ಮೈಸೂರು(ಅ.26): ಪ್ರತಿಷ್ಠಿತ ಮಹಾರಾಜ ಪದವಿ ಕಾಲೇಜಿನ ಕನ್ನಡ ವಿಭಾಗದಲ್ಲೇ ಕನ್ನಡದ ನಾಮಫಲಕ ಹಾಕದೇ ಇದೀಗ ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಕನ್ನಡ ಭಾಷೆಗೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕುವೆಂಪು, ರವೀಂದ್ರನಾಥ್ ಠಾಗೂರ್ ಅವರ ಆದಿಯಾಗಿ ಅನೇಕ ಖ್ಯಾತನಾಮರು ವಿದ್ಯಾಭ್ಯಾಸ ಮಾಡಿದ ಮಹಾರಾಜ ಕಾಲೇಜಿನಲ್ಲಿ ಕನ್ನಡ ಕಣ್ಮರೆಯಾಗಿದ್ದು ಕನ್ನಡಾಭಿಮಾನಿಗಳನ್ನ ಕೆರಳಿಸಿದೆ.
ಕಾಲೇಜಿನ ಕನ್ನಡ ವಿಭಾಗದಲ್ಲಿ ಕನ್ನಡದ ನಾಮಫಲಕ ಹಾಕುವ ಬದಲು ಅಂಗ್ಲಭಾಷೆಯಲ್ಲಿ ನಾಮಫಲಕ ಹಾಕಿದ್ದು ಕಾಲೇಜಿನ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಟ್ವಿಟರ್ ನಲ್ಲಿ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಪೋಟೋ ಸಮೇತ ಪೋಸ್ಟ್ ಮಾಡಿದ್ದಾರೆ, ಇನ್ನೇನೂ ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿರುವಾಗಲೇ ಪ್ರತಿಷ್ಟಿತ ಕಾಲೇಜಿನಲ್ಲಿ ಈ ರೀತಿಯ ನಡೆ ಖಂಡನೀಯವಾಗಿದೆ.
ಚೆ..ಕನ್ನಡದ ಬಗ್ಗೆ ಇಷ್ಟೊಂದು ತಾತ್ಸಾರವೇ..
ಅದೆಂತಹ ದುಸ್ಥಿತಿಗೆ ಕನ್ನಡವನ್ನು ತಂದು ಇಟ್ಟಿದ್ದೇವೆ ಅನ್ನೋದಕ್ಕೆ ಇದೆಲ್ಲಾ ಉದಾಹರಣೆ..
ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ...ಆದರೆ ಮಾಹಿತಿ ಆಂಗ್ಲದಲ್ಲಿ ನಾಚಿಕೆ ಆಗ್ಬೇಕು...😡
ಕನ್ನಡಕ್ಕೆ ಬದಲಾಯಿಸಿ..@kdabengaluru@prajavani @CMofKarnataka @mysurucorp pic.twitter.com/f2TTYEHdWH
— Rupesh Rajanna(ರೂಪೇಶ್ ರಾಜಣ್ಣ) (@rajanna_rupesh) October 23, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ