ಅಪರೂಪದ ಮಗ ಡಿಕೆ ಕುಮಾರ್; ಅಪ್ಪನ ಹಳೆ ಸ್ಕೂಟರ್​ನಲ್ಲಿ ಅಮ್ಮನ ಜೊತೆ 48 ಸಾವಿರ ಕಿಮೀ ದೇಶ ವಿದೇಶ ಸಂಚಾರ

ಮೈಸೂರು ಮೂಲಕ ಡಿಕೆ ಕುಮಾರ್​( ದಕ್ಷಿಣ್​ಮೂರ್ತಿ ಕೃಷ್ಣ ಕುಮಾರ್​) ಬೆಂಗಳೂರಿನಲ್ಲಿ ಕೈ ತುಂಬಾ ಸಂಬಳ ತರುತ್ತಿದ್ದ ಬ್ಯಾಂಕಿಂಗ್​ ಕೆಲಸದಲ್ಲಿದ್ದರು. ಅವಿಭಕ್ತ ಕುಟುಂಬದಲ್ಲಿ ಬಾಲ್ಯ ಕಳೆದ ಇವರು ತಾಯಿಗೆ ಒಬ್ಬನೇ ಮಗ. ಈಗ ತಮ್ಮ ತಾಯಿಯ ಜೊತೆ ದೇಶ ಪರ್ಯಟನೆಗೆ ಮುಂದಾಗಿದ್ದಾರೆ. ಅಷ್ಟಕ್ಕೂ ಇವರಿಗೆ ಈ ಆಲೋಚನೆ ಬರಲು ಕಾರಣ ಇವರ ತಾಯಿ ಆಡಿದ ಆ ಒಂದು ಮಾತು

Seema.R | news18-kannada
Updated:October 23, 2019, 5:45 PM IST
ಅಪರೂಪದ ಮಗ ಡಿಕೆ ಕುಮಾರ್; ಅಪ್ಪನ ಹಳೆ ಸ್ಕೂಟರ್​ನಲ್ಲಿ ಅಮ್ಮನ ಜೊತೆ 48 ಸಾವಿರ ಕಿಮೀ ದೇಶ ವಿದೇಶ ಸಂಚಾರ
ಡಿಕೆ ಕುಮಾರ್​ ಮತ್ತವರ ತಾಯಿ
  • Share this:
ಮಕ್ಕಳ ಪಾಲನೆ ಪೋಷಣೆ, ಮನೆಗೆಲಸದಲ್ಲಿ ಮಗ್ನರಾಗುವ ಅದೆಷ್ಟೋ ತಾಯಂದಿರು, ತಮ್ಮ ಮನೆ ಸಮೀಪದ ದೇವಸ್ಥಾನ ಬಿಟ್ಟು ಬೇರೆ ಜಗತ್ತನ್ನೇ ಕಂಡಿರುವುದಿಲ್ಲ. ಇಲ್ಲೊಬ್ಬ ತಾಯಿಯ ಕಥೆಯೂ ಹೀಗೆ. ತಮ್ಮ ಜೀವನ ಪೂರ್ತಿ ಅವಿಭಕ್ತ ಕುಟುಂಬಕ್ಕೆ ದುಡಿದ ಅಮ್ಮ ಯಾವುದೇ ದೇವಸ್ಥಾನ ನೋಡಿಲ್ಲ ಎಂದು ಕೇಳಿ ಅಚ್ಚರಿಗೆ ಒಳಗಾದ ಮಗ, ತನ್ನ ಕೆಲಸ ತೊರೆದು ಆಕೆಯ ಜೊತೆ ಪರ್ಯಟನೆಗೆ ಹೊರಟಿರುವ ರೋಚಕ ಕಥೆ ಇದು.

ಮೈಸೂರು ಮೂಲಕ ಡಿಕೆ ಕುಮಾರ್​( ದಕ್ಷಿಣ್​ಮೂರ್ತಿ ಕೃಷ್ಣ ಕುಮಾರ್​) ಬೆಂಗಳೂರಿನಲ್ಲಿ ಕೈ ತುಂಬಾ ಸಂಬಳ ತರುತ್ತಿದ್ದ ಬ್ಯಾಂಕಿಂಗ್​ ಕೆಲಸದಲ್ಲಿದ್ದರು. ಅವಿಭಕ್ತ ಕುಟುಂಬದಲ್ಲಿ ಬಾಲ್ಯ ಕಳೆದ ಇವರು ತಾಯಿಗೆ ಒಬ್ಬನೇ ಮಗ. ಈಗ ತಮ್ಮ ತಾಯಿಯ ಜೊತೆ ದೇಶ ಪರ್ಯಟನೆಗೆ ಮುಂದಾಗಿದ್ದಾರೆ. ಅಷ್ಟಕ್ಕೂ ಇವರಿಗೆ ಈ ಆಲೋಚನೆ ಬರಲು ಕಾರಣ ಇವರ ತಾಯಿ ಆಡಿದ ಆ ಒಂದು ಮಾತು.

ನಾಲ್ಕು ವರ್ಷದ ಹಿಂದೆ ತಂದೆ ಕಳೆದು ಕೊಂಡ ಡಿಕೆ ಕುಮಾರ್​ ಹೀಗೆ ಒಂದು ದಿನ ತಾಯಿಯ ಜೊತೆ ಮಾತನಾಡುವಾಗ ನೀನು ಮಧುರೈ, ತಿರುವಣ್ಣಾ ಮಲೈ ಎಲ್ಲಾ ನೋಡಿದ್ದೀಯಾ ಎಂದು ಪ್ರಶ್ನಿಸಿರಂತೆ. ಈ ವೇಳೆ ಅವರ ತಾಯಿ ಚೂಡರತ್ನ ನಾನು ಇಲ್ಲೇ ಹತ್ತಿರದ ಬೇಲೂರು, ಹಳೇಬೀಡೇ ನೋಡಿಲ್ಲ ಎಂದು ಹೇಳಿದ್ದು ಅವರಿಗೆ ಅಚ್ಚರಿ ಮೂಡಿಸಿತು.ಮದುವೆಯಾದಾಗಿನಿಂದ 10 ಜನರ ಅವಿಭಕ್ತ ಕುಟುಂಬದಲ್ಲಿ ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದ ನನ್ನ ತಾಯಿ ದಿನಪೂರ್ತಿ ಅಡುಗೆ, ಪಾತ್ರೆ, ಬಟ್ಟೆ, ಮನೆಗೆಲಸದಲ್ಲಿಯೇ ಮಗ್ನರಾಗಿದ್ದರು. ನಮಗೆ ಇಷ್ಟೆಲ್ಲಾ ಸೇವೆ ಮಾಡಿದ ತಾಯಿಗೆ ದೇಶದ ಎಲ್ಲಾ ಯಾತ್ರಾ ಸ್ಥಳವನ್ನು ತೋರಿಸಬೇಕು ಎಂದು ನಾನು ನಿರ್ಧರಿಸಿದೆ. ಕೂಡಲೇ ಕೆಲಸಕ್ಕೆ ರಾಜೀನಾಮೆ ನೀಡಿ, ದೇಶ ಪರ್ಯಟನೆಗೆ ಮುಂದಾದೆ ಎನ್ನುತ್ತಾರೆ ಇವರು.

ಅಷ್ಟಕ್ಕೂ ಇವರು ದೇಶ ಪರ್ಯಟನೆ ಮುಂದಾಗಿರುವುದು 20 ವರ್ಷದ ಹಳೆಯ ಬಜಾಜ್​ ಸ್ಕೂಟರ್​ನಲ್ಲಿ. 20 ವರ್ಷದ ಹಿಂದೆ ಈ ಸ್ಕೂಟರ್​ ಅನ್ನು ನನ್ನ ತಂದೆ ನನಗೆ ನೀಡಿದ್ದರು. ಇದೇ ಸ್ಕೂಟರ್​ನಲ್ಲಿ ನಾನು ದೇಶ ಸುತ್ತ ಬೇಕು ಎಂದು ನಿರ್ಧರಿಸಿದೆ. ಕಾರಣ ಇದರಿಂದ ನಾನು, ನನ್ನ ಅಮ್ಮ, ಅಪ್ಪನ ಪ್ರತಿರೂಪದಂತಿರುವ ಸ್ಕೂಟರ್​ ಮೂವರು ಜೊತೆಯಲ್ಲಿಯೇ ಸಂಚಾರ ಮಾಡಿದ ಖುಷಿ ಸಿಕ್ಕಿದೆ.

ಇದನ್ನು ಓದಿ: ಸ್ಪೀಕರ್ ವಿರುದ್ಧ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ; ಬದಾಮಿಯಲ್ಲಿ ಭಾವುಕರಾದ ಮಾಜಿ ಸಿಎಂ

ಜ. 16, 2018ರಿಂದ ಮಾತೃ ಸೇವಾ ಸಂಕಲ್ಪ ಹೆಸರಿನಲ್ಲಿ ಆರಂಭವಾದ ಅವರ ಈ ಸಂಚಾರ ದಕ್ಷಿಣ ಭಾರತ, ಈಶಾನ್ಯ, ಮಧ್ಯ ಭಾರತದ ಎಲ್ಲಾ ದೇವಾಸ್ಥಾನಗಳವರೆಗೂ ಸಾಗಿದೆ. ಒಟ್ಟಾರೆ 48,100 ಕಿ.ಮೀ ಸಂಚಾರ ಮಾಡಿದ್ದಾರೆ. ಇದರ ಜೊತೆ ಮಯನ್ಮಾರ್​, ಭೂತನ್​, ನೇಪಾಳಕ್ಕೂ ಭೇಟಿ ನೀಡಿದ್ದಾರೆ.

ಸದಾ ಮನೆಗಾಗಿ ಜೀವ ತೆತ್ತ ತಾಯಿಗೆ ಮಗ ಸಲ್ಲಿಸುತ್ತಿರುವ ಈ ಸೇವೆ ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ