Election: ಬುದ್ಧಿವಂತರೆಂದು ಭಾವಿಸಿದ್ದೆ, ದಡ್ಡತನದ ಹೇಳಿಕೆ ನಿಮಗೆ ಶೋಭೆ ತರುವಂಥದಲ್ಲ: ಸಚಿವ STSಗೆ ಜೆಡಿಎಸ್ ಅಭ್ಯರ್ಥಿ ಬಹಿರಂಗ ಪತ್ರ

ಸಚಿವರ ಹೇಳಿಕೆಗೆ ಬಹಿರಂಗ ಪತ್ರ ಬರೆದಿರುವ ಸಿ.ಎನ್.ಮಂಜೇಗೌಡ (CN Manjegowda) ತಿರುಗೇಟು ನೀಡಿದ್ದಾರೆ. ಮಂತ್ರಿಮಂಡಲದಲ್ಲಿ ನೀವು ಮಂತ್ರಿಮಂಡಲದಲ್ಲಿ ಬುದ್ಧಿವಂತರೆಂದು ಭಾವಿಸಿದ್ದೆ, ಈ ರೀತಿಯ ದಡ್ಡತನದ ಹೇಳಿಕೆ ನಿಮಗೆ ಶೋಭೆ ತರುವಂತದಲ್ಲ ಚಾಟಿ ಬೀಸಿದ್ದಾರೆ

ಎಸ್.ಟಿ.ಸೋಮಶೇಖರ್ ಮತ್ತು ಜೆಡಿಎಸ್ ಅಭ್ಯರ್ಥಿ ಬರೆದ ಪತ್ರ

ಎಸ್.ಟಿ.ಸೋಮಶೇಖರ್ ಮತ್ತು ಜೆಡಿಎಸ್ ಅಭ್ಯರ್ಥಿ ಬರೆದ ಪತ್ರ

  • Share this:
ಮೈಸೂರು: ವಿಧಾನ ಪರಿಷತ್ ಚುನಾವಣೆ ಪ್ರಚಾರದ (MLC Election Campaign) ವೇಳೆ ಸಚಿವ ಎಸ್.ಟಿ.ಸೋಮಶೇಖರ್ (Minister ST Somashekhar) ಮಾತುಗಳು ರಾಜಕೀಯ ಅಂಗಳದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡುತ್ತಿವೆ. ಜೆಡಿಎಸ್ (JDS) ಮತ್ತು ಕಾಂಗ್ರೆಸ್ (Congress) ಅಭ್ಯರ್ಥಿಗಳ ವಿರುದ್ಧ ಸಚಿವರು ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಸೋಮವಾರ ಮಾತನಾಡಿದ್ದ ಸಚಿವರು, ಜೆಡಿಎಸ್ ಅಭ್ಯರ್ಥಿ ಕಿಡ್ನಿ ಮಾರಾಟಗಾರ, ಒಂದೇ ನಿವೇಶನ ನಾಲ್ಕು ಜನಕ್ಕೆ ಹಂಚಿದ ವಂಚಕ ಎಂದು ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ಇದೀಗ ಸಚಿವರ ಹೇಳಿಕೆಗೆ ಬಹಿರಂಗ ಪತ್ರ ಬರೆದಿರುವ ಸಿ.ಎನ್.ಮಂಜೇಗೌಡ (CN Manjegowda) ತಿರುಗೇಟು ನೀಡಿದ್ದಾರೆ. ಮಂತ್ರಿಮಂಡಲದಲ್ಲಿ ನೀವು ಮಂತ್ರಿಮಂಡಲದಲ್ಲಿ ಬುದ್ಧಿವಂತರೆಂದು ಭಾವಿಸಿದ್ದೆ, ಈ ರೀತಿಯ ದಡ್ಡತನದ ಹೇಳಿಕೆ ನಿಮಗೆ ಶೋಭೆ ತರುವಂತದಲ್ಲ ಚಾಟಿ ಬೀಸಿದ್ದಾರೆ .

ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಬರೆದ ಬಹಿರಂಗ ಪತ್ರ

ಗೌರವಯುತ ಮಾನ್ಯ ಸಚಿವರೇ,

ನೀವು ಸೋಮವಾರ ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರ. ಮಂತ್ರಿಮಂಡಲದಲ್ಲಿ ನೀವು ಬುದ್ಧಿವಂತರೆಂದು ನಾನು ಭಾವಿಸಿದ್ದೆ. ಆದರೆ ಈ ರೀತಿಯ ದಡ್ಡತನದ ಹೇಳಿಕೆ ನಿಮಗೆ ಶೋಭೆ ತರುವಂಥದಲ್ಲ. ಈ ಆರೋಪವನ್ನು ನೀವು ಸಾಕ್ಷಿ ಸಮೇತ ಹಾಗೂ ದಾಖಲೆ ನೀಡಿದರೆ ಆ ಕ್ಷಣದಲ್ಲೇ ನಾನು ಪರಿಷತ್ ಚುನಾವಣಾ ಕಣದಿಂದ ಹಿಂದೆ ಸರಿದು ರಾಜಕೀಯ ನಿವೃತ್ತಿ ಪಡೆಯುತ್ತೇನೆ.

ಇದನ್ನೂ ಓದಿ:  ಅವರನ್ನು ಕರ್ಕೊಂಡು ಬಾ ,ದುಡ್ಡು ಕೊಡು.. ಇದೇ ಆಗೋಯ್ತು: Operation Kamalaದ ಬಗ್ಗೆ ಬಾಯ್ಬಿಟ್ಟ ಸಚಿವ Eshwarappa

ಗೌರವದಿಂದ ಚುನಾವಣೆ ಎದುರಿಸಿ. ಈ ರೀತಿಯ ಆರೋಪ ಹೇಳಿಕೆಗಳಿಗೆ ಮತದಾರ ಪ್ರಭು ಆಸ್ಪದ ಕೊಡುವದಿಲ್ಲ ಎನ್ನುವದನ್ನು ನಿಮಗೆ ಮನವರಿಕೆ ಮಾಡಿಕೊಡಲು ಇಷ್ಟಪಡುತ್ತೇನೆ. ನಾನೊಬ್ಬ ಸೈನಿಕ ದೇಶ ಕಾದವನು. ಮತ್ತೊಬ್ಬರ ವೈಯಕ್ತಿಕ ವಿಚಾರವನ್ನು ಮಾತನಾಡುವ ವ್ಯಕ್ತಿ ನಾನಲ್ಲ. ಮೈಸೂರು ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಮೇಲೆ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಜನರ ನಿರೀಕ್ಷೆಗಳನ್ನು ನೀವು ಹುಸಿ ಮಾಡದೇ ಮೈಸೂರು ಜಿಲ್ಲೆಯ ಅಭಿವೃದ್ಧಿಯತ್ತ ಗಮನಹರಿಸಿ.

ಸಚಿವ ಸೋಮಶೇಖರ್ ಹೇಳಿದ್ದೇನು?

ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ (CN Manjegoowda) ಕಿಡ್ನಿ ಮಾರಾಟಗಾರ. ಕಿಡ್ನಿ‌ ಮಾರಾಟದಲ್ಲಿ ಈತ ನಂಬರ್ ಒನ್ ಎಂದು ಆರೋಪಿಸಿದರು. ಒಂದೇ ಸೈಟನ್ನು ನಾಲ್ಕು ಜನರಿಗೆ ಮಾರಾಟ ಮಾಡಿದ ಮೋಸಗಾರ . ಜೆಡಿಎಸ್ (JDS) ಅಭ್ಯರ್ಥಿಯನ್ನು ಗೆಲ್ಲಿಸಿದರೆ ಮೈಸೂರು - ಚಾಮರಾಜನಗರ ಜನರಿಗೆ ಮಾಡಿದ ಅವಮಾನ ಎಂದು ಹೇಳಿ ಮತಯಾಚನೆ ಮಾಡಿದ್ದರು.

ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೂ ಗಂಭೀರ ಆರೋಪ

ಬೆಂಗಳೂರಿನ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಒಬ್ಬರು 1700 ಕೋಟಿ ಒಡೆಯ ಎಂದು ತೋರಿಸಿಕೊಂಡಿದ್ದಾನೆ. ಹಿಗಾಗಿ ಅವನ ಹಿನ್ನೆಲೆಯನ್ನ ಡಿಸಿಪಿ ಗೆ ಕರೆ ಮಾಡಿ ತರಿಸಿಕೊಂಡು ನೋಡಿದಾಗ ಅವನ ಮೇಲೆ ಬರೋಬ್ಬರಿ 40 ಕೇಸ್ ದಾಖಲಾಗಿದೆ.

ಇದನ್ನೂ ಓದಿ:  ಅಸಮಾಧಾನ ಬೆನ್ನಲ್ಲೇ ನಿರಾಣಿ CM ಆಗ್ತಾರೆ ಹೇಳಿಕೆಯಿಂದ U Turn ಹೊಡೆದ ಸಚಿವ Eshwarappa

ಅಲ್ಲದೆ ಆತ ತನ್ನ ಮಗಳ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದ ಅಂತ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಿರುವಾಗಿ ಕಾಂಗ್ರೆಸ್ ಆತನನ್ನ ತನ್ನ ಅಭ್ಯರ್ಥಿ ಎಂದು ಚುನಾವಣೆಯಲ್ಲಿ ನಿಲ್ಲಿಸಿದೆ ಅಂತ ಸಚಿವ ಎಸ್ ಟಿ ಸೋಮಶೇಖರ್ ಆರೋಪಿಸಿದ್ದಾರೆ.

ಡಿಸೆಂಬರ್ 10 ಮತದಾನ, ಡಿ.14ಕ್ಕೆ ಫಲಿತಾಂಶ

2022ರ ಜನವರಿ 5ರಂದು 25 ಪರಿಷತ್​ ಸದಸ್ಯರ (MLC’s)ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ ‌10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ (Election Commission) ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ (Election) ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ (vote counting) ನಡೆದು, ಫಲಿತಾಂಶ ಹೊರ ಬೀಳಲಿದೆ.
Published by:Mahmadrafik K
First published: