ಮೈಸೂರಿನ ಜೆಡಿಎಸ್ ಮುಖಂಡ ನಾರಾಯಣ ಗೌಡ ನಿಧನ; ಹೆಚ್​ಡಿಕೆ ಸೇರಿ ಹಲವರ ಸಂತಾಪ

ಕೆಜಿ ಕೊಪ್ಪಲು ನಾರಾಯಣಗೌಡರ ನಿಧನದಿಂದ ಜೆಡಿಎಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಒಬ್ಬ ನಿಷ್ಠಾವಂತ ಕಾರ್ಯಕರ್ತನನ್ನು ಪಕ್ಷ ಕಳೆದುಕೊಂಡಿದೆ ಎಂದು ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

news18-kannada
Updated:September 24, 2019, 10:51 AM IST
ಮೈಸೂರಿನ ಜೆಡಿಎಸ್ ಮುಖಂಡ ನಾರಾಯಣ ಗೌಡ ನಿಧನ; ಹೆಚ್​ಡಿಕೆ ಸೇರಿ ಹಲವರ ಸಂತಾಪ
ಕೆಜಿ ಕೊಪ್ಪಲು ನಾರಾಯಣ ಗೌಡ
  • Share this:
ಮೈಸೂರು(ಸೆ. 24): ಸ್ಥಳೀಯ ಜೆಡಿಎಸ್ ಮುಖಂಡ, 48 ವರ್ಷದ ನಾರಾಯಣಗೌಡ ವಿಧಿವಶರಾಗಿದ್ದಾರೆ. ಕೆಜಿ ಕೊಪ್ಪಲು ನಾರಾಯಣಗೌಡ ಎಂದೇ ಹೆಸರುವಾಸಿಯಾಗಿದ್ದ ಅವರು ನಿನ್ನೆ ಸಂಜೆ ಹೃದಯಾಘಾತಗೊಂಡು ಮೃತಪಟ್ಟಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನೆರವೇರಲಿದೆ.

ನಾರಾಯಣ ಗೌಡ ನಿಧನಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್ ಮೊದಲಾದ ಜೆಡಿಎಸ್ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿ ಮತ್ತು ಸಾ.ರಾ. ಮಹೇಶ್ ಅವರು ನಾರಾಯಣ ಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ: ಟಿಕೆಟ್​ಗಾಗಿ ಎಂಟಿಬಿ, ಶರತ್ ಬಚ್ಚೇಗೌಡ ಭಾರೀ ಲಾಬಿ; ಬಿಎಸ್​ವೈಗೆ ತಲೆನೋವಾದ ಹೊಸಕೋಟೆ ಉಪಚುನಾವಣೆ

ನಾರಾಯಣಗೌಡರ ನಿಧನವಾರ್ತೆ ತಿಳಿದ ನಂತರ ಕುಮಾರಸ್ವಾಮಿ ಅವರು ತುರ್ತಾಗಿ ಮೈಸೂರಿಗೆ ಆಗಮಿಸಿ ಅಂತಿಮ ದರ್ಶನ ಪಡೆದು ವಾಪಸ್ ಬೆಂಗಳೂರಿಗೆ ತೆರಳಿದ್ದಾರೆ. ಈ ವೇಳೆ, ನಾರಾಯಣಗೌಡರ ಸಾವು ಜೆಡಿಎಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ನಿಷ್ಠಾವಂತ ಕಾರ್ಯಕರ್ತನನ್ನು ಪಕ್ಷ ಕಳೆದುಕೊಂಡಿದೆ. ಅವರು ನೇರ ನಿಷ್ಠುರ ನಡೆಗೆ ಹೆಸರಾಗಿದ್ದರು. ಅವರಿಗಿನ್ನೂ ಸಾಯುವ ವಯಸ್ಸಾಗಿರಲಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ಅವರ ಮಕ್ಕಳಿಗೆ ಹಾಗೂ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಕೊಡಲಿ ಎಂದು ಕುಮಾರಸ್ವಾಮಿ ಸಾಂತ್ವನದ ಮಾತುಗಳನ್ನಾಡಿದ್ದಾರೆ.

ಇವತ್ತು ನಡೆಯಲಿರುವ ನಾರಾಯಣ ಗೌಡರ ಅಂತ್ಯಕ್ರಿಯೆಗೆ ಹೆಚ್.ಡಿ. ಕುಮಾರಸ್ವಾಮಿ ಅವರೂ ಆಗಮಿಸುವ ನಿರೀಕ್ಷೆ ಇದೆ.

(ವರದಿ: ಪುಟ್ಟಪ್ಪ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: September 24, 2019, 10:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading