ಮುಂದಿನ ವಿಧಾನಸಭೆ ಚುನಾವಣೆಯಲ್ಲಿ JDS ಸಿಂಗಲ್ ಡಿಜಿಟ್ ಅಷ್ಟೇ ಗೆಲ್ಲುವುದು: Zameer Ahmed Khan

ಜೆಡಿಎಸ್, ಬಿಜೆಪಿ (BJP) ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವ ಸಾಧ್ಯತೆ ಇದೆ. ಎಲ್ಲಾ 25 ಸ್ಥಾನಕ್ಕೂ ಅಭ್ಯರ್ಥಿ ಹಾಕಬೇಕಿತ್ತು. ಕೇವಲ 7 ಸ್ಥಾನಕ್ಕೆ ಹಾಕಿರುವುದು ಅನುಮಾನಸ್ಪದವಾಗಿ ಕಾಣುತ್ತಿದೆ. ಅವರಿಗೆ ಅಭ್ಯರ್ಥಿಗಳು ಇಲ್ಲವಾ?

ಶಾಸಕ ಜಮೀರ್​  ಅಹ್ಮದ್ ಖಾನ್

ಶಾಸಕ ಜಮೀರ್​ ಅಹ್ಮದ್ ಖಾನ್

  • Share this:
ವಿಧಾನ ಪರಿಷತ್ ಚುನಾವಣೆಯಲ್ಲಿ (MLC Election) ಜೆಡಿಎಸ್ (JDS) ಏಳು ಸ್ಥಾನದಲ್ಲಿ ಸ್ಪರ್ಧಿಸಿರುವ ವಿಚಾರಕ್ಕೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ (MLA Zameer Ahmed Khan) ಪ್ರತಿಕ್ರಿಯಿಸಿದ್ದಾರೆ. ಜೆಡಿಎಸ್, ಬಿಜೆಪಿ (BJP) ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವ ಸಾಧ್ಯತೆ ಇದೆ. ಎಲ್ಲಾ 25 ಸ್ಥಾನಕ್ಕೂ ಅಭ್ಯರ್ಥಿ ಹಾಕಬೇಕಿತ್ತು. ಕೇವಲ 7 ಸ್ಥಾನಕ್ಕೆ ಹಾಕಿರುವುದು ಅನುಮಾನಸ್ಪದವಾಗಿ ಕಾಣುತ್ತಿದೆ. ಅವರಿಗೆ ಅಭ್ಯರ್ಥಿಗಳು ಇಲ್ಲವಾ? ಇಲ್ಲದಿದ್ದರೆ ಸ್ಪಷ್ಟಪಡಿಸಲಿ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಒತ್ತಾಯಿಸಿದ್ದಾರೆ. ಬಿಜೆಪಿಗೆ ಲಾಭ ಮಾಡಿಕೊಡಲು ಜೆ.ಡಿ.ಎಸ್ ಮಾಡಿರುವ ತಂತ್ರ ಅಂತ ಅನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು. 123 ಸ್ಥಾನ ಗೆದ್ದು ಅಧಿಕಾರ ಹಿಡಿಯುತ್ತೇವೆ ಅನ್ನೋ ಹೆಚ್.ಡಿ.ಕುಮಾರಸ್ವಾಮಿ (Former CM HD Kumarasamy) ಹೇಳಿಕೆಗ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿಂಗಲ್ ಡಿಜಿಟ್ ಮಾತ್ರ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.

ನನ್ನ ಸಿದ್ದರಾಮಯ್ಯ ಸಂಬಂಧ ಸಾಯುವವರೆಗೂ  ಕೆಡುವುದಿಲ್ಲ. ಕೆಡಲು ಸಾಧ್ಯವು ಇಲ್ಲ. ಅಂದು ಸಿದ್ದರಾಮಯ್ಯ ಭಾಷಣಕ್ಕೆ ನಮ್ಮ ಬೆಂಬಲಿಗರು ಅಡ್ಡಿ ಮಾಡಿಲ್ಲ. ಸಿದ್ದರಾಮಯ್ಯನವರು ಭಾಷಣ ಮೊಟಕುಗೊಳಿಸಿಲ್ಲ. ಪುನೀತ್ ರಾಜ್‌ಕುಮಾರ್ ಕಾರ್ಯಕ್ರಮಕ್ಕೆ ಹೋಗಬೇಕಿದ್ದ ಕಾರಣ ೫ ನಿಮಿಷ ಮಾತನಾಡಿ ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಜೊತೆಗಾರರು ಬೆಳೆದ್ರೆ ಸಿದ್ದರಾಮಯ್ಯನವರಿಗೆ ಸಂತೋಷ

ನನ್ನ ಅನುಪಸ್ಥಿತಿಯಲ್ಲಿ ನನ್ನ ಅಭಿಮಾನಿಗಳು ಜೈಕಾರ ಕೂಗಿದ್ದು ಕಂಡು ಸಿದ್ದರಾಮಯ್ಯ ಖುಷಿಯಾಗಿದ್ದಾರೆ.  ಈ ಬಗ್ಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಸಿದ್ದರಾಮಯ್ಯ ಈ ರೀತಿ ಹೊಟ್ಟೆಕಿಚ್ವು ಪಟ್ಟುಕೊಳ್ಳುವ ಮನುಷ್ಯ ಅಲ್ಲ. ಅವರಿಗೆ ಜೊತೆಗಾರರು ಬೆಳೆದರೆ ಸಂತೋಷ ಇದೆ ಎಂದು ಸಿದ್ದರಾಮಯ್ಯರನ್ನು ಹಾಡಿ ಹೊಗಳಿದರು.

ಇದನ್ನೂ ಓದಿ:  ಇಂದ್ರ, ಚಂದ್ರ ಅಂತ ಹೇಳಿ ಮತದಾರರನ್ನು ನಂಬಿಸಿ ಮೋಸ ಮಾಡಿದೆ ಅಂತ ಅರಿವಾಗಿದೆ: MLA Goolihatti Shekar

ನೆಪ ಮಾತ್ರಕ್ಕೆ ಸಿಎಂ ನಗರ ಪ್ರದಕ್ಷಿಣೆ

ಬೆಂಗಳೂರಿನಲ್ಲಿ ಮಳೆ ಅವಾಂತರದ ಕುರಿತು ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್ ಖಾನ್, ಸಿಎಂ ಬಸವರಾಜ್ ಬೊಮ್ಮಾಯಿ ನೆಪಮಾತ್ರಕ್ಕೆ ನಗರ ಪ್ರದಕ್ಷಿಣೆ ಮಾಡಿದ್ದಾರೆ. ಜನರ ಸಂಕಷ್ಟವನ್ನ ಕೇಳಿಲ್ಲ. ನೆರೆಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ಪರಿಹಾರ ಘೋಷಣೆ ಮಾಡಿಲ್ಲ. ನಿನ್ನೆ ಸಿಎಂ ನೆಪ‌ ಮಾತ್ರಕ್ಕೆ ಕೆಲವು ರಸ್ತೆಗ ಹೋಗಿ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಏಳು ಅಭ್ಯರ್ಥಿಗಳನ್ನ ಹಾಕಿದ್ದಕ್ಕೆ HDK ಸ್ಪಷ್ಟನೆ

ನಮ್ಮ ಸಾಮರ್ಥ್ಯಕ್ಕನುಸಾರ ಏಳು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ. ಎಲ್ಲೆಲ್ಲಿ ಗೆಲುವಿಗೆ ಅವಕಾಶವಿದೆಯೂ ಅಲ್ಲಿ ಸ್ಪರ್ಧೆ ಮಾಡಲಾಗಿದೆ. ಸ್ಪರ್ಧೆ ಮಾಡದ ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರು ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನ ಮಾಡ್ತಾರೆ. ನನ್ನ ಗುರಿ ಇರೋದು ಮುಂದಿನ ವಿಧಾನಸಭಾ ಚುನಾವಣೆ ಮೇಲೆ. 123 ಕ್ಷೇತ್ರಗಳನ್ನ ಗೆದ್ದು ಅಧಿಕಾರ ಹಿಡಿಯಬೇಕಿದೆ‌.  ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ವಿಧಾನ ಪರಿಷತ್ ಕ್ಷೇತ್ರ ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: HDKಗೆ ಶಂಖನಾದ ಭಾರತೀಯ ಸಂಸ್ಕೃತಿಯ ಪ್ರತೀಕ ಅನ್ನೋದು ಗೊತ್ತಿಲ್ಲ: ಸಚಿವ R Ashok


ಜೆಡಿಎಸ್ ಅಭ್ಯರ್ಥಿಗಳು

1. ಮಂಡ್ಯ: ಅಪ್ಪಾಜಿಗೌಡ

2. ತುಮಕೂರು: ಅನಿಲ್ ಕುಮಾರ್

3. ಮೈಸೂರು: ಸಿ.ಎನ್.ಮಂಜೇಗೌಡ

4. ಕೋಲಾರ: ವಕ್ಕಲೇರಿ ರಾಮು

5. ಬೆಂಗಳೂರು ಗ್ರಾಮಾಂತರ: ಹೆಚ್.ಎಂ.ರಮೇಶ್ ಗೌಡ

6. ಕೊಡಗು: ಹೆಚ್.ಯು.ಇಸಾಕ್ ಖಾನ್

7. ಹಾಸನ: ಸೂರಜ್ ರೇವಣ್ಣ

ಡಿಸೆಂಬರ್ 14ಕ್ಕೆ ಮತ ಎಣಿಕೆ

2022ರ ಜನವರಿ 5ರಂದು 25 ಪರಿಷತ್​ ಸದಸ್ಯರ (MLC’s)ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ ‌10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ (Election Commission) ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ (Election) ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ (vote counting) ನಡೆದು, ಫಲಿತಾಂಶ ಹೊರ ಬೀಳಲಿದೆ. ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗುವುದು.

Published by:Mahmadrafik K
First published: