• Home
 • »
 • News
 • »
 • state
 • »
 • Mysore Lovers: 5 ತಿಂಗಳ ಹಿಂದೆ ಓಡಿ ಹೋಗಿದ್ದ ಪ್ರೇಮಿಗಳು ವಾಪಸ್ ಊರಿಗೆ ಬಂದು ಹೆಣವಾಗಿದ್ದೇಕೆ?

Mysore Lovers: 5 ತಿಂಗಳ ಹಿಂದೆ ಓಡಿ ಹೋಗಿದ್ದ ಪ್ರೇಮಿಗಳು ವಾಪಸ್ ಊರಿಗೆ ಬಂದು ಹೆಣವಾಗಿದ್ದೇಕೆ?

ಶಿವಕುಮಾರ್ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋದಾಗಲೂ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದಾನೆ. ನಿನ್ನನ್ನು ಮದುವೆ ಆಗಲಾರೆ ಎಂದು ಹೇಳಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. (ಸಾಂದರ್ಭಿಕ ಚಿತ್ರ)

ಶಿವಕುಮಾರ್ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋದಾಗಲೂ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದಾನೆ. ನಿನ್ನನ್ನು ಮದುವೆ ಆಗಲಾರೆ ಎಂದು ಹೇಳಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. (ಸಾಂದರ್ಭಿಕ ಚಿತ್ರ)

ಅದೇನಾಯಿತೋ ಏನೋ ತಡರಾತ್ರಿ ಗ್ರಾಮಕ್ಕೆ ಬಂದ ಜೋಡಿ, ಮನೆಗೆ ಹೋಗದೆ ಊರು ಹೊರಗಿರೋ ರಾಕೇಶನ ಜಮೀನಿಗೆ ಹೋಗಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 • Share this:

  ಮೈಸೂರು: ಅವ್ರಿಬ್ಬರೂ ಒಂದೇ ಊರಿನ ಅಕ್ಕ ಪಕ್ಕದ ಮನೆಯಲ್ಲಿ (Neighbors) ವಾಸವಾಗಿದ್ರು. ಚಿಗುರು ಮೀಸೆ ಇರುವಾಗಲೇ ಆ ಯುವಕನಿಗೆ ಪಕ್ಕದ ಮನೆಯ ಯುವತಿ ಮೇಲೆ ಲವ್ (Love) ಆಗಿತ್ತು. ಕಳೆದ ಎರಡು ವರ್ಷಗಳಿಂದ  ಪ್ರೀತಿ ಮಾಡಿ, ನಂತರ ಊರಿಂದ ಎಸ್ಕೇಪ್ ಆಗಿದ್ದ ಆ ಜೋಡಿ (Lovers) ಇಂದು ಊರಿಗೆ ಬಂದು ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾರೆ(Suicide). ಅಷ್ಟಕ್ಕೂ ಆ ಪ್ರೇಮಿಗಳಿಗೆ ಆಗಿದ್ದೇನು. ಅಂತಿರಾ ಆಗಿದ್ರೆ ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್.  ಹುಣಸೂರು ತಾಲೂಕಿನ ಸಿಂಗರಮಾರನಹಳ್ಳಿ ಗ್ರಾಮದಲ್ಲಿ ಪ್ರೇಮಿಗಳಿಬ್ಬರು ಹೆಣವಾಗಿ ನೇತಾಡಿದ್ದಾರೆ. ಈ ದುರಂತ ಪ್ರೇಮ ಕಥೆಯ ನಾಯಕನ ಹೆಸರು ರಾಜೇಶ್​, ನಾಯಕಿ ಅಪ್ರಾಪ್ತೆ. ಎರಡು ವರ್ಷಗಳ ಹಿಂದೆ ಪಕ್ಕದ ಮನೆಯ ಅಪ್ರಾಪ್ತೆ ಮೇಲೆ ರಾಕೇಶ್‌ಗೆ ಲವ್ ಆಗಿತ್ತು. ಇಬ್ಬರ ಜಾತಿ ಬೇರೆ ಆದ್ರೂ ಅವರ ಪ್ರೀತಿಗೆ ಅದು ಅಡ್ಡ ಬರಲಿಲ್ಲ. ಅಪ್ರಾಪ್ತೆ ಅಂತ ಗೊತ್ತಿದ್ರೂ ಆತ ಲವ್ ಮಾಡಿ, ಪೋಷಕರ ವಿರೋಧ ಕಟ್ಟಿ ಕೊಂಡಿದ್ದ.


  ಇದನ್ನೂ ಓದಿ: Bengaluru: ಮಗನ ಗರ್ಲ್‌ ಫ್ರೆಂಡ್‌ನ 'ಹಸಿಬಿಸಿ' ಫೋಟೋಗಳನ್ನೇ ಸೆರೆ ಹಿಡಿದ ತಂದೆ! ಆ ಕಾಮುಕ ಯಾರು ಗೊತ್ತಾ?


  ಊರು ಬಿಟ್ಟವರು ಮಧ್ಯರಾತ್ರಿ ಪ್ರತ್ಯಕ್ಷರಾಗಿದ್ದರು..! 


  ಈ ನಡುವೆ ಇದ್ದಕ್ಕಿದ್ದಂತೆ ನಾಲ್ಕು ತಿಂಗಳ ಹಿಂದಷ್ಟೇ ಹುಡುಗಿಯನ್ನ ಕರೆದುಕೊಂಡು ಊರು ಬಿಟ್ಟು ಓಡಿ ಹೋಗಿದ್ದ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿತ್ತು. ಇಬ್ಬರ ಜಾತಿ ಬೇರೆ ಬೇರೆ ಆಗಿದ್ದಕ್ಕೆ ಸಹಜವಾಗಿಯೇ ಪೋಷಕರ ವಿರೋಧ ಕೂಡ ಇತ್ತು. ಹೀಗಾಗಿಯೇ ಮನೆಯಲ್ಲಿ ಸಪೋರ್ಟ್ ಮಾಡಲ್ಲ ಅಂತಾ ಓಡಿ ಹೋಗಿ ಮದುವೆಯಾಗಿದ್ರು. ಮನೆಯವರನ್ನ ಧಿಕ್ಕರಿಸಿ ಹೋಗಿದ್ದ ಲವರ್ಸ್‌ಗಳು ಎಲ್ಲೆ ಇರಲಿ, ಹೇಗೇ ಇರಲಿ ಚೆನ್ನಾಗಿರ್ಲಿ ಅಂತಾ ಪೋಷಕರು ಕೂಡ ಸುಮ್ಮನಾಗಿದ್ರು. ಆದ್ರೆ ಇದ್ದಕ್ಕಿದ್ದಂತೆ ಜೋಡಿ ಊರಲ್ಲಿ ತಡರಾತ್ರಿ ಪ್ರತ್ಯಕ್ಷವಾಗಿದ್ರು.


   ಜಮೀನಿನಲ್ಲಿ ಪ್ರೇಮಿಗಳ ಆತ್ಮಹತ್ಯೆ 


  ಅದೇನಾಯಿತೋ ಏನೋ ತಡರಾತ್ರಿ ಗ್ರಾಮಕ್ಕೆ ಬಂದ ಜೋಡಿ, ಮನೆಗೆ ಹೋಗದೆ ಊರು ಹೊರಗಿರೋ ರಾಕೇಶನ ಜಮೀನಿಗೆ ಹೋಗಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಐದು ತಿಂಗಳ ಹಿಂದೆ ಓಡಿಹೋಗುದ್ದ ಜೋಡಿ ತಮ್ಮ ಊರಿಗೆ ಬಂದು ಮೃತಪಟ್ಟಿದ್ದಾರೆ. ಊರಿನ ಹೊರವಲದಲ್ಲಿದ್ದ  ರಾಕೇಶ್ ಜಮೀನಿನಲ್ಲಿ ಇಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಏನೇ ಕಷ್ಟ ಬಂದ್ರು ಜೊತೆಯಾಗಿ ಇರೋಣ ಅಂತಾ ಪೋಷಕರ ವಿರೋಧದ ನಡುವೆಯೂ ಒಂದಾಗಿದ್ದ ಜೋಡಿ,  ಅರ್ಧಕ್ಕೆ ಬದುಕಿನ ಪಯಣ ಮುಗಿಸಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ.


  ಇದನ್ನೂ ಓದಿ: Bengaluru Crime: ಅನೈತಿಕ ಸಂಬಂಧದ ಶಂಕೆ.. ಹೆಂಡತಿ, ಅತ್ತೆಯನ್ನು ಮಚ್ಚಿನಿಂದ ಕೊಚ್ಚಿ ಕೊಂದೇ ಬಿಟ್ಟ!


  ಮತ್ತೊಂದು ಆತ್ಮಹತ್ಯೆ ಪ್ರಕರಣ 


  ನೀನು ಕುರೂಪಿ, ಸುಂದರವಾಗಿಲ್ಲ‌ ಎಂದು ಪದೇ ಪದೇ ಪತಿ ಪತ್ನಿಯನ್ನ ನಿಂದನೆ ಮಾಡಿದ ಕಾರಣ ಮನನೊಂದ ಮಹಿಳೆ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಂಗಳೂರಿನ ಡಿಜೆ ಹಳ್ಳಿಯ ಈದ್ಗಾ ಮೊಹಲ್ಲಾದಲ್ಲಿ ಇದೇ ತಿಂಗಳ 18 ರಂದು ಬೆಳಗ್ಗೆ 12.30 ಕ್ಕೆ ಈ ಘಟನೆ ನಡೆದಿದ್ದು, ಅನಿಶಾ (33) ಆತ್ಮಹತ್ಯೆ ಯತ್ನಿಸಿದ್ದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮೂರು ವರ್ಷದ ಹಿಂದೆ ನಿಜಾಮುದ್ದೀನ್ ಜೊತೆಗೆ ಎರಡನೇ ಮದುವೆಯಾಗಿದ್ದ ಅನಿಶಾಗೆ ಪ್ರತಿದಿನ ಕಿರುಕುಳ ನೀಡಲಾಗುತ್ತಿತ್ತು, ದಂಪತಿಗೆ ಎರಡು ವರ್ಷ ಹಾಗೂ 6 ತಿಂಗಳ ಇಬ್ಬರು ಮಕ್ಕಳಿದ್ರೂ ಗಂಡ ಹಾಗೂ ಅತ್ತೆ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ವಿಫಲವಾಗಿ ಕೊನೆಯುಸಿರೆಳೆದಿದ್ದಾರೆ. ಘಟನೆ ಸಂಬಂಧ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.

  Published by:Kavya V
  First published: