Mysuru: ರಾತ್ರೋರಾತ್ರಿ ಇತಿಹಾಸದ ಪುಟ ಸೇರಿದ ಕರ್ನಾಟಕದ ಮೊದಲ ಮಹಿಳಾ ಕನ್ನಡ ಶಾಲೆ

ವಿವೇಕ ಸ್ಮಾರಕ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಮೈಸೂರಿನ ಎನ್.ಎಸ್ ರಸ್ತೆಯಲ್ಲಿರೋ ಎನ್.ಟಿ.ಎಂ ಶಾಲೆಯ ಜಾಗವನ್ನ ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರ ಮಾಡಿತ್ತು.

ಶತಮಾನದ ಶಾಲೆ

ಶತಮಾನದ ಶಾಲೆ

  • Share this:
ಮೈಸೂರು(ಫೆ.09): ಅದು ಹೆಣ್ಣುಮಕ್ಕಳಿಗಾಗಿ ಆರಂಭವಾಗಿದ್ದ ಮೊದಲ ಕನ್ನಡ ಶಾಲೆ(Kannada School). ಮೈಸೂರು ಮಹಾರಾಣಿಯವರು(Mysuru Maharani) ಕಂಡ ಕನಸಿನ ಶಾಲೆ. ಶತಮಾನದ ಆ ಶಾಲೆ ಈಗ ಇತಿಹಾಸದ ಪುಟ ಸೇರಿದೆ. ಸಾಕಷ್ಟು ಹಗ್ಗ-ಜಗ್ಗಾಟದ ನಂತರ ವಿವೇಕ ಸ್ಮಾರಕಕ್ಕೆ ಹಾದಿ ಸುಗಮವಾಗಿದೆ. ತಡರಾತ್ರಿ ನಡೆದ ತೆರವು ಕಾರ್ಯಾಚರಣೆಯಲ್ಲಿ ಹೆಣ್ಣು ಮಕ್ಕಳ ಮೊದಲ ಕನ್ನಡ ಪಾಠ ಶಾಲೆ(School) ಧರೆಗುರುಳಿದೆ. ಈ ಮೂಲಕ ಶತಮಾನ ಶಾಲೆಯೊಂದು ಇತಿಹಾಸದ ಪುಟ ಸೇರಿದೆ. ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.

ನೆಲಸಮವಾದ ಶಾಲೆ

ಜೆಸಿಬಿಗಳ ಅಬ್ಬರ, ಪೊಲೀಸ್ ಬಿಗಿ ಭದ್ರತೆ, ಪ್ರತಿಭಟನಾಕಾರರ ಕೂಗಾಟ, ಘೋಷಣೆ. ಇದೆಲ್ಲದರ ನಡುವೆ ಧರೆಗುರುಳಿದೆ ಕನ್ನಡ ಶಾಲೆ. ಹೌದು, ಕಳೆದ 15 ವರ್ಷಗಳಿಂದ ವಿವಾದಾತ್ಮಕ ಪ್ರದೇಶವಾಗಿದ್ದ ಎನ್‍ಟಿಎಂಎಸ್ ಶಾಲೆಯ ಕಟ್ಟಡವನ್ನ ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ಆ ಮೂಲಕ ಕರ್ನಾಟಕದ ಮೊದಲ ಮಹಿಳಾ ಕನ್ನಡ ಶಾಲೆ ಇತಿಹಾಸ ಪುಟ ಸೇರಿದೆ.

ರಾತ್ರೋರಾತ್ರಿ ಶಾಲೆಯ ಕಟ್ಟಡ ನೆಲಸಮ

ವಿವೇಕ ಸ್ಮಾರಕ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಮೈಸೂರಿನ ಎನ್.ಎಸ್ ರಸ್ತೆಯಲ್ಲಿರೋ ಎನ್.ಟಿ.ಎಂ ಶಾಲೆಯ ಜಾಗವನ್ನ ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರ ಮಾಡಿತ್ತು. ಇದನ್ನ ಪ್ರಶ್ನಿಸಿ ಕನ್ನಡ ಹೋರಾಟಗಾರರು, ಕೆಲ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ನಂತ್ರ ಕೋರ್ಟ್‌ನಲ್ಲಿ ರಾಮಕೃಷ್ಣ ಆಶ್ರಮದ ಪರ ತೀರ್ಪು ಬಂದಿದೆ. ಹೀಗಾಗಿ ಶಾಲೆಯಲ್ಲಿದ್ದ ವಿದ್ಯಾರ್ಥಿಗಳನ್ನ ಪಕ್ಕದ ಮಹಾರಾಣಿ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು. ನಂತ್ರ ಶಾಲೆಯಲ್ಲಿದ್ದ ಪೀಠೋಪಕರಣಗಳನ್ಮ ಶಿಫ್ಟ್ ಮಾಡಿ, ಇದೀಗ ರಾತ್ರೋರಾತ್ರಿ ಶಾಲೆಯ ಕಟ್ಟಡವನ್ನ ನೆಲಸಮ ಮಾಡಲಾಗಿದೆ.

ಇದನ್ನೂ ಓದಿ:Hijab Controversy: ಹೈಕೋರ್ಟ್​ನಲ್ಲಿ ಹಿಜಾಬ್ ಪ್ರಕರಣ ವಿಚಾರಣೆ, ಇಂದೇ ತೀರ್ಪು ಪ್ರಕಟ ಸಾಧ್ಯತೆ

ಕೋರ್ಟ್​​​ ಮೆಟ್ಟಿಲೇರಿದ್ದ ಪ್ರಕರಣ

ನಿನ್ನೆ ಇಡೀ ರಾತ್ರಿ ಡಿಸಿಪಿ ಗೀತಾ ಪ್ರಸನ್ನ, ಎಸಿಪಿ ಶಶಿಧರ್, 5 ಸರ್ಕಲ್ ಇನ್ಸ್ ಪೆಕ್ಟರ್ ಸೇರಿ ಸುಮಾರು 250ಕ್ಕೂ ಹೆಚ್ಚು ಪೊಲೀಸ್ ಭದ್ರತೆಯಲ್ಲಿ 4 ಹಿಟಾಚಿ, 3 ಜೆಸಿಬಿಗಳಿಂದ ಕಟ್ಟಡ ತೆರವುಗೊಳಿಸಲಾಗಿದೆ. ಕಟ್ಟಡ ತೆರವನ್ನ ತಡೆಯಲು ಬಂದ ಎನ್‍ಟಿಎಂ ಶಾಲೆ ಉಳಿಸಿ ಹೋರಾಟ ಸಮಿತಿ ಸದಸ್ಯರನ್ನ ಬಂಧಿಸಲಾಗಿದೆ. ನಮಗೆ ಕೋರ್ಟ್‌ನಲ್ಲಿ ಸೋಲಾಯಿತು, ಹೀಗಾಗಿ ಜಾಗ ಆಶ್ರಮದ ಪಾಲಾಗಿದೆ. ಆದ್ರೆ ನಾಡಿನ ಮೊದಲ ಹೆಣ್ಣುಮಕ್ಕಳ ಕನ್ನಡ ಶಾಲೆ ಉಳಿಯಬೇಕೆಂಬ ನಮ್ಮ ಮೂಲ ಉದ್ದೇಶ ಈಡೇರಿದೆ. ಪಕ್ಕದ ಮಹಾರಾಣಿ ಕಾಲೇಜಿನ ಒಳ ಭಾಗದಲ್ಲಿ 1889ರಲ್ಲಿ ಈ ಮೊದಲಿದ್ದ ಕಟ್ಟಡಕ್ಕೆ ಮಕ್ಕಳನ್ನ ಶಿಫ್ಟ್ ಮಾಡಿದ್ದಾರೆ. ಆ ಮೂಲಕ ಎನ್.ಟಿ.ಎಂ ಶಾಲೆ ಉಳಿದಿದೆ ಅದೊಂದೇ ಸಮಾಧಾನ.

ಇದನ್ನೂ ಓದಿ: South Western Railway: ಪ್ರಯಾಣಿಕರೇ ಗಮನಿಸಿ- ಇಂದಿನಿಂದ ಈ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ

ಆದರೂ ಇಷ್ಟು ಬಲವಂತವಾಗಿ ಕನ್ನಡ ಶಾಲೆಯನ್ನ ತೆರವುಗೊಳಿಸಿ ವಿವೇಕ ಸ್ಮಾರಕಕ್ಕೆ ಮುಂದಾಗಬಾರದಿತ್ತು. ಇದೀಗ ಶಾಲೆಯನ್ನ ತೆರವುಗೊಳಿಸಿ ವಿವೇಕಾನಂದರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತಂದಂತಾಗಿದೆ. ಒಟ್ಟಾರೆ, ಹೆಣ್ಣುಮಕ್ಕಳ ಕನ್ನಡ ಶಾಲೆ ತೆರವಿನ ಮೂಲಕ ವಿವೇಕ ಸ್ಮಾರಕ ನಿರ್ಮಾಣದ ಕೆಲಸಕ್ಕೆ ಹಾದಿ ಸುಗಮವಾಗಿದೆ. ಇದೆಲ್ಲಾ ಏನೇ ಇರಲಿ. ಮೈಸೂರು ಅರಸರ ಸಾಮಾಜಿಕ ಕೊಡುಗೆಗೆ ಕನ್ನಡಿಯಾಗಿದ್ದ ರಾಜ್ಯದ ಮೊದಲ ಹೆಣ್ಣು ಮಕ್ಕಳ ಶಾಲೆ ಕಣ್ಮೆರೆಯಾಗಿದ್ದು ಮಾತ್ರ ವಿಪರ್ಯಾಸ.
Published by:Latha CG
First published: