಯಿ ಆದಾಯ ನಿರೀಕ್ಷೆ ಮಾಡಲಾಗಿದ್ದು, ಈ ಬಜೆಟ್ ನಲ್ಲಿ ಇದಕ್ಕೆ 10 ಕೋಟಿ ಮೀಸಲಿಡಲಾಗಿದೆ.
ಇದನ್ನೂ ಓದಿ: Electricity Rate rise: ಕರ್ನಾಟಕದ ಜನರಿಗೆ ‘ಕರೆಂಟ್’ ಶಾಕ್ ; ಪ್ರತಿ ಯೂನಿಟ್ಗೆ ಎಷ್ಟು ಪೈಸೆ ಹೆಚ್ಚಳವಾಗಿದೆ ಗೊತ್ತಾ?
ಮೈಸೂರಿನಲ್ಲಿ ಸ್ಟೇಡಿಯಂ ನಿರ್ಮಾಣ
ಮೈಸೂರು ನಗರದ 8 ಕೆರೆಗಳನ್ನು 9 ಕೋಟಿ ರೂಪಾಯಿ ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗುತ್ತಿದೆ. ಮೈಸೂರಿನಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ 9.20 ಕೋಟಿ ಹಾಗೂ ಉಪ ವಿದ್ಯುತ್ ಕೇಂದ್ರಗಳ ಸ್ಥಾಪನೆಗೆ 3.30 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 182 ಕೋಟಿ ಆದಾಯ ನಿರೀಕ್ಷಿಸಿದ್ದು, 169 ಕೋಟಿ ವೆಚ್ಚವಾಗಲಿದೆ. ಪ್ರಾಧಿಕಾರಕ್ಕೆ 12 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದು ರಾಜೀವ್ ಬಜೆಟ್ ಬಜೆಟ್ ಮುಖ್ಯಾಂಶಗಳ ಬಗ್ಗೆ ವಿವರಣೆ ನೀಡಿದ್ದಾರೆ ಮುಡಾ ಅಧ್ಯಕ್ಷ.
ಇದನ್ನೂ ಓದಿ: Bengaluru: ಇನ್ಮುಂದೆ ಹೋಟೆಲ್ ತಿಂಡಿ-ತಿನಿಸು ಮತ್ತಷ್ಟು ದುಬಾರಿ; ಶೇಕಡಾ 10 ರಷ್ಟು ಬೆಲೆ ಏರಿಕೆ
ಯೋಜನೆಗಳ ಜೊತೆಗೆ ಮುಡಾ ಸಹ ಕೈಜೋಡಿಸಿದೆ
ಸಾಂಸ್ಕೃತಿಕ ನಗರಿ ಮೈಸೂರು ಅಭಿವೃದ್ದಿಗಳ ನಗರದಲ್ಲಿ ಸೇರಲಿದೆ. ಇದಕ್ಕಾಗಿ ಸರ್ಕಾರದ ಹಲವು ಯೋಜನೆಗಳ ಜೊತೆಗೆ ಮುಡಾ ಸಹ ಕೈಜೋಡಿಸಿದೆ. ಮೆಟ್ರೋ ಯೋಜನೆ ಜೊತೆಗೆ ಹಲವಾರು ಯೋಜನೆಗಳನ್ನು ಕೊಡಲು ಮುಂದಾಗಿರುವ ಮುಡಾ ವಿಶನ್ ಮೆಚ್ಚುಗೆಗೆ ಪಾತ್ರವಾಗಿದೆ. ಮೈಸೂರು- ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ಮೆಟ್ರೋ ರೈಲು ಯೋಜನೆ ನಿರ್ಮಿಸಲಾಗುತ್ತಿದೆ. ಇದರ ಅನುಷ್ಠಾನಗೊಳಿಸಲು ಕಾರ್ಯಸಾಧ್ಯತಾ ವರದಿ ತಯಾರಿಸಲು ಪ್ರಸಕ್ತ ಸಾಲಿನ ಮುಡಾ ಬಜೆಟ್ ನಲ್ಲಿ ಒಂದು ಕೋಟಿ ರೂಪಾಯಿ ಮೀಸಲಿಡಲಾಗಿದೆ. ಮೈಸೂರಿನ ದಟ್ಟಗಳ್ಳಿ ಹಾಗೂ ವಿಜಯನಗರದಲ್ಲಿ 952 ಮನೆಗಳಿರುವ ಅಪಾರ್ಟ್ ಮೆಂಟ್ ಕೂಡ ನಿರ್ಮಿಸಲಾಗುತ್ತಿದೆ.
ಮೈಸೂರಲ್ಲಿ ಮೆಟ್ರೋ ನಿರ್ಮಾಣವಾದ್ರೆ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಭಾರೀ ಅನುಕೂಲವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ