Karnataka Politics: ಟಕ್ಕರ್ ಕೊಡುತ್ತಿದ್ದ ಜಿ.ಟಿ.ದೇವೇಗೌಡರಿಗೆ ಶಾಕ್ ನೀಡಿದ HDK

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರಿಗೆ (MLA G.T.Devegowda), ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former Minister HD Kumaraswamy) ಶಾಕಿಂಗ್ ಸಂದೇಶ ರವಾನಿಸಿದ್ದಾರೆ. ಈಗಾಗಲೇ ಜೆಡಿಎಸ್ (JDS) ಅಂಗಳದಿಂದ ಒಂದು ಕಾಲು ಹೊರಗೆ ಇರಿಸಿರುವ ಜಿ.ಟಿ.ದೇವೇಗೌಡರು 2023ಕ್ಕೆ ಕಾಂಗ್ರೆಸ್ (Congress) ಸೇರ್ಪಡೆಯಾಗೋದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

  • Share this:
ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ (Congress- JDS Alliance) ಸರ್ಕಾರ ಪತನಗೊಂಡ ಬಳಿಕ ದಳಪತಿಗಳಿಗೆ ಅವಕಾಶ ಸಿಕ್ಕಾಗೆಲ್ಲ ಟಕ್ಕರ್ ನೀಡುತ್ತಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರಿಗೆ (MLA G.T.Devegowda), ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former Minister HD Kumaraswamy) ಶಾಕಿಂಗ್ ಸಂದೇಶ ರವಾನಿಸಿದ್ದಾರೆ. ಈಗಾಗಲೇ ಜೆಡಿಎಸ್ (JDS) ಅಂಗಳದಿಂದ ಒಂದು ಕಾಲು ಹೊರಗೆ ಇರಿಸಿರುವ ಜಿ.ಟಿ.ದೇವೇಗೌಡರು 2023ಕ್ಕೆ ಕಾಂಗ್ರೆಸ್ (Congress) ಸೇರ್ಪಡೆಯಾಗೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ನಿನ್ನೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಜಿ.ಟಿ,ದೇವೇಗೌಡರ ಬಗ್ಗೆ ಪಕ್ಷ ತೆಗೆದುಕೊಂಡಿರುವ ನಿರ್ಣಯವನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಜೆಡಿಎಸ್ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಶಾಸಕರಾದ ಜಿ.ಟಿ.ದೇವೇಗೌಡರಿಗೆ ಜೆಡಿಎಸ್ ಬಾಗಿಲು ಸಂಪೂರ್ಣ ಮುಚ್ಚಿದೆ. 2023ರ ವೇಳೆಗೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದು ಹೊಸ ನಾಯಕನನ್ನು ಹುಟ್ಟು ಹಾಕಲಾಗುವುದು, ಈ ಹಿಂದೆ 2008ರಲ್ಲಿ ಜೆಡಿಎಸ್ ತೊರೆದು 2013ರಲ್ಲಿ ಪಕ್ಷಕ್ಕೆ ಮರಳಿ ಬಂದಿದ್ದರು.

ಜಿಟಿಡಿಗೆ ಜೆಡಿಎಸ್ ಬಾಗಿಲು ಕ್ಲೋಸ್

ಮುಂದಿನ ದಿನಗಳಲ್ಲಿ ಮತ್ತೆ ಜಿಟಿಡಿ ಅವರನ್ನು ಕರೆದುಕೊಳ್ಳುವ ಪ್ರಶ್ನೆಯೇ ಬರಲ್ಲ. ಜಿಟಿ ದೇವೇಗೌಡರಿ ಜೆಡಿಎಸ್ ಪಕ್ಷದ ಬಾಗಿಲು ಶಾಶ್ವತವಾಗಿ ಮುಚ್ಚಲಾಗುತ್ತಿದೆ. ಮುಂದಿನ ಹೊಸ ನಾಯಕರು ಯಾರು ಎಂಬುದನ್ನು ನೀವೇ ಆಯ್ಕೆ ಮಾಡಬೇಕೆಂದು ಕಾರ್ಯಕರ್ತರಲ್ಲಿ ಕೇಳಿಕೊಂಡರು.

ಇದನ್ನೂ ಓದಿ:  ಅವಳು ಬಾ ಅಂದಳು, ಹೋದವನು ಶವವಾದ: ಕೊಲೆಯ ರಹಸ್ಯ ಬೇಧಿಸಿದ ಪೊಲೀಸರು

ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಜನರ ಆಶೀರ್ವಾದ ಕೇಳುತ್ತಿಲ್ಲ, ಜನರ ಸೇವೆಯನ್ನು ಮಾಡಬೇಕೆಂಬ ಉದ್ದೇಶದಿಂದ ನಿಮ್ಮ ಮುಂದೆ ಬರುತ್ತಿದ್ದೇನೆ. ಹಾಗಾಗಿ ನೀವುಗಳು ನಮಗೆ ಪೂರ್ಣಬಹುಮತದ ಅಧಿಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.

ಜಿಟಿಡಿಯನ್ನ ಜನರೇ ಉಚ್ಛಾಟನೆ ಮಾಡ್ತಾರೆ

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಜಿ.ಟಿ.ದೇವೇಗೌಡರನ್ನು ನಾವು ಉಚ್ಛಾಟನೆ ಮಾಡಲ್ಲ, ಮುಂದಿನ ದಿನಗಳಲ್ಲಿಯೇ ಜನರೇ ಅವರನ್ನು ಉಚ್ಛಾಟನೆ ಮಾಡಲಿದ್ದಾರೆ. ಜೆಡಿಎಸ್ ಚುನಾವಣಾ ಪ್ರಚಾರಕ್ಕೆ ಯಾರೂ ಹೋಗಬಾರದೆಂಬ ಧಮ್ಕಿ ಹಾಕಲಾಗಿದೆ ಎಂದು ಆರೋಪಿಸಿದರು. ಚಾಮುಂಡೇಶ್ವರಿ ಕ್ಷೇತ್ರದ ಜನರು ಯಾರಿಗೂ ಹೆದರಬೇಕಿಲ್ಲ ಎಂದು ಜಿಟಿಡಿ ವಿರುದ್ಧ ವಾಗ್ದಾಳಿ ನಡೆಸಿದರು.

ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿರುವ ಜಿ.ಟಿ.ದೇವೇಗೌಡರು ಸಮಯ ಸಿಕ್ಕಾಗೆಲ್ಲ ದಳಪತಿಗಳ ವಿರುದ್ಧ ಅಸಮಾಧಾನ ಹೊರ ಹಾಕುತ್ತಿರುತ್ತಾರೆ. ಸಂಪುಟ ಹಂಚಿಕೆ ವೇಳೆ ಉದ್ದೇಶಪೂರ್ವಕವಾಗಿಯೇ ತಮಗೆ ಉನ್ನತ ಶಿಕ್ಷಣ ಇಲಾಖೆ ನೀಡಲಾಗಿತ್ತು ಎಂದು ಆರೋಪಿಸಿದ್ದರು. ಮತ್ತೊಂದು ಕಡೆ ದಳಪತಿಗಳು ಜಿಟಿಡಿ ಅವರ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದುಂಟು, ನಾನು ಹಿರಿಯರ ಜೊತೆ ರಾಜಕೀಯ ಮಾಡಿದ್ದೇನೆ. 50 ವರ್ಷಗಳಿಂದ ರಾಜಕಾರಣದಲ್ಲಿ ಇದ್ದೇನೆ. ಇವತ್ತಿನ ಪರಿಸ್ಥಿತಿಯಲ್ಲಿ ರಾಜಕಾರಣ ಸಾಧ್ಯವಿಲ್ಲ. ನಾನು ಮಂತ್ರಿ ಆಗಿ ಆಯ್ತು, ರಾಜಕೀಯ ಸಾಕು. ನಾನು ಸಾಕಷ್ಟು ನೊಂದಿದ್ದೇನೆ ಎಂದು ಹೇಳಿ ಜಿ.ಟಿ.ದೇವೇಗೌಡರು ಚುನಾವಣಾ ರಾಜಕೀಯ ನಿವೃತ್ತಿಯನ್ನು 2019 ಆಗಸ್ಟ್ 4ರಂದು ಘೋಷಿಸಿದ್ದರು.

ಇದನ್ನೂ ಓದಿ: ಬಿಜೆಪಿಗೆ ಕಮಿಷನ್, ಜೆಡಿಎಸ್ ಪಕ್ಷಕ್ಕೆ ಕುಟುಂಬ ರಾಜಕೀಯವೇ ಮುಖ್ಯ: ಮಾಜಿ ಸಚಿವ ಕೃಷ್ಣಬೈರೇಗೌಡ

ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ಕೇಳಿದ ಜಿಟಿಡಿ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮನ್ನು ಭಾರೀ ಅಂತರದಿಂದ ಸೋಲಿಸಿದ್ದ ಜಿ.ಟಿ. ದೇವೇಗೌಡ ಅವರು ತನ್ನೊಂದಿಗೆ ಮಾತುಕತೆ ನಡೆಸಿರುವ ಸುದ್ದಿಯನ್ನು ಸಿದ್ದರಾಮಯ್ಯ ಅವರು ಅಕ್ಟೋಬರ್ ನಲ್ಲಿ ಒಪ್ಪಿಕೊಂಡಿದ್ದರು. ಜಿಟಿಡಿ ನನ್ನ ಜೊತೆ ಮಾತನಾಡಿರುವುದು ಸತ್ಯ. ಅವರಿಗೆ ಹಾಗೂ ಅವರ ಮಗನಿಗೆ ಟಿಕೆಟ್ ಕೇಳಿದ್ದಾರೆ. ಡಿಕೆ ಶಿವಮಕುಮಾರ್ ಜೊತೆ ಮಾತನಾಡಿದ್ದಾರೆ. ಡಿಕೆ ಶಿವಕುಮಾರ್ ಮೂಲಕ ನನ್ನ ಜೊತೆಯೂ ಅವರು ಮಾತನಾಡಿದ್ದಾರೆ. ಅವರು ಇಂಥದ್ದೇ ಕ್ಷೇತ್ರದಲ್ಲಿ ಟಿಕೆಟ್ ಬೇಕು ಅಂತ ಕೇಳಿಲ್ಲ. ನಾನು ಈ ಬಗ್ಗೆ ರಣದೀಪ್ ಸುರ್ಜೆವಾಲ ಜೊತೆ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.

ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನ ಜೆಡಿಎಸ್‌ನಿಂದ ಉಚ್ಛಾಟನೆ ಮಾಡಲಿ ನಾನು ಅದನ್ನ ಸ್ವಾಗತ ಮಾಡ್ತಿನಿ. ಆದರೆ, ಉಚ್ಚಾಟನೆ ಮಾಡುವವರ ಪಟ್ಟಿಯಲ್ಲಿ ನಾನಿರುವುದಿಲ್ಲ. ಏಕೆಂದರೆ ನಾನು ಯಾವುದೇ ಪಕ್ಷ ವಿರೋಧಿ ಕೆಲಸ ಮಾಡಿಲ್ಲ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದರು.
Published by:Mahmadrafik K
First published: