ಸ್ಕೂಟರ್​​ನಲ್ಲೇ ಅಮ್ಮನ ಜೊತೆ 2 ದೇಶ ಸುತ್ತಿದ ಮಗರಾಯ; ಮೈಸೂರಿನಲ್ಲೊಬ್ಬ ಆಧುನಿಕ ಶ್ರವಣ ಕುಮಾರ

ತಾಯಿಯ ಜೊತೆಗೆ ಬಜಾಜ್​ ಸ್ಕೂಟರ್​ನಲ್ಲಿಯೇ ಕೃಷ್ಣ ಕುಮಾರ್ ಉತ್ತರ ಭಾರತ ಕೈಲಾಸ ಪರ್ವತ, ನೇಪಾಳ, ಮಾನಸ ಸರೋವರ , ಭೂತಾನ್, ಟಿಬೆಟ್ ಸೇರಿದಂತೆ ಮತ್ತಿತರರ ಪುಣ್ಯಕ್ಷೇತ್ರಗಳಲ್ಲಿನ ದೇವರ ದರ್ಶನ ಪಡೆದಿದ್ದಾರೆ.

news18-kannada
Updated:May 24, 2020, 4:05 PM IST
ಸ್ಕೂಟರ್​​ನಲ್ಲೇ ಅಮ್ಮನ ಜೊತೆ 2 ದೇಶ ಸುತ್ತಿದ ಮಗರಾಯ; ಮೈಸೂರಿನಲ್ಲೊಬ್ಬ ಆಧುನಿಕ ಶ್ರವಣ ಕುಮಾರ
ಕರ್ನಾಟಕದ ಗಡಿ ಪ್ರವೇಶಿಸುತ್ತಿದ್ದಂತೆ ಭೂಮಿಗೆ ನಮಸ್ಕರಿಸಿದ ಅಮ್ಮ-ಮಗ
  • Share this:
ತುಮಕೂರು (ಮೇ 24): ತನ್ನ ತಾಯಿಗಾಗಿ ದೇಶದಲ್ಲಿರುವ ಪುಣ್ಯಕ್ಷೇತ್ರಗಳಲ್ಲಿನ ದೇವರ ದರ್ಶನ ಮಾಡಿಸಿದ ಪುತ್ರನೊಬ್ಬ ಆಧುನಿಕ ಶ್ರವಣ ಕುಮಾರ ಎನಿಸಿಕೊಂಡಿದ್ದಾನೆ. ಮೂಲತಃ ಮೈಸೂರು ನಗರದ ಬಿಇ ಇಂಜಿನಿಯರಿಂಗ್ ಪದವೀಧರರಾದ ಕೃಷ್ಣಕುಮಾರ್ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತನ್ನ 70 ವರ್ಷದ ತಾಯಿ ಚೂಡಾರತ್ನ ಅವರೊಂದಿಗೆ ಪುಣ್ಯಕ್ಷೇತ್ರಗಳ ದರ್ಶನಕ್ಕಾಗಿಯೇ ತನ್ನ ಕೆಲಸಕ್ಕೆ ಸ್ವಯಂ ನಿವೃತ್ತಿ ನೀಡಿ ತಂದೆಯ ಹಳೆಯ ಬಜಾಜ್ ಸ್ಕೂಟರ್ ನಲ್ಲಿಯೇ 2 ವರ್ಷ 4 ತಿಂಗಳ ಕಾಲ ಪುಣ್ಯಕ್ಷೇತ್ರಗಳನ್ನು ಸುತ್ತಿದ್ದಾರೆ.  2018ರ ಜನವರಿ 14ರಿಂದ ಮೈಸೂರಿನಿಂದ ತನ್ನ ತಾಯಿಯ ಜೊತೆ ಸ್ಕೂಟರ್​ನಲ್ಲಿಯೇ ಬರೋಬ್ಬರಿ 56,000 ಕಿ.ಮೀ ಪಯಣಿಸಿದ್ದಾರೆ.

ತಾಯಿಯ ಜೊತೆಗೆ ಬಜಾಜ್​ ಸ್ಕೂಟರ್​ನಲ್ಲಿಯೇ ಕೃಷ್ಣ ಕುಮಾರ್ ಉತ್ತರ ಭಾರತ ಕೈಲಾಸ ಪರ್ವತ, ನೇಪಾಳ, ಮಾನಸ ಸರೋವರ , ಭೂತಾನ್, ಟಿಬೆಟ್ ಸೇರಿದಂತೆ ಮತ್ತಿತರ ಪುಣ್ಯಕ್ಷೇತ್ರಗಳಲ್ಲಿನ ದೇವರ ದರ್ಶನ ಪಡೆದಿದ್ದಾರೆ. ಇನ್ನು ನಿನ್ನೆ‌‌ ಶನಿವಾರ ಸಂಜೆ‌ ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿ ಗ್ರಾಮವಾದ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯ ಹೋಬಳಿಯ ಮುದ್ದೇನಹಳ್ಳಿ ಗ್ರಾಮದ ಮೂಲಕ ರಾಜ್ಯಕ್ಕೆ ಪ್ರವೇಶಿಸಿದ್ದಾರೆ.

Mysore son takes his mother to Pilgrimage of Nepal Bhutan in Bajaj Scooter.
ಅಮ್ಮನೊಂದಿಗೆ ತಾಯ್ನಾಡಿಗೆ ವಾಪಾಸಾದ ಕೃಷ್ಣಕುಮಾರ್


ಇದನ್ನೂ ಓದಿ: ಕರ್ನಾಟಕದಲ್ಲಿಂದು 97 ಕೋವಿಡ್​​​-19 ಕೇಸ್​: 2056ಕ್ಕೆ ಏರಿದ ಸೋಂಕಿತರ ಸಂಖ್ಯೆ

ಕೊರೋನಾ ವೈರಸ್ ನ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಚೆಕ್ ಪೋಸ್ಟ್ ನಲ್ಲಿದ್ದ ಆರೋಗ್ಯ ಇಲಾಖೆಯವರು ಆರೋಗ್ಯ ತಪಾಸಣೆ ನಡೆಸಿದ್ದಾರೆ. ತಮ್ಮ ರಾಜ್ಯಕ್ಕೆ ಮರುಳುತ್ತಿದ್ದಂತೆ ಭೂಮಿ ತಾಯಿಗೆ ಪುತ್ರ ಹಾಗೂ ತಾಯಿ ನಮಿಸಿದ್ದಾರೆ. ತಾಯಿ ಮತ್ತು ಮಗ ರಾಜ್ಯ ಪ್ರವೇಶಿಸುವ ಬಗ್ಗೆ ವಿಷಯ ತಿಳಿದ ತಹಶೀಲ್ದಾರ್ ಡಾ. ವಿಶ್ವನಾಥ್ ಹಾಗೂ ಕೊಡಿಗೇನಹಳ್ಳಿಯ ಪೋಲೀಸ್ ಠಾಣೆಯ ಪಿ ಎಸ್ ಐ ಪಾಲಾಕ್ಷ ಪ್ರಭು ತಮ್ಮ ಸಿಬ್ಬಂದಿಗಳೊಂದಿಗೆ ಗಡಿಯಲ್ಲಿನ ಚೆಕ್ ಪೋಸ್ಟ್ ಬಳಿ ಕೃಷ್ಣಕುಮಾರ್ ಹಾಗೂ ಆತನ ತಾಯಿಯನ್ನು ಸನ್ಮಾನಿಸಿದರು.
First published: May 24, 2020, 4:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading