Mysuru Dasara 2021: ಮೈಸೂರು ಸರಳ ದಸರಾದಲ್ಲಿ ಝಗಮಗಿಸುತ್ತಿದೆ ದೀಪಾಲಂಕಾರ!

ಈ ಬಾರಿ ವಿಶೇಷವಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ 75ರ ಹಾಗೂ ಭಾರತಕ್ಕೆ ಒಲಂಪಿಕ್ ನಲ್ಲಿ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾ ಅವರ ದೀಪಾಲಂಕಾರಕ್ಕೆ  ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟಾರೆ ಕೊರೋನಾ ಭೀತಿಯ ನಡುವೆಯೂ ಸರಳ ದಸರೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ಮೈಸೂರು ರಸ್ತೆಗಳಲ್ಲಿ ಮಾಡಲಾಗಿರುವ ದೀಪಾಂಲಕಾರ

ಮೈಸೂರು ರಸ್ತೆಗಳಲ್ಲಿ ಮಾಡಲಾಗಿರುವ ದೀಪಾಂಲಕಾರ

 • Share this:

  • ವರದಿ: ದಿವ್ಯೇಶ್ ಜಿ ವಿ


  ಮೈಸೂರು: ಮೈಸೂರು ವಿಶ್ವವಿಖ್ಯಾತ ದಸರಾ ಉತ್ಸವವು (Mysuru Dasara 2021) ಕೊರೋನಾ ಕರಿನೆರಳನಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಸರಳ ದಸರಾ ಆಚರಣೆ ಮಾಡಿದರು ವಿಶೇಷವಾಗಿ ಈ ಬಾರಿ ಸಾಂಸ್ಕತಿಕ ನಗರಿ ವಿದ್ಯುಕ್ತ ದೀಪಗಳಿಂದ (Mysuru Lighting) ಕಂಗೊಳಿಸುತ್ತಿದೆ. ಈ ಬಾರಿ ಅತ್ಯಂತ ಸರಳ ಮತ್ತು ಸುರಕ್ಷಿತ ದಸರಾ ಆಚರಿಸಲು ಸರಕಾರ ನಿರ್ಧರಿಸಿರುವ ಹಿನ್ನಲೆಯಲ್ಲಿ ನಗರವನ್ನು ಶೇ .100 ರಷ್ಟು ದೀಪಾಲಂಕಾರ ಮಾಡಲಾಗಿದೆ, ಮೈಸೂರು ನಗರದ ಸುತ್ತಮುತ್ತ 105.4. ಕಿ.ಮೀ ಉದ್ದ ದೀಪಾಲಂಕಾರ. 69 ವೃತ್ತಗಳಲ್ಲಿ ಕಣ್ಮನ ಸೆಳೆಯುವ ದೀಪಾಲಂಕಾರ ಮಾಡಲಾಗಿದೆ. ಇನ್ನು ಈ ಬಾರಿ ದೀಪಾಲಂಕಾರದ ವೀಕ್ಷಣೆ ಕಾಲಾವಧಿಯಲ್ಲಿ ತುಸು ಹೆಚ್ಚು ಮಾಡಲಾಗಿದೆ. ಈ ಹಿಂದೆ ಸಂಜೆ 6:30 ರಿಂದ ರಾತ್ರಿ 8:30 ವರೆಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ಸಂಜೆ 6:30 ರಿಂದ ರಾತ್ರಿ 10ರ ವರೆಗೆ ಅವಕಾಶ ನೀಡಲಾಗಿದೆ‌. ಇದರಿಂದ ಸರಳ ದಸರಾ ಆಚರಣೆಯಿಂದ ಬೇಸರದಲ್ಲಿ ಇದ್ದ ಜನರಿಗೆ ದೀಪಾಲಂಕಾರ ಸಾಕಷ್ಟು ಖುಷಿ ನೀಡಿದೆ.

  ಇನ್ನು ಗರದ ಹೃದಯಭಾಗ ಅರಮನೆ, ಕೆ.ಆರ್.ವೃತ್ತ, ನ್ಯೂ ಸಯ್ಯಾಜಿರಾವ್ ರಸ್ತೆ, ಡಿ.ದೇವರಾಜ ಅರಸ್ ರಸ್ತೆ ಅದರಂತೆ ಇದೀಗ ನಗರದ ಎಲ್ಲ ರಸ್ತೆಗಳು, ಪಾರಂಪರಿಕ ಕಟ್ಟಡಗಳು , ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದ್ದು , ನೋಡುಗರ ಕಣ್ಮನ ಸೆಳೆಯುತ್ತಿದೆ. ಒಂದು ಕಡೆ ಝಗಮಗಿಸುವ ಅರಮನೆ ಸ್ವರ್ಗದ ಬಾಗಿಲು ತೆರೆದು ಸ್ವಾಗತಿಸುವಂತೆ ಮಾಡುತ್ತಿದ್ದರೆ, ರಾಮಸ್ವಾಮಿ ವೃತ್ತ, ಚಾಮರಾಜ, ಕೃಷ್ಣರಾಜ, ಜೆಎಸ್ ಎಸ್ ವಿದ್ಯಾಪೀಠದ ಬಳಿಯ ಬಸವೇಶ್ವರ ವೃತ್ತ, ಪಾಲಿಕೆ ಕಚೇರಿ ಅಗ್ರಹಾರ, ಸಿದ್ದಪ್ಪ ವೃತ್ತ, ಆಯುರ್ವೇದ ಆಸ್ಪತ್ರೆ, ಆರ್ ಟಿ ಓ ಹೀಗೆ ನಗರದ ಸುಮಾರು 69 ವೃತ್ತಗಳಲ್ಲಿ ದೀಪಾಲಂಕಾರದಿಂದ ಬೆಳಗುತ್ತಿವೆ.

  ಇನ್ನೂ ಪ್ರಮುಖ ವೃತ್ತ ಮತ್ತು ಸರಕಾರಿ ಕಟ್ಟಡಗಳನ್ನು ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಲಾಗಿದ್ದು ಕೊರೋನಾ ಭೀತಿಯ ನಡುವೆ ಜನತೆಗೆ ಮುದ ನೀಡುತ್ತಿದೆ. ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ಹಸಿರು ಚಪ್ಪರ, ದೊಡ್ಡ ಕೆರೆ ಮೈದಾನದಲ್ಲಿ ಪಟ್ಟದ ಕಲ್ಲು, ಕೆ.ಆರ್.ಎಸ್ ಅಣೆಕಟ್ಟೆಯನ್ನು ಬಿಂಬಿಸುವ ದೀಪಾಲಂಕಾರ, ಬುದ್ಧ, ಬಸವ, ಅಂಬೇಡ್ಕರ್ ಅವರ ಆಕಾರವನ್ನು ದೀಪಗಳಿಂದ ಸಿಂಗರಿಸಲಾಗಿದೆ. ಸಂದೇಶ ಸಾರುವ ಮಹಾತ್ಮ ಗಾಂಧಿ, ವಿವೇಕಾನಂದ ಗೊಳಗೊಮ್ಮಟ ಹಾಗೂ ಜೆಎಸ್‌ಎಸ್ ವಿದ್ಯಾಪೀಠದ ವೃತ್ತದ ಬಳಿ ಶತಾಯುಷಿ ಡಾ.ಶಿವಕುಮಾರಸ್ವಾಮೀಜಿ, ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಇಂಡಿಯಾ ಗೇಟ್ ಮೂಡಿಬಂದಿದ್ದು, ಪಾರಂಪರಿಕ ಹಾರ್ಡಿಂಗ್ ವೃತ್ತದಲ್ಲಿ ನಾಡದೇವಿ ಶ್ರೀಚಾಮುಂಡೇಶ್ವರಿ ದೇವಿಯು ಚಿತ್ತಾಕರ್ಷಕ ದೀಪಗಳಿಂದ ಮೂಡಿ ಬಂದಿದೆ.

  ಈ ಬಾರಿ ವಿಶೇಷವಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ 75ರ ಹಾಗೂ ಭಾರತಕ್ಕೆ ಒಲಂಪಿಕ್ ನಲ್ಲಿ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾ ಅವರ ದೀಪಾಲಂಕಾರಕ್ಕೆ  ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟಾರೆ ಕೊರೋನಾ ಭೀತಿಯ ನಡುವೆಯೂ ಸರಳ ದಸರೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

  ಇದನ್ನು ಓದಿ: ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂಬ HDK ಆರೋಪಕ್ಕೆ ತಿರುಗೇಟು ಕೊಟ್ಟ Siddaramaiah

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: