Mysuru Dasara 2021: ಜಂಬೂಸವಾರಿಗೆ ಅರಮನೆ ನಗರಿ ಸಿದ್ಧ- ಇಂದಿನ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ

Mysuru Dasara: ನಂತರ ಬೆಳಿಗ್ಗೆ 8.30ಕ್ಕೆ ಚಾಮುಂಡಿ ಬೆಟ್ಟದಿಂದ ವಿಶೇಷವಾಗಿ ಅಲಂಕಾರಗೊಂಡ ತಾಯಿಯ ಉತ್ಸವ ಮೂರ್ತಿ ಆಗಮನವಾಗಲಿದ್ದು, ಅದರ ನಂತರ ಮುಂದಿನ ಪೂಜಾ ಕೈಂಕರ್ಯಗಳು ಆರಂಭವಾಗಲಿದೆ.  

ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ

ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ

  • Share this:
ವಿಶ್ವವಿಖ್ಯಾತ ಮೈಸೂರು ದಸರಾ(Mysuru Dasara 2021)ದಲ್ಲಿ ಜಂಜೂ ಸವಾರಿ ಎಲ್ಲರ ಗಮನ ಸೆಳೆಯುತ್ತದೆಇಂದು ವಿಜಯದಶಮಿ(Vijayadashami), ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಒಂದು ವಾರದಿಂದ ನಡೆದು ಬಂದಿದ್ದ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ತೆರೆ ಬೀಳಲಿದೆ.  ಕೊರೊನಾ ಕಾರಣದಿಂದ ಈ ಬಾರಿ ಸಹ ಸರಳವಾಗಿ ದಸರಾ ಹಬ್ಬವನ್ನು ಆಚರಣೆ ಮಾಡಲಾಗಿದೆ. ಆದರೂ ಪ್ರತಿ ಬಾರಿಯಂತೆ ಅರಮನೆ ನಗರಿ ಸುಂದರವಾಗಿ ಸಿಂಗಾರಗೊಂಡಿತ್ತು. ಇನ್ನು ಈಗಾಗಲೇ ಜಂಬೂ ಸವಾರಿಗೆ(Jambu Savari) ಭರ್ಜರಿ ತಯಾರಿ ನಡೆಯುತ್ತಿದ್ದು, ಮುಂಜಾನೆ 4.30 ರಿಂದಲೇ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ.

ಅರಮನೆ ಆವರಣದಲ್ಲಿ ಮನೆಮಾಡಿದೆ ಸಂಭ್ರಮ

ಅರಮನೆಯಲ್ಲಿ ವಿಜಯ ದಶಮಿ ಸಂಭ್ರಮ ಮನೆ ಮಾಡಿದ್ದು, ಮುಂಜಾನೆ 4.40ರಿಂದ ಅರಮನೆಯಲ್ಲಿ ಹೋಮ ಆರಂಭವಾಗಿದೆ. ಹೋಮಕ್ಕೆ ಯದುವೀರ್‌ರಿಂದ ಪೂರ್ಣಾವುತಿ ನೀಡಿದ್ದು, 5.45ಕ್ಕೆ  ಆನೆ ಕುದುರೆ ಹಸುಗಳ ಆಗಮನವಾಗಿದ್ದು, 6.13 ರಿಂದ 6.32ರವರೆಗೆ ಪೂಜಾ ವಿಧಿ ವಿಧಾನಗಳು ಸಾಗಿದ್ದು, ನಂತರ ಖಾಸಾ ಆಯುಧಗಳಿಗೆ ಯದುವೀರ್ ರಿಂದ ಉತ್ತರ ಪೂಜೆ ಮಾಡಿದ್ದು, ಉತ್ತರ ಪೂಜೆ ನಂತರ ಶಮಿ ಪೂಜೆ ನೆರವೇರಿಸಲಿದ್ದಾರೆ.  ನಂತರ ಚಾಮುಂಡಿ ದೇವಿ ವಿಗ್ರಹ ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆಯಾಗಲಿದ್ದು,, ಅದರ ನಂತರ ದೇವಾಲಯದಿಂದ ಪಟ್ಟದ ಕತ್ತಿ ಭುವನೇಶ್ವರಿ ದೇವಾಲಯಕ್ಕೆ ಕಳುಹಿಸಲಾಗುತ್ತದೆ.

ವಿಜಯ ಯಾತ್ರೆಯಲ್ಲಿ ಯದುವೀರ್

ಇದನ್ನೂ ಓದಿ: ಮನೆ-ಮನೆ ದಸರೆಯಲಿ ಮೈಸೂರಿನ ಗತಕಾಲದ ಕಥೆ; ಕಣ್ಮನ ಸೆಳೆಯುತ್ತಿದೆ ಬೊಂಬೆ ಪ್ರದರ್ಶನ

ಈ ಎಲ್ಲಾ ಕಾರ್ಯಕ್ರಮಗಳ ನಂತರ  7.20ರಿಂದ 7.40ರವರೆಗೆ ವಿಜಯ ಯಾತ್ರೆ ಮಾಡಲಾಗುತ್ತದೆ.  ಬೆಳ್ಳಿ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿ, ಕಾರಿನಲ್ಲಿ ಯದುವೀರ್ ಕುಳಿತು ವಿಜಯಯಾತ್ರೆ ಮಾಡಲಿದ್ದಾರೆ.  ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ಈ ಮೆರವಣಿಗೆ ಸಾಗಲಿದ್ದು, ಮೆರವಣಿಗೆಯಲ್ಲಿ ಹೋಗಿ ಭುವನೇಶ್ವರಿ ಮಂಟಪದಲ್ಲಿ ಬನ್ನಿ ಮರಕ್ಕೆ ಯದುವೀರ ಪೂಜ ಮಾಡಲಿದ್ದಾರೆ. ಪೂಜೆಯ ನಂತರ ಮೆರವಣಿಗೆ ಮೂಲಕ ಅರಮನೆಗೆ ವಾಪಸ್ಸಾಗಿ .ಅರಮನೆಯಲ್ಲಿ ಕಂಕಣ ವಿಸರ್ಜನೆ ಮಾಡಲಿದ್ದಾರೆ. ಇದರ ನಂತರ ಬೆಳಿಗ್ಗೆ 8 ಗಂಟೆಗೆ ಮೈಸೂರು ಅರಮನೆ ದಸರಾ ಕಾರ್ಯಕ್ರಮ ಮುಕ್ತಾಯವಾಗಲಿದೆ.

ನಂತರ ಬೆಳಿಗ್ಗೆ 8.30ಕ್ಕೆ ಚಾಮುಂಡಿ ಬೆಟ್ಟದಿಂದ ವಿಶೇಷವಾಗಿ ಅಲಂಕಾರಗೊಂಡ ತಾಯಿಯ ಉತ್ಸವ ಮೂರ್ತಿ ಆಗಮನವಾಗಲಿದ್ದು, ಅದರ ನಂತರ ಮುಂದಿನ ಪೂಜಾ ಕೈಂಕರ್ಯಗಳು ಆರಂಭವಾಗಲಿದೆ.  ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ  ಸಿಎಂ ಬಸವರಾಜ್ ಬೊಮ್ಮಾಯಿ ಗೇಸ್ಟ್‌ಹೌಸ್​ಗೆ ಆಗಮಿಸಲಿದ್ದು,  ಮಧ್ಯಾಹ್ನ 1 ಗಂಟೆಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಅಲ್ಲಿಯೇ ಮಧ್ಯಾಹ್ನದ ಊಟ ಮುಗಿಸಿದ ನಂತರ ಮುಂದಿನ ಕಾರ್ಯಗಳು ಆರಂಭವಾಗಲಿದೆ.

ಅರಮನೆ ಆವರಣದಲ್ಲಿ ಜಂಬೂಸವಾರಿ

ಮಧ್ಯಾಹ್ನ 2 ಗಂಟೆ ನಂತರ ಅಂಬಾರಿ ಹೊರಲಿರುವ  ಅಭಿಮನ್ಯು ಆನೆಗೆ ಗಾದಿ ಕಟ್ಟಿ ಅಂಬಾರಿ ಕಟ್ಟೊ ಕಾರ್ಯ ಆರಂಭವಾಗುತ್ತದೆ.  ಸಂಜೆ 4.30ರ ಸುಮಾರಿಗೆ ಲಲಿತ್‌ಮಹಲ್ ಹೋಟೆಲ್‌ನಿಂದ ಸಿಎಂ ಹಾಗೂ ಸಂಪುಟ ಸದಸ್ಯರು ನೇರವಾಗಿ ಅರಮನೆ ಅಂಗಳಕ್ಕೆ ಬಸ್‌ನಲ್ಲಿ ಬರುತ್ತಾರೆ. ಹಾಗೆಯೇ ಈ ಬಾರಿ ದಸರಾ ಉದ್ಘಾಟನೆ ಮಾಡಿರುವ ಎಸ್‌ಎಂ.ಕೃಷ್ಣ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿದ್ದಾರೆ.

ಇದನ್ನೂ ಓದಿ: ಮೈಸೂರು ಸರಳ ದಸರಾದಲ್ಲಿ ಝಗಮಗಿಸುತ್ತಿದೆ ದೀಪಾಲಂಕಾರ!

ಸಂಜೆ 4.36 ರಿಂದ 4.46 ಸಲ್ಲುವ ಮೀನಾ ಲಗ್ನದಲ್ಲಿ ನಂದಿ‌ ಧ್ವಜ ಪೂಜೆ ನಡೆಯಲಿದ್ದು, ಅರಮನೆ ಬಲರಾಮ ಧ್ವಾರಕ್ಕೆ ಮುಖ್ಯಮಂತ್ರಿ ಸೇರಿ ಜನಪ್ರತಿನಿಧಿಗಳು ಬರಲಿದ್ದಾರೆ. ಸಂಜೆ 5 ರಿಂದ‌ 5.30ರ ಮೀನ ಲಗ್ನದಲ್ಲಿ ಜಂಬೂ ಸವಾರಿ ಆರಂಭವಾಗುತ್ತದೆ.  ಕೊರೊನಾ ಕಾರಣಕ್ಕೆ ಸೀಮಿತ ಸದಸ್ಯರಿಗೆ ಜಂಬೂ ಸವಾರಿ ಮೀಸಲಾಗಿದ್ದು, ಕೇವಲ ಅರಮನೆ ಅಂಗಳದಲ್ಲಿ ನಡೆಯಲಿದೆ.
Published by:Sandhya M
First published: