• Home
  • »
  • News
  • »
  • state
  • »
  • ಮೈಸೂರಿನಲ್ಲೊಬ್ಬ ಆಧುನಿಕ ಶ್ರವಣಕುಮಾರ; ತಾಯಿ ಆಸೆ ಪೂರೈಸಲು ಹಳೇ ಸ್ಕೂಟರ್​​​​ನಲ್ಲೇ ತೀರ್ಥಯಾತ್ರೆ ಮಾಡಿಸಿದ ಮಗ

ಮೈಸೂರಿನಲ್ಲೊಬ್ಬ ಆಧುನಿಕ ಶ್ರವಣಕುಮಾರ; ತಾಯಿ ಆಸೆ ಪೂರೈಸಲು ಹಳೇ ಸ್ಕೂಟರ್​​​​ನಲ್ಲೇ ತೀರ್ಥಯಾತ್ರೆ ಮಾಡಿಸಿದ ಮಗ

ತಾಯಿ ಚೂಡಾಮಣಿಯೊಂದಿಗೆ ಕೃಷ್ಣಕುಮಾರ್

ತಾಯಿ ಚೂಡಾಮಣಿಯೊಂದಿಗೆ ಕೃಷ್ಣಕುಮಾರ್

ಅದೊಂದು ದಿನ ತಾಯಿಯೊಂದಿಗೆ ಮಾತನಾಡುವಾಗ ಯಾವ ತೀರ್ಥಕ್ಷೇತ್ರವನ್ನ ನೀನು ನೋಡಿದ್ದಿಯಾ ಎಂದು ಕೇಳಿದರು. ಆಗ ನಿರಾಸೆ ಮನೋಭಾವನೆಯಿಂದ ಹೇಳಿದ ತಾಯಿ ನಾನು ಬೇಲೂರು ಹಳೇಬೀಡನ್ನೆ ನೋಡಿಲ್ಲ, ಇನ್ನು ತೀರ್ಥಕ್ಷೇತ್ರ ಎಲ್ಲಿ ಎಂದು ಹೇಳಿದ್ದರಂತೆ. ಅಂದೆ ನಿರ್ಧಾರ ಮಾಡಿದ ಕೃಷ್ಣಕುಮಾರ್ ತನ್ನ ತಂದೆ ಕೊಡಿಸಿದ ಸ್ಕೂಟರ್‌ನಲ್ಲೆ ತಾಯಿಯನ್ನ ಕೂರಿಸಿಕೊಂಡು, ಇಡೀ ಭಾರತ ಸುತ್ತಿ ವಾಪಸ್​ ಆಗಿದ್ದಾರೆ.

ಮುಂದೆ ಓದಿ ...
  • Share this:

ಮೈಸೂರು(ಸೆ.17): ವಯಸ್ಸಾಗಿದೆ ಎನ್ನುವ ಏಕೈಕ ಕಾರಣಕ್ಕೆ ತಮ್ಮ ಹೆತ್ತ ತಂದೆ-ತಾಯಿಯನ್ನ ದೂರ ಮಾಡುವ ಮಕ್ಕಳಿರುವ ಈ ಕಾಲದಲ್ಲಿ, ತಾಯಿಯ ಆಸೆ ಪೂರೈಸುವ ಸಲುವಾಗಿ ಯಾವೊಬ್ಬ ಮಗನೂ ಮಾಡದ ಸಾಧನೆ ಮಾಡಿ, ಇಡೀ ಭಾರತವನ್ನ ಸ್ಕೂಟರ್‌ನಲ್ಲಿ ಸುತ್ತಿ, ತಾಯಿ ಜೊತೆ ತೀರ್ಥಯಾತ್ರೆ ಕೈಗೊಂಡಿದ್ದ ಮೈಸೂರಿನ ಕೃಷ್ಣಕುಮಾರ್ ತವರಿಗೆ ಮರಳಿದ್ದಾರೆ. ನಿನ್ನೆಯಷ್ಟೆ ಮೈಸೂರಿಗೆ ಬಂದಿಳಿದ ಕೃಷ್ಣಕುಮಾರ್ ಹಾಗೂ ಅವರ ತಾಯಿ ಚೂಡಾಮಣಿ ಯಶಸ್ವಿ 55 ಸಾವಿರ ಕಿಲೋಮೀಟರ್‌ ತೀರ್ಥಯಾತ್ರೆ ಮುಗಿಸಿದ್ದಾರೆ. ಮೂರು ನೆರೆ ರಾಷ್ಟ್ರ ಸೇರಿದಂತೆ ಭಾರತದ ಎಲ್ಲಾ ತೀರ್ಥ ಕ್ಷೇತ್ರಗಳನ್ನ ತಾಯಿಗೆ ತೋರಿಸಿರುವ ಮಗ ಆಧುನಿಕ ಶ್ರವಣಕುಮಾರ ಎಂದೆ ಖ್ಯಾತಿ ಗಳಿಸಿದ್ದಾರೆ. 20 ವರ್ಷದ ಹಳೆಯ ಬಜಾಜ್‌ ಚೇತಕ್‌ ಸ್ಕೂಟರ್. ಹೆಲ್ಮೆಟ್‌ ಧರಿಸಿ ಸ್ಕೂಟರ್‌ ಏರಿ ಬರುತ್ತಿರುವ ಅಮ್ಮ ಮಗ. ಈ ಯಾತ್ರೆ ಆರಂಭವಾಗಿದ್ದು ಅರಮನೆ ನಗರಿ ಮೈಸೂರಿನಿಂದ. ಹೌದು, ಅಮ್ಮನ ಜೊತೆ ಭಾರತದ ತೀರ್ಥಯಾತ್ರೆ ಮಾಡುವ ನಿರ್ಧಾರ ಕೈಗೊಂಡ ಮಗನೊಬ್ಬ ತನ್ನ ತಂದೆ ಕೊಡಿಸಿದ  ಹಳೆಯ ಸ್ಕೂಟರ್‌ನಲ್ಲೆ ಇಡೀ ಭಾರತ ಸುತ್ತಾಡಿ, ನೆರೆಯ ಮೂರು ರಾಷ್ಟ್ರಗಳನ್ನು ತನ್ನ ತಾಯಿಸಿ ತೋರಿಸಿ ಇದೀಗ ತವರಿಗೆ ವಾಪಸ್‌ ಆಗಿದ್ದಾರೆ.
ಮೈಸೂರಿನ ಬೋಗಾದಿ ಗ್ರಾಮದ ನಿವಾಸಿಯಾಗಿರುವ ಕೃಷ್ಣಕುಮಾರ್ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್‌. ಬೆಂಗಳೂರಿನಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಕೃಷ್ಣಕುಮಾರ್‌ ಅವರ ತಂದೆ ದಕ್ಷಿಣಾಮೂರ್ತಿ 5 ವರ್ಷಗಳ ಹಿಂದೆ ಸ್ವರ್ಗಸ್ಥರಾದರು. ನಂತರ ಮೈಸೂರಿನಿಂದ ಮನೆ ಖಾಲಿ ಮಾಡಿಕೊಂಡು ತಾಯಿಯನ್ನು ಕರೆದುಕೊಂಡು ಬೆಂಗಳೂರಿನಲ್ಲಿ ಜೀವನ ಕಂಡುಕೊಂಡಿದ್ದ ಕೃಷ್ಣಕುಮಾರ್, ಅದೊಂದು ದಿನ ತಾಯಿಯೊಂದಿಗೆ ಮಾತನಾಡುವಾಗ ಯಾವ ತೀರ್ಥಕ್ಷೇತ್ರವನ್ನ ನೀನು ನೋಡಿದ್ದಿಯಾ ಎಂದು ಕೇಳಿದರು. ಆಗ ನಿರಾಸೆ ಮನೋಭಾವನೆಯಿಂದ ಹೇಳಿದ ತಾಯಿ ನಾನು ಬೇಲೂರು ಹಳೇಬೀಡನ್ನೆ ನೋಡಿಲ್ಲ, ಇನ್ನು ತೀರ್ಥಕ್ಷೇತ್ರ ಎಲ್ಲಿ ಎಂದು ಹೇಳಿದ್ದರಂತೆ. ಅಂದೆ ನಿರ್ಧಾರ ಮಾಡಿದ ಕೃಷ್ಣಕುಮಾರ್ ತನ್ನ ತಂದೆ ಕೊಡಿಸಿದ ಸ್ಕೂಟರ್‌ನಲ್ಲೆ ತಾಯಿಯನ್ನ ಕೂರಿಸಿಕೊಂಡು, ಇಡೀ ಭಾರತ ಸುತ್ತಿ ವಾಪಸ್​ ಆಗಿದ್ದಾರೆ. 2 ವರ್ಷ 9 ತಿಂಗಳ ನಿರಂತರ ಪ್ರಯಾಣದ ನಂತರ ನಿನ್ನೆ ಮೈಸೂರಿಗೆ ಬಂದಿಳಿದಿದ್ದಾರೆ.
Coronavirus India Updates: ಭಾರತದಲ್ಲಿ 51 ಲಕ್ಷ ದಾಟಿದ‌ ಕೊರೋನಾ ಸೋಂಕಿತರ ಸಂಖ್ಯೆ


ಮಗ ಕೃಷ್ಣಕುಮಾರ್ ಹಾಗೂ ತಾಯಿ ಚೂಡಾಮಣಿಯವರ ಈ ಅದ್ಬುತ ಪ್ರಯಾಣದ ಜೊತೆ ಅವರ ಶಿಸ್ತಿನ ಜೀವನ ಶೈಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.  ಮೈಸೂರಿನ ಚಾಮುಂಡಿಬೆಟ್ಟದಿಂದ ಆರಂಭವಾದ ಈ ಯಾತ್ರೆ ಮೊದಲು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪಾಂಡಿಚೇರಿ, ಕರ್ನಾಟಕ, ಅರುಣಾಚಲ ಪ್ರದೇಶ, ಛತ್ತಿಸ್‌ಗಡ್, ಬಿಹಾರ, ಮಧ್ಯಪ್ರದೇಶ ಸೇರಿದಂತೆ ಭಾರತದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಹಾಗೂ ನೆರೆ ರಾಷ್ಟ್ರಗಳಾದ ಮಯನ್ಮಾರ್​‌, ನೇಪಾಳ ಹಾಗೂ ಭೂತಾನ್​ನಲ್ಲಿ ಸಾಗಿ ಬಂದಿದೆ.
ನಿತ್ಯ ಎರಡು ಹೊತ್ತು ಊಟ, ಸರಾಸರಿ ಪ್ರಯಾಣ ಮಾಡುತ್ತಿದ್ದ ಅಮ್ಮ ಮಗ, ಆಶ್ರಮ, ಮಠ, ಕುಟೀರ ಅಥವಾ ವೃದ್ದಾಶ್ರಮ, ಸೇವಾಶ್ರಮಗಳಲ್ಲಿನ ವಾಸ್ತವ್ಯ ಹೂಡುತ್ತಿದ್ದರು. ಇಡೀ ಯಾತ್ರೆಯಲ್ಲಿ ಯಾರ ಬಳಿಯೂ ಯಾವ ಸಹಾಯವನ್ನು ಪಡೆಯದ ಕೃಷ್ಣಕುಮಾರ್ ತಾನು ಸಂಪಾದಿಸಿ ಉಳಸಿದ್ದ 6 ಲಕ್ಷದ 80 ಸಾವಿರ ಹಣವನ್ನು ಖರ್ಚು ಮಾಡಿದ್ದಾರೆ. 2 ವರ್ಷದ 9 ತಿಂಗಳ ಪ್ರಯಾಣದಲ್ಲಿ ಎಲ್ಲಿಯೂ ಆರೋಗ್ಯ ಹಾಳು ಮಾಡಿಕೊಳ್ಳದೆ ಹಿತಮಿತ ಜೀವನ ನಡೆಸಿ ಸುರಕ್ಷಿತವಾಗಿ ಮೈಸೂರಿಗೆ ವಾಪಸ್ಸಾಗಿದ್ದಾರೆ.
ಕೃಷ್ಣಕುಮಾರ್ ಅವರ ಹಾಗೂ ತಾಯಿ ಚೂಡಾಮಣಿಯವರ ಈ ತೀರ್ಥಯಾತ್ರೆಯ ಮಾಹಿತಿ ಪಡೆದ ಮಹೇಂದ್ರ ಕಂಪನಿ ಮಾಲೀಕ ಆನಂದ್ ಮಹೇಂದ್ರ ಇವರಿಗೆ ಹೊಸ ಮಹೇಂದ್ರ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಅರುಣಾಚಲ ಪ್ರದೇಶದಲ್ಲಿದ್ದಾಗ ಈ ಮಾಹಿತಿ ಪಡೆದುಕೊಂಡ ಕೃಷ್ಣಕುಮಾರ್ ಮೈಸೂರಿಗೆ ಬಂದಾಗ ಕಾರು ಪಡೆಯುವುದಾಗಿ ಹೇಳಿದ್ದರು.
ನಿನ್ನೆಯಷ್ಟೆ ಮೈಸೂರಿಗೆ ಬಂದಿಳಿದ ಇವರು ಇನ್ನು ಕೆಲವೇ ದಿನದಲ್ಲಿ ಆ ವಾಹನವನ್ನ ಪಡೆಯುತ್ತೇನೆ, ಆ ವಾಹನದ ಜೊತೆ ನಾನು ಸಾರ್ವಜನಿಕ ಸೇವೆಗೆ ನನ್ನ ಜೀವನನ್ನು ಮುಡಿಪಾಗಿಡುತ್ತೇನೆ ಎಂದು ಹೇಳಿದರು.


ಒಟ್ಟಾರೆ ಅಮ್ಮನ ಅದೊಂದು ಮಾತು ಮಗನ ಬಾಳಿನಲ್ಲಿ ಅದ್ಬುತ ಬದಲಾವಣೆಗೆ ಸಾಕ್ಷಿಯಾಗಿದೆ. ಯಾರು ಮಾಡದ ಅಪರೂಪದ ಸಾಧನೆ ಮಾಡಿರುವ ಮೈಸೂರಿನ ಕೃಷ್ಣಕುಮಾರ್ ನಿಜಕ್ಕೂ ಆಧುನಿಕ ಶ್ರವಣಕುಮಾರನೇ ಹೌದು. 55 ಸಾವಿರ ಕಿಲೋಮೀಟರ್ ದೂರದ ಪ್ರಯಾಣ ಮುಗಿಸಿ ವಾಪಸ್‌ ಆಗಿರುವ ಇವರ ಸಾಧನೆ ನಿಜಕ್ಕೂ ಶ್ಲಾಘಿಸುವಂತ ಸಾಧನೆಯೇ ಹೌದು.

Published by:Latha CG
First published: